ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections2024: ಕರ್ನಾಟಕದ ಮೂವರು ಕೇಂದ್ರ ಸಚಿವರಿಗೆ ಟಿಕೆಟ್‌ ನೀಡಲು ವಿರೋಧ, ಬಿಜೆಪಿ ಹಾಲಿ ಸದಸ್ಯರ ವಿರುದ್ದ ಹೆಚ್ಚಿದ ಆಕ್ರೋಶ

Lok Sabha Elections2024: ಕರ್ನಾಟಕದ ಮೂವರು ಕೇಂದ್ರ ಸಚಿವರಿಗೆ ಟಿಕೆಟ್‌ ನೀಡಲು ವಿರೋಧ, ಬಿಜೆಪಿ ಹಾಲಿ ಸದಸ್ಯರ ವಿರುದ್ದ ಹೆಚ್ಚಿದ ಆಕ್ರೋಶ

Karnataka Politics ಲೋಕಸಭೆ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್‌ ಲಾಬಿ ಜೋರಾಗಿದೆ. ಹಾಲಿ ಸದಸ್ಯರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡುವ ಬೇಡಿಕೆಯಿದ್ದು, ಕೇಂದ್ರ ಸಚಿವರಿಗೂ ಬಿಸಿ ತಟ್ಟಿದೆ.

ಕೇಂದ್ರ ಸಚಿವರಿಗೂ ಈ ಬಾರಿ ಟಿಕೆಟ್‌ ನೀಡದಂತೆ ಬಿಜೆಪಿಯಲ್ಲಿ ಒತ್ತಡ ಹೆಚ್ಚಿದೆ.
ಕೇಂದ್ರ ಸಚಿವರಿಗೂ ಈ ಬಾರಿ ಟಿಕೆಟ್‌ ನೀಡದಂತೆ ಬಿಜೆಪಿಯಲ್ಲಿ ಒತ್ತಡ ಹೆಚ್ಚಿದೆ.

ಬೆಂಗಳೂರು: ಇನ್ನೇನು ಲೋಕಸಭೆ ಚುನಾವಣೆಗೆ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಳೆದ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಟಿಕೆಟ್‌ಗೆ ಭಾರೀ ಬೇಡಿಕೆಯಿದೆ. ಕೇಂದ್ರದಲ್ಲಿ ಸಚಿವರಾಗಿರುವ ಮೂವರು ಸೇರಿ ಹತ್ತಕ್ಕೂ ಹೆಚ್ಚು ಹಾಲಿ ಸದಸ್ಯರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯಗಳು ಜೋರಾಗಿ ಕೇಳಿ ಬರುತ್ತಿವೆ. ಕೆಲವು ಕಡೆ ಪತ್ರ ಚಳವಳಿ, ಗೋಬ್ಯಾಕ್‌ ಹೋರಾಟಗಳು ನಡೆದಿವೆ.

