ಕನ್ನಡ ಸುದ್ದಿ  /  ಕರ್ನಾಟಕ  /  Indigo Flight: ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾರ್ಚ್‌ 31 ರಿಂದ ನೇರ ವಿಮಾನ ಯಾನ; ಇಂಡಿಗೋ, ಟಿಕೆಟ್ ದರ, ಪ್ರಯಾಣ ಅವಧಿ ವಿವರ

IndiGo Flight: ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾರ್ಚ್‌ 31 ರಿಂದ ನೇರ ವಿಮಾನ ಯಾನ; ಇಂಡಿಗೋ, ಟಿಕೆಟ್ ದರ, ಪ್ರಯಾಣ ಅವಧಿ ವಿವರ

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾ 31ರಿಂದ ನೇರ ವಿಮಾನ ಯಾನ ಶುರುವಾಗಲಿದೆ. ಈ ವಾಯು ಮಾರ್ಗದಲ್ಲಿ ಇಂಡಿಗೋ ತನ್ನ ಮೊದಲ ವಿಮಾನ ಹಾರಾಟ ಶುರುಮಾಡುತ್ತಿದ್ದು, ಟಿಕೆಟ್ ದರ, ಪ್ರಯಾಣ ಅವಧಿ ವಿವರ ಹೀಗಿದೆ.

ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾರ್ಚ್‌ 31 ರಿಂದ ಇಂಡಿಗೋ ನೇರ ವಿಮಾನ ಯಾನ. (ಸಾಂಕೇತಿಕ ಚಿತ್ರ)
ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾರ್ಚ್‌ 31 ರಿಂದ ಇಂಡಿಗೋ ನೇರ ವಿಮಾನ ಯಾನ. (ಸಾಂಕೇತಿಕ ಚಿತ್ರ) (REUTERS)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಲಕ್ಷದ್ವೀಪದ ಅಗಟ್ಟಿಗೆ ನೇರ ವಿಮಾನ ಯಾನ ಶುರುಮಾಡುತ್ತಿರುವುದಾಗಿ ಖಾಸಗಿ ವಿಮಾನ ಯಾನ ಸಂಸ್ಥೆ ಇಂಡಿಗೋ ಸೋಮವಾರ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು - ಅಗಟ್ಟಿ ನಡುವಿನ ನೇರ ವಿಮಾನ ಯಾನವು ಮಾರ್ಚ್‌ 31ರಂದು ಶುರುವಾಗಲಿದೆ. ಇದು ತನ್ನ 88ನೇ ದೇಶೀಯ ಹಾರಾಟದ ಗಮ್ಯಸ್ಥಾನವಾಗಲಿದೆ. ಅದೆ ರೀತಿ ಅಂತಾರಾಷ್ಟ್ರೀಯ ಮಾರ್ಗ ಸೇರಿ 121 ಗಮ್ಯ ಸ್ಥಾನಗಳಿಗೆ ಇಂಡಿಗೋ ವಿಮಾನ ಯಾನ ಸೇವೆ ಒದಗಿಸುವಂತಾಗುತ್ತದೆ ಎಂದು ಇಂಡಿಗೋ ಹೇಳಿದೆ.

ಅಗಟ್ಟಿ ವಿಮಾನ ಯಾವ ಮಾದರಿ, ಎಷ್ಟು ಆಸನ ಇತ್ಯಾದಿ ವಿವರ

ಬೆಂಗಳೂರು - ಅಗಟ್ಟಿ ನಡುವಿನ ನೇರ ವಿಮಾನಯಾನಕ್ಕೆ ಇಂಡಿಗೋ ತನ್ನ 78 ಆಸನಗಳ ಎಟಿಆರ್ ವಿಮಾನವನ್ನು ಬಳಸುವುದಾಗಿ ಹೇಳಿದೆ. ಈ ಕ್ರಮವು ಟೆಕ್ ಹಬ್ ಮತ್ತು ಲಕ್ಷದ್ವೀಪ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ, ಏಕೆಂದರೆ ಪ್ರಸ್ತುತ ಅಲಯನ್ಸ್ ಏರ್ ಮಾತ್ರ ಅಗತ್ತಿಯ ಒಳಗೆ ಮತ್ತು ಹೊರಗೆ ವಿಮಾನಗಳನ್ನು ಹೊಂದಿದೆ. ಇತ್ತೀಚೆಗೆ ಬಿಡುಗಡೆಯಾದ ಫ್ಲೈ 91 ಮುಂದಿನ ತಿಂಗಳಿನಿಂದ ದ್ವೀಪದಿಂದ ಸೇವೆಗಳನ್ನು ಪ್ರಾರಂಭಿಸಲು ಸರತಿ ಸಾಲಿನಲ್ಲಿದೆ.

