ಒಂದೇ ವಾರದ ಅಂತರದಲ್ಲಿ ಅಪ್ಪ ಅಮ್ಮನ ಸಾವು! ನೋವಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿಯ ಸಾರ್ಥಕತೆ-television news puttakkana makkalu serial kousalya aka akshatha mayasandra lost her father and mother within a week mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಂದೇ ವಾರದ ಅಂತರದಲ್ಲಿ ಅಪ್ಪ ಅಮ್ಮನ ಸಾವು! ನೋವಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿಯ ಸಾರ್ಥಕತೆ

ಒಂದೇ ವಾರದ ಅಂತರದಲ್ಲಿ ಅಪ್ಪ ಅಮ್ಮನ ಸಾವು! ನೋವಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿಯ ಸಾರ್ಥಕತೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕೌಸಲ್ಯ ಪಾತ್ರಧಾರಿಯಾಗಿ ಅಕ್ಷತಾ ಮಾಯಸಂದ್ರ ನಟಿಸುತ್ತಿದ್ದಾರೆ. ಈ ಹಿಂದೆ ನನ್ನರಸಿ ರಾಧೆ ಸೀರಿಯಲ್‌ನಲ್ಲಿಯೂ ಅಕ್ಷತಾ ನಟಿಸಿದ್ದರು. ಇದೀಗ ಇದೇ ನಟಿ ಅಕ್ಷರಶಃ ಕುಸಿದಿದ್ದಾರೆ. ಅಪ್ಪ ಅಮ್ಮನನ್ನು ಒಂದೇ ವಾರದ ಅವಧಿಯಲ್ಲಿ ಕಳೆದುಕೊಂಡಿದ್ದಾರೆ. ಅವರ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕೇವಲ 8 ದಿನಗಳ ಅಂತರದಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಟಿ ಅಕ್ಷತಾ ಮಾಯಸಂದ್ರ
ಕೇವಲ 8 ದಿನಗಳ ಅಂತರದಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಟಿ ಅಕ್ಷತಾ ಮಾಯಸಂದ್ರ (Facebook\ Radhakrishna Koundinya)

Puttakkana Makkalu Serial Kousalya: ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಕೌಸಲ್ಯ ಪಾತ್ರಧಾರಿ ಅಕ್ಷತಾ ಮಾಯಸಂದ್ರ ಇತ್ತೀಚಿನ ಕೆಲ ದಿನಗಳಿಂದ ಸೀರಿಯಲ್‌ ಸಂಚಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಸೂಕ್ಷ್ಮವನ್ನು ಕೆಲವರು ಗಮನಿಸಿರಬಹುದು. ಆದರೆ, ಅಕ್ಷತಾ ಅವರ ಸ್ಥಿತಿ ಮಾತ್ರ ಯಾರಿಗೂ ಬೇಡ. ಏಕೆಂದರೆ ಕೇವಲ ಒಂದೇ ವಾರದ ಅಂತರದಲ್ಲಿ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಅಕ್ಷತಾ. ಚೌತಿ ಹಬ್ಬ ಮುಗಿದ ಬಳಿಕ ಅಕ್ಷತಾ ಅವರ ಅಮ್ಮ ಕಣ್ಮುಚ್ಚಿದರೆ, ತಾಯಿಯ ಸಾವಿನ, ನೋವಿನ ಕಣ್ಣೀರು ಬತ್ತಿರಲಿಲ್ಲ. ಅಷ್ಟೊತ್ತಿಗೆ ಅಪ್ಪನನ್ನೂ ಕಳೆದುಕೊಂಡಿದ್ದಾರೆ. ಅಪ್ಪನ ಆ ಸಾವಲ್ಲೂ ಅವರ ಕಣ್ಣುಗಳನ್ನು ದಾನ ಮಾಡಿ, ಇತರರಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ ಅಕ್ಷತಾ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕೌಸಲ್ಯ ಪಾತ್ರಧಾರಿಯಾಗಿ ಅಕ್ಷತಾ ಮಾಯಸಂದ್ರ ನಟಿಸುತ್ತಿದ್ದಾರೆ. ಈ ಹಿಂದೆ ನನ್ನರಸಿ ರಾಧೆ ಸೀರಿಯಲ್‌ನಲ್ಲಿಯೂ ಅಕ್ಷತಾ ನಟಿಸಿದ್ದರು. ಇದೀಗ ಇದೇ ನಟಿ ಅಕ್ಷರಶಃ ಕುಸಿದಿದ್ದಾರೆ. ಅಪ್ಪ ಅಮ್ಮನನ್ನು ಒಂದೇ ವಾರದ ಅವಧಿಯಲ್ಲಿ ಕಳೆದುಕೊಂಡು, ಕಣ್ಣಿರಲ್ಲಿ ಕೈ ತೊಳೆದಿದ್ದಾರೆ. ಆ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ. ಇದೀಗ ಇದೇ ಅಕ್ಷತಾ ಅವರ ಪತಿ ರಾಧಾಕೃಷ್ಣ ಕೌಂಡಿನ್ಯ ಪತ್ನಿಯ ಈ ಏಳು ಬೀಳಿನ ದಿನಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಭಾವುಕ ಬರಹದೊಂದಿಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ರಾಧಾಕೃಷ್ಣ ಕೌಂಡಿನ್ಯ ಅವರ ಬರಹ ಹೀಗಿದೆ..

