Master Anand: ನಿವೇಶನ ಕೊಡಿಸುವುದಾಗಿ ವಂಚನೆ; ರಿಯಲ್ ಎಸ್ಟೇಟ್ ಮಾಲೀಕರ ವಿರುದ್ಧ ದೂರು ನೀಡಿದ ನಟ ನಿರೂಪಕ ಮಾಸ್ಟರ್ ಆನಂದ್
ಮಲ್ಟಿ ಲೀಪ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಸುಧೀರ್ ಎಸ್ ಮತ್ತು ಅವರ ಆಪ್ತ ಸಹಾಯಕಿ ಮಣಿಕಾ ಎಂಬುವವರ ವಿರುದ್ಧ ನಟ ಮಾಸ್ಟರ್ ಆನಂದ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿವೇಶನ, ಸಿನಿಮಾ ನಿರ್ಮಾಣ , ಸಂಭಾವನೆ ವಿಚಾರವಾಗಿ ಸೆಲೆಬ್ರಿಟಿಗಳು ಹಣ ಕಳೆದುಕೊಂಡಿರುವ ಎಷ್ಟೋ ಉದಾಹರಣೆಗಳನ್ನು ಕೇಳಿದ್ದೇವೆ. ಇದೀಗ ಖ್ಯಾತ ಮಾಸ್ಟರ್ ಆನಂದ್ ಕೂಡಾ ನಿವೇಶನ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ ಇಬ್ಬರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಿಯಲ್ ಎಸ್ಟೇಟ್ ಮಾಲೀಕ ಹಾಗೂ ಮತ್ತೊಬ್ಬರು ನಿವೇಶನ ಕೊಡಿಸುವುದಾಗಿ ನಂಬಿಸಿದ್ದರಿಂದ ಅವರಿಗೆ 18.5 ಲಕ್ಷ ರೂಪಾಯಿ ಮುಂಗಡ ಹಣ ಪಾವತಿಸಿದ್ದೆ ಆದರೆ ಈಗ ನಿವೇಶನ ನೀಡದೆ ನನಗೆ ಮೋಸ ಮಾಡಿದ್ದಾರೆ ಎಂದು ಆನಂದ್ ದೂರಿನಲ್ಲಿ ತಿಳಿಸಿದ್ದಾರೆ. ಮಲ್ಟಿ ಲೀಪ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಸುಧೀರ್ ಎಸ್ ಮತ್ತು ಅವರ ಆಪ್ತ ಸಹಾಯಕಿ ಮಣಿಕಾ ಎಂಬುವವರ ವಿರುದ್ಧ ನಟ ಮಾಸ್ಟರ್ ಆನಂದ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಮಾರು 3 ವರ್ಷಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಕೊಮ್ಮಘಟ್ಟದ ರಾಮಚಂದ್ರಕ್ಕೆ ತೆರಳುವಾಗ ಅಲ್ಲಿ ನಿವೇಶನ ಮಾರಾಟಕ್ಕಿವೆ ಎಂಬ ಬೋರ್ಡ್ ನೋಡಿದ್ದೆ. ಅಲ್ಲಿರುವ ಮೊಬೈಲ್ ನಂಬರ್ಗೆ ಕರೆ ಮಾಡಿ ಎಲ್ಲಾ ಮಾಹಿತಿ ಪಡೆದು ಅಂತಿಮವಾಗಿ ನಿವೇಶನ ಕೊಳ್ಳಲು ನಿರ್ಧರಿಸಿ 70 ಲಕ್ಷಕ್ಕೆ ಮಾತುಕತೆ ನಡೆಸಿದ್ದೆ. ಮುಂಗಡವಾಗಿ 18.5 ಲಕ್ಷ ರೂಪಾಯಿ ಕೂಡಾ ನೀಡಿದ್ದೆ. ಆದರೆ ಮೂರು ವರ್ಷಗಳು ಕಡೆದರೂ ತಮಗೆ ನಿವೇಶನ ಕೊಡಿಸದೆ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಹಣವನ್ನೂ ಹಿಂತಿರುಗಿಸಿ ನೀಡುತ್ತಿಲ್ಲ ಎಂದು ಆನಂದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳು
ಮಗಳ ಮದುವೆ ಮಾಡಲು ಅರ್ಜುನ್ ಸರ್ಜಾ ಸಜ್ಜು; ತಮಿಳು ನಟನ ಕೈ ಹಿಡಿಯಲಿದ್ದಾರೆ ಪ್ರೇಮ ಬರಹ ಸಿನಿಮಾ ನಟಿ ಐಶ್ವರ್ಯ ಅರ್ಜುನ್
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಮೊದಲ ಮಗಳ ಮದುವೆ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್ನಲ್ಲಿ ಹರಿದಾಡುತ್ತಿದೆ. ತಮಿಳು ಖ್ಯಾತ ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಎಂಬುವರನ್ನು ಐಶ್ವರ್ಯ ಪ್ರೀತಿಸುತ್ತಿದ್ದು ಇಬ್ಬರ ಮದುವೆಗೆ ಮನೆಯವರು ಕೂಡಾ ಒಪ್ಪಿದ್ದು, ಇಬ್ಬರ ಮನೆಯಲ್ಲೂ ಮದುವೆ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಮದುವೆ ದಿನಾಂಕ ಫಿಕ್ಸ್ ಮಾಡಿ ಅದಕ್ಕೂ ಮುನ್ನ ನಿಶ್ಚಿತಾರ್ಥ ಮಾಡಲಾಗುವುದು ಎಂದು ಕಾಲಿವುಡ್ ಮೂಲಗಳು ತಿಳಿಸಿವೆ. ಪೂರ್ತಿ ಸ್ಟೋರಿಗೆ ಇಲ್ಲಿ ಒತ್ತಿ.
ಮುರಿದುಬಿದ್ದ ಮದುವೆ, ಕಂಠಿ ಸ್ನೇಹಾ ಪ್ರೀತಿ ಮುಂದುವರೆಯುತ್ತಾ; ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಟ್ವಿಸ್ಟ್
ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಕಂಠಿ - ಸ್ನೇಹಾ ಜೋಡಿಯ ಮದುವೆ ಮುರಿದು ಬಿದ್ದಿದೆ. ಮುಂದೇನು ನಡೆಯಬಹುದು ಎಂದು ವೀಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಕಂಠಿ ಸ್ನೇಹಾಳನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಕಂಠಿ ತಾಯಿ ಬಂಗಾರಮ್ಮ ಮಗನಿಗೆ ಅತ್ತೆ ಮಗಳೊಂದಿಗೆ ಮದುವೆ ನಿಶ್ಚಯಿಸುತ್ತಾಳೆ, ಇತ್ತ ಪುಟ್ಟಕ್ಕ ಕೂಡಾ ಸ್ನೇಹಾ ಮದುವೆಯನ್ನು ಭುವನ್ ಜೊತೆ ನಿಶ್ಚಯ ಮಾಡುತ್ತಾರೆ. ಇಬ್ಬರ ಮದುವೆ ಒಂದೇ ದಿನ ನಿಶ್ಚಯವಾಗಿರುತ್ತದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.