ಅಕ್ಕ ಔಟ್‌ಡೇಟೆಡ್, ಹಳೆ ಕಾಲದವಳು ಎಂದ ಅಪೇಕ್ಷಾಳ ಧಿಮಾಕಿನ ಮಾತು ಕೇಳಿ ಭೂಮಿಕಾ ಕಣ್ಣೀರು; ಅಮೃತಧಾರೆ ಧಾರಾವಾಹಿಯ ಇಂದಿನ ಸ್ಟೋರಿ
ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಅಪೇಕ್ಷಾ ಶಾಪಿಂಗ್‌ಗೆ ಹೋಗಿ ಬರುವ ಘಟನೆಯಿದೆ. ಇದೇ ಸಂದರ್ಭದಲ್ಲಿ ಗೌತಮ್ ಸುಧಾಳ ಮನೆಗೆ ಹೋಗಿದ್ದಾರೆ. ಮನೆಯ ಒಳಗಿನಿಂದ ಗುಂಡು ಗುಂಡೂ ಎಂಬ ಅಮ್ಮನ ಕನವರಿಗೆ ಗೌತಮ್ ಹೃದಯದ ಬಡಿತ ಹೆಚ್ಚಿಸಿದೆ.
ಅಮೃತಧಾರೆ ಧಾರಾವಾಹಿ ನವೆಂಬರ್ 11ರ ಸಂಚಿಕೆ: ದೀಪಾವಳಿ ಹಬ್ಬವನ್ನು ಡಿಫರೆಂಟ್ ಮಾಡೋಣ ಎಂದು ಅಪೇಕ್ಷಾ ಹೇಳುತ್ತಾಳೆ. ಅವಳಿಗೆ ಸಾಂಪ್ರದಾಯಿಕ ಹಬ್ಬದ ಖುಷಿ ಬೇಡ, ಪಾರ್ಟಿ ಬೇಕು. ಪಾರ್ಥನ ಜತೆ ಹಬ್ಬದ ಡಿಸ್ಕಷನ್ ಮಾಡುವಾಗ ಅಲ್ಲಿಗೆ ಜೈದೇವ್ ಮತ್ತು ಮಲ್ಲಿ ಬರುತ್ತಾರೆ. ಇದೇ ಸಮಯದಲ್ಲಿ ಮಲ್ಲಿ ಯಾಕೆ ಬೇಸರದಲ್ಲಿದ್ದಾಳೆ ಎಂದು ಎಲ್ಲರೂ ಕೇಳುತ್ತಾರೆ. ತಾತಾ ಫೋನ್ ಮಾಡಿ ಹಬ್ಬಕ್ಕೆ ಕರೀತಾರೆ ಅಂದುಕೊಂಡಿದ್ದೆ, ಅವರು ಕರೆಯಲೇ ಇಲ್ಲ ಎಂದು ಮಲ್ಲಿ ಹೇಳುತ್ತಾಳೆ. ಈ ಮೂಲಕ ಅಪೇಕ್ಷಾಳ ಮನಸ್ಸಿಗೂ ತವರುಮನೆಯ ಮಹತ್ವವನ್ನು ಸೂಚ್ಯವಾಗಿ ತಿಳಿಸುತ್ತಾಳೆ. ಅಪೇಕ್ಷಾಳೂ ತಲೆ ಕೆಳಗೆ ಮಾಡಿಕೊಂಡು ಚಿಂತೆಗೆ ಬೀಳುತ್ತಾಳೆ. ಇದಾದ ಬಳಿಕ ಎಲ್ಲರೂ ಹಬ್ಬದ ತಯಾರಿ ನಡೆಸುತ್ತಾರೆ. "ಆಗ ಹಬ್ಬದ ಕುರಿತು ಅಷ್ಟೊಂದು ಜೋಷ್‌ನಲ್ಲಿದ್ದೀರಿ, ಈಗ ಏನಾಯ್ತು ಅಪೇಕ್ಷಾ" ಎಂದು ಪಾರ್ಥ ಕೇಳುತ್ತಾನೆ. ಒಂದಿಷ್ಟು ಡಬ್ಬಾ ಜೋಕ್ ಹೇಳಿ ಆಕೆಯನ್ನು ನಗಿಸಲು ಪ್ರಯತ್ನಿಸುತ್ತಾನೆ. ಇದಾದ ಬಳಿಕ ಶಾಪಿಂಗ್ ಬಗ್ಗೆ ಮಾತನಾಡುತ್ತಾರೆ. ಆಫೀಸ್ ಬಿಝಿ ಎನ್ನುತ್ತಾನೆ. ಒಂದಿಷ್ಟು ಅಪೇಕ್ಷಾಳ ಪಿರಿಪಿರಿ ಇರುತ್ತದೆ. ಇದಾದ ಬಳಿಕ ಸಂಜೆ ಶಾಪಿಂಗ್‌ಗೆ ಬರಲು ಒಪ್ಪುತ್ತಾನೆ.
