ಕನ್ನಡ ಸುದ್ದಿ  /  Entertainment  /  Kannada Television News Lakshmi Nivasa Serial Episode Promo Highlights Lakshmi Nivasa Serial Latest Update Mnk

Lakshmi Nivasa Serial: ಹಾಲಲ್ಲಿ ಜೀವಂತ ಜಿರಳೆ ಬೆರೆಸಿ ಕುಡಿದ ಜಯಂತ್; ಫಸ್ಟ್‌ನೈಟ್‌ನಲ್ಲೇ ಸೈಕೋ ಪತಿಯ ವರ್ತನೆಗೆ ಜಾನು ಕಂಗಾಲು

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲೀಗ ಜಯಂತ್‌, ಜಾಹ್ನವಿ ಮದುವೆ ಸಂಭ್ರಮ ಮುಗಿದಿದೆ. ಈ ನಡುವೆ ತಮ್ಮ ವರ್ತನೆಯಿಂದಲೇ ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಜಯಂತ್‌, ಕೊನೆಗೂ ತನ್ನ ಅಸಲಿ ಮುಖವಾಡವನ್ನು ತೆರೆದಿಡುತ್ತಿದ್ದಾನೆ. ಇದು ಜಾನು ಗಮನಕ್ಕೂ ಬಂದಿದೆ. ಆಕೆಗೂ ದಿಗಿಲು ಬಡಿದಂತಾಗಿದೆ.

Lakshmi Nivasa Serial: ಹಾಲಲ್ಲಿ ಜೀವಂತ ಜಿರಳೆ ಬೆರೆಸಿ ಕುಡಿದ ಜಯಂತ್; ಫಸ್ಟ್‌ನೈಟ್‌ನಲ್ಲೇ ಸೈಕೋ ಪತಿಯ ವರ್ತನೆಗೆ ಜಾನು ಕಂಗಾಲು
Lakshmi Nivasa Serial: ಹಾಲಲ್ಲಿ ಜೀವಂತ ಜಿರಳೆ ಬೆರೆಸಿ ಕುಡಿದ ಜಯಂತ್; ಫಸ್ಟ್‌ನೈಟ್‌ನಲ್ಲೇ ಸೈಕೋ ಪತಿಯ ವರ್ತನೆಗೆ ಜಾನು ಕಂಗಾಲು

Lakshmi Nivasa Serial: ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾದ ಹೊಸ ಸೀರಿಯಲ್‌ ಲಕ್ಷ್ಮೀ ನಿವಾಸ, ಸದ್ಯ ನೋಡುಗರ ಗಮನ ಸೆಳೆದಿದೆ. ಮಧ್ಯಮ ವರ್ಗದ ಬದುಕು ಮತ್ತು ಬವಣೆ ಪ್ರತಿಬಿಂಬಿಸುವ, ಸ್ವಂತ ಮನೆ ಹೊಂದುವ ಕನಸು ಕಾಣುವ ದೊಡ್ಡ ಕುಟುಂಬದ ಕಥೆ. ಈ ನಡುವೆ ಕಥಾಹಂದರ ಮೂಲಕವೇ ಟಿಆರ್‌ಪಿ ವಿಚಾರದಲ್ಲೂ ಮುಂದಡಿ ಇರಿಸಿರುವ ಈ ಸೀರಿಯಲ್‌, ಟಾಪ್‌ ಒಂದರಲ್ಲಿಯೂ ಕಾಣಿಸಿಕೊಂಡಿತ್ತು. ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಹಿಂದಿಕ್ಕಿ ನಂಬರ್‌ 1 ಸ್ಥಾನ ಪಡೆದಿತ್ತು. ಸದ್ಯ ಎರಡನೇ ಸ್ಥಾನದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಜಾಹ್ನವಿ ಮದುವೆಯ ಸಂಭ್ರಮದಲ್ಲಿಯೇ ಇಡೀ ಸೀರಿಯಲ್‌ ಮೂಡಿಬಂದಿತ್ತು. ಇದೀಗ ಉದ್ಯಮಿ ಜಯಂತ್‌ ಜತೆಗೆ ಜಾನುಳ ಅದ್ಧೂರಿ ಮದುವೆಯಾಗಿದೆ. ಶ್ರೀಮಂತ ಮನೆತನದ ಸೊಸೆಯಾಗಿದ್ದಾಳೆ ಜಾನು. ಮಗಳನ್ನು ಒಳ್ಳೆಯ ಮನೆಗೆ ಕೊಟ್ಟಿದ್ದೇವೆ. ಜಯಂತ್‌ ಒಳ್ಳೆಯ ಹುಡುಗ ಎಂದೆಲ್ಲ ಜಾನು ಮನೆಯವರೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಅವಳು ಗಂಡನ ಮನೆಗೆ ಹೋದರೂ, ಎಲ್ಲರ ಬಾಯಲ್ಲೂ ಆಕೆಯ ಹೆಸರೇ ಗುನುಗುತ್ತಿದೆ.

