Channapatna Results: ಚನ್ನಪಟ್ಟಣದಲ್ಲಿ ನಿಖಿಲ್‌-ಯೋಗೇಶ್ವರ್‌ ತುರುಸಿನ ಸ್ಪರ್ಧೆ, ಸುತ್ತುಗಳಲ್ಲಿ ಯಾರಿಗೆ ಮುನ್ನಡೆ
ಕನ್ನಡ ಸುದ್ದಿ  /  ಕರ್ನಾಟಕ  /  Channapatna Results: ಚನ್ನಪಟ್ಟಣದಲ್ಲಿ ನಿಖಿಲ್‌-ಯೋಗೇಶ್ವರ್‌ ತುರುಸಿನ ಸ್ಪರ್ಧೆ, ಸುತ್ತುಗಳಲ್ಲಿ ಯಾರಿಗೆ ಮುನ್ನಡೆ

Channapatna Results: ಚನ್ನಪಟ್ಟಣದಲ್ಲಿ ನಿಖಿಲ್‌-ಯೋಗೇಶ್ವರ್‌ ತುರುಸಿನ ಸ್ಪರ್ಧೆ, ಸುತ್ತುಗಳಲ್ಲಿ ಯಾರಿಗೆ ಮುನ್ನಡೆ

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಸುತ್ತುವಾರು ಮತ ಎಣಿಕೆಯ ತುರುಸಿನಿಂದ ಕೂಡಿದ್ದು, ಕ್ಷಣಕ್ಷಣವೂ ಮತ ಲೆಕ್ಕಾಚಾರ ಏರಳಿತ ಆಗಿದೆ. ನಿಖಿಲ್‌ ಕುಮಾರಸ್ವಾಮಿ ಹಾಗೂ ಯೋಗೇಶ್ವರ್‌ ಅವರ ಸುತ್ತುವಾರು ಮತ ಗಳಿಕೆ ಹೀಗಿದೆ.

ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದ್ದು, ನಿಖಿಲ್‌ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದ್ದು, ನಿಖಿಲ್‌ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ.

Channapatna Results: ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೆಯು ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ಮತ ಎಣಿಕೆಯಲ್ಲೂ ಗೋಚರಿಸುತ್ತಿದೆ. ಕೊನೆ ಕ್ಷಣದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದ ಸಿ.ಪಿ.ಯೋಗೇಶ್ವರ್‌ ಹಾಗೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎನ್‌ಡಿಎ ಅಭ್ಯರ್ಥಿಯಾದ ನಿಖಿಲ್‌ ಕುಮಾರಸ್ವಾಮಿ ನಡುವೆ ಹಣಾಹಣಿ ಏರ್ಪಟ್ಟಿರುವುದು ಈಗ ನಡೆದಿರುವ ಮತಎಣಿಕೆ ಮೂಲಕ ಕಂಡು ಬರುತ್ತಿದೆ. ಚನ್ನಪಟ್ಟಣದಲ್ಲಿ ಕ್ಷಣಕ್ಷಣಕ್ಕೂ ರೋಚಕ ತಿರುವು ಆಗುತ್ತಿದ್ದು ಚನ್ನಪಟ್ಟಣದಲ್ಲಿ ನಿಖಿಲ್- ಯೋಗೇಶ್ವರ್ ನಡುವೆ ಫೈಟ್ ಕಂಡು ಬಂದಿದೆ.

ಗೆಲುವಿನ ಸನಿಹದತ್ತ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮುನ್ನುಗುತ್ತಿದ್ದಾರೆ. 14ನೇ ಸುತ್ತಿನಲ್ಲಿ ಮತ ಎಣಿಕೆ ನಂತರ 24310 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಸಿಪಿ ಯೋಗೇಶ್ವರ್ ಗೆ 84 413 ಮತ ಗಳು ಲಭಿಸಿದ್ದರೆ, ನಿಖಿಲ್ ಕುಮಾರಸ್ವಾಮಿಗೆ 60,103 ಮತಗಳು ಸಿಕ್ಕಿವೆ.

ಹತ್ತನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಈ ಸುತ್ತಿನಲ್ಲಿ ಯೋಗೇಶ್ವರ್‌ಗೆ ಭಾರೀ ಮುನ್ನಡೆ ದಕ್ಕಿದೆ. ಈವರೆಗೂ 23 ಸಾವಿರ ಮತಗಳ ಅಂತರದಲ್ಲಿ ಯೋಗೇಶ್ವರ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಂಬತ್ತನೇ ಮತ ಎಣಿಕೆ ಮುಕ್ತಾಯವಾಗಿದ್ದು. ಯೋಗೇಶ್ವರ್‌ ಅವರು 18 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

ಎಂಟನೇ ಸುತ್ತಿನ ಮತ ಎಣಿಕೆಯೂ ಮುಗಿದಿದ್ದು, ಸಿಪಿ ಯೋಗೇಶ್ವರ್‌ ಅವರ ಮುನ್ನಡೆಯ ಅಂತರ ಭಾರೀ ಏರಿಕೆಯಾಗಿದೆ. 11178 ಮತಗಳ ಅಂತರದಲ್ಲಿ ಯೋಗೇಶ್ವರ್‌ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಏಳನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಸಿ.ಪಿ.ಯೋಗೇಶ್ವರ್‌ ಮುನ್ನಡೆ ಪಡೆದುಕೊಂಡಿದ್ದಾರೆ.3663 ಮತಗಳಿಂದ ಯೋಗೇಶ್ವರ್‌ ಮುನ್ನಡೆ ದೊರೆತಿದೆ.

