ಕನ್ನಡ ಸುದ್ದಿ  /  Entertainment  /  Sandalwood News Simple Suni Directs Sharan Ashika Ranganath Starrer Avatara Purush 2 Trailer Released Mnk

Avatara purusha 2: ಶರಣ್‌ ‘ಅವತಾರ ಪುರುಷ 2’ ಸಿನಿಮಾಕ್ಕೆ ಸಾಥ್‌ ನೀಡಿದ ಸ್ಯಾಂಡಲ್‌ವುಡ್‌ ಹೀರೋಗಳು

ಶರಣ್‌, ಆಶಿಕಾ ರಂಗನಾಥ್‌ ಅಭಿನಯದ ಅವತಾರ ಪುರುಷ ಪಾರ್ಟ್‌ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಏ. 5ರಂದು ಚಿತ್ರ ರಿಲೀಸ್‌ ಆಗಲಿದೆ. ಈ ನಿಮಿತ್ತ ಸ್ಯಾಂಡಲ್‌ವುಡ್‌ನ ನಾಯಕ ನಟರು ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

Avatara purusha 2: ಶರಣ್‌ ಅವತಾರ ಪುರುಷ 2 ಸಿನಿಮಾಕ್ಕೆ ಸಾಥ್‌ ನೀಡಿದ ಸ್ಯಾಂಡಲ್‌ವುಡ್‌ ಹೀರೋಗಳು
Avatara purusha 2: ಶರಣ್‌ ಅವತಾರ ಪುರುಷ 2 ಸಿನಿಮಾಕ್ಕೆ ಸಾಥ್‌ ನೀಡಿದ ಸ್ಯಾಂಡಲ್‌ವುಡ್‌ ಹೀರೋಗಳು

Avatara Purusha 2: 2022ರಲ್ಲಿ ತೆರೆಗೆ ಬಂದಿದ್ದ ಅವತಾರ ಪುರುಷ ಸಿನಿಮಾ ನೋಡುಗರ ಗಮನ ಸೆಳೆಯುವುದರ ಜತೆಗೆ ಕುತೂಹಲ ಹೆಚ್ಚಿಸಿತ್ತು. ಆದರೆ, ಮೊದಲ ಭಾಗದ ಬಿಡುಗಡೆಯ ಕೆಲ ತಿಂಗಳ ಬಳಿಕ ಪಾರ್ಟ್‌ 2 ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿತ್ತು ಚಿತ್ರತಂಡ. ಇದೀಗ ಆ ಸಿನಿಮಾ ಬಿಡುಗಡೆಯ ಸನಿಹಕೆ ಬಂದಿದೆ. ಇದೇ ಏ. 5ರಂದು ಶರಣ್‌ ಮತ್ತು ಆಶಿಕಾ ರಂಗನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ ಅವತಾರ ಪುರುಷ 2 ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಪಾರ್ಟ್‌ 2 ಸಿನಿಮಾ ಹೇಗಿರಲಿದೆ ಎಂಬ ಕೌತುಕಕ್ಕೆ ಒಗ್ಗರಣೆ ಹಾಕುವ ನಿಟ್ಟಿನಲ್ಲಿ ಟ್ರೇಲರ್‌ ಮೂಲಕ ಆಗಮಿಸಿತ್ತು. ಇತ್ತೀಚೆಗಷ್ಟೇ ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಅವತಾರ ಪುರುಷ 2 ಸಿನಿಮಾವನ್ನು ಸಿಂಪಲ್‌ ಸುನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‌ ಬಿಡುಗಡೆ ಅಷ್ಟೇ ವಿಶೇಷವಾಗಿತ್ತು. ಸ್ಯಾಂಡಲ್‌ ಕಲಾವಿದರ ಸಮಾಗಮಕ್ಕೆ ಸಾಕ್ಷಿಯಾಗಿತ್ತು.

ಸ್ಯಾಂಡಲ್‌ವುಡ್‌ ನಟರಾದ ನೆನಪಿರಲಿ ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ವೇಳೆ ಮಾತನಾಡಿದ ನಿರ್ದೇಶಕ ಸುನಿ, ನಮ್ಮ ಅವತಾರ ಪುರುಷ ಚಿತ್ರದ ಮೊದಲ ಭಾಗವನ್ನು ಈಗಾಗಲೇ ನೋಡಿ ಹರಸಿದ್ದಾರೆ. ಈಗ ಎರಡನೇ ಭಾಗವನ್ನೂ ಇದೇ 5ನೇ ತಾರೀಖಿನಂದು ನಿಮ್ಮ ಮುಂದಿಡುತ್ತಿದ್ದೇವೆ ಎಂದರು.

