ಕಟ್ಟೆಯೊಡೆದ ಭೂಮಿ ಸಹನೆ, ಅಪ್ಪನ ಹಂಗಿಸಿದ ಅಪೇಕ್ಷಾಳ ಕೆನ್ನೆಗೆ ಬಿತ್ತು ಭೂಮಿಕಾಳ ಕೈ ಏಟು; ಇನ್ನೂ ನಾಲ್ಕು ಕೊಡಿ ಅಕ್ಕ ಅಂದ್ರು ಪ್ರೇಕ್ಷಕರು-
ಕನ್ನಡ ಸುದ್ದಿ  /  ಮನರಂಜನೆ  /  ಕಟ್ಟೆಯೊಡೆದ ಭೂಮಿ ಸಹನೆ, ಅಪ್ಪನ ಹಂಗಿಸಿದ ಅಪೇಕ್ಷಾಳ ಕೆನ್ನೆಗೆ ಬಿತ್ತು ಭೂಮಿಕಾಳ ಕೈ ಏಟು; ಇನ್ನೂ ನಾಲ್ಕು ಕೊಡಿ ಅಕ್ಕ ಅಂದ್ರು ಪ್ರೇಕ್ಷಕರು-

ಕಟ್ಟೆಯೊಡೆದ ಭೂಮಿ ಸಹನೆ, ಅಪ್ಪನ ಹಂಗಿಸಿದ ಅಪೇಕ್ಷಾಳ ಕೆನ್ನೆಗೆ ಬಿತ್ತು ಭೂಮಿಕಾಳ ಕೈ ಏಟು; ಇನ್ನೂ ನಾಲ್ಕು ಕೊಡಿ ಅಕ್ಕ ಅಂದ್ರು ಪ್ರೇಕ್ಷಕರು-

Amruthadhaare serial tomorrow episode: ಅಮೃತಧಾರೆ ಧಾರಾವಾಹಿಯ ನಾಳೆಯ ಸಂಚಿಕೆಯಲ್ಲಿ(ನವೆಂಬರ್‌12) ಏನಾಗಲಿದ ಎಂಬ ಸುಳಿವನ್ನು ಜೀ ಕನ್ನಡ ವಾಹಿನಿ ನೀಡಿದೆ. ಅಪ್ಪನ ಬಗ್ಗೆ ಅಪೇಕ್ಷಾ ಕೆಟ್ಟದಾಗಿ ಮಾತನಾಡಿದಾಗ ಭೂಮಿಕಾ ಕೋಪದಿಂದ ಅಪೇಕ್ಷಾಳ ಕೆನ್ನೆಗೆ ಹೊಡೆದಿದ್ದಾಳೆ. ಪ್ರೇಕ್ಷಕರು ಕೂಡ "ಇನ್ನೂ ನಾಲ್ಕು ಏಟು ನೀಡಿ ಅಕ್ಕಾ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಟ್ಟೆಯೊಡೆದ ಭೂಮಿ ಸಹನೆ, ಅಪ್ಪನ ಹಂಗಿಸಿದ ಅಪೇಕ್ಷಾಳ ಕೆನ್ನೆಗೆ ಬಿತ್ತು ಭೂಮಿಕಾಳ ಕೈ  ಏಟು
ಕಟ್ಟೆಯೊಡೆದ ಭೂಮಿ ಸಹನೆ, ಅಪ್ಪನ ಹಂಗಿಸಿದ ಅಪೇಕ್ಷಾಳ ಕೆನ್ನೆಗೆ ಬಿತ್ತು ಭೂಮಿಕಾಳ ಕೈ ಏಟು

