ಕನ್ನಡ ಸುದ್ದಿ  /  Entertainment  /  Singer Kalabhairava Apologizes Ram Charan And Jr Ntr Fans

Singer Kalabhairava: ರಾಮ್‌ ಚರಣ್‌, ಜ್ಯೂ. ಎನ್‌ಟಿಆರ್‌ ಫ್ಯಾನ್ಸ್‌ ಬಳಿ ಕ್ಷಮೆ ಕೇಳಿದ ಕೀರವಾಣಿ ಪುತ್ರ.. ಕಾರಣವೇನು?

ಅಕಾಡೆಮಿ ಕಾರ್ಯಕ್ರಮದಲ್ಲಿ ಸ್ಟೇಜ್‌ ಮೇಲೆ ನಾನು ಹಾಡಲು ಅವಕಾಶ ಪಡೆಯಲು ಯಾರು ಸಹಾಯ ಮಾಡಿದರು ಎಂಬುದರ ಕುರಿತು ಮಾತ್ರ ನಾನು ಮಾತನಾಡುತ್ತಿದ್ದೆ ಅಷ್ಟೇ, ಅದನ್ನು ತಪ್ಪಾಗಿ ತಿಳಿಯಲಾಗಿದೆ. ನನ್ನ‌ ಪದಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ'' ಎಂದು ಕಾಲಭೈರವ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.

ರಾಮ್‌ ಚರಣ್‌, ಜ್ಯೂ. ಎನ್‌ಟಿಆರ್‌ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಗಾಯಕ ಕಾಲಭೈರವ
ರಾಮ್‌ ಚರಣ್‌, ಜ್ಯೂ. ಎನ್‌ಟಿಆರ್‌ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಗಾಯಕ ಕಾಲಭೈರವ

ಭಾರತೀಯ ಚಿತ್ರರಂಗದಾದ್ಯಂತ 'ಆರ್‌ಆರ್‌ಆರ್‌' ಚಿತ್ರವೇ ಸದ್ದು ಮಾಡುತ್ತಿದೆ. ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ನಾಟು ನಾಟು...ಹಾಡಿಗೆ ಪ್ರಶಸ್ತಿ ಬರುತ್ತಿದ್ದಂತೆ ಎಲ್ಲಡೆಯಿಂದ ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ವೇಳೆ ಸೆಲೆಬ್ರಿಟಿಗಳು ಆಸ್ಕರ್‌ ವಿಚಾರವಾಗಿ ಹಂಚಿಕೊಳ್ಳುವ ಕೆಲವು ಪೋಸ್ಟ್‌ಗಳು ಕೂಡಾ ಭಾರೀ ಸದ್ದು ಮಾಡುತ್ತಿವೆ.

