Khalistan Warns India: ಭಾರತದ ಮೇಲೆ ಹಮಾಸ್ ಮಾದರಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಖಲಿಸ್ತಾನಿ ಉಗ್ರ ಪನ್ನುನ್
ಕನ್ನಡ ಸುದ್ದಿ  /  ಕರ್ನಾಟಕ  /  Khalistan Warns India: ಭಾರತದ ಮೇಲೆ ಹಮಾಸ್ ಮಾದರಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಖಲಿಸ್ತಾನಿ ಉಗ್ರ ಪನ್ನುನ್

Khalistan Warns India: ಭಾರತದ ಮೇಲೆ ಹಮಾಸ್ ಮಾದರಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಖಲಿಸ್ತಾನಿ ಉಗ್ರ ಪನ್ನುನ್

ಇಸ್ರೇಲ್ - ಪ್ಯಾಲೆಸ್ಟೈನ್ ಸಂಘರ್ಷದಿಂದ ಭಾರತ ಪಾಠ ಕಲಿಯಬೇಕು. ಪಂಜಾಬ್‌ಗೆ ಸ್ವಾತಂತ್ರ್ಯ ಸಿಕ್ಕುವ ದಿನ ದೂರ ಇಲ್ಲ. ಭಾರತದ ಮೇಲೆ ಹಮಾಸ್ ಮಾದರಿ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್ ಎಚ್ಚರಿಸಿದ ವಿಡಿಯೋ ವೈರಲ್ ಆಗಿದೆ.

ನಿಷೇಧಿತ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್
ನಿಷೇಧಿತ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್

ನವದೆಹಲಿ: ಹಮಾಸ್‌ ಮಾದರಿ ದಾಳಿ ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಚ್ಚರಿಸುವ ಮೂಲಕ ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್‌ಜೆ) ನ ಖಲಿಸ್ತಾನ್ ಪರ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ಗಮನಸೆಳೆದಿದ್ದಾರೆ.

ಹಮಾಸ್ ದಾಳಿಯಂತಹ ಭಾರತಕ್ಕೆ ಎಚ್ಚರಿಕೆ ನೀಡುವ ಮತ್ತೊಂದು ವೀಡಿಯೊವನ್ನು ಆತ ಶೇರ್ ಮಾಡಿದ್ದು, ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧದಿಂದ ಪಾಠ ಕಲಿಯುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪನ್ನುನ್ ಎಚ್ಚರಿಸಿದ್ದಾನೆ.

ಪಂಜಾಬ್ ಬಿಟ್ಟುಕೊಡಿ, ಇಲ್ಲದೇ ಇದ್ದರೆ ಹಮಾಸ್ ಮಾದರಿ ದಾಳಿ ಎಂದ ಪನ್ನುನ್‌

ಹಮಾಸ್‌ ಮಾದರಿ ದಾಳಿ ನಡೆಸುವುದಾಗಿ ಎಚ್ಚರಿಸಿರುವ ಗುರುಪತ್‌ವಂತ್ ಸಿಂಗ್ ಪನ್ನುನ್‌, ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕಾರ ಘೋಷಿತ ಭಯೋತ್ಪಾದಕ. ಗಾಜಾ ಪಟ್ಟಿಯಲ್ಲಿರುವ ಹಮಾಸ್‌ ಉಗ್ರರು ಇಸ್ರೇಲ್‌ನ ಹೈಟೆಕ್ ರಕ್ಷಣಾ ತಂತ್ರಜ್ಞಾನದ ಕೋಟೆಯನ್ನು ಮುರಿದು ಬಹುಸ್ತರದ ಅನಿರೀಕ್ಷಿತ ದಾಳಿ ನಡೆಸುವಲ್ಲಿ ಯಶಸ್ವಿಯಾದ ಬಳಿಕ ಪನ್ನುನ್‌ ಈ ಎಚ್ಚರಿಕೆ ನೀಡಿದ್ದಾನೆ.

ವಿಡಿಯೋದಲ್ಲಿ ಪನ್ನುನ್ "ನರೇಂದ್ರ ಮೋದಿ, ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಿಂದ ಕಲಿಯಿರಿ. ಪಂಜಾಬ್ ಅನ್ನು ಬಿಟ್ಟುಕೊಡದೇ ಇದ್ದರೆ, ಭಾರತದ ವಿರುದ್ಧ ಪಂಜಾಬ್‌ನಿಂದ ಪ್ಯಾಲೆಸ್ಟೈನ್‌ ತನಕ ಜನ ಪ್ರತಿಕ್ರಿಯಿಸಲಿದ್ದಾರೆ. ಹಿಂಸಾಚಾರವು ನಡೆಯಲಿದೆ. ಭಾರತವು ಪಂಜಾಬನ್ನು ಆಕ್ರಮಿಸಿಕೊಳ್ಳಲು ಹೋದರೆ, ಇದೇ ರೀತಿ ಪ್ರತಿಕ್ರಿಯೆ ಇರುತ್ತದೆ. ಮೋದಿ ಮತ್ತು ಭಾರತ, ಇದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ. ಎಸ್‌ಎಫ್‌ಜೆಗೆ ಮತದಾನದಲ್ಲಿ ನಂಬಿಕೆ. ಎಸ್‌ಎಫ್‌ಜೆಗೆ ಮತವನ್ನು ನಂಬುತ್ತದೆ. ಪಂಜಾಬ್‌ ಸ್ವತಂತ್ರ ಪಡೆಯವುದು ಸಮೀಪದಲ್ಲಿ ಇದೆ ಎಂದು ಹೇಳಿದ್ದಾನೆ.

ಕೆನಡಾದಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನ್ ಪರ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಎಸ್‌ಎಫ್‌ಜೆ "ಸೇಡು ತೀರಿಸಿಕೊಳ್ಳುತ್ತದೆ" ಎಂದು ಇದೇ ವಿಡಿಯೋ ಸಂದೇಶದಲ್ಲಿ ಹೇಳಲಾಗಿದೆ.

ಬ್ಯಾಲಟ್‌ ಅಥವಾ ಬುಲೆಟ್ ಆಯ್ಕೆ ಭಾರತಕ್ಕೆ ಬಿಟ್ಟದ್ದು ಎಂದು ಪನ್ನುನ್ ಘೋಷಿಸಿರುವ ದೃಶ್ಯ ವಿಡಿಯೋದಲ್ಲಿದೆ.

ಇಸ್ರೇಲ್ - ಹಮಾಸ್ ಸಮರ ತೀವ್ರ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಗಾಜಾ ಪಟ್ಟಿಯ ಹಮಾಸ್ ಹೋರಾಟಗಾರರ ನಡುವಿನ ಯುದ್ಧವು 2,200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ, ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಪೂರ್ವ ಜೆರುಸಲೇಂನಲ್ಲಿರುವ ಮಸೀದಿಯಲ್ಲಿ ಈ ವರ್ಷ ಏಪ್ರಿಲ್‌ನಲ್ಲಿ ಘರ್ಷಣೆ ನಡೆದಿತ್ತು. ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ವಿರುದ್ಧ ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್ ಎಂಬ ಮಿಲಿಟರಿ ಕಾರ್ಯಾಚರಣೆ ಇದು. ದಶಕಗಳಿಂದ ಎದುರಿಸುತ್ತಿರುವ ದೌರ್ಜನ್ಯಗಳಿಗೆ ಪ್ಯಾಲೆಸ್ಟೈನ್ ಈ ಕಾರ್ಯಾಚರಣೆ ಮೂಲಕ ಪ್ರತಿಕ್ರಿಯಿಸಿದೆ. ಗಾಜಾ ಪಟ್ಟಿ, ಪೂರ್ವ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯಲ್ಲಿ ನಡೆಸುತ್ತಿರುವ ದೌರ್ಜನ್ಯಗಳನ್ನು ಅಂತರಾಷ್ಟ್ರೀಯ ಸಮುದಾಯವು ನಿಲ್ಲಿಸಬೇಕು ಎಂದು ಹಮಾಸ್ ವಕ್ತಾರ ಖಲೀದ್ ಕಡೋಮಿ ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.

ವಿವರ ಓದಿಗೆ | ಇಸ್ರೇಲ್-ಪ್ಯಾಲೆಸ್ಟೈನ್‌ ಸಮರ; ಈಗೇಕೆ ಸಂಘರ್ಷ? ಏನಿದು ವಿದ್ಯಮಾನ? ಇಲ್ಲಿದೆ ಸಮಗ್ರ ಮಾಹಿತಿ

ಕಳೆದ ತಿಂಗಳ ಆರಂಭದಲ್ಲಿ, ಗುರುಪತ್‌ವಂತ್ ಪನ್ನುನ್, ಕೆನಡಾ ತೊರೆಯುವಂತೆ ಭಾರತೀಯರನ್ನು ಎಚ್ಚರಿಸುವ ವೀಡಿಯೊವನ್ನು ಪ್ರಕಟಿಸಿದ್ದರು. “ನೀವು ಭಾರತವನ್ನು ಬೆಂಬಲಿಸುವುದು ಮಾತ್ರವಲ್ಲದೆ, ಖಲಿಸ್ತಾನ್ ಪರ ಸಿಖ್ಖರ ಭಾಷಣ ಮತ್ತು ಅಭಿವ್ಯಕ್ತಿಯನ್ನು ನಿಗ್ರಹಿಸುವುದನ್ನು ಸಹ ನೀವು ಬೆಂಬಲಿಸುತ್ತಿದ್ದೀರಿ. ಭಾರತದ ಹಿಂದುಗಳೇ ಕೆನಡಾ ತೊರೆಯಿರಿ; ಭಾರತಕ್ಕೆ ಹೋಗಿ" ಎಂದು ಎಚ್ಚರಿಸಿದ್ದರು.

ಗುರುಪತ್‌ವಂತ್ ಸಿಂಗ್ ಪನ್ನುನ್ ಖಲಿಸ್ತಾನ್ ಚಳವಳಿಯ ಭಾಗವಾಗಿದ್ದು ಅದು ಭಾರತದಿಂದ ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರವನ್ನು ರೂಪಿಸಲು ಪ್ರಯತ್ನಿಸುತ್ತದೆ. ದಶಕಗಳ ಕಾಲ, ಭಾರತದಲ್ಲಿ ಈ ಚಳವಳಿ ರಕ್ತಸಿಕ್ತ ದಂಗೆಯನ್ನು ನಡೆಸಿತು. ಅದು ಅಂತಿಮವಾಗಿ 1990 ರ ದಶಕದಲ್ಲಿ ಕಡಿಮೆಯಾಯಿತು. 1990 ರ ದಶಕದಲ್ಲಿ ಭಾರತದಲ್ಲಿ ಬಂಡಾಯವು ಕಡಿಮೆಯಾದಾಗ, ಆಂದೋಲನವು ವಿದೇಶಕ್ಕೆ ಸ್ಥಳಾಂತರವಾಗಿ ಅಲ್ಲಿ ಬಲವಾಗುತ್ತ ಸಾಗಿದೆ.

Whats_app_banner