ಈ ವಿಮಾನಯಾನ ಕಂಪನಿಯ ಈ ಕ್ರಮವು ಬೆಂಗಳೂರು ಮತ್ತು ಲಕ್ಷದ್ವೀಪ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಅಲಯನ್ಸ್ ಏರ್ ಮಾತ್ರ ಪ್ರಸ್ತುತ ಅಗಟ್ಟಿಗೆ ಮತ್ತು ಅಲ್ಲಿಂದ ಹೊರಗಿನ ಸ್ಥಳಗಳಿಗೆ ವಿಮಾನ ಯಾನ ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಶುರುವಾಗಿರುವ ಫ್ಲೈ91 ವಿಮಾನಯಾನ ಕಂಪನಿಯೂ ಮುಂದಿನ ತಿಂಗಳು ಅಗಟ್ಟಿಗೆ ತನ್ನ ಸೇವೆಯನ್ನು ಶುರುಮಾಡಲಿದೆ.

“ಆಳ ಸಮುದ್ರ ಮೀನುಗಾರಿಕೆ, ಸ್ಕೂಬಾ ಡೈವಿಂಗ್, ನೌಕಾಯಾನ, ಸ್ಕೀಯಿಂಗ್ ಮತ್ತು ಕಯಾಕಿಂಗ್” ಪ್ರಿಯರಿಗೆ ಅಗಟ್ಟಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಅಲ್ಲಿಗೆ ಸಮೀಪದ ಬಂಗಾರಂ, ಪಿಟ್ಟಿ, ತಿನ್ನಕರ, ಪರಲಿ -1 ಮತ್ತು ಪರಾಲಿ -2 ರ ಜನವಸತಿ ಮತ್ತು ಪ್ರಶಾಂತ ದ್ವೀಪಗಳನ್ನು ಅನ್ವೇಷಿಸಲು ಈ ದ್ವೀಪವು ಸೂಕ್ತ ನೆಲೆಯಾಗಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಹೇಳಿದೆ.

ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾ 31 ರಿಂದ ಇಂಡಿಗೋ ನೇರ ವಿಮಾನ ಯಾನ, ಟಿಕೆಟ್ ದರ ಪ್ರಯಾಣದ ಅವಧಿಯ ವಿವರ.
ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾ 31 ರಿಂದ ಇಂಡಿಗೋ ನೇರ ವಿಮಾನ ಯಾನ, ಟಿಕೆಟ್ ದರ ಪ್ರಯಾಣದ ಅವಧಿಯ ವಿವರ.

ಇಂಡಿಗೋ ಕಂಪನಿಯ ತಾಣದಲ್ಲಿ ಮಾರ್ಚ್ 31ರಂದು ಬೆಂಗಳೂರು- ಅಗಟ್ಟಿ ವಿಮಾನ ಯಾನ ದರ (ರೆಗ್ಯುಲರ್‌) 7,802 ರೂಪಾಯಿ ತೋರಿಸಿದೆ. ಪ್ರಯಾಣದ ಅವಧಿ 2.35 ನಿಮಿಷ. ಬೆಂಗಳೂರಿನಿಂದ ಬೆಳಗ್ಗೆ 10.25ಕ್ಕೆ ಹೊರಟು ಅಗಟ್ಟಿಗೆ ಮಧ್ಯಾಹ್ನ 1 ಗಂಟೆಗೆ ವಿಮಾನ ತಲುಪಲಿದೆ.

ಗೋವಾದಿಂದ ಬೆಂಗಳೂರಿಗೆ ಫ್ಲೈ91 ವಿಮಾನ

ಗೋವಾ ಮೂಲದ ಫ್ಲೈ91 ಕಂಪನಿಯು ಇತ್ತೀಚೆಗೆ ಶುರುವಾಗಿದ್ದು, ಮೊದಲ ವಿಮಾನ ಯಾನವನ್ನು ಗೋವಾ- ಬೆಂಗಳೂರು ಮಾರ್ಗವಾಗಿ ಶುರುಮಾಡಲಿದೆ. ಇದು ಸೋಮವಾರ ಶುರುವಾಗಲಿದೆ. ಅದರೊಂದಿಗೆ ಫ್ಲೈ91 ಕಂಪನಿಯ ವಾಣಿಜ್ಯ ವಿಮಾನ ಯಾನಕ್ಕೆ ಚಾಲನೆ ಸಿಗಲಿದೆ.

ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಬೆಳಗ್ಗೆ 7.55ಕ್ಕೆ ವಿಮಾನ ಹೊರಟು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ. ಅಲ್ಲಿಂದ ಸಿಂಧುದುರ್ಗಕ್ಕೆ ಹೋಗಲಿದೆ.

ಈ ಕಂಪನಿಯ ಎಲ್ಲ ವಿಮಾನಗಳಲ್ಲೂ ಆರಂಭಿಕ ಕೊಡುಗೆಯಾಗಿ ಆರಂಭಿಕ ಟಿಕೆಟ್ ದರ 1,991 ರೂಪಾಯಿ ಇರಿಸಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point