ಕನ್ನಡ ಸುದ್ದಿ  /  ಮನರಂಜನೆ  /  ಅಶ್ಲೀಲ ವಿಡಿಯೋ ನಮ್ಮದ್ದಲ್ಲ ಎಂದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ; ವಿಡಿಯೋದ ಅಸಲಿಯತ್ತು ಬಿಚ್ಚಿಟ್ಟ ಯೂಟ್ಯೂಬ್‌ ಜೋಡಿ

ಅಶ್ಲೀಲ ವಿಡಿಯೋ ನಮ್ಮದ್ದಲ್ಲ ಎಂದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ; ವಿಡಿಯೋದ ಅಸಲಿಯತ್ತು ಬಿಚ್ಚಿಟ್ಟ ಯೂಟ್ಯೂಬ್‌ ಜೋಡಿ

ಕರ್ನಾಟಕದ ಜನಪ್ರಿಯ ಯೂಟ್ಯೂಬರ್ಸ್‌, ಬೆಳಗಾವಿ ಮೂಲದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆ ವಿಡಿಯೋ ನಮ್ಮದ್ದಲ್ಲ, ಅದು ದುರುದ್ದೇಶದಿಂದ ಎಡಿಟ್‌ ಮಾಡಿರುವ ವಿಡಿಯೋ ಎಂದಿದ್ದಾರೆ.

ಅಶ್ಲೀಲ ವಿಡಿಯೋ ನಮ್ಮದ್ದಲ್ಲ ಎಂದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ
ಅಶ್ಲೀಲ ವಿಡಿಯೋ ನಮ್ಮದ್ದಲ್ಲ ಎಂದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ

ಬೆಂಗಳೂರು: ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ ಯಾರೆಂದು ಗೊತ್ತು. ಟಿಕ್‌ಟಾಕ್‌ ಕಾಲದಿಂದ ಈಗಿನ ಯೂಟ್ಯೂಬ್‌ವರೆಗೆ ಇವರ ವಿಡಿಯೋಗಳು ಫೇಮಸ್‌. ಸಾವಕಾರ ಮನಿ ವಾರಸುದಾರ, ಗೌಡತಿ ಕಣ್ಣಿಟ್ಟ ರಾಮ, ಕೂಡಿ ಬಾಳಿದ ಮನಿತನ, ಮಗಳ ಸಾಲಿ, ಅಣ್ಣ ತಮ್ಮರ ತುಂಬಿದ ಸಂಸಾರ ನುಚ್ಚು ನೂರ, ಕದ್ದಿಲೇ ಹೋದಳು ಮುದ್ದಿನ ಮಗಳು, ನ್ಯಾಯವಂತರ ಮನೆತನ, ಗೌಡರ ಅಳಿಯ, ಹಾಲಿನಂತ ಸಂಸಾರ, ಗೌಡರ ಅಳು, ಹಬ್ಬಕ್ಕ ಬಾರವ್ಯ ತಂಗಿ ಸೇರಿದಂತೆ ಹಲವು ಸ್ಕಿಟ್‌ ವಿಡಿಯೋಗಳ ಮೂಲಕ ಇವರು ಜನಪ್ರಿಯತೆ ಪಡೆದಿದ್ದಾರೆ. ಇವರ ಹಾಸ್ಯ, ಸಾಂಸಾರಿಕ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಹಲವು ದಶಲಕ್ಷ ವೀಕ್ಷಣೆ ಪಡೆದಿವೆ.

ಟ್ರೆಂಡಿಂಗ್​ ಸುದ್ದಿ

ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯತೆ ಪಡೆದಿರುವ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ ಇತ್ತೀಚೆಗೆ ಬೇರೆಯದ್ದೇ ಕಾರಣಗಳಿಂದ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿತ್ತು. ಆ ವಿಡಿಯೋದಲ್ಲಿರುವುದು ಇದೇ ಯೂಟ್ಯೂಬ್‌ ಜೋಡಿ ಎಂದೇ ವೈರಲ್‌ ಆಗಿತ್ತು. ವಿಡಿಯೋ ರೆಕಾರ್ಡಿಂಗ್‌ ಸ್ಟುಡಿಯೋವೊಂದರಲ್ಲಿ ಅಶ್ಲೀಲವಾಗಿ ಇಬ್ಬರು ಕಾಲ ಕಳೆದ ಸಿಸಿಟಿವಿ ಫೂಟೇಜ್‌ ವಿಡಿಯೋ ಆದಾಗಿತ್ತು. ಇದೀಗ ಈ ವಿಡಿಯೋ ನಮ್ಮದ್ದಲ್ಲ ಎಂದು ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

