ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಉಡುಗೊರೆ ಕೊಟ್ಟ ಯುವಕ, ಇದರಲ್ಲೊಂದು ಟ್ವಿಸ್ಟ್‌ ಇದೆ, ಏನದು- ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಉಡುಗೊರೆ ಕೊಟ್ಟ ಯುವಕ, ಇದರಲ್ಲೊಂದು ಟ್ವಿಸ್ಟ್‌ ಇದೆ, ಏನದು- ಇಲ್ಲಿದೆ ವಿವರ

ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಉಡುಗೊರೆ ಕೊಟ್ಟ ಯುವಕ, ಇದರಲ್ಲೊಂದು ಟ್ವಿಸ್ಟ್‌ ಇದೆ, ಏನದು- ಇಲ್ಲಿದೆ ವಿವರ

ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಅನ್ನು ಯುವಕ ಉಡುಗೊರೆಯಾಗಿ ಕೊಟ್ಟ. ಆದರೆ, ಅದರಲ್ಲಿರುವ ಶ್ರವಣ ಸಾಧನ ಫೀಚರ್ ಭಾರತದಲ್ಲಿ ಕೆಲಸ ಮಾಡ್ತಾ ಇರಲಿಲ್ಲ. ಇದು ಸವಾಲಾಗಿ ಪರಿಣಮಿಸಿತು. ಯುವಕನ ಇಬ್ಬರು ಗೆಳೆಯರು ಕೈಜೋಡಿಸಿದರು. ಹಾಗೆ ಇದರಲ್ಲೊಂದು ಟ್ವಿಸ್ಟ್‌ ಸಿಕ್ಕಿತು, ಏನದು- ಇಲ್ಲಿದೆ ಆ ವಿವರ.

ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಉಡುಗೊರೆ ಕೊಟ್ಟ ಯುವಕ. ಆತನಿಗೆ ಇಬ್ಬರು ಗೆಳೆಯರು ಸಹಾಯ ಮಾಡಿದ್ದಾರೆ. ಅಂದ ಹಾಗೆ, ಇದರಲ್ಲೊಂದು ಟ್ವಿಸ್ಟ್‌ ಇದೆ. ಆ ವಿವರ ಇಲ್ಲಿದೆ. (ಸಾಂಕೇತಿಕವಾಗಿ ಎಐ ಚಿತ್ರವನ್ನು ಬಳಸಲಾಗಿದೆ)
ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಉಡುಗೊರೆ ಕೊಟ್ಟ ಯುವಕ. ಆತನಿಗೆ ಇಬ್ಬರು ಗೆಳೆಯರು ಸಹಾಯ ಮಾಡಿದ್ದಾರೆ. ಅಂದ ಹಾಗೆ, ಇದರಲ್ಲೊಂದು ಟ್ವಿಸ್ಟ್‌ ಇದೆ. ಆ ವಿವರ ಇಲ್ಲಿದೆ. (ಸಾಂಕೇತಿಕವಾಗಿ ಎಐ ಚಿತ್ರವನ್ನು ಬಳಸಲಾಗಿದೆ) (PC - Meta AI)

ಬೆಂಗಳೂರು: ಇದೊಂದು ಹೃದ್ಯ ಸನ್ನಿವೇಶ. ಕಿವಿ ಕೇಳ್ತಿಲ್ಲ ಮಗಾ ಎನ್ನುತ್ತಿದ್ದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಅನ್ನು ಉಡುಗೊರೆಯಾಗಿ ಯುವಕ ಕೊಟ್ಟ. ಅರೆ ಕಿವಿ ಕೇಳದ ಅಜ್ಜಿಗೆ ಏರ್‌ಪಾಡ್ಸ್ ಪ್ರೊ 2 ಕೊಟ್ಟರೆ ಅದರಿಂದ ಏನು ಉಪಯೋಗ ಅಂತೀರಾ? ಗಾಬರಿಯಾಗಬೇಡಿ. ಆ ಯುವಕ ತನ್ನ ಗೆಳೆಯರ ಸಹಾಯದೊಂದಿಗೆ ಏರ್‌ಪಾಡ್ಸ್ ಪ್ರೊ 2 ಅನ್ನು ಶ್ರವಣ ಸಾಧನವನ್ನಾಗಿ ಪರಿವರ್ತಿಸಿ ಉಡುಗೊರೆಯಾಗಿ ಕೊಟ್ಟಿದ್ದ! ಈ ಮನ ಮುಟ್ಟುವ ಸನ್ನಿವೇಶ ಮತ್ತು ಅದರ ಹಿನ್ನೆಲೆಯ ವಿವರ ಇಲ್ಲಿದೆ.

