ದ್ವಾಪರ ದಾಟುತ.. ಹಾಡಿಗೆ ಸಾಹಸ ಸಿಂಹ ವಿಷ್ಣುವರ್ಧನ್‌ ಡಾನ್ಸ್‌ ಮಾಡಿದ್ರೆ ಹೇಗಿರುತ್ತೆ? ಇಲ್ಲಿದೆ ನೋಡಿ VIDEO, ಏನ್‌ ಸ್ಟೆಪ್ಸ್‌ ಗುರೂ!-sandalwood news video of vishnuvardhan dancing to krishnam pranaya sakhis dwapara daatuta song goes viral mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದ್ವಾಪರ ದಾಟುತ.. ಹಾಡಿಗೆ ಸಾಹಸ ಸಿಂಹ ವಿಷ್ಣುವರ್ಧನ್‌ ಡಾನ್ಸ್‌ ಮಾಡಿದ್ರೆ ಹೇಗಿರುತ್ತೆ? ಇಲ್ಲಿದೆ ನೋಡಿ Video, ಏನ್‌ ಸ್ಟೆಪ್ಸ್‌ ಗುರೂ!

ದ್ವಾಪರ ದಾಟುತ.. ಹಾಡಿಗೆ ಸಾಹಸ ಸಿಂಹ ವಿಷ್ಣುವರ್ಧನ್‌ ಡಾನ್ಸ್‌ ಮಾಡಿದ್ರೆ ಹೇಗಿರುತ್ತೆ? ಇಲ್ಲಿದೆ ನೋಡಿ VIDEO, ಏನ್‌ ಸ್ಟೆಪ್ಸ್‌ ಗುರೂ!

Dwapara Daatuta song: ಸೋಷಿಯಲ್‌ ಮೀಡಿಯಾದಲ್ಲಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡಿನ ತುಣುಕೊಂದು ಹರಿದಾಡುತ್ತಿದೆ. ಆ ಹಾಡಿನಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ಆದರೆ, ಮಜ ಏನೆಂದರೆ, ಅದೇ ಹಾಡಿಗೆ ಸಾಹಸಸಿಂಹ ವಿಷ್ಣುವರ್ಧನ್‌ ಸಹ ಕುಣಿದಿದ್ದಾರೆ.

ಕೃಷ್ಣ ಪ್ರಣಯ ಸಖಿ ಚಿತ್ರದ ದ್ವಾಪರ ಹಾಡಿಗೆ ವಿಷ್ಣುವರ್ಧನ್‌ ಸ್ಟೆಪ್ಸ್‌ ಹಾಕಿದ ವಿಡಿಯೋ ವೈರಲ್‌ ಆಗಿದೆ.
ಕೃಷ್ಣ ಪ್ರಣಯ ಸಖಿ ಚಿತ್ರದ ದ್ವಾಪರ ಹಾಡಿಗೆ ವಿಷ್ಣುವರ್ಧನ್‌ ಸ್ಟೆಪ್ಸ್‌ ಹಾಕಿದ ವಿಡಿಯೋ ವೈರಲ್‌ ಆಗಿದೆ.

