Leelavathi Death:‌ ಲೀಲಾವತಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಓಡೋಡಿ ಬಂದ ಶಿವರಾಜ್‌ಕುಮಾರ್
ಕನ್ನಡ ಸುದ್ದಿ  /  ಮನರಂಜನೆ  /  Leelavathi Death:‌ ಲೀಲಾವತಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಓಡೋಡಿ ಬಂದ ಶಿವರಾಜ್‌ಕುಮಾರ್

Leelavathi Death:‌ ಲೀಲಾವತಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಓಡೋಡಿ ಬಂದ ಶಿವರಾಜ್‌ಕುಮಾರ್

Leelavathi Death:‌ ಲೀಲಾವತಿ ಅವರ ಪಕ್ಕದಲ್ಲಿ ಕುಳಿತು ಅಮ್ಮ, ನಾನು ಶಿವಣ್ಣ ಬಂದಿದ್ದೀನಿ ಎಂದು ಮಗುವಿನಿಂದ ಮಾತನಾಡಿಸಿದ್ದರು. ಆದರೆ ಆ ವೇಳೆಗಾಗಲೇ ಲೀಲಾವತಿ ಯಾರನ್ನೂ ಗುರುತಿಸದ ಸ್ಥಿತಿಗೆ ತಲುಪಿದ್ದರು. ಲೀಲಾವತಿಯವರನ್ನು ಕಂಡು ಮಾತನಾಡಿಸಿದ ನಂತರ ವಿನೋದ್‌ ರಾಜ್‌ ಅವರನ್ನು ಅಪ್ಪಿಕೊಂಡು ಧೈರ್ಯ ಹೇಳಿದ್ದರು.

ಲೀಲಾವತಿ ಅಂತಿಮ ದರ್ಶನ ಪಡೆಯಲು ಆಸ್ಪತ್ರೆಗೆ ಧಾವಿಸಿದ ಶಿವರಾಜ್‌ಕುಮಾರ್
ಲೀಲಾವತಿ ಅಂತಿಮ ದರ್ಶನ ಪಡೆಯಲು ಆಸ್ಪತ್ರೆಗೆ ಧಾವಿಸಿದ ಶಿವರಾಜ್‌ಕುಮಾರ್

Leelavathi Death:‌ ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಲೀಲಾವತಿ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಲೀಲಾವತಿ ಇಂದು ಸಂಜೆ ನಿಧನರಾಗಿದ್ದಾರೆ.

ಆಸ್ಪತ್ರೆಗೆ ಧಾವಿಸಿದ ಶಿವರಾಜ್‌ಕುಮಾರ್

ಲೀಲಾವತಿ ನಿಧನದ ಸುದ್ದಿ ತಿಳಿಯುತ್ತಿದ್ದ ಶಿವರಾಜ್‌ಕುಮಾರ್‌ ಆಸ್ಪತ್ರೆ ಬಳಿ ಧಾವಿಸಿದ್ದಾರೆ. ಲೀಲಾವತಿ ಅಮ್ಮ ಇನ್ನಿಲ್ಲ ಎಂದು ತಿಳಿದು ಶಿವರಾಜ್‌ಕುಮಾರ್‌ ಕಂಬನಿ ಮಿಡಿದಿದ್ದಾರೆ. ಲೀಲಾವತಿ ಹಾಗೂ ಡಾ. ರಾಜ್‌ಕುಮಾರ್‌ ಕುಟುಂಬಕ್ಕೆ ಮೊದಲಿನಿಂದಲೂ ಬಹಳ ಒಡನಾಟವಿದೆ. ಡಾ ರಾಜ್‌ ಹಾಗೂ ಲೀಲಾವತಿ ಇಬ್ಬರೂ ಜೊತೆಯಾಗಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಣ್ಣಾವ್ರಿಗೆ ನಾಯಕಿಯಾಗಿ, ಪತ್ನಿಯಾಗಿ, ಅತ್ತೆಯಾಗಿ ಲೀಲಾವತಿ ನಟಿಸಿದ್ದಾರೆ. ಅಂದಿನಿಂದ ಇದುವರೆಗೂ ಎರಡೂ ಕುಟುಂಬಗಳು ಬಹಳ ಆತ್ಮೀಯರಾಗಿದ್ದಾರೆ. ಇದೇ ಆತ್ಮೀಯತೆಯಿಂದ ವಾರದ ಹಿಂದೆ ಶಿವರಾಜ್‌ಕುಮಾರ್‌, ಪತ್ನಿ ಗೀತಾ ಅವರ ಜೊತೆಗೆ ಬಂದು ಲೀಲಾವತಿಯವರ ಆರೋಗ್ಯ ವಿಚಾರಿಸಿ ಹೋಗಿದ್ದರು.‌

ಅಮ್ಮ ನೆನಪಾಗುತ್ತಾರೆ ಎಂದಿದ್ದ ಶಿವಣ್ಣ

ಲೀಲಾವತಿ ಅವರ ಪಕ್ಕದಲ್ಲಿ ಕುಳಿತು ಅಮ್ಮ, ನಾನು ಶಿವಣ್ಣ ಬಂದಿದ್ದೀನಿ ಎಂದು ಮಗುವಿನಿಂದ ಮಾತನಾಡಿಸಿದ್ದರು. ಆದರೆ ಆ ವೇಳೆಗಾಗಲೇ ಲೀಲಾವತಿ ಯಾರನ್ನೂ ಗುರುತಿಸದ ಸ್ಥಿತಿಗೆ ತಲುಪಿದ್ದರು. ಲೀಲಾವತಿಯವರನ್ನು ಕಂಡು ಮಾತನಾಡಿಸಿದ ನಂತರ ವಿನೋದ್‌ ರಾಜ್‌ ಅವರನ್ನು ಅಪ್ಪಿಕೊಂಡು ಧೈರ್ಯ ಹೇಳಿದ್ದರು. ಲೀಲಾವತಿ ಅಮ್ಮನದ್ದು ಒಳ್ಳೆ ವ್ಯಕ್ತಿತ್ವ, ಒಳ್ಳೆ ಮನಸ್ಸು. ಆದ್ದರಿಂದಲೇ ಇಂದು ನಾವು ಅವರನ್ನು ನೋಡಲು ಬಂದಿರುವುದು, ಅವರನ್ನು ನೋಡುತ್ತಿದ್ದರೆ ನನ್ನ ತಾಯಿಯವರೇ ನೆನಪಾಗುತ್ತಾರೆ. ಆದಷ್ಟು ಬೇಗ ಲೀಲಾವತಿ ಅಮ್ಮ ಗುಣಮುಖರಾಗುತ್ತಾರೆ ಎಂದು ಶಿವರಾಜ್‌ಕುಮಾರ್‌ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಎಲ್ಲರ ಭರವಸೆಯನ್ನು ಹುಸಿ ಮಾಡಿ ಇಂದು ಲೀಲಾವತಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಲೀಲಾವತಿ

ಇತ್ತೀಚೆಗೆ ಲೀಲಾವತಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೀಲಾವತಿ ಅವರನ್ನು ಆಸ್ಪತ್ರೆಗೆ ಸೇರಿಸಿದರೆ ಎಲ್ಲಾ ಖರ್ಚು ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು. ಸೋಲದೇವನ ಹಳ್ಳಿಯ ತೋಟದ ಮನೆಯಲ್ಲೇ ಅವರಿಗೆ ಚಿಕತ್ಸೆ ನೀಡಲಾಗುತ್ತಿತ್ತು. ಅದರೆ ಇಂದು ಅವರು ತೀವ್ರ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಲಾಗಿತ್ತು.

Whats_app_banner