Indian Railways: ಬೇಸಿಗೆಗೆ ಹುಬ್ಬಳ್ಳಿ, ಬೆಳಗಾವಿಯಿಂದ ಉತ್ತರ ಭಾರತಕ್ಕೆ ವಿಶೇಷ ರೈಲು, ಅರಸೀಕೆರೆ 2 ರೈಲು ಸಂಚಾರ ರದ್ದು
ಹುಬ್ಬಳ್ಳಿ, ಬೆಳಗಾವಿ ಹಾಗೂ ಬೆಂಗಳೂರಿನಿಂದ ಬೇಸಿಗೆ ವಿಶೇಷ ರೈಲುಗಳ ಸಂಚಾರವಿದೆ. ಅದರ ವಿವರ ಇಲ್ಲಿದೆ.
ಹುಬ್ಬಳ್ಳಿ: ಬೇಸಿಗೆ ರಜೆ ಇರುವ ಕಾರಣದಿಂದ ಹೆಚ್ಚಿನ ಬೇಡಿಕೆ ಇರುವ ಹುಬ್ಬಳ್ಳಿ. ಬೆಳಗಾವಿಯಿಂದ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ( Indian Railway) ನೈರುತ್ಯ ರೈಲ್ವೆ ವಲಯವು ಮುಂದಾಗಿದೆ. ಬೆಳಗಾವಿಯಿಂದ ಉತ್ತರ ಭಾರತದ ಗೋಮತಿನಗರ, ಹುಬ್ಬಳ್ಳಿಯಿಂದ ಈಶಾನ್ಯ ಭಾಗದ ನಹರ್ಲಗುನ್ ನಗರಕ್ಕೆ ವಿಶೇಷ ರೈಲು ಸಂಚಾರ ಇರಲಿದೆ. ಇದಲ್ಲದೇ ಬೆಂಗಳೂರು ಹುಬ್ಬಳ್ಳಿ ನಡುವೆಯೂ ಸೋಮವಾರ ರಾತ್ರಿಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಆಗಿರುವ ಹಾಸನ ಜಿಲ್ಲೆ ಅರಸೀಕೆರೆಯಿಂದ ಎರಡು ರೈಲು ರದ್ದಾಗಿವೆ. ಈ ಕುರಿತು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಯಾವುದೇ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ. 139 ಅನ್ನು ಸಂಪರ್ಕಿಸಿ ಅಥವಾ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. www.enquiry.indianrail.gov.in.
ವಿಶೇಷ ರೈಲುಗಳ ಸಂಚಾರ
⦁ ರೈಲು ಸಂಖ್ಯೆ. 07389/07390 ಬೆಳಗಾವಿ-ಗೋಮತಿ ನಗರ- ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ (8 ಟ್ರಿಪ್‌ಗಳು): ಎಸ್‌ಎಸ್‌ಎಸ್ ಹುಬ್ಬಳ್ಳಿ, ವಿಜಯಪುರ, ಸೋಲಾಪುರ, ದೌಂಡ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಕಾನ್ಪುರ ಸೆಂಟ್ರಲ್, ಐಶ್‌ಬಾಗ್ ಮೂಲಕ ರೈಲು ಸಂಚರಿಸಲಿದೆ.
ರೈಲು ಗಾಡಿ ಸಂಖ್ಯೆ 07389 ಮೇ12 ರಿಂದ ಜೂನ್ 30ರವರಗೆ ಬೆಳಗಾವಿಯಿಂದ ರಾತ್ರಿ 12:30ಕ್ಕೆ ಹೊರಟು ಮೂರನೇ ದಿನ ಬೆಳಿಗ್ಗೆ 07:45 ಕ್ಕೆ ಗೋಮತಿ ನಗರ ತಲುಪಲಿದೆ.
ರೈಲು ಗಾಡಿ ಸಂಖ್ಯೆ 07390 ಮೇ 14ರಿಂದ ರಿಂದ ಜುಲೈ 02ರವರೆಗೆ ಗೋಮತಿ ನಗರದಿಂದ ರಾತ್ರಿ 8:30ಕ್ಕೆ ಹೊರಟು ಮೂರನೇ ದಿನ ಬೆಳಗಾವಿಗೆ ಮಧ್ಯಾಹ್ನ 3:15ಕ್ಕೆ ಆಗಮಿಸಲಿದೆ.