"ಒಂದು ವಾರದಿಂದ ಅಶ್ಲೀಲ ವಿಡಿಯೋವೊಂದು ನಮ್ಮ ವಿಡಿಯೋ ಎಂದು ವೈರಲ್‌ ಆಗುತ್ತಿದೆ. ಅದನ್ನು ನೋಡಿ ಆಶ್ಚರ್ಯವಾಗಿದೆ. ಆದರೆ, ಆ ವಿಡಿಯೋ ನಮ್ಮದ್ದಲ್ಲ. ಅದಕ್ಕೆ ನಾವು ಸೈಬರ್‌ ಕಂಪ್ಲೇಟ್‌ ಮಾಡಿದ್ದೇವೆ. ಸಿಸಿ ಟಿವಿಗೆ ಸಂಬಂಧಪಟ್ಟ ಹುಡುಗರು ಸಿಕ್ಕಿದ್ದಾರೆ. ಈ ವಿಡಿಯೋದಲ್ಲಿರುವುದು ಪ್ರಕಾಶ್‌ ಬಗಲಿ ಅಲ್ಲ, ಸುಧಾ ಬಾಗಲಕೋಟೆ ಅಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಅವರು ಕ್ಷಮೆ ಕೂಡ ಕೇಳಿದ್ದಾರೆ." ಎಂದು ಸುಧಾ ಬಾಗಲಕೋಟೆ ವಿಡಿಯೋ ಕ್ಲಿಪ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಈ ವಿಡಿಯೋದಲ್ಲಿ ಸಿಸಿಟಿವಿ ಫೂಟೇಜ್‌ ಲೀಕ್‌ ಮಾಡಿದ್ದವರು ಎನ್ನಲಾದ ಹುಡುಗರು ಕ್ಷಮಾಪಣೆ ಕೇಳಿದ ವಿವರವೂ ಇದೆ. "ಪ್ರಕಾಶ್‌ ಬಗಲಿಯವರ ಸ್ಟುಡಿಯೋದಲ್ಲಿ ನಾವು ಕ್ಯಾಮೆರಾ ಹ್ಯಾಕ್‌ ಮಾಡಿದ್ದೆವು. ಇತ್ತೀಚೆಗೆ ಅವರ ವಿಡಿಯೋವೊಂದನ್ನು ವೈರಲ್‌ ಮಾಡಿದ್ದೆವು. ಆ ವಿಡಿಯೋದಲ್ಲಿಇರುವುದು ಅವರಲ್ಲ. ನಾವು ಎಡಿಟಿಂಗ್‌ ಮಾಡಿರುವ ವಿಡಿಯೋ ಅದಾಗಿದೆ. ಸುಧಾ ಬಾಗಲಕೋಟೆ, ಪ್ರಕಾಶ್‌ ಬಗಲಿಯರಿಗೆ ಕ್ಷಮಾಪಣೆ ಕೇಳಿದ್ದೇವೆ. ಅವರು ಕ್ಷಮೆ ಮಾಡ್ತಾರ ಎಂದು ನಾವು ತಿಳಿದುಕೊಂಡಿದ್ದೇವೆ. ಅವರು ಮುಂದೆ ಏನು ಮಾಡ್ತಾರೆ ಅವರಿಗೆ ಬಿಟ್ಟದ್ದು" ಎಂದು ವಿಡಿಯೋದಲ್ಲಿ ಹೇಳಲಾಗಿದೆ.

"ಇವರನ್ನು ಯಾಕೆ ಕಂಪ್ಲೆಟ್‌ ಕೊಟ್ಟು ಒಳಗೆ ಹಾಕಿಲ್ಲ ಅಂದ್ರೆ ಅವರಿಗೆ ಕುಟುಂಬ ಇದೆ. ಅವರ ತಂದೆ ತಾಯಿ ಮುಖ ನೋಡಿ ನಮಗೆ ಕಂಪ್ಲೆಟ್‌ ನೀಡಲು ಮನಸ್ಸು ಬರಲಿಲ್ಲ. ಆದರೆ, ಒಂದು ವಾರದಿಂದ ನೀವು ತಿಳಿದುಕೊಂಡ್ರಲ್ಲ, ಇದು ಸುಧಾ ಬಾಗಲಕೋಟೆ ಮತ್ತು ಪ್ರಕಾಶ್‌ ಬಗಲಿ ವಿಡಿಯೋ ಎಂದು. ಅದು ನಮ್ಮದ್ದಲ್ಲ. ಎಲ್ಲರೂ ತಪ್ಪು ತಿಳಿದುಕೊಂಡಿದ್ದೀರಿ ಅನಿಸುತ್ತದೆ. ಯಾಕೆ ಇವರಿಬ್ಬರು ಇನ್ನೂ ಈ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ನೀವು ಕೇಳಬಹುದು. ಇವರೇ ಇರಬೇಕು, ಎಲ್ಲೋ ಹೋಗಿ ಅಡಗಿಕೊಂಡಿದ್ದಾರೆ ಎಂದುಕೊಳ್ಳಬಹುದು. ಇದು ಯಾರು? ಈ ಘಟನೆ ಹಿಂದೆ ಯಾರಿದ್ದಾರೆ ಎಂದು ನಮಗೆ ವಿವರ ತಿಳಿಯಬೇಕಿತ್ತು. ಅದಕ್ಕೆ ಕಾದ್ವಿ. ಈಗ ಇವರು ಸಿಕ್ಕಿದ್ದಾರೆ. ಇಷ್ಟು ದಿನ ನೀವು ನಮಗೆ ಯಾವ ರೀತಿ ಸಪೋರ್ಟ್‌ ಮಾಡಿದ್ದೀರಾ, ಅದನ್ನು ದಯವಿಟ್ಟು ಮುಂದುವರೆಸಿ" ಎಂದು ವಿಡಿಯೋ ಮೂಲಕ ಸುಧಾ ಬಾಗಲಕೋಟೆ ಮನವಿ ಮಾಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024