ಹಬ್ಬಕ್ಕೆ ತಾತಾ ಬರೋದಿಲ್ಲ ಎಂಬ ಬೇಸರ ಮಲ್ಲಿಗೆ
ಇನ್ನೊಂದೆಡೆ ಮಲ್ಲಿ ಕೂಡ ಮಂಕಾಗಿ ಕುಳಿತಿದ್ದಾಳೆ. ತಾತಾ ಹಬ್ಬಕ್ಕೆ ಬಂದಿಲ್ಲ ಎಂದು ಬೇಸರ ಅವಳಿಗೆ. ಊರಿನಲ್ಲಿ ಬೆಳೆ ಕಟಾವು ಮಾಡಲು ಇದೆಯಂತೆ ಎಂದು ತಾತಾ ಹೇಳಿದ್ರು ಅಂತಾಳೆ. "ಅಲ್ಲಿ ತಾತಾ ಬಿಝಿ ಇರ್ತಾರೆ, ನಾವು ಇಲ್ಲೇ ಹಬ್ಬ ಮಾಡೋಣ" ಎಂದು ಜೈದೇವ್ ಹೇಳುತ್ತಾನೆ. ಇದಾದ ಬಳಿಕ ಜೈದೇವ್ ಮತ್ತು ಮಲ್ಲಿ ನಡುವೆ ಒಂದಿಷ್ಟು ಪ್ರೀತಿ ಮಾತುಗಳು ನಡೆಯುತ್ತವೆ.
ಗೌತಮ್ ಆಫೀಸ್ ಮುಗಿಸಿ ಸುಧಾಳ ಮನೆಗೆ ಬರುತ್ತಾನೆ. ಭೂಮಿಕಾ ಕೊಟ್ಟ ಉಡುಗೊರೆಗಳು ಅವರ ಕೈಯಲ್ಲಿ ಇರುತ್ತವೆ. ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಯಾರೂ ತೆರೆಯುವುದಿಲ್ಲ. ಬಾಗಿಲು ತಟ್ಟುತ್ತಾನೆ. ಬಾಗಿಲು ಲಾಕ್ ಆಗಿರುತ್ತದೆ. ಒಳಗಿನಿಂದ ಸುಧಾಳ ತಾಯಿ "ಗುಂಡು ಗುಂಡು" ಎನ್ನುತ್ತಾ ಇರುತ್ತಾರೆ. ಗೌತಮ್‌ಗೂ ಗುಂಡೂ ಗುಂಡೂ ಎಂಬ ಧ್ವನಿ ಕೇಳುತ್ತದೆ. ಪಕ್ಕದ ಮನೆಯವರಲ್ಲಿ ಈ ಮನೆಯಲ್ಲಿ ಯಾರೂ ಇಲ್ವ ಎಂದು ಕೇಳಿದಾಗ "ಇಷ್ಟೊತ್ತಿಗೆ ಬರಬೇಕಿತ್ತು, ಬರಬಹುದು" ಎನ್ನುತ್ತಾರೆ. ಒಳಗೆ ಯಾರೋ ಇದ್ದಾರೆ ಎಂದಾಗ "ಅದೂ ಅವಳ ತಾಯಿ, ಅದಕ್ಕೆ ಹುಷಾರಿಲ್ಲ, ಏನೋ ಗೊಣಗುತ್ತಾ ಇರುತ್ತಾರೆ" ಎಂದು ಪಕ್ಕದ ಮನೆಯವರು ಹೇಳುತ್ತಾರೆ. ಗುಂಡೂ ಗುಂಡೂ ಧ್ವನಿಯು ಗೌತಮ್ ಹೃದಯಕ್ಕೆ ಕೇಳಿಸುತ್ತದೆಯೇ ಕಾದು ನೋಡಬೇಕಿದೆ.
