ಕನ್ನಡ ಸುದ್ದಿ  /  Entertainment  /  Ott News Upcoming South India Ott Releases In April 2024 Kannada Tamil Telugu Malayalam Movies Details Pcp

South OTT Release: ಮಂಜುಮ್ಮೇಲ್‌ ಬಾಯ್ಸ್‌ನಿಂದ ಪ್ರೇಮಲುವರೆಗೆ; ಒಟಿಟಿಯಲ್ಲಿ ಬಿಡುಗಡೆಗೆ ಕಾಯುತ್ತಿರುವ ದಕ್ಷಿಣ ಭಾರತದ ಸಿನಿಮಾಗಳಿವು

Upcoming South India OTT Movies: ಒಟಿಟಿಯಲ್ಲಿ ಮುಂದಿನ ದಿನಗಳಲ್ಲಿ ಪ್ರೇಮಲು, ಮಂಜುಮ್ಮೇಲ್‌ ಬಾಯ್ಸ್‌, ಲಾಲ್‌ ಸಲಾಮ್‌, ಲಂಬಸಿಂಗಿ, ಭೀಮಾ ಸಿರೇನ್‌ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್‌ ಆಗಲಿವೆ.

 ಒಟಿಟಿಯಲ್ಲಿ ಬಿಡುಗಡೆಗೆ ಕಾಯುತ್ತಿರುವ ದಕ್ಷಿಣ ಭಾರತದ ಸಿನಿಮಾಗಳಿವು
ಒಟಿಟಿಯಲ್ಲಿ ಬಿಡುಗಡೆಗೆ ಕಾಯುತ್ತಿರುವ ದಕ್ಷಿಣ ಭಾರತದ ಸಿನಿಮಾಗಳಿವು

ಬೆಂಗಳೂರು: ಈ ಬೇಸಿಗೆಯಲ್ಲಿ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಬಯಸುವವರಿಗೆ ಹಲವು ಒಟಿಟಿಗಳಿವೆ. ಈ ಏಪ್ರಿಲ್‌ ತಿಂಗಳಲ್ಲಿ ಒಟಿಟಿಗಳಲ್ಲಿ ಹತ್ತು ಹಲವು ಹೊಸ ಸಿನಿಮಾಗಳು ರಿಲೀಸ್‌ ಆಗಲಿವೆ. ಕೆಲವೊಂದು ಬಹುನಿರೀಕ್ಷಿತ ಸಿನಿಮಾಗಳು ಮೇ ತಿಂಗಳಲ್ಲಿ ಒಟಿಟಿಗೆ ಆಗಮಿಸಲಿವೆ. ಈಗಾಗಲೇ ಆರ್‌ಆರ್‌ಆರ್‌, ಪುಷ್‌, ಕಾಂತಾರ, ಬಾಹುಬಲಿಯಂತಹ ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿರುವ ದಕ್ಷಿಣ ಭಾರತದ ಚಿತ್ರರಂಗದ ಕುರಿತು ಇಡೀ ಜಗತ್ತೇ ಕುತೂಹಲಗೊಂಡಿದೆ. ಹೀಗಾಗಿ, ದಕ್ಷಿಣ ಭಾರತದ ಸಿನಿಮಾಗಳಿಗೆ ಒಟಿಟಿಯಲ್ಲಿ ದೊಡ್ಡಮಟ್ಟದ ಪ್ರೇಕ್ಷಕರಿದ್ದಾರೆ. ವಿಶೇಷವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮುಂತಾದ ದಕ್ಷಿಣ ಭಾರತದ ಸಿನಿಮಾಗಳು ಯಾವುವು ಒಟಿಟಿಯಲ್ಲಿ ರಿಲೀಸ್‌ ಆಗಲಿವೆ ಎಂದು ಕಾಯುತ್ತಿರುವವರಿಗೆ ಇಲ್ಲೊಂದಿಷ್ಟು ಸಿನಿಮಾಗಳ ಮಾಹಿತಿ ನೀಡಲಾಗಿದೆ.