ಈ ನಡುವೆ ಅದ್ಧೂರಿ ಮದುವೆ ಮುಗಿದು ಗಂಡನ ಮನೆ ಸೇರಿದ್ದಾಳೆ ಜಾನು. ಮೊದಲೇ ಯಾರೂ ಇಲ್ಲದ ಜಯಂತ್‌, ಪತ್ನಿಯನ್ನು ತಾನೇ ಮನೆ ತುಂಬಿಸಿಕೊಂಡಿದ್ದಾನೆ. ದೀಪ ಹಚ್ಚಿ ದೇವರಿಗೂ ಕೈ ಮುಗಿದಿದ್ದಾಳೆ ಜಾನು. ಅಚ್ಚರಿಯ ವಿಚಾರ ಏನೆಂದರೆ, ಮೊದಲ ರಾತ್ರಿಯೇ ಗಂಡ ಜಯಂತ್‌ ವರ್ತನೆ ಜಾಹ್ನವಿಗೆ ದಿಗಿಲು ಬಡಿಸಿದೆ. ಈ ವರೆಗೂ ಜಯಂತ್‌ನನ್ನು ಬರೀ ಹೊರಪ್ರಪಂಚದಲ್ಲಿ ಕಂಡಿದ್ದ ಜಾನು, ಇದೀಗ ಮನೆವೊಳಗೆ ಆತನ ವರ್ತನೆಗೆ ಕೊಂಚ ನಡುಗಿದ್ದಾಳೆ.

ಹಾಲಿಗೆ ಜಿರಳೆ ಬೆರೆಸಿದ ಜಯಂತ್!

ಸಣ್ಣ ಸಣ್ಣ ವಿಚಾರಕ್ಕೂ ಕ್ಲೀನ್‌ ಕ್ಲೀನ್‌ ಎನ್ನುವ ಮನಸ್ಥಿತಿಯ ಜಯಂತ್‌ನನ್ನು ಕಂಡು ಜಾನು ಶಾಕ್‌ ಆಗಿದ್ದಾಳೆ. ಮೊದಲ ರಾತ್ರಿ ದಿನ ಜಾನು ಮತ್ತು ಜಯಂತ್‌ ಏಕಾಂತದಲ್ಲಿದ್ದಾರೆ. ಅಲ್ಲೇ ಟೇಬಲ್‌ ಮೇಲೆ ಹಾಲೂ ಇದೆ. ಇವರಿಬ್ಬರ ನಡುವೆ ವಿಲನ್‌ ರೀತಿ ಜಿರಳೆಯೊಂದು ಎಂಟ್ರಿ ಕೊಟ್ಟಿದೆ. ಜಿರಳೆ ನೋಡಿದ್ದೇ ತಡ ಚಿಟಾರನೇ ಕೂಗಿ ಗಾಬರಿಗೊಂಡಿದ್ದಾಳೆ ಜಾನು. ಜಾನು ಕೂಗುತ್ತಿದ್ದಂತೆ, ಜಿರಳೆಯನ್ನು ಕೈಯಿಂದಲೇ ಹೊಡೆದಿದ್ದಾನೆ ಜಯಂತ್.‌ ಅಷ್ಟೇ ಅಲ್ಲ ಸತ್ತ ಜಿರಳೆಯನ್ನು ಹಿಡಿದು ಹಾಲಿನಲ್ಲಿ ಬೆರೆಸಿದ್ದಾನೆ.

ನನ್ನ ಹೆಂಡತಿ ಮೈಮೇಲೆ ಹರಿದಾಡುವಷ್ಟು ಧೈರ್ಯನಾ ನಿನಗೆ? ಅವಳನ್ನು ನಾನು ಮಾತ್ರ ಮುಟ್ಟಬಹುದು ಗೊತ್ತಿದೆಯಲ್ವ. ಅವಳು ನನಗೆ ಮಾತ್ರ ಸ್ವಂತ. ಅಷ್ಟೆಲ್ಲ ಗೊತ್ತಿದ್ದರೂ ಅವರಿಗೆ ಕಷ್ಟಕೊಟ್ಟು ಬಿಟ್ಟೆಯಲ್ವಾ. ತಪ್ಪು ಮಾಡಿಬಿಟ್ಟೆ ಅಲ್ವಾ ಎನ್ನುತ್ತ ಆ ಜಿರಳೆಯನ್ನು ಹಾಲಿನಲ್ಲಿ ಬೆರೆಸಿ ಕುಡಿದೇ ಬಿಟ್ಟಿದ್ದಾನೆ. ಅಲ್ಲಿಗೆ ಜಾನು ಕಂಗಾಲಾಗಿದ್ದಾಳೆ. ಈ ಮೂಲಕ ವಿಲನ್‌ ಇಲ್ಲದ ಸೀರಿಯಲ್‌ಗೆ ಸೈಕೋ ಪಾತ್‌ ಎಂಟ್ರಿಯಾಗಿದೆ.

