ಜೈದೇವ್‌ ಸಾವು ಬದುಕಿನ ನಡುವೆ ಹೋರಾಟ; ಆಸ್ಪತ್ರೆಯಿಂದ ಈ ಮನೆಗೆ ಆತ ಬರಬಾರದು ಎನ್ನುತ್ತಿದ್ದಾರೆ ಶಕುಂತಲಾದೇವಿ- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ಸಾವು ಬದುಕಿನ ನಡುವೆ ಹೋರಾಟ; ಆಸ್ಪತ್ರೆಯಿಂದ ಈ ಮನೆಗೆ ಆತ ಬರಬಾರದು ಎನ್ನುತ್ತಿದ್ದಾರೆ ಶಕುಂತಲಾದೇವಿ- ಅಮೃತಧಾರೆ ಧಾರಾವಾಹಿ

ಜೈದೇವ್‌ ಸಾವು ಬದುಕಿನ ನಡುವೆ ಹೋರಾಟ; ಆಸ್ಪತ್ರೆಯಿಂದ ಈ ಮನೆಗೆ ಆತ ಬರಬಾರದು ಎನ್ನುತ್ತಿದ್ದಾರೆ ಶಕುಂತಲಾದೇವಿ- ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ಅಕ್ಟೋಬರ್‌ 09 ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಚಾಕುಚುಚ್ಚಿಕೊಂಡ ಜೈದೇವ್‌ ಆಸ್ಪತ್ರೆಯಲ್ಲಿದ್ದಾನೆ. ಆತನಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ, ಆತ ಆಸ್ಪತ್ರೆಯಿಂದ ಈ ಮನೆಗೆ ಬರಬಾರದು ಎಂದು ಶಕುಂತಲಾದೇವಿ ನಿರ್ಧಾರ ಕೈಗೊಂಡಿದ್ದಾರೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಜೀ ಕನ್ನಡದ ಅಮೃತಧಾರೆಯ ಜೈದೇವ್‌ ಪ್ರಕರಣ ಮತ್ತೊಂದು ಲೆವೆಲ್‌ಗೆ ಹೋಗಿದೆ. ಎಲ್ಲಾ ಆರೋಪಗಳನ್ನು ಕೇಳಿದ ಬಳಿಕ ಚಾಕು ಚುಚ್ಚಿಕೊಂಡು ಸಾಯುವ ಪ್ರಯತ್ನ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿಯವರೆಗೆ ಆತನಿಗೆ ಬಯ್ಯುತ್ತಿದ್ದವರೆಲ್ಲ ಆತನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಇನ್ನೊಂದೆಡೆ ಶಾಕ್‌ನಿಂದ ಶಕುಂತಲಾದೇವಿ ಮೂರ್ಚೆ ತಪ್ಪಿದ್ದಾರೆ. ಈ ರೀತಿಯ ಆತ್ಮಹತ್ಯೆ ಪ್ರಯತ್ನವೂ ಆತನ ನಾಟಕದ ಒಂದು ಭಾಗವೋ ಎಂಬ ಪ್ರಶ್ನೆಯೂ ಪ್ರೇಕ್ಷಕರಲ್ಲಿ ಇದೆ. ಅಪರಾಧ ಮಾಡಿದಾಗ ಕಾನೂನು ಪ್ರಕಾರ ಶಿಕ್ಷೆ ನೀಡದೆ ಸೀರಿಯಲ್‌ ಕ್ಯಾರೆಕ್ಟರ್‌ ಉಳಿಸುವ ಅನಿವಾರ್ಯತೆಯಲ್ಲಿ ನಿರ್ದೇಶಕರು ಇರುತ್ತಾರೆ. ಇದೇ ರೀತಿ ಜೈದೇವ್‌ ಎಂಬ ವಿಲನ್‌ ಕ್ಯಾರೆಕ್ಟರ್‌ ಅಮೃತಧಾರೆ ಧಾರಾವಾಹಿಗೆ ಅತ್ಯಂತ ಅಗತ್ಯ. ಹೀಗಾಗಿ, ಇಷ್ಟೆಲ್ಲ ಡ್ರಾಮಾ ನಡೆಯುತ್ತಿದೆ ಎಂದು ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಕಣ್ಣು ತೆರೆದ ಶಕುಂತಲಾದೇವಿ

