Allu Arjun Released: ರಾತ್ರಿಯಿಡೀ ಜೈಲಲ್ಲೇ ಇದ್ದು, ಮುಂಜಾನೆ ಬಿಡುಗಡೆಯಾದ ಪುಷ್ಪ 2 ನಟ ಅಲ್ಲು ಅರ್ಜುನ್
ನಟ ಅಲ್ಲು ಅರ್ಜುನ್ ಶನಿವಾರ ಮುಂಜಾನೆ ಹೈದರಾಬಾದ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ನಿನ್ನೆ ರಾತ್ರಿ ಅವರು ಜೈಲಿನಲ್ಲೇ ಕಳೆದಿದ್ದಾರೆ. ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.
ಸಂಧ್ಯಾ ಚಿತ್ರಮಂದಿರದಲ್ಲಿ ನಡೆದಿದ್ದ ದುರ್ಘಟನೆಯಲ್ಲಿ ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ, ನಟ ಅಲ್ಲು ಅರ್ಜುನ್ ಶನಿವಾರ (ಡಿಸೆಂಬರ್ 14) ಮುಂಜಾನೆ ಹೈದರಾಬಾದ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ಬಂಧನವಾದ ದಿನದ (ಡಿಸೆಂಬರ್ 13) ರಾತ್ರಿಯಿಡೀ ಅವರು ಜೈಲಿನಲ್ಲೇ ಕಳೆದರು. ಜೈಲಿನಿಂದ ಹೊರಡುವಾಗ ನಟ ಅಲ್ಲು ಅರ್ಜುನ್ ತಮ್ಮ ಕಾರಿನಲ್ಲಿ ಕುಳಿತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಬಿಡುಗಡೆಗೂ ಮುನ್ನ ಅವರ ನಿವಾಸದ ಹೊರಗೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.
ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಅಲ್ಲು ಅರ್ಜುನ್ ಅವರನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ನಂತರ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಅರ್ಜುನ್ ಅವರ ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಅವರು ಅಲ್ಲು ಅರ್ಜುನ್ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅವರು ಕೂಡ ಜೈಲಿನ ಬಳಿ ಆಗಮಿಸಿದ್ದರು.
ಇದಕ್ಕೂ ಮುನ್ನ ಅರ್ಜುನ್ ಪರ ವಕೀಲ ಅಶೋಕ್ ರೆಡ್ಡಿ, ನಟನಿಗೆ ನೀಡಿರುವ ಜಾಮೀನು ಆದೇಶವನ್ನು ಹೈದರಾಬಾದ್ ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದರು. ಅಲ್ಲು ಅರ್ಜುನ್‌ನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ಸ್ಪಷ್ಟವಾಗಿ ನಿರ್ದೇಶಿಸಿದ ಹೈಕೋರ್ಟ್‌ನ ಆದೇಶದ ಪ್ರತಿ ಮತ್ತು ಬಿಡುಗಡೆ ಮಾಡುವಂತೆ ಸೂಪರಿಂಟೆಂಡೆಂಟ್ ನಿರ್ದೇಶಿಸಿದ್ದಾರೆ ಆದರೆ ಆದೇಶದ ಹೊರತಾಗಿಯೂ ಅವರನ್ನು ಬಿಡುಗಡೆ ಮಾಡಿರಲಿಲ್ಲ.
ಅಲ್ಲು ಅರ್ಜುನ್ ಬಂಧನಕ್ಕೆ ಕಾರಣ ಏನು?
ಪುಷ್ಪ 2 ಸಿನಿಮಾ ಬಿಡುಗಡೆ ಸಂಧ್ಯಾ ಚಿತ್ರಮಂದಿರದ ಘಟನೆಯಲ್ಲಿ ಮಹಿಳೆಯೊಬ್ಬರು ಕಾಲ್ತುಳಿದಲ್ಲಿ ತೀರಿಕೊಂಡಿದ್ದರು. ಆ ಪ್ರಕರಣವಾಗಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ, ನಟ ಅಲ್ಲು ಅರ್ಜುನ್ ಶನಿವಾರ ಮುಂಜಾನೆ ಹೈದರಾಬಾದ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ನಿನ್ನೆ ರಾತ್ರಿ ಅವರು ಜೈಲಿನಲ್ಲೇ ಇದ್ದರು. ಶುಕ್ರವಾರ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅಲ್ಲು ಅರ್ಜುನ್ ಅವರನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ಅಭಿಮಾನಿ ವಲಯದ ಜತೆಗೆ ಟಾಲಿವುಡ್‌ನ ಆಪ್ತರೂ ಪೊಲೀಸರ ಈ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಮಾತುಗಳು ಮುನ್ನೆಲೆಗೆ ಬಂದಿವೆ. ಪರ ವಿರೋಧ ಚರ್ಚೆ ನಡೆಯುತ್ತಿವೆ.
ಪುಷ್ಪ 2 ಸಿನಿಮಾದಲ್ಲಿ ಪುಷ್ಪರಾಜನನ್ನು ಬಂಧಿಸಲು ಇಡೀ ಪೊಲೀಸ್ ಇಲಾಖೆ ಹರಸಾಹಸ ಪಟ್ಟಿತ್ತು. ಖಾಕಿ ಪಡೆಗೇ ಪುಷ್ಪರಾಜ್ ಮತ್ತವರ ಗ್ಯಾಂಗ್ ಚಳ್ಳೆಹಣ್ಣು ತಿನ್ನಿಸಿತ್ತು. ಇದೀಗ ನಿಜ ಜೀವನದಲ್ಲಿಯೇ ಪೊಲೀಸರ ಅತಿಥಿಯಾಗಿದ್ದಾರೆ ಅಲ್ಲು ಅರ್ಜುನ್ ಎಂಬಂತಾಗಿತ್ತು.