ಅಪೇಕ್ಷಾಳ ಶಾಪಿಂಗ್ ಪ್ರಸಂಗ
ಅಪೇಕ್ಷಾ ಚಿಂತೆಯಲ್ಲಿರುವಾಗ ಶಕುಂತಲಾ ಏನೆಂದು ಕೇಳುತ್ತಾರೆ. "ಪಾರ್ಥ ಈಗ ತುಂಬಾ ಬಿಝಿಯಾಗಿದ್ದಾರೆ. ಈಗ ನನಗೆ ಸಮಯನೇ ನೀಡುತ್ತಿಲ್ಲ. ಶಾಪಿಂಗ್‌ಗೂ ಬರುತ್ತಿಲ್ಲ" ಎಂದು ಹೇಳುತ್ತಾಳೆ. "ಈಗಿನ ಕಾಲದಲ್ಲಿ ಕೆಲಸ ಅಂದ್ರೆ ಹಾಗೇನೇ, ಎಲ್ಲವೂ ಈಜಿಯಾಗಿ ಸಿಗೋಲ್ಲ. ಕೆಲಸ ಅಂದರೆ ನಮ್ಮ ಮನೆಯಲ್ಲಿ ರಿಲಿಜನ್ ಇದ್ದಾಂಗೆ, ಬಿಸ್ನೆಸ್ ನಮ್ಮ ಮನೆಯ ದೇವರು" ಎಂದು ಶಕುಂತಲಾದೇವಿ ಹೇಳುತ್ತಾರೆ. "ನಿನ್ನ ಗಂಡ ಉದ್ಧಾರವಾಗ್ತಾ ಇದ್ದಾನೆ, ಇದಕ್ಕೆ ಬೇಸರ ಮಾಡ್ತಾ ಇದ್ದೀಯಲ್ವ" ಎಂದು ರಮಕಾಂತ ಹೇಳುತ್ತಾರೆ. "ಈ ಗಂಡಸರನ್ನು ಕರೆದುಕೊಂಡು ಶಾಪಿಂಗ್‌ಗೆ ಹೋಗಬಾರದು, ಬೇಗಬೇಗ ಎಂದು ಅರ್ಜೆಂಟ್ ಮಾಡುತ್ತಾರೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ನನ್ನ ಕಾರ್ಡ್ ಕೊಡ್ತಿನಿ, ಹೋಗಿ ಶಾಪಿಂಗ್ ಮಾಡು ಎಂದು ಶಕುಂತಲಾದೇವಿ ಹೇಳುತ್ತಾರೆ. ಅತ್ತೆಯ ಕಾರ್ಡ್ ತೆಗೆದುಕೊಂಡು ಶಾಪಿಂಗ್‌ಗೆ ಹೋಗುತ್ತಾಳೆ.
ಬಳೆ ನೀಡಿದ ಗೌತಮ್‌ಗೆ ಥ್ಯಾಂಕ್ಸ್ ಹೇಳಿದ ಸುಧಾ
ಆನಂದ್‌ಗೆ ಕಾಫಿ ಕೊಡುತ್ತಾಳೆ ಸುಧಾ. ಬಳೆ ಹಾಕು ಎಂದು ಆನಂದ್ ಹೇಳಿದಾಗ "ಅವರನ್ನು ಭೇಟಿಯಾದ ಬಳಿಕ ಹಾಕುವೆ" ಎಂದು ಸುಧಾ ಹೇಳುತ್ತಾಳೆ. ಗೆಳೆಯನಿಗೆ ಪೋನ್ ಮಾಡಿ ಕೊಡ್ತಿನಿ, ಹಾಗಾದ್ರೆ ಹಾಕ್ತೀಯ ಎಂದು ಕೇಳುತ್ತಾರೆ. ಇದಾದ ಬಳಿಕ ಗೌತಮ್‌ಗೆ ಕಾಲ್ ಮಾಡುತ್ತಾನೆ. ಸಜ್ಜಪ್ಪ ಮಾಡಿದವರಲ್ಲಿ ಮಾತನಾಡು ಎಂದು ಫೋನ್ ಕೊಡುತ್ತಾನೆ. "ಹಲೋ ಹೇಳಿ" ಎಂದು ಹೇಳುತ್ತಾರೆ. "ನಾನು ಚಿಕ್ಕದಾಗಿ ಸಜ್ಜಪ್ಪ ಮಾಡಿಕೊಟ್ಟೆ, ಅದಕ್ಕೆ ಚಿನ್ನದ ಬಳೆ ಯಾಕೆ ಕೊಟ್ರಿ" ಎಂದು ಕೇಳುತ್ತಾಳೆ. "ಅದರಿಂದ ನನಗೆ ಸಾಕಷ್ಟು ನೆನಪು ಬಂತು" ಎಂದು ಕೇಳುತ್ತಾಳೆ. "ಅದು ಏನು ನೆನಪು" ಎಂದು ಕೇಳುತ್ತಾಳೆ. "ಒಳ್ಳೆಯ ನೆನಪು" ಎನ್ನುತ್ತಾರೆ ಗೌತಮ್. "ನನಗೆ ಬೇಜಾರಿಲ್ಲ, ನಾನು ಕೊಟ್ಟಿರುವ ಬಳೆಯನ್ನು ತೆಗೆದುಕೊಳ್ಳಿ, ಹಾಕಿಕೊಳ್ಳಿ" ಎಂದು ಗೌತಮ್ ಹೇಳಿದಾಗ ಸುಧಾ ಸರಿ ಎನ್ನುತ್ತಾಳೆ.