Amruthadhaare serial tomorrow episode: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೆ ಅಕ್ಕ ಮತ್ತು ತಂಗಿ ವೈಮನಸ್ಸು ಹೈಲೈಟ್‌ ಆಗಿದೆ. ಒಂದೆಡೆ ಗೌತಮ್‌ ತಾಯಿ ತಂಗಿಯ ಭೇಟಿಗೆ ಎಲ್ಲರೂ ಕಾಯುತ್ತಿರುವಾಗ ನಿರ್ದೇಶಕರು ದೀಪಾವಳಿ ಹಬ್ಬ ಮುಗಿದು ಒಂದು ವಾರ ಕಳೆದ ಬಳಿಕ ಅಕ್ಕ ಮತ್ತು ತಂಗಿಯ ನಡುವಿನ ವೈಮನಸ್ಸನ್ನು ಅಮೃತಧಾರೆ ನಿರ್ದೇಶಕರು ಹೈಲೈಟ್‌ ಮಾಡಿದ್ದಾರೆ. ಈ ಮೂಲಕ ಕೆಲವು ವಾರ ಸೀರಿಯಲ್‌ ಅನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ಮಾಡಿದಂತೆ ಇದೆ. ಶಕುಂತಲಾದೇವಿ ನೀಡಿರುವ ಕಾರ್ಡ್‌ ಪಡೆದು ಅಪೇಕ್ಷಾ ಶಾಪಿಂಗ್‌ ಮುಗಿಸಿ ಬಂದಿದ್ದಾಳೆ. ಎಲ್ಲರಿಗೂ ಶಾಪಿಂಗ್‌ ಮಾಡಿ ಡ್ರೆಸ್‌ ತಂದಿದ್ದಾಳೆ. "ಇದು ಅತ್ತೆ ನಿಮಗೆ" "ಮಲ್ಲಿಯವರೇ ಇದು ನಿಮಗೆ" "ಈದು ಜೈದೇವ್‌ಗೆ" "ಮಾವ ಇದು ನಿಮಗೆ" ಎಂದು ಎಲ್ಲರಿಗೂ ಡ್ರೆಸ್‌ ಕೊಡುತ್ತಾಳೆ. "ಭಾವನಿಗೆ, ಪಾರ್ಥನಿಗೆ, ಅಜ್ಜಿಗೆ ಎಲ್ಲರಿಗೂ ತಂದಿದ್ದೇನೆ" ಎಂದು ಹೇಳುತ್ತಾಳೆ. "ಎಲ್ಲರಿಗೆ ತಂದಿದ್ಯ, ನಿನ್ನ ಅಕ್ಕನಿಗೆ ತಂದಿಲ್ವ?" ಎಂದು ರಮಾಕಾಂತ್‌ ಕೇಳಿದಾಗ "ಮರೆತು ಹೋಗಿಲ್ಲ, ನನಗೆ ಅವಳ ತರಹ ಔಟ್‌ಡೇಟೆಡ್‌ ಕಾಸ್ಟ್ಯೂಮ್‌ ಪರ್ಚೇಸ್‌ ಮಾಡಲು ಗೊತ್ತಿಲ್ಲ" ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾಳೆ. ಮರೆಯಲ್ಲಿದ್ದ ಭೂಮಿಕಾ ಇದನ್ನು ಕೇಳಿ ಬೇಸರಪಟ್ಟುಕೊಳ್ಳುತ್ತಾಳೆ. "ಅವಳು ಹಳೆ ಕಾಲದ ಹೆಂಗಸಿನಂತೆ ಡ್ರೆಸ್‌ ಮಾಡಿಕೊಳ್ಳುತ್ತಾಳೆ. ನನಗೆ ಅದನ್ನೆಲ್ಲ ಸೆಲೆಕ್ಟ್‌ ಮಾಡಲು ಬರೋದಿಲ್ಲ ಅಂಕಲ್‌. ಸ್ಟೈಲ್‌ ಅಂದ್ರೆ ಏನು ಅಂತ ಅವಳಿಗೆ ಗೊತ್ತಿಲ್ಲ, ಅವಳಿಗೆ ಏನು ಬೇಕೋ ಅದನ್ನು ಅವಳೇ ತೆಗೆದುಕೊಳ್ಳಲಿ" ಎಂದು ಅಪೇಕ್ಷಾ ಹೇಳುತ್ತಾಳೆ. ಮೊದಲು ಹೇಗಿದ್ದಳು, ಈಗ ಹೇಗೆ ಆಗಿದ್ದಾಳೆ ಎಂದು ಭೂಮಿಕಾಗೆ ನೆನಪಾಗುತ್ತದೆ. ಆದರೆ, ಸುಮ್ಮನಾಗುತ್ತಾಳೆ. ಆದರೆ, ಭೂಮಿಕಾಳ ಸಹನೆ ಕಟ್ಟೆಯೊಡೆಯುವ ಪ್ರಸಂಗ ನಾಳೆಯ ಸಂಚಿಕೆಯಲ್ಲಿ ನಡೆಯಲಿದೆ.