ಪ್ರಜ್ಞೆ ತಪ್ಪಿ ಮಲಗಿರುವ ಶಕುಂತಲಾದೇವಿಗೆ ಎಚ್ಚರವಾಗುತ್ತದೆ. "ಜೈದೇವ್‌ ಹೇಗಿದ್ದಾನೆ" ಎಂದು ಕೇಳುತ್ತಾರೆ. "ಮಗ ಆರಾಮವಾಗಿದ್ದಾನೆ" ಎಂದು ರಮಾಕಾಂತ್‌ ಮಾಹಿತಿ ನೀಡುತ್ತಾರೆ. ಶಕುಂತಲಾದೇವಿಗೆ ಜೈದೇವ್‌ನ ದುಷ್ಕೃತ್ಯಗಳು ನೆನಪಿಗೆ ಬರುತ್ತವೆ. ಒಂದಿಷ್ಟು ತಾಯಿ ಸೆಂಟಿಮೆಂಟ್‌ ಡೈಲಾಗ್‌ಗಳು ಇರುತ್ತವೆ. "ರಕ್ತ ಹಂಚಿಕೊಂಡು ಬೆಳೆದ ತಮ್ಮನ ಕೊಲ್ಲಲು ಮನಸ್ಸು ಹೇಗೆ ಬಂತು" ಎಂದು ಶಕುಂತಲಾದೇವಿ ಹೇಳುತ್ತಾರೆ. ಈ ಹಿಂದಿನ ಜೈದೇವ್‌ನ ಪಾಪಕಾರ್ಯಗಳಲ್ಲಿ ಶಕುಂತಲಾದೇವಿಯ ಪಾತ್ರವೂ ಇರುವುದು ಮರೆತಂತೆ ಇದೆ. "ಅವನು ಆಸ್ಪತ್ರೆಯಿಂದ ಗುಣವಾದರೂ ಮನೆಗೆ ಬರೋದು ಬೇಡ" ಎಂದು ಶಕುಂತಲಾದೇವಿ ಹೇಳುತ್ತಾರೆ. "ತಮ್ಮನನ್ನೇ ಕೊಲ್ಲಲು ಹೋಗ್ತಾನೆ ಎಂದರೆ ಅವನು ಈ ಮನೆಯಲ್ಲಿ ಇರಬಾರದು" ಎಂದು ಹೇಳುತ್ತಾರೆ ಶಕುಂತಲಾದೇವಿ.

ಆಸ್ಪತ್ರೆಯಲ್ಲಿ ಎಲ್ಲರ ಸಂಕಟ

ಜೈದೇವ್‌ ಕಂಡಿಷನ್‌ ಹೇಗಿದೆ ಎಂದು ಗೌತಮ್‌ ಕೇಳುತ್ತಾರೆ. "ಜೀವಕ್ಕೆ ಆರೋಗ್ಯ ಸರಿಯಾಗಿದೆ. ಪ್ರಜ್ಞೆ ಬಂದಿಲ್ಲ. ಚಾಕು ಆಳಕ್ಕೆ ಚುಚ್ಚಿಲ್ಲ. ಯಾವುದೇ ಆರ್ಗನ್‌ಗಳಿಗೆ ಗಾಯವಾಗಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಬಚವಾದ. ಸ್ವಲ್ಪ ಕೇರ್‌ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಡಾಕ್ಟರ್‌ ಮಾಹಿತಿ ನೀಡಿದ್ದಾರೆ. ಚಿಂತೆಯಲ್ಲಿರುವ ಗೌತಮ್‌ಗೆ ಎಲ್ಲರೂ ಸಮಧಾನ ಹೇಳುತ್ತಾರೆ.

ಅಪೇಕ್ಷಾಳ ಸಾಂತ್ವಾನ

ಇದೇ ಸಮಯದಲ್ಲಿ ಶಕುಂತಲಾದೇವಿ ಬಳಿಗೆ ಅಪೇಕ್ಷಾ ಬರುತ್ತಾಳೆ. "ಜೈದೇವ್‌ ಹೀಗೆ ಮಾಡಬಾರದಿತ್ತು" ಎಂದು ಅಪೇಕ್ಷಾ ಹೇಳುತ್ತಾಳೆ. "ಅವನೊಬ್ಬ ಸರಿಯಾಗಿದ್ರೆ ಹೀಗೆಲ್ಲ ಆಗ್ತಾ ಇತ್ತ" ಎಂದು ಶಕುಂತಲಾದೇವಿ ಕೇಳುತ್ತಾರೆ. ಅಪೇಕ್ಷಾ ಹೋದ ಬಳಿಕ "ಜೈದೇವ್‌ ಬಗ್ಗೆ ಯಾರಿಗೂ ಒಳ್ಳೆಯ ಅಭಿಪ್ರಾಯ ಇಲ್ಲ. ಅವನನ್ನು ಯಾರೂ ಈ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅವನನ್ನು ಈ ಮನೆಯಿಂದ ಹೊರಗೆ ಹಾಕಲೇಬೇಕು" ಎಂದು ಶಕುಂತಲಾದೇವಿ ಹೇಳುತ್ತಾರೆ.