ಸ್ಯಾಂಡಲ್‌ವುಡ್‌ ನಟರ ಸಾಥ್‌

ಅದೇ ರೀತಿ ಈ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಐದು ಸಿನಿಮಾತಂಡಗಳ ನಾಯಕರನ್ನು ಕರೆಸಿದ್ದರು ಸುನಿ. ಏಪ್ರಿಲ್‌ ತಿಂಗಳಲ್ಲಿ ಏ. 5ಕ್ಕೆ ನಮ್ಮ ಸಿನಿಮಾ, ಏ. 12 ನೆನಪಿರಲಿ ಪ್ರೇಮ್‌ ಅವರ ಅಪ್ಪ ಐ ಲವ್‌, ಏ. 19 ಪ್ರವೀಣ್‌ ತೇಜ್‌ ಅವರ ಓ2 ರಿಲೀಸ್ ಆಗಲಿದೆ,‌ ರಿಷಿಯ ರಾಮನ ಅವತಾರ, ಅದಾದ ಮೇಲೆ ವಿಕ್ಕಿ ವರುಣ್‌ ನಟನೆಯ ಕಾಲಾ ಪತ್ಥರ್‌ ಸಿನಿಮಾ ರಿಲೀಸ್‌ ಆಗಲಿದೆ. ಇವರೆಲ್ಲರನ್ನೂ ಇಲ್ಲಿ ಕರೆಸಿ ಅವರ ಜತೆ ಟ್ರೇಲರ್‌ ರಿಲೀಸ್‌ ಮಾಡಿದ್ದೇವೆ ಎಂದರು ನಿರ್ದೇಶಕ ಸುನಿ.

ಗುಣಮಟ್ಟದ ಸಿನಿಮಾ ಮಾಡಿದ್ದೇವೆ

ಕನ್ನಡ ಸಿನಿಮಾಗಳಲ್ಲಿ ಕ್ವಾಲಿಟಿ ಇರಲ್ಲ ಎಂದು ಕೆಲವರು ಹೇಳಿದ್ದುಂಟು. ಇದೀಗ ನಮ್ಮ ಅವತಾರ ಪುರುಷ ಸಿನಿಮಾ ಟ್ರೇರಲ್‌ ನೋಡಿದರೆ, ಸಿನಿಮಾ ಹೇಗೆ ಬಂದಿರಬಹುದು ಎಂದು ಬಹುತೇಕರಿಗೆ ಗೊತ್ತಾಗಿರುತ್ತದೆ. ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ‌. ಇದೇ 5ರಂದು ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ಶರಣ್‌ ಏನಂದ್ರು?

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಿರ್ದೇಶಕ ಸುನಿ ಅವರ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಸುನಿ ಅವರು ಚಿತ್ರದ ಕಥೆ ಹೇಳುತ್ತೇನೆ ಎಂದಾಗ ಕಾಮಿಡಿ ಜಾನರ್ ಕಥೆ ಅಂದುಕೊಂಡಿದ್ದೆ. ಆದರೆ ಅವರು ಇದೊಂದು ವಿಭಿನ್ನ ಕಥೆ. ಈ ಕಥೆಯಲ್ಲಿ ಕಾಮಿಡಿ ಕೂಡ ಇರುತ್ತದೆ ಎಂದರು. ನಟನಾಗಿ ಬೇರೆಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ನನಗೂ ಇದೆ. ಹಾಗಾಗಿ ಈ ಚಿತ್ರದ ಪಾತ್ರ ಇಷ್ಟವಾಯಿತು. ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಮೂಡಿಬಂದಿದೆ. ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎನ್ನುತ್ತಾರೆ ನಟ ಶರಣ್.

ನಾನು ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದಾಗ ಅವತಾರ ಪುರುಷ 2 ಚಿತ್ರ ಯಾವಾಗ ಬಿಡುಗಡೆ ಎಂದು ಸಾಕಷ್ಟು ಮಂದಿ ಕೇಳುತ್ತಿದ್ದರು. ಪ್ರೇಕ್ಷಕರಿಗೆ ಈ ಚಿತ್ರದ ಬಗೆಗಿನ ಕುತೂಹಲ ಎಷ್ಟಿತ್ತು ಎಂಬುದು ತಿಳಿದಿತ್ತು. ಹಾಗಾಗಿ ಇದೀಗ ಚಿತ್ರಮಂದಿರಕ್ಕೆ ಬರುತ್ತಿದ್ದೇವೆ ನೋಡಿ ಹರಸಿ ಎಂದರು ನಟಿ ಆಶಿಕಾ ರಂಗನಾಥ್. ನಾಯಕನಾಗಿ ಶರಣ್ ನಟಿಸಿದರೆ, ಆಶಿಕಾ ರಂಗನಾಥ್ ಅವರಿಗೆ ಜೋಡಿಯಾಗಿದ್ದಾರೆ. ಶ್ರೀನಗರ ಕಿಟ್ಟಿ ಖಳನಾಗಿದ್ದಾರೆ, ಹಿರಿಯ ನಟ ಸಾಯಿಕುಮಾರ್, ಸಾಧುಕೋಕಿಲ, ನಟಿಯರಾದ ಸುಧಾರಾಣಿ, ಭವ್ಯ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

IPL_Entry_Point