ಇತ್ತೀಚೆಗೆ ಅಲ್ಲು ಅರ್ಜುನ್‌ ಕೂಡಾ ಆಸ್ಕರ್‌ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದರು. ಆದರೆ ಜ್ಯೂನಿಯರ್‌ ಎನ್‌ಟಿಆರ್‌ ಅವರನ್ನು ತೆಲುಗಿನ ಹೆಮ್ಮೆ ಎಂದಿದ್ದಕ್ಕೆ ರಾಮ್‌ ಚರಣ್‌ ಅಭಿಮಾನಿಗಳು ಕೋಪಗೊಂಡಿದ್ದರು. ಆದರೆ ಅಲ್ಲು ಅರ್ಜುನ್‌ ಈ ಕಮೆಂಟ್‌ಗಳಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ನಾಟು ನಾಟು ಹಾಡಿನ ಗಾಯಕ, ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಪುತ್ರ ಕಾಲ ಭೈರವ ಹಂಚಿಕೊಂಡಿರುವ ಪೋಸ್ಟ್‌ಗೆ ರಾಮ್‌ ಚರಣ್‌ ಹಾಗೂ ಜ್ಯೂ. ಎನ್‌ಟಿಆರ್‌ ಅಭಿಮಾನಿಗಳು ಗರಂ ಆಗಿದ್ದಾರೆ. ಕಮೆಂಟ್‌ಗಳನ್ನು ನೋಡುತ್ತಿದ್ದಂತೆ ಎಚ್ಚೆತ್ತ ಕಾಲ ಭೈರವ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಕಾಲಭೈರವ, ತೆಲುಗು ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕನಾಗಿ ಹೆಸರು ಮಾಡಿದ್ದಾರೆ. ನಾಟು ನಾಟು ಹಾಡನ್ನು ಕಾಲಭೈರವ ಹಾಗೂ ರಾಹುಲ್‌ ಸಿಪ್ಲಿಗುಂಜ್‌ ಹಾಡಿದ್ದಾರೆ. ನಾಟು ನಾಟು... ಹಾಡಿಗೆ ಆಸ್ಕರ್‌ ಪಡೆದದ್ದೂ ಅಲ್ಲದೆ ಆ ವೇದಿಕೆಯಲ್ಲಿ ಪರ್ಫಾಮ್‌ ಮಾಡುವ ಅವಕಾಶ ಕೂಡಾ ಈ ಗಾಯಕರಿಗೆ ಒಲಿದುಬಂದಿತ್ತು. ಇದೇ ವಿಚಾರವನ್ನು ಕಾಲಭೈರವ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡು ಸಂತೋಷ ವ್ಯಕ್ತಪಡಿಸಿದ್ದರು. ತಮಗೆ ಈ ಅವಕಾಶ ನೀಡಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದರು. ತಂದೆ ಕೀರವಾಣಿ, ತಾಯಿ ಶ್ರೀವಲ್ಲಿ, ಅಂಕಲ್‌ ರಾಜಮೌಳಿ, ಸಹೋದರ ಕಾರ್ತಿಕೇಯ, ಚಿಕ್ಕಮ್ಮ ರಮಾ, ಪ್ರೇಮ್‌ ರಕ್ಷಿತ್‌ ಮಾಸ್ಟರ್‌ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿದ್ದರು. ಆದರೆ ತಮ್ಮ ಟ್ವೀಟ್‌ನಲ್ಲಿ ರಾಮ್‌ ಚರಣ್‌ ಹಾಗೂ ಜ್ಯೂ. ಎನ್‌ಟಿಆರ್‌ ಹೆಸರನ್ನು ಮರೆತಿದ್ದರು.

ಈ ಟ್ವೀಟ್‌ ನೋಡುತ್ತಿದ್ದಂತೆ ಇಬ್ಬರೂ ನಟರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾದರೆ ನೀವು ಆಸ್ಕರ್‌ ವೇದಿಕೆಯಲ್ಲಿ ಪರ್ಫಾರ್ಮ್‌ ಮಾಡಿದ್ದರ ಹಿಂದೆ, ಹಾಡಿಗೆ ಆಸ್ಕರ್‌ ಬಂದಿದ್ದರ ಹಿಂದೆ ರಾಮ್‌ ಚರಣ್‌ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಶ್ರಮ ಏನೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ತಮ್ಮ ತಪ್ಪನ್ನು ಸರಿ ಮಾಡಿಕೊಂಡ ಕಾಲ ಭೈರವ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ''ನಾಟು ನಾಟು ಹಾಗೂ 'ಆರ್‌ಆರ್‌ಆರ್‌' ಯಶಸ್ಸಿಗೆ ತಾರಕ್ ಅಣ್ಣ ಮತ್ತು ಚರಣ್ ಅಣ್ಣ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಕಾಡೆಮಿ ಕಾರ್ಯಕ್ರಮದಲ್ಲಿ ಸ್ಟೇಜ್‌ ಮೇಲೆ ನಾನು ಹಾಡಲು ಅವಕಾಶ ಪಡೆಯಲು ಯಾರು ಸಹಾಯ ಮಾಡಿದರು ಎಂಬುದರ ಕುರಿತು ಮಾತ್ರ ನಾನು ಮಾತನಾಡುತ್ತಿದ್ದೆ ಅಷ್ಟೇ, ಅದನ್ನು ತಪ್ಪಾಗಿ ತಿಳಿಯಲಾಗಿದೆ. ನನ್ನ‌ ಪದಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ'' ಎಂದು ಕಾಲಭೈರವ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.

IPL_Entry_Point