ಅಪ್ಪನನ್ನು ಜಿಪುಣ ಎಂದ ಅಪೇಕ್ಷಾ

ಮುಂದಿನ ಸಂಚಿಕೆಯಲ್ಲಿ ಅಪೇಕ್ಷಾ ತನ್ನ ಅಪ್ಪನ ಬಗ್ಗೆಯೂ ಕೆಟ್ಟದ್ದಾಗಿ ಮಾತನಾಡುತ್ತಾಳೆ. ಅಪೇಕ್ಷಾ ಶಾಪಿಂಗ್‌ ಬಗ್ಗೆ ಮಾತನಾಡುವಾಗ ರಮಾಕಾಂತ "ತವರುಮನೆಯಲ್ಲಿದ್ದಾಗಲೂ ಇದೇ ರೀತಿ ಶಾಪಿಂಗ್‌ ಮಾಡ್ತಾ ಇದ್ದೀಯ" ಎಂದು ಕೇಳುತ್ತಾರೆ. "ಇಲ್ಲ ಅಂಕಲ್‌, ಅಪ್ಪನದು ತೀರ ಮಿಡಲ್‌ ಕ್ಲಾಸ್‌ ಮೆಂಟಲಿಟಿ, ಅವರಿಗೆ ಬರ್ತಾ ಇದ್ದ ಸಂಬಳನೂ ಅಷ್ಟಕಷ್ಟೇ. ನನ್ನಪ್ಪ ಒಂದೊಂದು ರೂಪಾಯಿ ಖರ್ಚು ಮಾಡುವುದಕ್ಕೂ ನೂರು ಸರ್ತಿ ಯೋಚನೆ ಮಾಡೋರು. ಅಂತಹ ಜಿಪುಣ ನಮ್ಮಪ್ಪ" ಎಂದು ಹೇಳುತ್ತಾಳೆ. ಇದನ್ನು ದೂರದಲ್ಲಿ ಕೇಳುತ್ತಿದ್ದ ಭೂಮಿಕಾಳಿಗೆ ಸಹನೆ ಕಟ್ಟೆಯೊಡೆದಿದೆ.

ಅಪೇಕ್ಷಾಳಗೆ ಬಿತ್ತು ಭೂಮಿಕಾ ಕೈ ಏಟು

"ಅಪ್ಪಿ" ಎಂದು ಆಕ್ರೋಶದಿಂದ ಕರೆಯುತ್ತಾರೆ ಭೂಮಿಕಾ. "ಏನಂತ ಮಾತನಾಡ್ತಾ ಇದ್ದೀಯ ಅಪ್ಪಿ, ಬದಲಾಗೋದು ತಪ್ಪಲ್ಲ ಅಪ್ಪಿ, ಆದರೆ, ಬೇರನ್ನು ಮರೆಯೋದು ಇದೆಯಲ್ವ ಅದು ತಪ್ಪು" ಎಂದು ಬುದ್ದಿವಾದ ಹೇಳುತ್ತಾಳೆ ಭೂಮಿಕಾ. "ನೀನೇ ನೋಡಿದ್ದಿಯಲ್ವ ಅಕ್ಕಾ, ಅಪ್ಪ ನಮ್ಮ ಕೈಗೆ ದುಡ್ಡು ಕೊಟ್ಟು ಖುಷಿಯಾಗಿರಿ ಎಂದು ಹೇಳಿದ್ದಾರ. ಇಲ್ಲ, ಸ್ಕೂಲ್‌ನಲ್ಲೂ ಮೇಷ್ಟ್ರು, ಮನೆಯಲ್ಲೂ ಮೇಷ್ಟ್ರು. ಪಾಠ ಹೇಳೋದೇ ಆಗೋಯ್ತು, ಸಚ್‌ ಎ ಬೋರಿಂಗ್‌ ಕ್ಯಾರೆಕ್ಟರ್‌" ಎಂದಾಗ ಭೂಮಿಕಾಗೆ ಕೋಪ ತಡೆಯಲಾಗುವುದಿಲ್ಲ. ಜೋರಾಗಿ ಅಪೇಕ್ಷಾಳ ಕೆನ್ನೆಗೆ ಒಂದೇಟು ಹಾಕಿದ್ದಾರೆ.