⦁ ರೈಲು ಸಂಖ್ಯೆ. 07387/07388 ಹುಬ್ಬಳ್ಳಿ - ನಹರ್ಲಗುನ್ - ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ (5 ಟ್ರಿಪ್‌ಗಳು): ಗದಗ, ಹೊಸಪೇಟೆ, ಗುಂತಕಲ್, ಗುಂಟೂರು, ವಿಜಯನಗರಂ, ಭುವನೇಶ್ವರ, ಖುರ್ದಾ ರಸ್ತೆ, ಖರಗ್‌ಪುರ, ನ್ಯೂ ಜಲ್ಪೈಗುರಿ, ಹೊಸ ಬೊಂಗೈಗಾಂವ್, ಹೊಸ ಬೊಂಗೈಗಾಂವ್ ಮೂಲಕ ಸಂಚರಿಸಲಿದೆ.
ರೈಲು ಗಾಡಿ ಸಂಖ್ಯೆ 07387 ಮೇ 08 ರಿಂದ ಜೂನ್ 05ರವರೆಗೆ ಹುಬ್ಬಳ್ಳಿಯಿಂದ ಮಧ್ಯಾಹ್ನ 12:05 ಕ್ಕೆ ಹೊರಟು ನಹರ್ಲಗುನ್ ಅನ್ನು ಮೂರನೇ ದಿನ ರಾತ್ರಿ 11ಕ್ಕೆ ತಲುಪಲಿದೆ.
ರೈಲು ಗಾಡಿ ಸಂಖ್ಯೆ 07388 ಮೇ 11 ರಿಂದ ಜೂನ್ 08ರವರೆಗೆ ನಹರ್ಲಗುನ್ ಅನ್ನು ರಾತ್ರಿ 11ಕ್ಕೆ ನಾಲ್ಕನೇ ದಿನ ಹುಬ್ಬಳ್ಳಿಯನ್ನು ಬೆಳಿಗ್ಗೆ 09ಕ್ಕೆ ತಲುಪಲಿದೆ.
- ರೈಲು ಗಾಡಿ ಸಂಖ್ಯೆ 07391 ಮೇ 06ರ ರಾತ್ರಿ 11ಕ್ಕೆ ಬೆಂಗಳೂರಿನಿಂದ ಹೊರಟು ಮರು ದಿನ ಬೆಳಿಗ್ಗೆ07:55ಕ್ಕೆ ಬೆಂಗಳೂರು, ತುಮಕೂರು, ದಾವಣಗೆರೆ, ಹರಿಹರ, ಹಾವೇರಿ ಮೂಲಕ ಹುಬ್ಬಳ್ಳಿ ತಲುಪಲಿದೆ.
ಇದನ್ನೂ ಓದಿರಿ: Summer: ಬೇಸಿಗೆಯಲ್ಲೂ ಈ ಕೋಳ ಕೂಲ್ ಕೂಲ್, ಕಲ್ಯಾಣಿ ನಿರ್ವಹಣೆಯ ಮಾದರಿ photos
ರೈಲುಗಳ ರದ್ದತಿ
ನಾಗವಂಗಲ - ಅಜ್ಜಂಪುರ ಯಾರ್ಡ್‌ನಲ್ಲಿ ನಡೆಯುತ್ತಿರುವ ಯಾರ್ಡ್ ಮಾರ್ಪಾಡು ಕಾರ್ಯಗಳ ದೃಷ್ಟಿಯಿಂದ ಕೆಲ ರೈಲು ಸೇವೆಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
⦁ ರೈಲು ಸಂಖ್ಯೆ 16214 ಹುಬ್ಬಳ್ಳಿ - ಅರಸೀಕೆರೆ ಎಕ್ಸ್‌ಪ್ರೆಸ್ ಪ್ರಯಾಣವು ಮೇ 10,17,24,31 ಮತ್ತು ಜೂನ್ 21 ರಂದು ರದ್ದಾಗಲಿದೆ. ರೈಲು ಸಂಖ್ಯೆ 16213 ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಪ್ರಯಾಣವು ಮೇ 11,18,25 ಮತ್ತು ಜೂನ್ 01 ಮತ್ತು 22 ರಂದು ರದ್ದಾಗಲಿದೆ.