Krishnam Pranaya Sakhi Song: ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕಳೆದ ತಿಂಗಳ ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಹಿಟ್‌ ಪಟ್ಟ ಅಲಂಕರಿಸಿತ್ತು. ಹಾಡುಗಳಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವೆ ಎಂದಿದ್ದ ನಿರ್ದೇಶಕ ಶ್ರೀನಿವಾಸ್‌ ರಾಜು, ಹೇಳಿದ ಮಾತಂತೆ, ಟ್ರೇಲರ್‌ ಬಿಡುಗಡೆ ಮಾಡದೆ ಹಾಡುಗಳಿಂದಲೇ ಪ್ರೇಕ್ಷಕನಿಗೆ ಆಮಂತ್ರಣ ಕೊಟ್ಟು ಥಿಯೇಟರ್‌ಗೆ ಕರೆಸಿಕೊಂಡಿದ್ದರು. ಆ ಪೈಕಿ ದ್ವಾಪರ ದಾಟುತ.. ಹಾಡು ಇಂದಿಗೂ ಟ್ರೆಂಡಿಂಗ್‌ನಲ್ಲಿದೆ. ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಗಟ್ಟಲೇ ರೀಲ್ಸ್‌ ಕ್ರಿಯೇಟ್‌ ಆಗಿವೆ. ಇದೀಗ ಅದರ ಮುಂದುವರಿದ ವರ್ಷನ್‌ ಅಂದ್ರೆ, ಇದೇ ಹಾಡಿಗೆ ವಿಷ್ಣುವರ್ಧನ್‌ ಸ್ಟೆಪ್ಸ್‌ ಹಾಕಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡಿನ ತುಣುಕೊಂದು ಹರಿದಾಡುತ್ತಿದೆ. ಆ ಹಾಡಿನಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ಆದರೆ, ಮಜ ಏನೆಂದರೆ, ಅದೇ ಹಾಡಿಗೆ ಸಾಹಸಸಿಂಹ ವಿಷ್ಣುವರ್ಧನ್‌ ಸಹ ಕುಣಿದಿದ್ದಾರೆ. ಥೇಟ್‌ ಗಣೇಶ್‌ ಅವರ ರೀತಿಯ ಸ್ಟೆಪ್ಸ್‌ಗಳಿಗೆ ವಿಷ್ಣು ಸ್ಟೆಪ್ಸ್‌ ಹಾಕಿದ್ದಾರೆ. ಈ ಕಾಂಬಿನೇಷನ್‌ ವಿಡಿಯೋ ಇದೀಗ ಗಣೇಶ್‌ ಅಭಿಮಾನಿಗಳು ಮಾತ್ರವಲ್ಲದೆ, ದಾದಾ ವಿಷ್ಣುವರ್ಧನ್‌ ಅವರ ಫ್ಯಾನ್ಸ್‌ಗೂ ಟ್ರೀಟ್‌ ಸಿಕ್ಕಂತಾಗಿದೆ. ಈ ವಿಡಿಯೋ ನೋಡಿದ ಕೆಲವರು, ವಿಷ್ಣು ದಾದಾ ಅವರ ಸ್ಟೆಪ್ಸ್‌ ಅನ್ನು ಕೃಷ್ಣಂ ಪ್ರಣಯ ಸಖಿ ಚಿತ್ರ ತಂಡ ಕದಿದ್ಯಾ? ಎಂದು ತಮಾಷೆ ಮಾಡುತ್ತಿದ್ದಾರೆ.

ಸುಪ್ರಭಾತ ಚಿತ್ರದ ಹಾಡು..

1988ರಲ್ಲಿ ದಿನೇಶ್‌ ಬಾಬು ನಿರ್ದೇಶನದಲ್ಲಿ ತೆರೆಗೆ ಬಂದಿದ್ದ ಸುಪ್ರಭಾತ ಚಿತ್ರದ ನನ್ನ ಹಾಡು ನನ್ನದು.. ಹಾಡಿನ ವಿಷ್ಣುವರ್ಧನ್‌ ನೃತ್ಯವನ್ನು, ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ಹಾಡಿಗೆ ಕನೆಕ್ಟ್‌ ಮಾಡಲಾಗಿದೆ. ಸೆ. 18 ವಿಷ್ಣುವರ್ಧನ್‌ ಬರ್ತ್‌ಡೇ. ಆ ನಿಮಿತ್ತ ಅವರ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ‌ ಪೋಸ್ಟ್‌ ಆಗುತ್ತಿದ್ದಂತೆ, ಎಲ್ಲರ ಗಮನ ಸೆಳೆದಿದೆ. ದಾದಾ ಯಾವತ್ತಿದ್ದರೂ ದಾದಾನೇ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ಇವೆರಡರಲ್ಲಿ ಒರಿಜಿನಲ್‌ ಯಾವುದು ಗುರೂ ಎಂದೂ ಪ್ರತಿಕ್ರಿಯಿಸಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಒಟಿಟಿ ಯಾವಾಗ?

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ಕೆಲ ತಿಂಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿವೆ. ಆ ಪೈಕಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸಹ ಒಂದು. ದೊಡ್ಡ ಹಿಟ್‌ನ ನಿರೀಕ್ಷೆಯಲ್ಲಿದ್ದ ನಟ ಗಣೇಶ್‌ಗೆ ಕೃಷ್ಣ ಮತ್ತೆ ಕೈ ಹಿಡಿದಿದ್ದಾನೆ. ಚಿತ್ರಮಂದಿರಗಳಲ್ಲಿ ಭರ್ತಿ 25 ದಿನಗಳನ್ನು ಪೂರೈಸಿ ಮುನ್ನಡೆದಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾ. ಇದೀಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ ಎಂಬ ಕೌತುಕ ಸಿನಿಮಾ ಪ್ರೇಮಿಗಳನ್ನು ಆವರಿಸಿದೆ. ದಂಡುಪಾಳ್ಯ ನಿರ್ದೇಶಕ ಶ್ರೀನಿವಾಸ್‌ ರಾಜು ಅವರ ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ವಿಡಿಯೋ ಪಡೆದುಕೊಂಡಿದೆ ಎಂಬ ಮಾಹಿತಿಯಿದೆ. ಸೆಪ್ಟೆಂಬರ್‌ 20 ಅಥವಾ ಸೆಪ್ಟೆಂಬರ್‌ 27ರಂದು ಈ ಸಿನಿಮಾ ಒಟಿಟಿಗೆ ಆಗಮಿಸುವ ಸಾಧ್ಯತೆ ಇದೆ.