ಟ್ರೆಂಡಿಂಗ್​ ಸುದ್ದಿ

ಯಾವ ಕ್ಷೇತ್ದದಲ್ಲಿ ಹೇಗೆ

  • ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಕೇಂದ್ರದಲ್ಲಿ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ ಅವರನ್ನು ಬದಲಾಯಿಸುವಂತ ಒತ್ತಡ ಪಕ್ಷದಲ್ಲೇ ಕೇಳಿ ಬಂದಿದೆ. ಮಾಜಿ ಸಚಿವ ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರು ಬಹಿರಂಗವಾಗಿಯೇ ಶೋಭಾ ಅವರ ವಿರುದ್ದ ಅಸಹನೆ ಹೊರ ಹಾಕಿದ್ದು, ಶೋಭಾ ಅವರ ಪರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ಧಾರೆ.
  • ಬೀದರ್‌ನಲ್ಲಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಟಿಕೆಟ್‌ ನೀಡದಂತೆ ಶಾಸಕರಾದ ಪ್ರಭುಚೌಹಾಣ್‌, ಶರಣು ಸಲಗರ ಸೇರಿದಂತೆ ಹಲವು ಪ್ರಮುಖರು ನಾಯಕರ ಮೇಲೆ ಒತ್ತಡ ತಂದಿದ್ದಾರೆ. ಹೊಸಬರಿಗೆ ಅವಕಾಶ ನೀಡದೇ ಇದ್ದರೆ ಬಿಜೆಪಿ ಸೋಲಬಹುದು ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
  • ಚಿತ್ರದುರ್ಗದಲ್ಲೂ ಕೇಂದ್ರದ ಸಚಿವರಾಗಿರುವ ಎ.ನಾರಾಯಣಸ್ವಾಮಿ ಅವರನ್ನು ಬದಲಿಸಿ ಸ್ಥಳೀಯರಿಗೆ ಅವಕಾಶ ಕೊಡಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಇಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಹೆಸರೂ ಪ್ರಬಲವಾಗಿ ಕೇಳಿ ಬರುತ್ತಿದೆ.
  • ಉತ್ತರ ಕನ್ನಡ ಜಿಲ್ಲೆಯಲ್ಲೂ ಆರು ಬಾರಿ ಸಂಸದರಾಗಿರುವ ಅನಂತಕುಮಾರ್‌ ಹೆಗಡೆ ಈ ಬಾರಿ ಕ್ಷೇತ್ರವನ್ನು ಮರೆತರು. ಐದು ವರ್ಷದಲ್ಲಿ ಕೆಲಸವನ್ನೂ ಮಾಡಲಿಲ್ಲ. ಸಂಸತ್‌ನಲ್ಲೂ ಮಾತನಾಡಿಲ್ಲ. ಇವರನ್ನು ಬದಲಿಸಿ ಕೆನರಾ ಕ್ಷೇತ್ರದಿಂದ ಹೊಸಬರಿಗೆ ಅವಕಾಶ ಮಾಡಿಕೊಡುವಂತೆ ಕೂಗು ಎದ್ದಿದೆ.

    ಇದನ್ನೂ ಓದಿರಿ: ಒಳ್ಳೆ ಹುಡುಗ ಪ್ರಥಮ್‌ ಇವ್ರೇನ? ಫಸ್ಟ್ ನೈಟ್ ವಿತ್ ದೆವ್ವದಲ್ಲಿ ಚುಂಬನ, ಆಲಿಂಗನ; ಟೀಸರ್‌ನಲ್ಲೇ ಏನೇನಿದೆ ನೋಡಿ
  • ಮೈಸೂರಿನಲ್ಲಿ ಎರಡು ಬಾರಿ ಗೆದ್ದಿರುವ ಸಂಸದ ಪ್ರತಾಪ ಸಿಂಹ ಅವರನ್ನು ಬದಲಾಯಿಸುವಂತೆ ಪಕ್ಷದ ನಾಯಕರು ಹೇಳುತ್ತಿದ್ಧಾರೆ. ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಸಿಂಹ ಒಡನಾಟ ಸರಿಯಿಲ್ಲ. ಹಿಂದಿನ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸೋಲಿಗೆ ಸಿಂಹ ಕೂಡ ಕಾರಣರು ಎನ್ನುವ ದೂರನ್ನೂ ನೀಡಿದ್ದಾರೆ.
  • ದಾವಣಗೆರೆಯಲ್ಲೂ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನು ಬದಲಿಸಿ. ಅವರಿಂದ ಪಕ್ಷಕ್ಕೆ ಏನೂ ಉಪಯೋಗವಿಲ್ಲ ಎಂದು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಸಹಿತ ಹಲವರು ದೂರು ಕೊಟ್ಟಿದ್ದಾರೆ. ಟಿಕೆಟ್‌ ವಿಚಾರದ ಸಭೆಯಲ್ಲಿ ದಾವಣಗೆರೆ ಕ್ಷೇತ್ರದ ಬಿಜೆಪಿ ಮುಖಂಡರೊಂದಿಗೆ ಗಲಾಟೆಯೂ ಆಗಿದೆ.
  • ವಿಜಯಪುರದಲ್ಲಿ ರಮೇಶ್‌ ಜಿಗಜಿಣಗಿ ಅವರನ್ನು ಬದಲಿಸುವಂತೆ ಸ್ಥಳೀಯವಾಗಿ ಒತ್ತಡ ಹೆಚ್ಚುತ್ತಿದೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ್‌ ಕಾರಕೋಳ ಅವರಿಗೆ ಟಿಕೆಟ್‌ ನೀಡುವಂತ ಬೇಡಿಕೆಯೂ ಜೋರಾಗಿದೆ.
  • ಚಾಮರಾಜನಗರದಲ್ಲೂ ಆರು ಬಾರಿ ಗೆದ್ದಿರುವ ಹಿರಿಯ ನಾಯಕ ವಿ.ಶ್ರೀನಿವಾಸ್‌ ಪ್ರಸಾದ್‌ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ಧಾರೆ. ಆದರೆ ಅವರ ಕುಟುಂಬದಲ್ಲಿಯೇ ಇಬ್ಬರು ಅಳಿಯರ ನಡುವೆ ಟಿಕೆಟ್‌ ಬೇಡಿಕೆಯಿದೆ. ಅಳಿಯ ಡಾ.ಮೋಹನ್‌ ಸರ್ಕಾರಿ ಸೇವೆಗೆ ರಾಜೀನಾಮೆ ಕೂಡ ನೀಡಿದ್ದಾರೆ. ಇತರೆ ನಾಯಕರು ಮಾತ್ರ ಸ್ಥಳೀಯರಿಗೆ ಅವಕಾಶ ಮಾಡಿಕೊಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.

