Indian Railways: ತುಮಕೂರಿನ ಸಂಪಿಗೆ ರೋಡ್, ತಿಪಟೂರು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳ ಹೆಚ್ಚುವರಿ ನಿಲುಗಡೆಗೆ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ತುಮಕೂರಿನ ಸಂಪಿಗೆ ರೋಡ್, ತಿಪಟೂರು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳ ಹೆಚ್ಚುವರಿ ನಿಲುಗಡೆಗೆ ಅವಕಾಶ

Indian Railways: ತುಮಕೂರಿನ ಸಂಪಿಗೆ ರೋಡ್, ತಿಪಟೂರು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳ ಹೆಚ್ಚುವರಿ ನಿಲುಗಡೆಗೆ ಅವಕಾಶ

Indian Railways: ಭಾರತೀಯ ರೈಲ್ವೆಯು ತುಮಕೂರಿನ ಸಂಪಿಗೆ ರೋಡ್‌ ಹಾಗೂ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಹಲವು ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ.

ತುಮಕೂರಿನ ತಿಪಟೂರು ಹಾಗೂ ಸಂಪಿಗೆ ರೋಡ್‌ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ನಿಲುಗಡೆಯಾಗಲಿವೆ.
ತುಮಕೂರಿನ ತಿಪಟೂರು ಹಾಗೂ ಸಂಪಿಗೆ ರೋಡ್‌ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ನಿಲುಗಡೆಯಾಗಲಿವೆ.

ಬೆಂಗಳೂರು: ಯಶವಂತಪುರ ಮತ್ತು ಚಿಕ್ಕಮಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 16240/16239 ಅನ್ನು ಸಂಪಿಗೆ ರೋಡ್ ನಿಲ್ದಾಣದಲ್ಲಿ ಮತ್ತು ಕೆಎಸ್ಆರ್ ಬೆಂಗಳೂರು ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಡುವೆ ಚಲಿಸುವ ರೈಲು ಸಂಖ್ಯೆ 12079/12080 ಮತ್ತು ಕೆಎಸ್ಆರ್ ಬೆಂಗಳೂರು ಮತ್ತು ಶಿವಮೊಗ್ಗ ಟೌನ್ ನಡುವೆ ಚಲಿಸುವ ರೈಲು ಸಂಖ್ಯೆ 12089/12090 ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳನ್ನು ತಿಪಟೂರು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಅವಕಾಶ ಕಲ್ಪಿಸಲು ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಈ ಹೆಚ್ಚುವರಿ ನಿಲುಗಡೆಯು ಸಂಪಿಗೆ ರೋಡ್ ಮತ್ತು ತಿಪಟೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮತ್ತು ಪ್ರವೇಶವನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಹುಬ್ಬಳ್ಳಿ ನೈಋತ್ಯ ರೈಲ್ವೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಅದರಂತೆ, ಪ್ರಾಯೋಗಿಕ ನಿಲುಗಡೆಯ ಸಮಯಗಳು ಹೀಗಿವೆ.

1. 2024ರ ನವೆಂಬರ್ 15 ರಿಂದ ಫೆಬ್ರವರಿ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ ಸಂಜೆ 05:04 ಕ್ಕೆ ಸಂಪಿಗೆ ರೋಡ್ ನಿಲ್ದಾಣವನ್ನು ತಲುಪಿ ಸಂಜೆ 05:05 ಕ್ಕೆ ಹೊರಡಲಿದೆ.

2. 2024ರ ನವೆಂಬರ್ 16 ರಿಂದ ಫೆಬ್ರವರಿ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌ ಬೆಳಿಗ್ಗೆ 11:13 ಕ್ಕೆ ಸಂಪಿಗೆ ರೋಡ್ ನಿಲ್ದಾಣವನ್ನು ತಲುಪಿ ಬೆಳಿಗ್ಗೆ 11:14 ಕ್ಕೆ ಹೊರಡಲಿದೆ.

3. 2024ರ ನವೆಂಬರ್ 16 ರಿಂದ ಮೇ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12079 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್‌ ಬೆಳಿಗ್ಗೆ 07:49 ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ಬೆಳಿಗ್ಗೆ 07:50 ಕ್ಕೆ ಹೊರಡಲಿದೆ.

4. 2024ರ ನವೆಂಬರ್ 15 ರಿಂದ ಮೇ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12080 ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌ ಸಂಜೆ 06:34 ಕ್ಕೆ ತಿಪಟೂರು ನಿಲ್ದಾಣಕ್ಕೆ ಬಂದು ಸಂಜೆ 06:35 ಕ್ಕೆ ಹೊರಡಲಿದೆ.

5. 2024ರ ನವೆಂಬರ್ 15 ರಿಂದ ಮೇ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12089 ಕೆಎಸ್ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರಾತ್ರಿ 07:09 ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ಸಂಜೆ 07:10 ಕ್ಕೆ ಹೊರಡಲಿದೆ.

6. 2024ರ ನವೆಂಬರ್ 16 ರಿಂದ ಮೇ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ - ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌ ಬೆಳಿಗ್ಗೆ 07:14 ಕ್ಕೆ ತಿಪಟೂರು ನಿಲ್ದಾಣಕ್ಕೆ ಬಂದು ಬೆಳಿಗ್ಗೆ 07:15 ಕ್ಕೆ ಹೊರಡಲಿದೆ.

 

Whats_app_banner