ಜೀಕನ್ನಡ ಬಿಡುಗಡೆ ಮಾಡಿದ ಪ್ರಮೋದಲ್ಲಿ ಭೂಮಿಕಾ ಅಪೇಕ್ಷಾಳ ಕೆನ್ನೆಗೆ ಹೊಡೆಯುವ ದೃಶ್ಯ ಪ್ರಮುಖ ಹೈಲೈಟ್‌ ಆಗಿದೆ. ಈ ಘಟನೆಯನ್ನು ನೋಡಿ ಶಕುಂತಲಾದೇವಿ ಮತ್ತು ರಮಾಕಾಂತ್‌ ಖುಷಿ ಪಡುತ್ತಾರೆ. ಅವರ ಉದ್ದೇಶವೂ ಇದೇ ಆಗಿತ್ತು. ಆಕೆಯನ್ನು ತಮ್ಮ ಪರವಾಗಿಸಿಕೊಂಡು ಕೊಬ್ಬಿಸುವುದೇ ಅವರ ಉದ್ದೇಶ ಆಗಿತ್ತು. ಈ ಮೂಲಕ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಅಪೇಕ್ಷಾರ ನಡುವೆ ಬಿರುಕು ಮೂಡಿದೆ.

ಇನ್ನೂ ನಾಲ್ಕು ಏಟು ನೀಡಿ ಅಕ್ಕಾ ಎಂದ ಪ್ರೇಕ್ಷಕರು

ಈ ಪ್ರಮೋಗೆ ಪ್ರೇಕ್ಷಕರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. "ಕೊಡು ಇನ್ನೂ ನಾಲ್ಕು ಅವಳಿಗೆ, ಅಪ್ಪನ ಬಗ್ಗೆ ಸ್ವಲ್ಪನೂ ಮರ್ಯಾದೆ ಇಲ್ಲ ಅವಳಿಗೆ" "ಇನ್ನು ನಾಲ್ಕ್ ಬಿಡು, ಭೂಮಿಕಾ ತವರು ಮನೆ ಆದ್ರೆ ಏನೋ ತಿಳ್ಕೊಡಿದಳೇ ದರಿದ್ರ ದವಳು ತಿರ್ಬೋಕಿ, ಎಷ್ಟು ಧಿಮಾಕು ನೋಡು" "ನಮ್ಮ ಕಡೆಯಿಂದ ಇನ್ನೊಂದು ಕೊಡಕಾ" "ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲಿ ಕೊಡೆ ಹಿಡಿದ್ನಂತೆ ಅನ್ನೋ ತರ ಇದ್ದಾಳೆ ಈ ಅಪೇಕ್ಷಾ" "ಈ ಏಟು ಅವತ್ತೇ ಬಿದ್ದಿದ್ರೆ ಈ ಮಾತು ಈಗ ಬರ್ತಾ ಇರಲಿಲ್ಲ" "ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂತೆ ಮದುವೆ ಆಗಿ ಬಂದು ದುರಂಕಾರವೋ/ ದರ್ಪವೋ ಜಾಸ್ತಿ ಆಗಿ ತಂದೆ ತಾಯಿಯ ಬೆಲೆ ತಿಳಿಯದಿದ್ದಕ್ಕೆ ತಂಗಿಗೆ ಭೂಮಿಕಾ ಈಗ ತಕ್ಕ ಉತ್ತರ ನೀಡಲು ಅವಕಾಶ ಒದಗಿ ಬಂದಿದೆ ಭೂಮಿಕಾ ಗೆ ಅಭಿನಂದನೆಗಳು" ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.