    ಇದನ್ನೂ ಓದಿರಿ: BHIM UPI App: ಭೀಮ್‌ ಯಪಿಐ ಆಪ್‌ ಬಳಸಿ ಯುಪಿಐ ಪಿನ್‌ ರಿಸೆಟ್‌ ಮಾಡೋದು ಹೇಗೆ, ಈ ಸರಳ ಸ್ಟೆಪ್ಸ್‌ ಅನುಸರಿಸಿ ಸುರಕ್ಷಿತವಾಗಿರಿ
  • ಮಂಗಳೂರಿನಲ್ಲಿಯೂ ಮೂರು ಬಾರಿ ಗೆದ್ದಿರುವ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಬದಲಿಸಿ ಹಿಂದೂ ಕಾರ್ಯಕರ್ತರಿಗೆ ಅವಕಾಶ ನೀಡುವ ಬೇಡಿಕೆ ಗಟ್ಟಿಯಾಗಿದೆ. ಆಕಾಂಕ್ಷಿಗಳು ಬಹಿರಂಗ ಸಭೆಗಳನ್ನು ಮಾಡುತ್ತಿದ್ದಾರೆ.
  • ಚಿಕ್ಕೋಡಿ ಕ್ಷೇತ್ರದಲ್ಲಿ ಹಾಲಿ ಸದಸ್ಯ ಅಣ್ಣಾ ಸಾಹೇಬ್‌ ಜೊಲ್ಲೆ ಅವರನ್ನು ಬದಲಿಸುವಂತಹ ಮಾತುಗಳು ಕೇಳಿ ಬರುತ್ತಿವೆ. ಪತ್ನಿಗೆ ಶಾಸಕ ಸ್ಥಾನ ನೀಡಲಾಗಿದೆ. ಇದರಿಂದ ಇಲ್ಲಿ ಪ್ರಭಾಕರ ಕೋರೆ ಕುಟುಂಬದವರಿಗೆ ಟಿಕೆಟ್‌ ನೀಡುವ ಒತ್ತಾಯಗಳು ಜೋರಾಗಿವೆ.

IPL_Entry_Point