ಕನ್ನಡ ಸುದ್ದಿ  /  Entertainment  /  Tollywood News Siddhu Jonnalagadda Anupama Parameswaran Starrer Tillu Square Twitter Review Mnk

Tillu Square Twitter Review: ಟಿಲ್ಲು ಸ್ಕ್ವೇರ್‌ನಲ್ಲಿ ಕಾಮಿಡಿಯೇ ಹೀರೋ; ನಾಯಕ ಸಿದ್ದು ಹಾಸ್ಯಕ್ಕೆ, ಅನುಪಮಾ ಗ್ಲಾಮರ್‌ ಲೇಪನ

ಡಿಜೆ ಟಿಲ್ಲು ಚಿತ್ರದ ಮುಂದುವರಿದ ಟಿಲ್ಲು ಸ್ಕ್ವೇರ್‌ ಶುಕ್ರವಾರ ತೆರೆಗೆ ಅಪ್ಪಳಿಸಿದೆ. ಈ ಸೀಕ್ವೆಲ್ ನಲ್ಲಿ ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ನಾಯಕಿಯರಾಗಿ ನಟಿಸಿದ್ದಾರೆ. ರೊಮ್ಯಾಂಟಿಕ್‌ ಕಾಮಿಡಿ ಚಿತ್ರಕ್ಕೆ ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗಿದೆ.

Tillu Square Twitter Review: ಟಿಲ್ಲು ಸ್ಕ್ವೇರ್‌ನಲ್ಲಿ ಕಾಮಿಡಿಯೇ ಹೀರೋ; ನಾಯಕ ಸಿದ್ದು ಹಾಸ್ಯಕ್ಕೆ, ಅನುಪಮಾ ಗ್ಲಾಮರ್‌ ಲೇಪನ
Tillu Square Twitter Review: ಟಿಲ್ಲು ಸ್ಕ್ವೇರ್‌ನಲ್ಲಿ ಕಾಮಿಡಿಯೇ ಹೀರೋ; ನಾಯಕ ಸಿದ್ದು ಹಾಸ್ಯಕ್ಕೆ, ಅನುಪಮಾ ಗ್ಲಾಮರ್‌ ಲೇಪನ

Tillu Square Twitter Review: ಟಾಲಿವುಡ್‌ನಲ್ಲಿ ಟ್ರೇಲರ್‌ ಮೂಲಕವೇ ಸದ್ದು ಮಾಡಿದ್ದ, ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎಂದೇ ಕರೆಸಿಕೊಂಡಿದ್ದ ಟಿಲ್ಲು ಸ್ಕ್ವೇರ್‌ ಸಿನಿಮಾ ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದೆ. ತೆಲುಗು ನಟ ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್‌ ಜೋಡಿಯ ಈ ಸಿನಿಮಾಕ್ಕೆ ಪ್ರೇಕ್ಷಕನ ಕಡೆಯಿಂದಲೂ ಬಹುಪರಾಕ್ ಹೇಳಿಸಿಕೊಂಡಿದೆ. ಮಲ್ಲಿಕ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, 2022ರಲ್ಲಿ ಡಿಜೆ ಟಿಲ್ಲು ಹೆಸರಿನಲ್ಲಿ ತೆರೆಕಂಡು ಹಿಟ್‌ ಆಗಿತ್ತು. ಅದರ ಮುಂದುವರಿದ ಭಾಗವಾಗಿ ಸೀಕ್ವೆಲ್‌ ಮೂಡಿಬಂದಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣದ ಈ ಚಿತ್ರ ಇಂದು (ಮಾ. 29) ಬಿಡುಗಡೆಯಾಗಿದೆ.

ಸಿದ್ದು ಜೊನ್ನಲಗಡ್ಡ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ತಮ್ಮ ಟ್ರೇಡ್ ಮಾರ್ಕ್ ಕಾಮಿಡಿ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಸಿದ್ದು ಅವರ ಬಾಡಿ ಲಾಂಗ್ವೇಜ್ ಮತ್ತು ಪಂಚ್ ಡೈಲಾಗ್‌ಗಳು ಈ ಸಿನಿಮಾದಲ್ಲೂ ಮತ್ತೊಮ್ಮೆ ವರ್ಕ್ ಔಟ್ ಆಗಿವೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಟಿಲ್ಲು ಸ್ಕ್ವೇರ್ ಚಿತ್ರ ಸಿದ್ದು ಅವರ ಒನ್ ಮ್ಯಾನ್ ಶೋ ಎಂಬ ಮೆಚ್ಚುಗೆಯ ಮಾತುಗಳೂ ಸಿನಿಮಾಕ್ಕೆ ಸಿಕ್ಕಿವೆ.

