ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್‌
ಕನ್ನಡ ಸುದ್ದಿ  /  ಮನರಂಜನೆ  /  ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್‌

ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್‌

ಸ್ಯಾಂಡಲ್‌ವುಡ್‌ ನಿರ್ದೇಶಕ ನಾಗಶೇಖರ್‌ ಅವರೇ ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಈ ಆಕ್ಸಿಡೆಂಟ್‌ ಸಂಭವಿಸಿದೆ.

ನಿರ್ದೇಶಕ ನಾಗಶೇಖರ್‌ ಅವರು ಚಲಾಯಿಸುತ್ತಿದ್ದ ಕಾರು ಅಪಘಾತ.
ನಿರ್ದೇಶಕ ನಾಗಶೇಖರ್‌ ಅವರು ಚಲಾಯಿಸುತ್ತಿದ್ದ ಕಾರು ಅಪಘಾತ.

Director Nagashekar Car Accident: ಸಂಜು ವೆಡ್ಸ್‌ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್‌ ಅವರಿದ್ದ ಬೆಂಜ್‌ ಕಾರು ಅಪಘಾತವಾಗಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವೇಗವಾಗಿ ಕಾರು ಡ್ರೈವ್ ಮಾಡಿಕೊಂಡ ಹೋದ ನಿರ್ದೇಶಕ ನಾಗಶೇಖರ್, ಅಲ್ಲಿನ ಮರವೊಂದಕ್ಕೆ ಗುದ್ದಿದ್ದಾರೆ. ಅದಕ್ಕೂ ಮೊದಲು ಫುಟ್‌ಪಾತ್‌ ಮೇಲೆ ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಗುದ್ದಿಸಿ ಅಪಘಾತ ಮಾಡಿದ್ದಾರೆ. ಅಪಘಾತವಾದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್‌ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಮರಕ್ಕೆ ಗುದ್ದಿದ್ದರಿಂದ ಬೆಂಜ್‌ ಕಾರಿನ ಮುಂಭಾಗ ಜಖಂಗೊಂಡಿದೆ.

ಪೊಲೀಸರ ವಶದಲ್ಲಿ ಬೆಂಜ್‌ ಕಾರು

ಕಾರು ಫುಟ್‌ಪಾತ್‌ ಏರಿ ಮರಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ, ಗಾಬರಿಗೊಂಡ ನಾಗಶೇಖರ್‌ ಕಾರನ್ನು ಅಲ್ಲಿಯೇ ಬಿಟ್ಟು ಬೈಕ್‌ ಏರಿ ಅಲ್ಲಿಂದ ತೆರಳಿದ್ದಾರೆ. ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಅಕ್ಕ ಪಕ್ಕದ ಮನೆಗಳಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿಯಲ್ಲಿ ಮಹಿಳೆಗೆ ಕಾರ್ ತಾಗಿಸಿ, ಅದಾದ ಬಳಿಕ ಮರಕ್ಕೆ ಗುದ್ದಿದ್ದು ತಿಳಿದುಬಂದಿದೆ. ಕಾರ್‌ನ ನಂಬರ್‌ ಮೂಲಕ ಇದು ನಿರ್ದೇಶಕ ನಾಗಶೇಖರ್‌ ಕಾರು ಎಂಬುದು ತಿಳಿದುಬಂದಿದ್ದು, ಸದ್ಯ ಬೆಂಜ್‌ ಕಾರು ಪೊಲೀಸರ ವಶದಲ್ಲಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ರಚಿತಾ ರಾಮ್‌ ಮತ್ತು ಶ್ರೀನಗರ್‌ ಕಿಟ್ಟಿ ಮುಖ್ಯಭೂಮಿಕೆಯಲ್ಲಿನ ಸಂಜು ವೆಡ್ಸ್‌ 2 ಗೀತಾ ಸಿನಿಮಾದ ಶೂಟಿಂಗ್‌ ಬಹುತೇಕ ಮುಗಿಸಿರುವ ನಿರ್ದೇಶಕ ನಾಗಶೇಖರ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಇನ್ನುಳಿದಂತೆ ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಖಳನಟ ಸಂಪತ್ ಕುಮಾರ್ ಸೇರಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.

Whats_app_banner