ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ; ಮನರಂಜನಾ ಕ್ಷೇತ್ರವೇ ಬದಲಾಗುವುದು ಖಚಿತ - ರಂಗನೋಟ ಅಂಕಣ-column ranganota ott will take over the theaters entertainment industry is about to change completely prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ; ಮನರಂಜನಾ ಕ್ಷೇತ್ರವೇ ಬದಲಾಗುವುದು ಖಚಿತ - ರಂಗನೋಟ ಅಂಕಣ

ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ; ಮನರಂಜನಾ ಕ್ಷೇತ್ರವೇ ಬದಲಾಗುವುದು ಖಚಿತ - ರಂಗನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ: ‘ಹಿಂದಿನ ದಿನಗಳಲ್ಲಿ ಒಂದು ಚಲನಚಿತ್ರ ವೀಕ್ಷಿಸಲು ಇಷ್ಟಲ್ಲಾ ಹರಸಾಹಸ ಪಟ್ಟಿದ್ದೆವು ಎನ್ನುವುದು ನೆನೆದಾಗ ಇವತ್ತಿನ ದಿನ ನಿಜವೋ ಸುಳ್ಳೋ ಎನ್ನುವ ಭಾವನೆ ಬರುತ್ತದೆ. ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ’

ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ; ಮನರಂಜನಾ ಕ್ಷೇತ್ರವೇ ಬದಲಾಗುವುದು ಖಚಿತ - ರಂಗನೋಟ ಅಂಕಣ
ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ; ಮನರಂಜನಾ ಕ್ಷೇತ್ರವೇ ಬದಲಾಗುವುದು ಖಚಿತ - ರಂಗನೋಟ ಅಂಕಣ (linkedin)

ವಿಷಯ ಪ್ರಸ್ತಾಪ ಮಾಡು ಅಂದ. ಮುಂದಿನ ಮೀಟಿಂಗ್​​ನಲ್ಲಿ ನಮ್ಮ ಬಿಲ್ಡಿಂಗ್​ನಲ್ಲಿದ್ದ 36 ಫ್ಲ್ಯಾಟ್​ಗಳಲ್ಲಿ 34 ಫ್ಲಾಟ್​ನಲ್ಲಿದ್ದವರು ಸ್ಪ್ಯಾನಿಷರು. ನಾನು ಮತ್ತು ಇನ್ನೊಂದು ಸೌತ್ ಅಮೆರಿಕನ್ ಕುಟುಂಬ ಮಾತ್ರ ವಿದೇಶಿಯರು. ಅದೂ ಹೇಳಿಕೇಳಿ ಮುಕ್ಕಾಲು ಪಾಲು ಅಲ್ಲಿನ ಸ್ಪ್ಯಾನಿಷ್ ನಿವಾಸಿಗಳು ಹಿರಿಯ ನಾಗರಿಕರು. ಬದಲಾವಣೆಗೆ ಬಡಪೆಟ್ಟಿಗೂ ಒಪ್ಪದವರು. ಕೊನೆಗೆ ಮೂರು ತಿಂಗಳ ಹೋರಾಟ ಮಾಡಿ ಲಾಯರ್ ನೋಟೀಸ್ ಕಳಿಸಿ ಆಂಟೆನಾ ಸ್ಥಾಪಿಸಿದೆವು. ಆಗ ಬರುತ್ತಿದ್ದ ಜೀ ಮೂವೀಸ್ ಮತ್ತು B4U ಮೂವೀಸ್ ನಮ್ಮ ಭಾರತೀಯ ಚಲನಚಿತ್ರದ ಸೋರ್ಸ್ ಆಗಿತ್ತು.