ಅಕ್ಕನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ಅಪೇಕ್ಷಾ
ಅಪೇಕ್ಷಾ ಶಾಪಿಂಗ್ ಮುಗಿಸಿ ಬಂದಿದ್ದಾಳೆ. ಆಗ ದೂರದಲ್ಲಿದ್ದಾಳೆ. ಶಕುಂತಲಾ ಕೂಡ ಅಲ್ಲಿಗೆ ಬರುತ್ತಾರೆ. "ಇದು ಅತ್ತೆ ನಿಮಗೆ" "ಮಲ್ಲಿಯವರೇ ಇದು ನಿಮಗೆ" "ಮಾವ ಇದು ನಿಮಗೆ" ಎಂದು ಎಲ್ಲರಿಗೂ ಡ್ರೆಸ್ ಕೊಡುತ್ತಾಳೆ. "ಭಾವನಿಗೆ, ಪಾರ್ಥನಿಗೆ, ಅಜ್ಜಿಗೆ ಎಲ್ಲರಿಗೂ ತಂದಿದ್ದೇನೆ" ಎಂದು ಹೇಳುತ್ತಾಳೆ. ಅದಕ್ಕೆ ರಮಾಕಾಂತ್ "ಎಲ್ಲರಿಗೆ ತಂದಿದ್ಯ, ನಿನ್ನ ಅಕ್ಕನಿಗೆ ತಂದಿಲ್ವ?" ಎಂದು ಕೇಳುತ್ತಾಳೆ. "ಯಾಕೆ ತಂದಿಲ್ಲ, ಅವಳು ಏನು ಪಾಪ ಮಾಡಿದ್ದಾಳೆ?" ಎಂದು ರಮಾಕಾಂತ್ ಕೇಳುತ್ತಾರೆ. "ಮರೆತು ಹೋಗಿಲ್ಲ, ನನಗೆ ಅವಳ ತರಹ ಔಟ್‌ಡೇಟೆಡ್ ಕಾಸ್ಟ್ಯೂಮ್ ಪರ್ಚೇಸ್ ಮಾಡಲು ಗೊತ್ತಿಲ್ಲ" ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾಳೆ. ಮರೆಯಲ್ಲಿದ್ದ ಭೂಮಿಕಾ ಇದನ್ನು ಕೇಳಿ ಬೇಸರಪಟ್ಟುಕೊಳ್ಳುತ್ತಾಳೆ. "ಅವಳು ಹಳೆ ಕಾಲದ ಹೆಂಗಸಿನಂತೆ ಡ್ರೆಸ್ ಮಾಡಿಕೊಳ್ಳುತ್ತಾಳೆ. ನನಗೆ ಅದನ್ನೆಲ್ಲ ಸೆಲೆಕ್ಟ್ ಮಾಡಲು ಬರೋದಿಲ್ಲ ಅಂಕಲ್. ಸ್ಟೈಲ್ ಅಂದ್ರೆ ಏನು ಅಂತ ಅವಳಿಗೆ ಗೊತ್ತಿಲ್ಲ, ಅವಳಿಗೆ ಏನು ಬೇಕೋ ಅದನ್ನು ಅವಳೇ ತೆಗೆದುಕೊಳ್ಳಲಿ" ಎಂದು ಹೇಳುತ್ತಾಳೆ. ದೂರದಲ್ಲಿದ್ದ ಭೂಮಿಕಾಳಿಗೆ ಕಣ್ಣೀರು ಬರುತ್ತದೆ."ನನ್ನ ಆಸೆಗಳಿಗೆ ನೀನೇ ಬೆಂಬಲ ನೀಡಿದ್ದು, ನನ್ನ ಅಪ್ಪನ ಬದಲು ನನಗೆ ನೀನೇ ಎಲ್ಲವನ್ನೂ ನೀಡಿದ್ದೀ" ಎಂದು ಅಪೇಕ್ಷಾ ಕಣ್ಣೀರಿಟ್ಟ ಫ್ಲ್ಯಾಷ್‌ಬ್ಯಾಕ್ ಭೂಮಿಕಾಗೆ ನೆನಪಾಗುತ್ತದೆ. ಮಲ್ಲಿಗೆ ಬೇಸರವಾಗುತ್ತದೆ. ಶಕುಂತಲಾದೇವಿಗೆ ಖುಷಿಯಾಗುತ್ತದೆ. ಸೀರಿಯಲ್ ಮುಂದುವರೆಯುತ್ತದೆ.
ವಿಭಾಗ