ಬದುಕು ವಿಸ್ಮಯಗಳ ಹುತ್ತ.

ಯಾವಾಗ ಏನು, ಎಲ್ಲಿಂದ ಹೆಡೆ ಎತ್ತುವುದು ಎಂಬುದೇ ಅನೂಹ್ಯ.

ವಿನಾಯಕ ಚೌತಿಗೆ ಪೂಜೆ ಮುಗಿಸಿ, ಬದುಕು ಸಾಕೆನಿಸಿ ಮುನ್ನಡೆದರು ಅಕ್ಷತಾಳ ತಾಯಿ.

ಒಂದಿಷ್ಟಾದರೂ ಅಮ್ಮ ಉಳಿದಿರಲೆಂಬ ಸ್ವಾರ್ಥಕ್ಕೆ ಮಗಳೇ ಮುಂದಾಗಿ ಅಮ್ಮನ ನೇತ್ರದಾನ ಮಾಡಿಸಿದಳು.

ಅವರ ವಿಯೋಗಕ್ಕೆ ಕಣ್ಣೀರು ಸುರಿಸಿ, ಅವರ ದೇಹವನು ದಹಿಸಿ, ಎದೆಯ ಉರಿಯಾರುವ ಮುನ್ನವೇ ಸಂಗಮಕೆ ನಡೆದು, ಅಸ್ಥಿಯನು ನೀರ ಒಡಲಿಗೆ ಹಾಕಿ ಬಂದಿದ್ದಷ್ಟೇ...

ಎಲ್ಲರ ಎದೆಯಲ್ಲೂ ಮಡುಗಟ್ಟಿದ ನೋವು. ಅಕ್ಷತಾಗೆ ಅನಪೇಕ್ಷಿತ ಸಂಕಟ. ತಂದೆಯೇ ಪತ್ನಿಯ ಉತ್ತರಕ್ರಿಯೆ ಮಾಡಹೊರಟರು.

ಅವರ ದೇಹ ದಣಿದಿತ್ತು, ಪ್ರಾಯಶಃ ಮನಸೂ ಬಸವಳಿದಿತ್ತು. ಬಾಳಗೆಳತಿ ದೇವರೆಡೆಗೆ ನಡೆದು ಹೋದದ್ದನ್ನು ಅವರಿಗೆ ಸಹಿಸಲಾಗಲಿಲ್ಲ. ಅದನ್ನೂ ಸಹ ಸಿಹಿಯಾಗಿಯೇ ಸಹಿಸಲು ಯತ್ನಿಸಿದರೇನೋ. ದೇಹದ ಸಕ್ಕರೆ ಮಟ್ಟ ಮಿತಿಮೀರಿ ಹೋಯಿತು.

ದೇಹ, ಮನಸು ಹದ ತಪ್ಪಿದಾಗ ಆರೋಗ್ಯ ನಿರ್ವಹಣೆಗಾಗಿ ಬದುಕಿನಲ್ಲಿ ಮೊದಲ ಬಾರಿಗೆ ಒಂದು ಆಸ್ಪತ್ರೆವಾಸವೂ ಅವರಿಗಾಯಿತು.

ಇದರ ಮಧ್ಯೆ ತಾಯಿಯ ಊರ್ಧ್ವಗಮನದ ಪಯಣಕ್ಕೆ ಕ್ರಿಯಾದಿಗಳು, ಇತ್ತ ತಂದೆಯವರ ಆರೋಗ್ಯಕ್ಕೆ ಆಸ್ಪತ್ರೆಯ ಕಾರಿಡಾರುಗಳ ಕಾಯುವ ಒತ್ತಡ. ಬಹಳ ಸಂಕಟವಾಯಿತು ನನ್ನ ಬಾಳ ಗೆಳತಿಗೆ.