"ಆ ಜಿಪುಣ ಅಪ್ಪನ ಋಣದಲ್ಲಿ ಆಕೆ ಇದುವರೆಗೂ ಜೀವಿಸಿದ್ದು ಅನ್ನೋದನ್ನ ಮರೆಯುವ ಹಾಗಿಲ್ಲ. ತವರು ಮನೆ ಗುಟ್ಟು ಗಂಡನ ಮನೆಯಲ್ಲಿ ರಟ್ಟು ಮಾಡಬಾರದು ಅನ್ನೋ ಎತಿಕ್ಸ್ ಇವಳಿಗೆ ಹೇಗೆ ತಿಳಿಯಬೇಕು" "ಇವಳು ಬಿಟ್ಟಿ ತಿನ್ಕೊಂಡುಇದಾಳಲ ಯಾರದ್ದೋ ದುಡ್ಡು ಮಜಾ ಮಾಡ್ತಾಳೆ ನಾಚಿಕೆ ಇಲ್ಲ ಇವಳಿಗೆ ಅಪ್ಪ ಸಾಕಿಲ್ಲ ಅಂದಿದ್ರೆ ಬೀದಿಲ್ಲಿ ಇರೋಳು ಇವಳಿಗೆಓದಿಸಿಲ್ಲ ಅಂದಿದ್ರೆ ಇವ ಇವಳನ್ನು ಲೈನ್ ಹೊಡಿತಾ ಇರಲಿಲ್ಲ ಮನೆಯಲ್ಲಿ ಇರೋಳು" "ಅಪ್ಪನ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಸರಿ ಅಲ್ಲ... ಇನ್ನು ಎರಡು ಕೊಡು ಭೂಮಿಕಾ" "ಇದು ಇದು ಆಕ್ಚುಲಿ ಚೆನ್ನಾಗಿ ಇರೋದು ಅಂದ್ರೇ" "ತವರುಮನೆಯನ್ನು ಒದ್ದವರು ಅದರ ಬೆಲೆ ಒಂದಲ್ಲಾ ಒಂದು ದಿನ ತೆರಲೇಬೇಕಾಗುತ್ತದೆ" "ಕೊಡೋದು. ಕೊಟ್ಟೆ. ಇನ್ನೊಂದು. ಕೊಡಬೇಕ್ಕಿತು. ಭೂಮಿಕಾ" "ಹಾಕು ಇನ್ನು ನಾಲ್ಕು ಹಾಕು ದುರಹಂಕಾರ ಜಾಸ್ತಿ ಆಯ್ತು" "ಇದು ಸ್ವಲ್ಪ ಅಲ್ಲಾ ಜಾಸ್ತಿನೆ ಆಯ್ತು ನಿರ್ದೇಶಕರೆ... ಯಾರು ತಂದೆ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲಾ... ಅದು ಅಪೇಕ್ಷಾ ತಂದೆ ತಾಯಿಯ ಮುದ್ದಿನ ಮಗಳು... ಆ ರೀತಿ ಮಾತನಾಡಲು ಸಾಧ್ಯವಿಲ್ಲ... ನೀವು ಅತಿರೇಕವಾಗಿ ತೆಗೆದಿದ್ದೀರ.." "ಮುಖ ಮೂತಿ ನೋಡದೆ ಸರಿಯಾಗಿ ಬಾರಿಸು ಭೂಮಿಕಾ ದರಿದ್ರ ಅಪೇಕ್ಷಾಳಿಗೆ " ಹೀಗೆ ಭೂಮಿಕಾ ನೀಡಿದ ಪೆಟ್ಟಿಗೆ ಕಾಮೆಂಟ್‌ಗಳ ಪ್ರವಾಹವೇ ಬಂದಿದೆ.

Whats_app_banner