ಕನ್ನಡ ಸುದ್ದಿ  /  Entertainment  /  Kannada Television News Seetha Rama Serial April 03rd Episode Highlights Seetha Raama Serial Latest Update Mnk

Seetha Rama Serial: ಸೀತಾ ಹಿನ್ನೆಲೆ ಏನು? ಸಿಹಿ ಅಪ್ಪ ಯಾರು? ಒಡಲ ಸತ್ಯಕ್ಕೆ ಕೈ ಹಾಕಿದ ಭಾರ್ಗವಿ, ಸೀತಾರಾಮ ಜೋಡಿಗೆ ಅಗ್ನಿಪರೀಕ್ಷೆ!

ಸೀತಾ ರಾಮ ಸೀರಿಯಲ್‌ ಕಥೆಯಲ್ಲೀಗ ರೋಚಕ ಟ್ವಿಸ್ಟ್‌ ಎದುರಾಗುತ್ತಿದೆ. ಸೀತಾಳಿಗೆ ಮಗಳಿರುವ ವಿಚಾರ ಭಾರ್ಗವಿಗೆ ಗೊತ್ತಾಗಿದೆ. ಈ ನಡುವೆ, ಸೀತಾಳ ಹಿನ್ನೆಲೆಯ ಹುಡುಕಾಟಕ್ಕೆ ಲಾಯರ್‌ ರುದ್ರಪ್ರತಾಪ್‌ಗೆ ಸುಪಾರಿಯನ್ನೂ ಕೊಟ್ಟಿದ್ದಾಳೆ.

Seetha Rama Serial: ಸೀತಾ ಹಿನ್ನೆಲೆ ಏನು? ಸಿಹಿ ಅಪ್ಪ ಯಾರು? ಒಡಲ ಸತ್ಯಕ್ಕೆ ಕೈ ಹಾಕಿದ ಭಾರ್ಗವಿ, ಸೀತಾರಾಮ ಜೋಡಿಗೆ ಅಗ್ನಿಪರೀಕ್ಷೆ!
Seetha Rama Serial: ಸೀತಾ ಹಿನ್ನೆಲೆ ಏನು? ಸಿಹಿ ಅಪ್ಪ ಯಾರು? ಒಡಲ ಸತ್ಯಕ್ಕೆ ಕೈ ಹಾಕಿದ ಭಾರ್ಗವಿ, ಸೀತಾರಾಮ ಜೋಡಿಗೆ ಅಗ್ನಿಪರೀಕ್ಷೆ!

Seetha Rama Serial: ಅಚ್ಚರಿಯ ರೀತಿಯಲ್ಲಿ ಶಾಂತಮ್ಮನ ವಠಾರಕ್ಕೆ ಬಂದ ಭಾರ್ಗವಿಗೆ ಸೀತಾಳ ಅಸಲಿಯತ್ತು ತಿಳಿದಿದೆ. ಸೀತಾ ಮನೆಯಲ್ಲಿ ಇಲ್ಲದಿದ್ದಾಗ ಬಂದಿದ್ದ ಭಾರ್ಗವಿ ಸೀತಾಳ ಮನೆಗೆ ತೆರಳಿದ್ದಳು. ಈ ವೇಳೆ ಸಿಹಿ ಯಾರೆಂಬ ವಿಚಾರ ಭಾರ್ಗವಿಗೆ ಗೊತ್ತಾಗಿದೆ. ಸೀತಾಗೆ ಒಬ್ಬಳು ಮಗಳಿದ್ದಾಳಾ? ಈ ರಾಮ ಒಬ್ಬ ಮಗಳ ತಾಯಿಯನ್ನು ಮದುವೆಯಾಗಲು ಹೊರಟಿದ್ದಾನಾ? ಎಂದು ಒಳಗೊಳಗೆ ಸೀತಾ ರಾಮರನ್ನು ಶಪಿಸಿದ್ದಾಳೆ. ಇದೇ ವಿಷಯಕ್ಕೆ ತನ್ನ ಕೆಟ್ಟ ಬುದ್ಧಿ ಉಪಯೋಗಿಸಿ, ಬೇರೆಯ ಸಂಚು ರೂಪಿಸಲು ಮುಂದಾಗಿದ್ದಾಳೆ.