ಆಪಲ್‌ನ ಏರ್‌ಪಾಡ್ಸ್ ಪ್ರೊ 2 ನಲ್ಲಿ ಶ್ರವಣ ಸಾಧನ ಫೀಚರ್‌ ಸಕ್ರಿಯಗೊಳಿಸಿದ ಯುವಕರು

ಬೆಂಗಳೂರಿನ ಮೂವರು ಯುವ ತಂತ್ರಜ್ಞಾನ ಉತ್ಸಾಹಿಗಳು ಆಪಲ್‌ನ ಏರ್‌ಪಾಡ್ಸ್ ಪ್ರೊ 2 ನಲ್ಲಿ ಶ್ರವಣ ಸಾಧನ ಫೀಚರ್‌ ಸಕ್ರಿಯಗೊಳಿಸಲು ಒಂದು ಮಾರ್ಗವನ್ನು ಕಂಡುಕೊಂಡರು. ಅಜ್ಜಿಗೆ ಶ್ರವಣ ಸಾಧನವನ್ನು ಉಡುಗೊರೆಯಾಗಿ ನೀಡಬೇಕು ಎಂದು ತೀರ್ಮಾನಿಸಿದ ಯುವಕನ ಹೆಸರು ಋಥ್ವಿಕ್‌ ಜಯಸಿಂಹ. ಇದಕ್ಕಾಗಿ ಆಪಲ್‌ ಏರ್‌ಪಾಡ್ಸ್ ಪ್ರೊ 2ವನ್ನು ಆಯ್ಕೆ ಮಾಡಿಕೊಂಡ. ಬಳಿಕ ಗೆಳೆಯರಾದ ಅರ್ನವ್ ಬನ್ಸಾಲ್ ಮತ್ತು ರಿಥ್ವಿಕ್ ರಿಭು ಅವರ ನೆರವು ಪಡೆದುಕೊಂಡು ನಿತ್ಯ ಬಳಕೆ ವಸ್ತುಗಳನ್ನು ಉಪಯೋಗಿಸಿಕೊಂಡು ಏರ್‌ಪಾಡ್ಸ್ ಪ್ರೊ 2ನ ಶ್ರವಣ ಸಾಧನ ಫೀಚರ್‌ ಸಕ್ರಿಯಗೊಳಿಸಲು ಪ್ರಯತ್ನಿಸಿದರು. ಅದರಲ್ಲಿ ಯಶಸ್ವಿಯೂ ಆದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಏರ್‌ಪಾಡ್ಸ್ ಪ್ರೊ 2 ಖರೀದಿ ಬಳಿಕ ಎದುರಾದ ಸವಾಲು

ಜಯಸಿಂಹ ಅವರು ತಮ್ಮ ಅಜ್ಜಿಗಾಗಿ ಏರ್‌ಪಾಡ್‌ಗಳನ್ನು ಉತ್ಸಾಹದಿಂದ ಖರೀದಿಸಿದ ನಂತರ ಅವರಿಗೆ ಸವಾಲು ಎದುರಾಯಿತು. ಅದರಲ್ಲಿರುವ ಶ್ರವಣ ಸಾಧನ ಫೀಚರ್ ಭಾರತದಲ್ಲಿ ಲಭ್ಯವಿಲ್ಲ. ಅಮೆರಿಕದಲ್ಲಿ ಲಭ್ಯವಿರುವ ಫೀಚರ್ ಭಾರತದಲ್ಲಿ ಕೆಲಸ ಮಾಡದೇ ಇರುವುದಕ್ಕೆ ಕೆಲವು ನಿರ್ಬಂಧಗಳು ಕಾರಣವಾಗಿದ್ದವು. ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಮುಂದಾದ ಜಯಸಿಂಹ ಮತ್ತು ಗೆಳೆಯರು, ಅಲ್ಯೂಮಿನಿಯಂ ಫಾಯಿಲ್, ಮೈಕ್ರೊವೇವ್, ತಾಮ್ರದ ಜಾಲರಿ ಮತ್ತು ಇಎಸ್‌ಪಿ 32 ಚಿಪ್ ಅನ್ನು ಬಳಸಿ, ಅವರು ವೈ-ಫೈ ಸಿಗ್ನಲ್‌ಗಳನ್ನು ನಿರ್ಬಂಧಿಸಲು ಫ್ಯಾರಡೆ ಕೇಜ್ ಅನ್ನು ರಚಿಸಿದರು. ನಂತರ ಅವರು ಸಾಧನದ ಸ್ಥಳವನ್ನು ವಂಚಿಸಲು ಓಪನ್‌ ಸೋರ್ಸ್‌ ಟೂಲ್‌ಗಳನ್ನು ಬಳಸಿದರು. ಶ್ರವಣ ಸಾಧನ ಫೀಚರ್‌ ಅನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಿದರು ಎಂದು ವರದಿ ಹೇಳಿದೆ.

