ಕನ್ನಡ ಸುದ್ದಿ  /  ಮನರಂಜನೆ  /  27ನೇ ವಯಸ್ಸಿಗೆ ಖ್ಯಾತ ಯೂಟ್ಯೂಬರ್‌ Angry Rantman ಸಾವು! ಚಿಕ್ಕ ವಯಸ್ಸಲ್ಲೇ ಸಾಯುವಂಥದ್ದೇನಾಗಿತ್ತು?

27ನೇ ವಯಸ್ಸಿಗೆ ಖ್ಯಾತ ಯೂಟ್ಯೂಬರ್‌ Angry Rantman ಸಾವು! ಚಿಕ್ಕ ವಯಸ್ಸಲ್ಲೇ ಸಾಯುವಂಥದ್ದೇನಾಗಿತ್ತು?

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿಡಿಯೋಗಳ ಮೂಲಕವೇ ವೈರಲ್‌ ಆಗುತ್ತಿದ್ದ ಬೆಂಗಳೂರು ಮೂಲದ ಯುವಕ ಅಬ್ರದೀಪ್‌ ಸಹ ಅಕಾಲಿಕವಾಗಿ ನಿಧನರಾಗಿದ್ದಾರೆ. ಜಾಲತಾಣದಲ್ಲಿ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಎಂದೇ ಅಬ್ರದೀಪ್‌ ಫೇಮಸ್‌ ಆಗಿದ್ದರು.

27ನೇ ವಯಸ್ಸಿಗೆ ಖ್ಯಾತ ಯೂಟ್ಯೂಬರ್‌ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಸಾವು! ಚಿಕ್ಕ ವಯಸ್ಸಲ್ಲೇ ಸಾಯುವಂಥದ್ದೇನಾಗಿತ್ತು?
27ನೇ ವಯಸ್ಸಿಗೆ ಖ್ಯಾತ ಯೂಟ್ಯೂಬರ್‌ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಸಾವು! ಚಿಕ್ಕ ವಯಸ್ಸಲ್ಲೇ ಸಾಯುವಂಥದ್ದೇನಾಗಿತ್ತು?

Abhradeep Saha death: ಸೋಷಿಯಲ್ ಮೀಡಿಯಾ ಲೋಕದಿಂದ ದುಃಖದ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಯೂಟ್ಯೂಬರ್ ಮತ್ತು ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿದ್ದ ಅಬ್ರದೀಪ್ ಸಹಾ ನಿಧನರಾಗಿದ್ದಾರೆ. ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಎಂದೇ ಫೇಮಸ್‌ ಆಗಿದ್ದ 27 ವರ್ಷದ ಈ ಯುವಕನ ಸಾವು ಇದೀಗ ನೆಟ್ಟಿಗ ವಲಯವನ್ನು ಶಾಕ್‌ಗೆ ದೂಡಿದೆ. ಅಚ್ಚರಿಯಲ್ಲಿಯೇ ಸಂತಾಪ ಸೂಚಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್‌ ಮತ್ತು ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಅಬ್ರದೀಪ್ ಸಹಾ, ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೂ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ವೆಂಟಿಲೇಟರ್‌ ಸಹಾಯದಲ್ಲಿದ್ದರು. ಆದರೆ ಏಪ್ರಿಲ್‌ 16ರ ರಾತ್ರಿ ಅಧಿಕೃತವಾಗಿ ಅವರ ಸಾವಿನ ಸುದ್ದಿ ಹೊರಬಿದ್ದಿದೆ.

ಅಬ್ರದೀಪ್‌ ಸಾವಿನ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಶೋಕದ ಅಲೆ ಸೃಷ್ಟಿಯಾಗಿತ್ತು. ಅವರ ಫೋಟೋ ಮತ್ತು ವಿಡಿಯೋ ತುಣುಕುಗಳನ್ನು ಪೋಸ್ಟ್‌ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ. ಅಂದಹಾಗೆ, ಅಬ್ರದೀಪ್ 18 ಆಗಸ್ಟ್ 2017 ರಂದು ಯೂಟ್ಯೂಬ್‌ ಪ್ರಾರಂಭಿಸಿದ್ದರು. ಅನ್ನಾಬೆಲ್ಲೆ ಚಿತ್ರವನ್ನು ಏಕೆ ನೋಡಬಾರದು ಈ ಬಗ್ಗೆ ಅವರ ಮೊದಲ ವಿಡಿಯೋ ಪೋಸ್ಟ್‌ ಆಗಿತ್ತು.

ಅಲ್ಲಿಂದ ಶುರುವಾದ ಅವರ ಈ ಸೋಷಿಯಲ್‌ ಮೀಡಿಯಾ ಮತ್ತು ಯೂಟ್ಯೂಬ್‌ ಜರ್ನಿ, ಅದಾದ ಮೇಲೆ ಸಾಲು ಸಾಲು ಸಿನಿಮಾಗಳ ವಿಮರ್ಶೆಗಳನ್ನೂ ಮಾಡಿ ಸುದ್ದಿಯಾದರು ಅಬ್ರದೀಪ್‌ ಸುದ್ದಿಯಾದರು. ಕನ್ನಡದಲ್ಲಿ ಯಶ್‌ ನಟನೆಯ ಕೆಜಿಎಫ್‌ ಸಿನಿಮಾವನ್ನೂ ನೋಡಿ ರಿವ್ಯೂವ್‌ ಮಾಡಿದ್ದರು. ಅಬ್ರದೀಪ್‌ ವಿಮರ್ಶೆಗೆ ಹೊಂಬಾಳೆ ಫಿಲಂಸ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಸಿನಿಮಾ ಬಿಟ್ಟರೆ ಕ್ರಿಕೆಟ್, ಫುಟ್ಬಾಲ್, ರಾಜಕೀಯ ಸೇರಿ ಇಷ್ಟವಾದ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಒಳ್ಳೆಯ ಹೆಸರು ಗಳಿಸಿದ್ದರು ಅಬ್ರದೀಪ್. ಇದೀಗ‌ ಅನಾರೋಗ್ಯದ ಹಿನ್ನೆಲೆಯಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಸಿನಿಮಾ ಸೇರಿ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಈತನ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

ಅಷ್ಟಕ್ಕೂ ಅಬ್ರದೀಪ್‌ಗೆ ಏನಾಗಿತ್ತು?

ಅಬ್ರದೀಪ್‌ ಬಹು ಅಂಗಾಂಗಳ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಕಾರ್ಡಿಯಿಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಸರ್ಜರಿ ಕೂಡ ಮಾಡಲಾಗಿತ್ತು. ಸರ್ಜರಿ ಬಳಿಕ ಐಸಿಯುನಲ್ಲಿ ವೆಂಟಿಲೇಟರ್‌ ಸಹಾಯದಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ, ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಮಂಗಳವಾರ (ಏ. 16) ರಾತ್ರಿ ನಿಧನರಾದರು.

ಅಬ್ರದೀಪ್‌ ಸಹಾ ಶೇರ್‌ ಮಾಡಿದ ಕೊನೇ ಯೂಟ್ಯೂಬ್‌ ವಿಡಿಯೋ

IPL_Entry_Point

ವಿಭಾಗ