ಪ್ರೇಮಲು

ಗಿರೀಶ್‌ ನಿರ್ದೇಶನದಲ್ಲಿ ಮೂಡಿಬಂದ ಪ್ರೇಮಲು ಚಿತ್ರದಲ್ಲಿ ನಸ್ಲಾನ್ ಕೆ ಗಫೂರ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಇದೀಗ ಅಧಿಕೃತ ಮಾಹಿತಿ ದೊರಕಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್‌ 12ರಿಂದ ಪ್ರೇಮಲು ಸಿನಿಮಾವನ್ನು ನೋಡಬಹುದಾಗಿದೆ. ಈ ಪ್ರೇಮಲು ಸಿನಿಮಾವನ್ನು ಕೇವಲ 10 ಕೋಟಿಗೂ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ಲಾಲ್‌ ಸಲಾಮ್‌

ಲಾಲ್‌ ಸಲಾಮ್‌ ಸಿನಿಮಾ ಕಳೆದ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಮೇ ತಿಂಗಳಲ್ಲಿ ರಿಲೀಸ್‌ ಆಗಿರಲಿಲ್ಲ. ಇದೀಗ ಲಾಲ್‌ ಸಿನಿಮಾವು ನೆಟ್‌ಫ್ಲಿಕ್ಸ್‌ ಬದಲು ಸನ್‌ನೆಕ್ಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಸನ್‌ನೆಕ್ಸ್ಟ್‌ ಒಟಿಟಿಯಲ್ಲಿ ಏಪ್ರಿಲ್‌ 12ರಂದು ಲಾಲ್‌ ಸಲಾಮ್‌ ರಿಲೀಸ್‌ ಆಗಲಿದೆ. . ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಭಾರತದ ಚಿತ್ರಮಂದಿರಗಳಲ್ಲಿ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್‌ ಅವರರು ಮೊಯ್ದೀನ್‌ ಬಾವಾ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಲಾಮ್‌ ಸಿನಿಮಾದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಲಂಬಸಿಂಗಿ

ಹಳ್ಳಿ ಹುಡುಗಿ ಜತೆ ಪ್ರೀತಿಗೆ ಬೀಳುವ ಸಿಟಿ ಹುಡುಗನೊಬ್ಬನ ಕಥೆಯಿದು. ಏಪ್ರಿಲ್‌ 2ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗಿದೆ.

ಭೀಮಾ

ಗೋಪಿಚಂದ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್‌ 5ರಂದು ರಿಲೀಸ್‌ ಆಗಲಿದೆ.

ಗಾಮಿ

ಅಘೋರ ಕಥೆಯನ್ನು ಹೊಂದಿರುವ ಗಾಮಿ ಸಿನಿಮಾವು ಝೀ 5ನಲ್ಲಿ ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ದಿನಾಂಕ ಇನ್ನೂ ಪ್ರಕಟವಾಗಿಲ್ಲ.

ಸಿರೇನ್‌

ಸಿರೆನ್‌ ಸಿನಿಮಾವು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್‌ 11ರಂದು ಬಿಡುಗಡೆಯಾಗಲಿದೆ.

ಮಂಜುಮ್ಮೇಲ್‌ ಬಾಯ್ಸ್‌

ಈ ಸಿನಿಮಾ ಈಗಲೂ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಹೀಗಾಗಿ ಏಪ್ರಿಲ್‌ ತಿಂಗಳಲ್ಲಿ ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿಗೆ ಬರೋದು ಡೌಟ್‌. ಮೇ ತಿಂಗಳ ಬಳಿಕ ಒಟಿಟಿಗೆ ಆಗಮಿಸುವ ಸೂಚನೆಯಿದೆ. ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್ ಮತ್ತು ವಿಷ್ಣು ರೇಘು ಮುಂತಾದವರು ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾದಲ್ಲಿ ನಟಿಸಿದ್ದಾರೆ.