ತಾಯಿಯ ಸಾವಿನ, ನೋವಿನ ಕಣ್ಣೀರು ಬತ್ತಿರಲಿಲ್ಲ. ಅದಾಗಲೇ ಆಸ್ಪತ್ರೆಯ ಕಾರಿಡಾರಿನಲ್ಲಿ ತಂದೆಯ ಆರೋಗ್ಯಕ್ಕೆ ಬೇಡುತ್ತಾ ಕಣ್ಣೀರು ಹರಿಸುವ ಪ್ರಸಂಗ.

ಯಾವ ಕಂಬನಿ ನೋವಿನದೋ, ಯಾವ ಕಂಬನಿ ಪ್ರಾರ್ಥನೆಯದೋ ಎಂಬ ಗೊಂದಲ ಗೂಡಿನ ಅಶ್ರುಧಾರೆ. ಸಾವಿನದೋ, ನೋವಿನದೋ ಎಂಬ ಗೊಂದಲ ಪರಿಹರಿಸಲೆಂಬಂತೆ ನೋವಿನ ಕಣ್ಣೀರನ್ನೂ ಸಾವಿನ ಕಣ್ಣೀರೇ ಆಗಿಸಿದನೇನೋ ಆ ಜಗದೊಡೆಯ.

ಸಾವಿಗಾಗಿ ಅಳುವುದೂ ಸಹ ಕ್ಲೀಷೆ ಎನಿಸುವ ವಿಚಿತ್ರ ಸಂದರ್ಭವಿದು

When going gets tough, the tough gets going ಎಂಬ ಮಾತು ಕಿವಿಯಲ್ಲಿ ಉಸುರಿದರೋ ಎಂಬಂತೆ ಕಾಲನ ಕರೆಗೆ ಎದುರಾಗಿ ಕಣ್ಣೀರು ತೊಡೆದು ನಿಂತಳು.

ತಂದೆ ಸಹ ಹೋದರು ಎಂದಾಕ್ಷಣವೇ ಮತ್ತೆ ಅವಳ ಸ್ವಾರ್ಥ ಜಾಗೃತವಾಯಿತು. ಮತ್ತೆ ನೇತ್ರದಾನ.

ಅಕ್ಷತಾಳನ್ನು ಹುಟ್ಟಿದಾರಭ್ಯ ಕಾಪಾಡಿದ ಆ ನಾಲ್ಕು ಕಂಗಳು ಇಂದಿಗೂ ಆಸುಪಾಸಿನಲ್ಲಿಯೇ ಅವಳನ್ನು ಕಾಯುತ್ತಾ ಲೋಕದಲ್ಲಿದೆ ಎಂಬ ಭರವಸೆಯಲ್ಲಿ ಆಕೆ ಲೋಕದ ಜನರ ಕಂಗಳಲ್ಲಿ ತಂದೆ ತಾಯಿಯನ್ನು ಅರಸುತ್ತಾಳೆ.

ನೋವಿನೊಂದಿಗೆ ಮತ್ತು ನೋವನು ಮೀರಿ ಬದುಕು ಸಾಗಿ‌ಸುವುದನ್ನು ಕಲಿಸುತ್ತಿದ್ದಾರೆ ಅನಿಸ್ತದೆ.

ಅಕ್ಷತಾ ಪ್ರೀತಿಯಿಂದ ಗುನುಗುವ ಗೀತೆಯ ಸಾಲುಗಳಿವು

ಚರಣ ಕಮಲಗಳಿಗೆ ನಮಿಸಿ ಬೇಡಿಕೊಳುವೆ ದೇವನೆ

ಕರುಣಿಸಯ್ಯ ದೀನಬಂಧು ಜೀವಕೋಟಿ ಕಾವನೇ

ಕಷ್ಟ ಸಮಯದಲ್ಲಿ ಕೈಯ ಬಿಡದೆ ಪಾರುಗಾಣಿಸು

ನೀತಿಮಾರ್ಗ ತ್ಯಜಿಸದಂತೆ ನಡೆಸು ನಿತ್ಯ ನಮ್ಮನು

ಇಹದ ಮೋಹ ಜಾಲದಿಂದ ದೂರವಿರಿಸು ಮನವನು

ಶರಣು ಬಂದೆ ಸಲಹೋ ದೇವ

ಅಭಯ ವರದ ಹಸ್ತನೇ

mysore-dasara_Entry_Point