ರಾಮನಿಗೆ ಕೆಟ್ಟ ದಾಗಬೇಕು ಎಂದೇ ಶಪಿಸುತ್ತ ಬರುತ್ತಿರುವ ಭಾರ್ಗವಿಗೆ ಈಗ ಸೀತಾಳಿಗೆ ಮಗಳಿದ್ದಾಳೆ ಎಂಬ ಅಸ್ತ್ರ ಸಿಕ್ಕಿದೆ. ಇದೇ ವಿಚಾರದ ಹಿಂದೆ ಬಿದ್ದಿರುವ ಭಾರ್ಗವಿ, ಮೂಲಕ್ಕೆ ಕೈ ಹಾಕಿದ್ದಾಳೆ. ಸೀತಾ ಹಿನ್ನೆಲೆಯನ್ನು ತಿಳಿದುಕೊಳ್ಳಲು ಸಂಚು ರೂಪಿಸಿದ್ದಾಳೆ. ಸಿಹಿಯ ಅಪ್ಪ ಯಾರು ಎಂಬ ವಿಚಾರವನ್ನು ಕೆದಕುತ್ತಿದ್ದಾಳೆ. ಈ ಮೂಲಕ ಅಸಲಿ ವಿಷಯವನ್ನು ತಾತನ ಗಮನಕ್ಕೂ ತಂದು, ಎರಡನೇ ಮದುವೆ, ಮಗಳ ತಾಯಿಯನ್ನು ರಾಮ ಮದುವೆಯಾಗಲು ಹೊರಟಿದ್ದಾನೆ ಎಂಬುದನ್ನು ಹೇಳುವ ತಂತ್ರ ಹೆಣೆಯುತ್ತಿದ್ದಾಳೆ.

ಈ ಆಟಕ್ಕೆ ಭಾರ್ಗವಿ ಆಕೆ ಬಳಸಿಕೊಂಡಿದ್ದು ಲಾಯರ್‌ ರುದ್ರಪ್ರತಾಪನನ್ನು. ಈಗಾಗಲೇ ದುಶ್ಮನ್‌ ಕಾ ದುಶ್ಮನ್‌ ದೋಸ್ತ್‌ ಎಂಬ ಮಾತಂತೆ, ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದ ರುದ್ರಪ್ರತಾಪನನ್ನು ತನ್ನ ಈ ಕೆಲಸಕ್ಕೆ ಕರೆಸಿದ್ದಾಳೆ. ನಿಮ್ಮ ಪ್ರೇಯಸಿ ಸೀತಾಗೆ ಮಗಳಿದ್ದಾಳೆ ಎಂದಮೇಲೆ ಅಪ್ಪ ಇರಲೇ ಬೇಕಲ್ಲವಾ? ಅವನು ಎಲ್ಲಿದ್ದಾನೆ, ಹೇಗಿದ್ದಾನೆ, ಯಾರು, ಏನ್ಮಾಡ್ತಾನೆ, ಬದುಕಿದ್ದಾನಾ ಸತ್ತಿದ್ದಾನಾ? ಆ ಮಗು ತಂದೆ ಯಾರು ತಿಳಿದುಕೊಳ್ಳಿ ಎಂದು ರುದ್ರನಿಗೆ ಸುಪಾರಿ ಕೊಟ್ಟಿದ್ದಾಳೆ. ಭಾರ್ಗವಿಯ ಈ ಕುತಂತ್ರಕ್ಕೆ ಓಕೆ ಎಂದು ಸಮ್ಮತಿ ಸೂಚಿಸಿದ್ದಾನೆ ರುದ್ರಪ್ರತಾಪ್. ಈಗಾಗಲೇ ರುದ್ರಪ್ರತಾಪ್‌, ಅಶೋಕನ ತಂಗಿ ಅಂಜಲಿಯ ಹಿಂದೆ ಬಿದ್ದಿದ್ದಾನೆ. ಆಕೆಯ ಮೂಲಕ ಅಣ್ಣಂದಿರ ಬಗ್ಗೆ ಒಂದೊಂದೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾನೆ.

ಸೀರಿಯಲ್‌ ಶುರುವಾದಾಗಿನಿಂದ ಸೀತಾ ಮತ್ತು ಆಕೆಯ ಮಗಳ ಬಗ್ಗೆ ಮಾತ್ರ ತೋರಿಸಲಾಗ್ತಿದೆ. ಸೀತಾಳ ಭೂತಕಾಲದ ವಿಷ್ಯ ಮಾತ್ರ ಈ ವರೆಗೂ ಹೊರಬಂದಿಲ್ಲ. ಅಲ್ಲಲ್ಲಿ ಇನ್ನೇನು ಸೀತಾಳ ಇತಿಹಾಸ ತೆರೆದುಕೊಳ್ಳಲಿದೆ ಎನ್ನುತ್ತಿದ್ದಂತೆ, ಟ್ವಿಸ್ಟ್‌ಗಳ ಆಗಮನವಾಗುತ್ತಿತ್ತು. ಈಗ ಇದೇ ಸೀರಿಯಲ್‌ ಕೊಂಚ ವೇಗ ಪಡೆದುಕೊಂಡಿದೆ. ಸಂಚಿಕೆಯನ್ನು ಹೆಚ್ಚು ಎಳೆಯದೇ, ಇದ್ದ ವಿಚಾರವನ್ನು ನೋಡುಗರಿಗೆ ಅಷ್ಟೇ ನೀಟಾಗಿ ಪ್ರಸೆಂಟ್‌ ಮಾಡುತ್ತಿದೆ ಸೀತಾ ರಾಮ ಸೀರಿಯಲ್. ಈಗ ಸೀತಾಳ ಹಳೇ ಜೀವನದ ಬಗ್ಗೆಯೂ ಒಂದೊಂದೆ ವಿಚಾರಗಳು ಹೊರಬಳಲಿವೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point