Bhima Telugu Movie: ಎ ಹರ್ಷ ನಿರ್ದೇಶನದ ಮೊದಲ ತೆಲುಗು ಸಿನಿಮಾ ಫಸ್ಟ್‌ ಲುಕ್‌ ರಿಲೀಸ್‌; ಭೀಮನ ಅವತಾರ ನೋಡಿ ಥ್ರಿಲ್‌ ಆದ ಸಿನಿಪ್ರಿಯರು
ಕನ್ನಡ ಸುದ್ದಿ  /  ಮನರಂಜನೆ  /  Bhima Telugu Movie: ಎ ಹರ್ಷ ನಿರ್ದೇಶನದ ಮೊದಲ ತೆಲುಗು ಸಿನಿಮಾ ಫಸ್ಟ್‌ ಲುಕ್‌ ರಿಲೀಸ್‌; ಭೀಮನ ಅವತಾರ ನೋಡಿ ಥ್ರಿಲ್‌ ಆದ ಸಿನಿಪ್ರಿಯರು

Bhima Telugu Movie: ಎ ಹರ್ಷ ನಿರ್ದೇಶನದ ಮೊದಲ ತೆಲುಗು ಸಿನಿಮಾ ಫಸ್ಟ್‌ ಲುಕ್‌ ರಿಲೀಸ್‌; ಭೀಮನ ಅವತಾರ ನೋಡಿ ಥ್ರಿಲ್‌ ಆದ ಸಿನಿಪ್ರಿಯರು

ಭೀಮಾ ತೆಲುಗು ಸಿನಿಮಾ ಫಸ್ಟ್‌ ಲುಕ್‌ ರಿಲೀಸ್
ಭೀಮಾ ತೆಲುಗು ಸಿನಿಮಾ ಫಸ್ಟ್‌ ಲುಕ್‌ ರಿಲೀಸ್

ಕೊರಿಯೋಗ್ರಾಫರ್‌ ಆಗಿದ್ದ ಎ ಹರ್ಷ ಕನ್ನಡದಲ್ಲಿ ಕೆಲವೊಂದು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಅವರು ಪರಬಾಷೆಯಲ್ಲೂ ತಮ್ಮ ಪ್ರತಿಭೆ ತೋರಿಸಲು ಹೊರಟಿದ್ದಾರೆ. ಹರ್ಷ ಆಕ್ಷನ್‌ ಕಟ್‌ ಹೇಳುತ್ತಿರುವ ತೆಲುಗಿನ ಮೊದಲ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಸಿನಿಪ್ರಿಯರು ಈ ಪೋಸ್ಟರ್‌ ನೋಡಿ ಥ್ರಿಲ್‌ ಆಗಿದ್ದಾರೆ.

ಟಾಲಿವುಡ್‌ನ ಮ್ಯಾಚೋ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಸ್ಯಾಂಡಲ್‌ವುಡ್‌ನ ಎ‌ ಹರ್ಷ ಕಾಂಬಿನೇಷನ್‌ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಹಾಗೂ ಟೈಟಲ್‌ ಪೋಸ್ಟರನ್ನು ಚಿತ್ರತಂಡ ರಿವೀಲ್ ಮಾಡಿದೆ. ಮ್ಯಾಚೋ ಸ್ಟಾರ್ ಗೋಪಿಚಂದ್ 'ಭೀಮ' ಆಗಿ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಅವರಿಗೆ ಇದು ಮೊದಲ ತೆಲುಗು ಸಿನಿಮಾ. 'ಭೀಮ' ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿದೆ.‌ ಕೆಕೆ ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್‌ ಅಡಿ ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಅಂದ ಹಾಗೆ ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ ರವಿವರ್ಮಾ ಸ್ಟಂಟ್ ಈ ಚಿತ್ರಕ್ಕೆ ಇದೆ.

ಸದ್ಯಕ್ಕೆ ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ 'ಭೀಮ' ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾ ಬಳಗದ ಅಪ್ ಡೇಟನ್ನು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ. ಕನ್ನಡ ಹಾಗೂ ತೆಲುಗು ಸಿನಿಪ್ರಿಯರು ಕೂಡಾ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್‌ ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಆಸ್ಪತ್ರೆಗೆ ದಾಖಲಾದ ನಟಿ, ಸಚಿವೆ ರೋಜಾ ಸೆಲ್ವಮಣಿ; ಕಲಾವಿದ ಸಿನಿಮಾ ನಾಯಕಿಯ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದಿಷ್ಟು

ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಸಚಿವ ಸಂಪುಟದಲ್ಲಿ ರೋಜಾ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಅಭಿವೃದ್ಧಿ ಸಚಿವೆಯಾಗಿದ್ದಾರೆ. ಸದಾ ನೇರ ಮಾತುಗಳು, ದಿಟ್ಟ ವ್ಯಕ್ತಿತ್ವದಿಂದ ಸುದ್ದಿಯಾಗಿದ್ದ ರೋಜಾ, ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಜಾ ವಿಚಾರ ಕೇಳಿ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಪರಿಚಯದವರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಕೆಲವರಂತೂ ರೋಜಾ ಚಿಕಿತ್ಸೆ ಪಡೆಯುತ್ತಿರುವ ಹೈದರಾಬಾದ್‌ನ ಅಪೋಲೊ ಆಸ್ಪತ್ರೆ ಬಳಿ ಜಮಾಯಿಸಿದ್ದು ರೋಜಾ ಹೆಲ್ತ್‌ ಅಪ್‌ಡೇಟ್‌ ತಿಳಿಯಲು ಕಾಯುತ್ತಿದ್ದಾರಂತೆ. ರೋಜಾ ಬಗ್ಗೆ ತಿಳಿಯಲು ಈ ಲಿಂಕ್‌ ಒತ್ತಿ.

ಟಾಲಿವುಡ್‌ ಜಕ್ಕಣ್ಣ ಈಗ ಹೀರೋ; ವೈರಲ್‌ ಆಗ್ತಿದೆ ಸ್ಟಾರ್‌ ನಿರ್ದೇಶಕ ರಾಜಮೌಳಿ ಸ್ಟೈಲಿಷ್‌ ಲುಕ್‌ ವಿಡಿಯೋ, ನೀವೂ ನೋಡಿಬಿಡಿ

ಸ್ಟಾರ್‌ ನಿರ್ದೇಶಕನಾಗಿ ಹೆಸರು ಮಾಡಿರುವ ರಾಜಮೌಳಿ ಈಗ ಹೀರೋ ಆಗಿದ್ದಾರೆ. ಅರೆ! ಹೌದಾ ಯಾವ ಸಿನಿಮಾ? ನಾಯಕಿ ಯಾರು? ನಿರ್ದೇಶನ ಮಾಡ್ತಿರೋದು ಅವರೇನಾ ಎಂಬ ಪ್ರಶ್ನೆಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಡಿ. ರಾಜಮೌಳಿ ಹೀರೋ ಆಗಿರುವುದು ಯಾವುದೇ ಸಿನಿಮಾದಲ್ಲಿ ಅಲ್ಲ, ಫೋನ್‌ ಒಂದರ ಜಾಹೀರಾತಿನಲ್ಲಿ. ಈ ಜಾಹಿರಾತಿನ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ರಾಜಮೌಳಿ ಸುದ್ದಿಯನ್ನು ಪೂರ್ತಿ ಓದಲು ಈ ಲಿಂಕ್‌ ಒತ್ತಿ.

Whats_app_banner