ದ್ವಾಪರ ದಾಟುತ ಹಾಡಿನ ಲಿರಿಕ್ಸ್‌ (Dwapara Song Kannada Lyrics)

ದ್ವಾಪರ ದಾಟುತ ನನ್ನನೇ ನೋಡಲು

ನನ್ನನೇ ಸೇರಲು ಬಂದ ರಾಧಿಕೆ

ಹಾಡಲಿ ಹಾಡಲು ಮಾತಲಿ ಹೇಳಲು

 

ಸಾಧ್ಯವೇ ಇಲ್ಲದ ರಾಗ ಮಾಲಿಕೆ

ಸಖಿ ಸಖಿ ನನ್ನ ರೂಪಸಿ

ಸಖಿ ಸಖಿ ನಿನ್ನ ಮೋಹಿಸಿ

ನೀನೇ ನನ್ನ ಪ್ರೇಯಸಿ

 

ಜೇನ ದನಿಯೋಳೆ ಮೀನ ಕಣ್ಣೋಳೆ

ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ

ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ

 

ಬೇರೆ ದಾರೀನು ಇಲ್ಲ ನನಗಿನ್ನು

ನೀನು ಸಿಕ್ಕಾಗಿದೆ ನಾನು ಹುಡುಕಿದ್ದು

ನನ್ನ ನಿಲ್ದಾಣ ನೀನೆ ಇನ್ನೇನಿದೆ

 

ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ

ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ

 

ಅರಳದ ಸುಮಗಳ ಅರಳಿಸುವವಳು

ಕುಸುಮಗಳಂತ ಬೆರಳು ಚೆಂಮಲ್ಲಿಗೆಯೆಂತಿವೆ ಬೆರಳು

ಗಿಳಿಗಳ ಬಳಗಕೆ ಸರಿಗಮ ಕಲಿಸುವ

ಇನಿಧನಿ ಜಿನುಗೂ ಕೊರಳು

ಬಲು ವಿಸ್ಮಯ ನಿನ್ನ ಕೊರಳು

 

ಸೌಂದರ್ಯದಲ್ಲಿ ಗಾಂಭೀರ್ಯವಂತೆ

ಆಂತರ್ಯದಲ್ಲಿ ಔದಾರ್ಯವಂತೆ

ನೀನೇ ನನ್ನ ಪ್ರೇಯಸಿ

 

ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ

ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ

ನಾನು ಶ್ರೀಕೃಷ್ಣ ನೀನೇ ನನ ಭಾಮೆ ಮೂಡಿದೆ ಪ್ರೀತಿಯು

ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು

 

ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ

ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ

 

ನೀ ನಕ್ಕರೆ ಸಕ್ಕರೆ ಅರರೆರೆ ಎಂದೂ

ಬ್ರಹ್ಮನಿಗೂನು ಬೆರಗು ನೀನೆಂದರೆ

 

ಬೆರಗಿಗೂ ಬೆರಗು ಬರೆದರೆ ಮುಗಿಯದು ಪದದಲ್ಲಿ

ಸಿಗದು ರತಿಯರಿಗಿಂತ ಸೊಬಗು

ಮೈ ಮಾಟವೆ ಮೋಹಕ ಸೊಬಗು

ಲಾವಣ್ಯ ನೋಡಿ ನಾ ಧನ್ಯನಾದೆ

ತಾರುಣ್ಯ ಮೋಡಿ ಹೀಗಾಗಿ ಹೋದೆ

ನೀನೇ ನನ್ನ ಪ್ರೇಯಸಿ

 

ಜೇನ ದನಿಯೋಳೆ ಮೀನ ಕಣ್ಣೋಳೆ

ಸೊಬಗೆ ಮೈತುಂಬಿದೆ

ಹಂಸ ನಡೆಯೋಳೆ ಎದೆಗೆ ಇಳಿದೋಳೆ

ಜೀವ ಝಲ್ ಎಂದಿದೆ

 

ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ

ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ

mysore-dasara_Entry_Point