ಏರ್‌ಪಾಡ್‌ಗಳನ್ನು ವಾಲ್ಯೂಮ್ ಮತ್ತು ಸೌಂಡ್ ಬ್ಯಾಲೆನ್ಸ್‌ನಂತಹ ಸೆಟ್ಟಿಂಗ್‌ಗಳೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಇದು ಏರ್‌ಪಾಡ್‌ಗಳನ್ನು ಸಾಂಪ್ರದಾಯಿಕ ಶ್ರವಣ ಸಾಧನಗಳಿಗಿಂತ ಹೆಚ್ಚು ಬಳಕೆದಾರ ಸ್ನೇಹಿಯಾಗಿಸುತ್ತದೆ. ಅದೇ ರೀತಿ, ಏರ್‌ಪಾಡ್‌ಗಳು ಸಂಭಾಷಣೆಯ ಅರಿವು ಮತ್ತು ವೈಯಕ್ತೀಕರಿಸಿದ ಧ್ವನಿ ಹೊಂದಾಣಿಕೆಗಳಂತಹ ವೈಶಿಷ್ಟ್ಯಗಳನ್ನು ಹೇಗೆ ನೀಡುತ್ತವೆ ಎಂಬುದನ್ನು ಬನ್ಸಾಲ್‌ ವಿವರಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ವಿವರಿಸಿದೆ.

ಈ ಯುವಕರು ತಮ್ಮ ಯೋಜನೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಬಳಿಕ 30ಕ್ಕೂ ಹೆಚ್ಚು ಜನರು ಈ ಫೀಚರ್‌ ಅನ್ನು ಭಾರತದಲ್ಲಿ ಸಕ್ರಿಯಗೊಳಿಸಿದ್ದಾರೆ. ಇದಕ್ಕಾಗಿ ಈ ಯುವಕರು ತಮ್ಮ ಟೆಕ್ ಪರಿಹಾರದ ವಿವರವನ್ನೂ ಒದಗಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಅನೇಕ ಟೆಕ್ ಪರಿಹಾರವನ್ನು ಈ ಯುವಕರು ಕಂಡಿಕೊಂಡಿದ್ದಾರೆ.

ಈ ವಿಚಾರವಾಗಿ ಆಪಲ್ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಏರ್‌ಪಾಡ್ಸ್ ಪ್ರೊ 2ನ ಶ್ರವಣ ಸಾಧನ ಫೀಚರ್‌ ಶೀಘ್ರದಲ್ಲೇ ಭಾರತದಲ್ಲಿ ನಿಯಂತ್ರಕ ಅನುಮೋದನೆಯನ್ನು ಪಡೆಯುತ್ತದೆ ಎಂಬ ಆಶಯವನ್ನು ಮೂವರು ಯುವಕರು ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ, ದೈನಂದಿನ ಸವಾಲುಗಳನ್ನು ಪರಿಹರಿಸಲು ಈ ದೇಸಿ ತಂತ್ರ ಬಳಸುವುದು ತಪ್ಪಲ್ಲ ಎಂದು ಅವರು ನಂಬಿಕೊಂಡಿರುವುದಾಗಿ ವರದಿ ವಿವರಿಸಿದೆ.

Whats_app_banner