ಆರು ಸುತ್ತಿನ ಮತ ಎಣಿಕೆ ಮುಗಿದಿದ್ದು, ಸುಮಾರು ಆರು ನೂರು ಮತಗಳ ಅಂತರವನ್ನು ನಿಖಿಲ್‌ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ. 5ನೇ ಸುತ್ತಿನಲ್ಲೂ ನಿಖಿಲ್‌ಗೆ ಮುನ್ನಡೆ ದೊರೆತಿತ್ತು. ನಿಖಿಲ್ ಗೆ 1,302 ಮತಗಳ ಮುನ್ನಡೆ. 4ನೇ ಸುತ್ತಿನಲ್ಲೂ ನಿಖಿಲ್ ಗೆ ಮುನ್ನಡೆ ಸಿಕ್ಕಿತ್ತು.. 4ನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಗೆ 1,151 ಮತ ದೊರೆತಿದ್ದವು. ಇನ್ನೂ 15 ಸುತ್ತುಗಳ ಮತ ಎಣಿಕೆ ಬಾಕಿ ಇದ್ದು, ಅಂತಿಮ ಫಲಿತಾಂಶವೂ ಅಷ್ಟೇ ಕುತೂಹಲವಾಗಿರಲಿದೆ.

ಚನ್ನಪಟ್ಟಣ ವಿಧಾನಸಭಾ ಚುನಾವಣೆ ಫಲಿತಾಂಶ ಕುತೂಹಲ ಮೊದಲಿನಿಂದಲೂ ಇದೆ. ಇಲ್ಲಿ ದೇವೇಗೌಡರ ಕುಟುಂಬ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿತ್ತು. ಡಿಸಿಎಂ ಡಿಕೆಶಿವಕುಮಾರ್‌ ಅವರು ಆರಂಭದಿಂದಲೂ ತಮ್ಮದೇ ಕ್ಷೇತ್ರ ಎನ್ನುವ ರೀತಿಯಲ್ಲಿ ಗಟ್ಟಿಯಾಗಿ ನಿಂತಿದ್ದರು. ತಮ್ಮ ಪುತ್ರನನ್ನು ಈ ಬಾರಿಯಾದರೂ ಗೆಲ್ಲಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿಯೇ ಗಟ್ಟಿಯಾಗಿ ನೆಲೆಯೂರಿದ್ದರು. ಇದರಿಂದ ತೀವ್ರ ಹಣಾಹಣಿ ಏರ್ಪಟ್ಟಿತ್ತು.

ಚನ್ನಪಟ್ಟಣ ನಗರ, ಗ್ರಾಮಾಂತರ ಪ್ರದೇಶದ ಪ್ರತಿ ಹಳ್ಳಿಗಳಲ್ಲಿ ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆಯೇ ನಡೆದಿತ್ತು. ಸಿಪಿ ಯೋಗೇಶ್ವರ್‌ ಅವರು ಬಂದ ನಂತರ ಕಾಂಗ್ರೆಸ್‌ಗೆ ಇನ್ನಿಲ್ಲದ ಬಲ ಬಂದಿತ್ತು. ಆದರೆ ಸಚಿವ ಜಮೀರ್‌ ಅಹಮದ್‌ ಹೇಳಿಕೆ ನಂತರ ಕಾಂಗ್ರೆಸ್‌ನಲ್ಲಿ ಕೊಂಚ ಹಿನ್ನಡೆ ಆಗಿತ್ತು. ಈಗ ಫಲಿತಾಂಶದಲ್ಲೂ ಮತಗಣಿತದ ಮೂಲಕವೇ ಉತ್ತರ ಸಿಗುತ್ತಿದೆ.

ಚನ್ನಪಟ್ಟಣದಲ್ಲಿ ಈ ಬಾರಿ ಅತಿ ಹೆಚ್ಚು ಅಂದರೆ ಶೇ 89 ರಷ್ಟು ಮತದಾನ ನಡೆದಿದೆ. ಈ ಬಾರಿ ಈ ಕ್ಷೇತ್ರದಲ್ಲಿ ದಾಖಲೆಯ ಮತದಾನ ನಡೆದಿದೆ. ಒಟ್ಟು 2,32,996 ಮತದಾರರಲ್ಲಿ 2,06,866 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

Whats_app_banner