ನಂತರದ ದಿನಗಳಲ್ಲಿ ವೀಕ್ ಎಂಡ್ ಬಂದರೆ ಸಾಕು ಬಾರ್ಸಿಲೋನಾ ದಿಂದ 'ಈಜಿ ಜೆಟ್' ಏರಿ ಇಂಗ್ಲೆಂಡ್​ನ ಲಂಡನ್ ನಗರವನ್ನ ತಲುಪುತ್ತಿದ್ದೆವು. ಲಂಡನ್ ನಗರದ ಸಿಂಗಲ್ ಸ್ಕ್ರೀನ್ ಥಿಯೇಟರ್​ನಲ್ಲಿ ಗುಜರಾತಿ ಹುಡುಗಿಯರು, ಮಹಿಳೆಯರು, ಅಜ್ಜಿಯರು ಸಿನಿಮಾವನ್ನ ಕೇಕೆ ಹಾಕುತ್ತ, ವಿಸಲ್ ಹೊಡೆಯುತ್ತಾ ನೋಡುವುದಕ್ಕೆ ಸಾಕ್ಷಿಯಾದೆವು. ಗಜನಿ, ರಬ್ ನೇ ಬನಾದಿಯ ಜೋಡಿ ಹೀಗೆ ಅಲ್ಲಿ ನೋಡಿದ ಸಿನೆಮಾಗಳ ಲಿಸ್ಟ್ ದೊಡ್ಡದು. ನನಗೆ ಸಿನಿಮಾ ಅಂದರೆ ಅಷ್ಟೇನೂ ಹುಚ್ಚಿಲ್ಲ. ವಾರ ಪೂರ್ತಿ ಸೋಶಿಯಲ್ ಲೈಫ್ ಇಲ್ಲದ ರಮ್ಯಳಿಗೆ ಈ ಸಿನಿಮಾಗಳು ಲೈಫ್ ಲೈನ್ ಆಗಿದ್ದವು. ಲಂಡನ್ ನಗರದ ಗಲ್ಲಿಗಲ್ಲಿಯನ್ನ ಬಿಡುಬೀಸಾಗಿ ಸುತ್ತಿದ ಆ ದಿನಗಳ ನೆನಪು ಸುಖಕರ.

ಮುಖ ಐದು

ಮೂರು ದಶಕದಲ್ಲಿ ಬದುಕು, ಜಗತ್ತು ಬದಲಾದ ರೀತಿ, ವೇಗ ಅಚ್ಚರಿ ಹುಟ್ಟಿಸುತ್ತದೆ. ಈಗ ಎಲ್ಲವೂ ಕೈ ಬೆರಳ ತುದಿಯಲ್ಲಿದೆ!. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜೊತೆಗೆ ಇನ್ನೂ ಅಸಂಖ್ಯಾತ ಸರ್ವಿಸ್ ಪ್ರೊವೈಡರ್ಸ್ ಇಂದು ಮಾರುಕಟ್ಟೆಯಲ್ಲಿದ್ದಾರೆ. ನಮಗೆ ಬೇಕಾದ ಫಿಲಂ, ಬೇಕಾದ ಡಾಕ್ಯುಮೆಂಟರಿ ಇತರ ಏನೇ ಆದರೂ ಎಲ್ಲವನ್ನೂ ನಮಗಿಷ್ಟದ ಸಮಯದಲ್ಲಿ ನಾವು ನೋಡಬಹುದು . ಇಂತಹ ಬದಲಾವಣೆ ನೋಡಿದಾಗೆಲ್ಲ ಹಿಂದಿನ ದಿನಗಳಲ್ಲಿ ಒಂದು ಚಲನಚಿತ್ರ ವೀಕ್ಷಿಸಲು ಇಷ್ಟಲ್ಲಾ ಹರಸಾಹಸ ಪಟ್ಟಿದ್ದೆವು ಎನ್ನುವುದು ನೆನೆದಾಗ ಇವತ್ತಿನ ದಿನ ನಿಜವೋ ಸುಳ್ಳೋ ಎನ್ನುವ ಭಾವನೆ ಬರುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ. ಚಲನಚಿತ್ರ ಮಾತ್ರ ಅಂತಲ್ಲ ಎಂಟರ್ಟೈನ್ಮೆಂಟ್ ಕ್ಷೇತ್ರ ಪೂರ್ಣ ಬದಲಾಗಲಿದೆ.

ಮುಖ ಆರು: ಲೋಡಿಂಗ್…

ಇವತ್ತಿಗೆ ಇದು ಖಾಲಿ ಜಾಗ. ಮುಂದೊಂದು ದಿನ ಇದನ್ನ ಆಸ್ವಾದಿಸಿ ಬರೆಯುವ ಆಸೆ. ಸದ್ಯಕ್ಕಿನ್ನೂ ಲೋಡಿಂಗ್ ಹಂತದಲ್ಲಿದೆ. ಬಟ್ ಐ ಆಮ್ ಶೂರ್ ವಾಸನೆ, ಘಮ, ರುಚಿಯನ್ನ ಕೂಡ ಚಲನಚಿತ್ರ ನೋಡುತ್ತಾ ಸವಿಯುವ ದಿನಗಳು ಖಂಡಿತ ಬರಲಿವೆ.

ರಂಗನೋಟ ಅಂಕಣ
ರಂಗನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.