ಜಯಂತ್‌ ಪಾತ್ರಕ್ಕೆ ಸಿಕ್ಕಿತ್ತು ಮೆಚ್ಚುಗೆ..

ಸೀರಿಯಲ್‌ ಶುರುವಾದ ಮೇಲೆ, ಜಾನು ಪ್ರೀತಿಯಲ್ಲಿ ಬಿದ್ದ ಜಯಂತ್‌ನನ್ನು ಕಂಡು, ಆತನ ವರ್ತನೆ, ನಡತೆ, ಒಳ್ಳೆಯತನ ಕಂಡು ಪ್ರೇಕ್ಷಕ ನಿಬ್ಬೆರಗಾಗಿದ್ದ. ಸಿಕ್ಕರೆ ಇಂಥ ಹುಡುಗ ಸಿಗಬೇಕು ಎಂದು ಸೀರಿಯಲ್‌ ವೀಕ್ಷಕ ಕಾಮೆಂಟ್‌ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುತ್ತಿದ್ದ. ಈಗ ಒಂದೇ ಒಂದು ಕ್ಷಣದಲ್ಲಿ ಆತನ ವರ್ತನೆಯಿಂದ ನೋಡುಗರೇ ಶಾಕ್‌ಗೆ ಒಳಗಾಗಿದ್ದಾರೆ. ಸೈಕೋಪಾತ್‌ನನ್ನು ನೋಡಿ, ಅಯ್ಯೋ ಶಿವ ಜಾನು ಕಥೆ ಮುಂದೇನು ಎಂದೇ ಊಹಿಸುತ್ತಿದ್ದಾರೆ. ಬಗೆಬಗೆ ಕಾಮೆಂಟ್‌ ಸಹ ಮಾಡುತ್ತಿದ್ದಾರೆ.

ವೀಕ್ಷಕರೂ ಶಾಕ್‌..

- ಅಯ್ಯಯ್ಯೋ ಯಾರ್ ಗುರು ಇವನು ಸೈಕೋ ಜಿರಳೆ ಹಾಕೊಂಡ್ ಹಾಲು ಕುಡ್ಕೊಂಡ ಯಪ್ಪ ಹ್ಯಾಂಡ್‌ಸಮ್‌ ಹೀರೋನ ಸೈಕೋ ಮಾಡ್ಬಿಟ್ರಲ್ಲ ಡೈರೆಕ್ಟರ್ ಸರ್

- ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸೈಕೋ ವಿಲನ್ ಜಯಂತ್ ಏನ್ ಟ್ವಿಸ್ಟ್ ಗುರು ಜೀ ಕನ್ನಡದವರು.

- ಗಿಳಿಯನ್ನು ಸಾಕಿ ಗಿಡುಗನ ಕೈಗೆ ಕೊಟ್ಟಂಗೇ ಆಯ್ತು

- ಅದಕ್ಕೆ ಹೇಳೋದು ನೋಡಕ್ ವಿಲನ್ ತರ ಇದ್ರೂ, ಜಾಸ್ತಿ ಪ್ರೀತಿಸೋ ಹುಡುಗನ ಒಪ್ಕೊಬೇಕು ಅಂತ. ಈಗ ನೋಡಿ ಅತೀ ವಿನಯ ಜಾನುಗೆ ಅನ್ಯಾಯ

- ಓಹ್ ತೊಗೊಳಪ್ಪ ಬತ್ತಿ ಇಟ್ಟು ಹಚ್ಚೇಬಿಟ್ಟ ಜಯತಣ್ಣ … ಇನ್ನು ಏನೇನ್ ಕಾದಿದ್ಯೋ

- ಅತಿವಿನಯಂ ದೂರ್ಥಲಕ್ಷಣಂ

- ಹಾಲಿಗೆ ಜಿರಳೆ ಹಾಕ್ಕೊಂಡು ಮಿಲ್ಕ್ ಶೇಕ್ ತರ ಕೂಡಿದ ಸೈಕೊ ಜಯಂತ್ ಆತ್ಮಕ್ಕೆ ಶಾಂತಿ ಸಿಗಲಿ. ಅಯ್ಯೋ ಆ ಹುಡುಗಿ ನಾ ಮುಂದಕ್ಕೆ ಅದು ಹೆಂಗೆ ರುಬ್ಬೊ ಪ್ರೋಗ್ರಾಂ ಇಟ್ಕೊಂಡಿದನೋ