ಮೊದಲಾರ್ಧದುದ್ದಕ್ಕೂ ಸಿದ್ದು ತಮ್ಮ ತಿಳಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸಿದ್ದಾರೆ. ಅದಾದ ಬಳಿಕ ಒಂದಷ್ಟು ಟ್ವಿಸ್ಟ್‌ ಮತ್ತು ಟರ್ನ್‌ಗಳೂ ಸಿನಿಮಾದ ಹೈಲೈಟ್‌. ಮೊದಲಾರ್ಧ ಫನ್‌ ಆಗಿ ಮುಗಿದರೆ, ದ್ವಿತೀಯಾರ್ಧ ಕುತೂಹಲದಲ್ಲಿಯೇ ನೋಡುಗರನ್ನು ಸೆಳೆಯಲಿದೆ. ಈ ನಡುವೆ ಇನ್ನು ಕೆಲವರು, ಅತಿಯಾದ ಕಾಮಿಡಿ ಬೇಸರ ಎನಿಸಿದೆ ಎಂದೂ ಕೆಲವರು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಕಥೆಯತ್ತ ಹೆಚ್ಚು ಗಮನಹರಿಸದೆ ಕಾಮಿಡಿಯಲ್ಲಯೇ ಹೆಚ್ಚು ಕಾಲ ಕಳೆದಿದ್ದಾರೆ. ಹಾಗಾಗಿ ಕಥೆ ಕೊಂಚ ಪೇಲವ ಎನಿಸಿದೆ. ಕೆಲವು ಟ್ವಿಸ್ಟ್‌ಗಳು ಚೆನ್ನಾಗಿವೆ. ಡಿಜೆ ಟಿಲ್ಲು ಚಿತ್ರದ ರೀತಿ ಕೋರ್ಟ್ ಕಾಮಿಡಿ ಟ್ರ್ಯಾಕ್‌ನಲ್ಲಿ ಸೀಕ್ವೆಲ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದೂ ಹೇಳಿಕೊಂಡಿದ್ದಾರೆ.

ಅನುಪಮಾ ಗ್ಲಾಮರ್ ಟ್ರೀಟ್...

ಅನುಪಮಾ ಪರಮೇಶ್ವರನ್ ಮತ್ತು ನಟ ಸಿದ್ದು ಜೊನ್ನಲಗಡ್ಡ ಜೋಡಿಯ ಕೆಮಿಸ್ಟ್ರಿ ಟಿಲ್ಲು ಸ್ಕ್ವೇರ್‌ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಜತೆಗೆ ಅದೇ ಹೈಲೈಟ್‌. ಟಿಲ್ಲು ಸ್ಕ್ವೇರ್‌ನಲ್ಲಿ ಅನುಪಮಾ ಪರಮೇಶ್ವರನ್ ಪಾತ್ರ ನೋಡುಗರನ್ನು ಅಚ್ಚರಿಗೆ ತಳ್ಳಲಿದೆ. ಈ ಸಿನಿಮಾದಲ್ಲಿ ಫೈರ್ ಬ್ರ್ಯಾಂಡ್‌ನಂತೆ ಅವರು ಕಂಡಿದ್ದಾರೆ. ಲಿಲ್ಲಿ ಪಾತ್ರದಲ್ಲಿ ಗ್ಲಾಮರಸ್‌ ಟ್ರೀಟ್ ನೀಡಿದ್ದಾರವರು. ಡಿಜೆ ಟಿಲ್ಲೂ ಚಿತ್ರದ ನಾಯಕಿ ನೇಹಾ ಶೆಟ್ಟಿ ಅತಿಥಿಯಾಗಿ ಕಾಣಿಸಿಕೊಂಡು ಇಂಪ್ರೆಸ್ ಮಾಡಿದ್ದಾರೆ.

IPL_Entry_Point