ಕನ್ನಡ ಸುದ್ದಿ  /  Entertainment  /  Televison News Challenging Star Darshan Kaatera Movie Premiere On Television April 7 Sunday 7 Pm Pcp

Kaatera: ಈ ಭಾನುವಾರ ಟಿವಿಯಲ್ಲಿ ನೋಡಿ ದರ್ಶನ್‌ ನಟನೆಯ ಕಾಟೇರ ಸಿನಿಮಾ; ಪ್ರಸಾರ ಸಮಯ, ಚಾನೆಲ್‌ ವಿವರ ಇಲ್ಲಿದೆ ನೋಡಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಇದೇ ಏಪ್ರಿಲ್‌ 7ರಂದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಚಿತ್ರಮಂದಿರ, ಒಟಿಟಿ ಬಳಿಕ ಇದೀಗ ಟಿವಿಯಲ್ಲಿ ಪ್ರಸಾರವಾಗಲಿದೆ.

Kaatera: ಈ ಭಾನುವಾರ ಟಿವಿಯಲ್ಲಿ ನೋಡಿ ದರ್ಶನ್‌ ನಟನೆಯ ಕಾಟೇರ ಸಿನಿಮಾ
Kaatera: ಈ ಭಾನುವಾರ ಟಿವಿಯಲ್ಲಿ ನೋಡಿ ದರ್ಶನ್‌ ನಟನೆಯ ಕಾಟೇರ ಸಿನಿಮಾ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾವು ಇದೇ ಏಪ್ರಿಲ್‌ 7ರಂದು ಝೀ ಕನ್ನಡ ವಾಹಿನಿಯಲ್ಲಿ ಸಂಜೆ ಏಳು ಗಂಟೆಗೆ ಪ್ರಸಾರವಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಸೂಪರ್‌ಹಿಟ್‌ ಹಿರಿಮೆಗೆ ಪಾತ್ರವಾದ ಈ ಸಿನಿಮಾ ಈಗಾಗಲೇ ಝೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಒಟಿಟಿ ಬಳಸದೆ ಇರುವವರು ಸದ್ಯದಲ್ಲಿಯೇ ಮನೆಯಲ್ಲಿಯೇ ಕಾಟೇರ ನೋಡಬಹುದಾಗಿದೆ. ಕಾಟೇರ ಸಿನಿಮಾವು ಟಿವಿಯಲ್ಲಿ ಯುಗಾದಿ ಹಬ್ಬದಂದು ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಯುಗಾದಿಗೆ ಮುನ್ನವೇ ಝೀ ವಾಹಿನಿಯು ಏಪ್ರಿಲ್‌ 7ರಂದು ಬಿಡುಗಡೆ ಮಾಡಲಿದೆ.

"2023ರ ಮೆಗಾ ಬ್ಲಾಕ್ ಬಸ್ಟರ್, ಅದ್ಧೂರಿ ಡೈಲಾಗ್‌ಗಳ ಜಬರ್ದಸ್ತ್ ಪಿಚ್ಚರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಏಪ್ರಿಲ್ 7ರ ಸಂಜೆ 7:00ಕ್ಕೆ ಪ್ರಸಾರವಾಗಲಿದೆ" ಎಂದು ಝೀ ಕನ್ನಡ ವಾಹಿನಿಯು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದೆ. ಈ ಸುದ್ದಿ ಕೇಳಿ ಡಿಬಾಸ್‌ ಅಭಿಮಾನಿಗಳು ಖುಷಿಗೊಂಡಿದ್ದು, ಇನ್ನೊಮ್ಮೆ ತಪ್ಪದೇ ಟಿವಿಯಲ್ಲಿ ನೋಡುತ್ತೇವೆ ಎಂದಿದ್ದಾರೆ.

ಕಾಟೇರ ಸಿನಿಮಾವು ಸ್ಯಾಂಡಲ್‌ವುಡ್‌ನ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿದೆ. ಹಲವು ವರ್ಷಗಳ ಬಳಿಕ ದರ್ಶನ್‌ಗೆ ಈ ಸಿನಿಮಾ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು. ಕಾಟೇರ ಸಿನಿಮಾವು 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಎನ್ನಲಾಗಿತ್ತು. ಈ ಕುರಿತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಎಲ್ಲೂ ಬಾಯಿಬಿಟ್ಟಿಲ್ಲ. ಈ ಸಿನಿಮಾದ ಕಲೆಕ್ಷನ್‌ "ಇಡಿ ನೋಟಿಸ್‌" ಎಂದು ಹೇಳಿ ಸುಮ್ಮನಾಗಿದ್ದರು.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾವು ಚಿತ್ರಮಂದಿರಗಳಲ್ಲಿ ಡಿಸೆಂಬರ್‌ 29, 2023ರಂದು ರಿಲೀಸ್‌ ಆಗಿತ್ತು. ಈ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಆರಾಧಾನಾ ರಾಮ್‌ ನಟಿಸಿದ್ದಾರೆ. ಕಾಟೇರ ಸಿನಿಮಾದ ಮೂಲಕ ಆರಾಧನಾ ರಾಮ್‌ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಇವರು ಕನ್ನಡ ನಟಿ ಮಾಲಾಶ್ರೀ ಮಗಳು.

ಕಾಟೇರ ಸಿನಿಮಾವು 1970ರ ಕಾಲಘಟ್ಟದ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಈಗಲೂ ಪ್ರಚಲಿತದಲ್ಲಿರುವ ಸಾಮಾಜಿಕ ಸಮಸ್ಯೆಗಳ ಕುರಿತೂ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾವನ್ನು ತರುಣ್‌ ಸುಧೀರ್‌ ನಿರ್ದೇಶಿಸಿದ್ದಾರೆ. ಅತ್ಯಂತ ಗಟ್ಟಿಯಾದ ಕಥೆ ಮತ್ತು ದರ್ಶನ್‌ ನಟನೆ ಈ ಸಿನಿಮಾ ಹಿಟ್‌ ಆಗಲು ಕಾರಣವಾಗಿತ್ತು.

ಎಲ್ಲಾ ಪ್ರೀಮಿಯರ್‌ಗಳ ಬಾಸ್, ರೆಕಾರ್ಡ್‌ಗಳಲ್ಲೇ ರೆಕಾರ್ಡ್ ಬರೆದ ಬ್ಲಾಕ್ ಬಸ್ಟರ್, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಅತಿ ಶೀಘ್ರದಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ಝೀ ಕನ್ನಡ ವಾಹಿನಿ ಇತ್ತೀಚೆಗೆ ಅಪ್‌ಡೇಟ್‌ ನೀಡಿತ್ತು. ಇದೀಗ ಟಿವಿಯಲ್ಲಿ ಪ್ರಸಾರವಾಗುವ ದಿನಾಂಕವನ್ನು ಪ್ರಕಟಿಸಿ ದಚ್ಚು ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದೆ.

IPL_Entry_Point