ಅಪರ್ಣಾ ಆನಂದ್‌ ತೊಳಲಾಟ

"ಇದಕ್ಕೆಲ್ಲ ನಾನೇ ಕಾರಣ" ಎಂದು ಅಪರ್ಣಾ ಅಳುತ್ತಿದ್ದಾಳೆ. ನಾನು ಈ ವಿಷಯ ಹೇಳಬಾರದಿತ್ತು. ಇದೇ ಕಾರಣಕ್ಕೆ ಹೀಗೆಲ್ಲ ಆಯ್ತು ಎಂದು ಹೇಳುತ್ತಾಳೆ. "ಹೇಳಿದ್ದು ಒಳ್ಳೆಯದೇ ಆಯ್ತು, ಆದರೆ, ಸದ್ಯ ಪರಿಸ್ಥಿತಿ ಯೂಟರ್ನ್‌ ಆಗಿದೆ" ಎಂದು ಹೇಳುತ್ತಾನೆ ಆನಂದ್‌.

ಮಲ್ಲಿ ಮನಸ್ಸು

ಆಸ್ಪತ್ರೆಯಲ್ಲಿ ಮಲಗಿರುವ ಜೈದೇವ್‌ನ ಬಳಿ ಮಲ್ಲಿ ಇದ್ದಾಳೆ. ತನ್ನ ಗಂಡ ಈ ಸ್ಥಿತಿಯಲ್ಲಿರುವುದನ್ನು ಅವಳಿಗೆ ನೋಡಲಾಗುತ್ತಿಲ್ಲ.

ಗೌತಮ್‌ ಮನಸ್ಸಿನ ತೊಳಲಾಟ

"ಐ ಆಮ್‌ ಸಾರಿ ಗೌತಮ್‌" ಎಂದು ಭೂಮಿಕಾ ಹೇಳುತ್ತಾರೆ. "ಇದಕ್ಕೆಲ್ಲ ನಾನೇ ಕಾರಣ. ನಾನು ಹೇಳಿದ್ದಕ್ಕೆ ಹೀಗೆಲ್ಲ ಆಯ್ತು" ಎಂದು ಭೂಮಿಕಾ ಹೇಳುತ್ತಾರೆ. "ನೀವು ಈ ರೀತಿ ಮಾಡದೆ ಇದ್ದರೆ ಸಮಸ್ಯೆ ಸರಿ ಆಗುತ್ತ. ಇಲ್ಲಾಂದ್ರೆ ಅವನು ಬದಲಾಗುತ್ತಾನೆ ಎಂದು ಕಾಯುತ್ತಿದ್ದೆ. ಒಂದಲ್ಲ ಒಂದು ದಿನ ಇದು ದೊಡ್ಡಮಟ್ಟದಲ್ಲಿ ಹೊರಬರುತ್ತಿತ್ತು" ಎಂದು ಗೌತಮ್‌ ಹೇಳುತ್ತಾರೆ. "ಇದರಲ್ಲಿ ನಮ್ಮ ತಪ್ಪಿಲ್ಲ. ಅವನು ಆ ಟೈಮ್‌ನಲ್ಲಿ ಹಾಗೆ ಮಾಡಿಕೊಂಡ" ಎಂದು ಹೇಳುತ್ತಾರೆ.

ಇನ್ನೊಂದೆಡೆ ಅಪೇಕ್ಷಾಳ ಮನಸ್ಸಲ್ಲಿ ಜೈದೇವ್‌ನ ಕ್ರೂರ ಕೃತ್ಯಗಳ ವಿಚಾರಗಳು ಹರಿದಾಡುತ್ತವೆ. ವಿಶೇಷವಾಗಿ ತಮ್ಮನ್ನು ಕೊಲ್ಲಲು ಪ್ರಯತ್ನಿಸಿದ ವರ್ತನೆ ನೆನಪಾಗುತ್ತದೆ. ಜೈದೇವ್‌ನ ನೋಡಲು ಹೋಗೋಣ ಎಂದು ಪಾರ್ಥ ಹೇಳಿದರೂ ಅವಳು ಕೇಳುವುದಿಲ್ಲ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner