ಕರ್ನಾಟಕದಲ್ಲಿ ಸಂಚರಿಸುವ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿವರ ತಿಳಿಯಿರಿ, ರೈಲು ಪ್ರಯಾಣಿಕರಿಗೆ ಉಪಯುಕ್ತ ಮಾಹಿತಿ
ಕನ್ನಡ ರಾಜ್ಯೋತ್ಸವ (karnataka rajyotsava 2024)ದ ಶುಭ ಸಮಯದಲ್ಲಿ ಎಚ್‌ಟಿ ಕನ್ನಡವು ಕರ್ನಾಟಕದಲ್ಲಿ ಸಂಚರಿಸುವ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿವರವನ್ನು ಇಲ್ಲಿ ನೀಡಿದೆ. ವಂದೇ ಭಾರತ್‌ನಲ್ಲಿ ಪ್ರಯಾಣಿಸಬೇಕೆಂದುಕೊಳ್ಳುವವರಿಗೆ ಟ್ರೇನ್ ಸಂಖ್ಯೆಯನ್ನೂ ನೀಡಲಾಗಿದೆ.
Vande Bharat Trains List Karnataka: ಕನ್ನಡ ರಾಜ್ಯೋತ್ಸವ (Karnataka rajyotsava 2024) ಕರ್ನಾಟಕದ ಜನತೆಗೆ ಸಂಭ್ರಮದ ಕ್ಷಣ. ಈ ಸಂದರ್ಭದಲ್ಲಿ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಪ್ರಮುಖ 10 ಅಂಶಗಳ ವಿವರವನ್ನೂ ಓದುಗರಿಗೆ ನೀಡುತ್ತಿದೆ. ಈ ಲೇಖನದಲ್ಲಿ ಕರ್ನಾಟಕದಲ್ಲಿ ಸಂಚರಿಸುವ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ರೈಲು ಮಾರ್ಗಗಳ ಕುರಿತು ತಿಳಿದುಕೊಳ್ಳೋಣ. ಮೇಕ್ ಇನ್ ಇಂಡಿಯಾ ಭಾಗವಾಗಿ ಭಾರತ ಸರಕಾರವು ಆರಂಭಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯೋಜನೆಯಿಂದ ಹಲವು ರೈಲುಗಳು ದಿನನಿತ್ಯ ಭಾರತದ ವಿವಿಧೆಡೆ ಸಂಚರಿಸುತ್ತವೆ. ಕನ್ನಡ ರಾಜ್ಯೋತ್ಸವ 2024ರ ಸಂದರ್ಭದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕರ್ನಾಟಕದಲ್ಲಿ ಯಾವ ಮಾರ್ಗದಲ್ಲಿ ಸಂಚರಿಸುತ್ತವೆ? ಯಾವೆಲ್ಲ ರೈಲುಗಳು ಸಂಚರಿಸುತ್ತವೆ ಎಂದು ರೈಲು ಸಂಖ್ಯೆಗಳ ಜತೆಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಏನಿದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು?
ವಂದೇ ಭಾರತ್ ರೈಲುಗಳು ಭಾರತ ಹೈಸ್ಪೀಡ್(ಅರೆ ಹೈಸ್ಪೀಡ್ ಎನ್ನಬಹುದು) ರೈಲು ಸೇವೆಯಾಗಿದೆ. ಇದನ್ನು ಟ್ರೈನ್ 18 ಮತ್ತು ಟ್ರೈನ್ 20 ಎಂದೂ ಕರೆಯುತ್ತಾರೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಸದ್ಯ ಇದು ಭಾರತದ ಅತಿವೇಗದ ರೈಲು ಸೇವೆಯಾಗಿದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗುತ್ತದೆ. ಈ ರೈಲಿನಲ್ಲಿ ಕವಚ್ ಎಂಬ ಭದ್ರತಾ ವ್ಯವಸ್ಥೆಯಿದೆ. ಸ್ವಯಂಚಾಲಿತ ಬಾಗಿಲುಗಳಿವೆ. ಒರಗಿಕೊಡು ಕುಳಿತುಕೊಳ್ಳಬಹುದಾದ ತಿರುಗುವ ಆಸನಗಳಿವೆ. ಸೀಟ್‌ಗಳಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳ ಇವೆ. ಬಾಟಲ್ ಕೂಲರ್, ಹಾಟ್ ಕೇಸ್, ಡೀಪ್ ಫ್ರೀಜರ್, ವಾಟರ್ ಬಾಯ್ಲರ್‌ನಂತಹ ಸೌಕರ್ಯಗಳನ್ನೂ ಹೊಂದಿವೆ. ವಿಶೇಷ ಚೇತನರಿಗೆ ಅನುಕೂಲಕವಾದ ಟಾಯ್ಲೆಟ್‌ಗಳಿವೆ. ಎಲ್ಲಾ ಕೋಚ್‌ಗಳು ಭದ್ರತಾ ಕ್ಯಾಮೆರ ಹೊಂದಿವೆ. ಸ್ಮೋಕ್ ಅಲಾರಂ, ಸ್ಮೆಲ್ ಡಿಟೆಕ್ಟರ್ ಇತ್ಯಾದಿಗಳೂ ಇವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಮ ದೂರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದೆ. ಇದು ಕಾಯ್ದಿರಿಸಿದ, ಹವಾನಿಯಂತ್ರಿತ ಚೇರ್ ಕಾರ್ ಸೇವೆ. ಈ ಸೇವೆ 209ರ ಫೆಬ್ರವರಿ 15ರಂದು ಆರಂಭವಾಯತು.
ಕರ್ನಾಟಕದಲ್ಲಿ ಸಂಚರಿಸುವ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು
ಕ್ರಮಸಂಖ್ಯೆ | ರೈಲು ಮತ್ತು ಮಾರ್ಗದ ಹೆಸರು | ರೈಲು ಸಂಖ್ಯೆ |
---|---|---|
1 | ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ | 20607/20608 |
2 | ಕೆಎಸ್‌ಆರ್ ಬೆಂಗಳೂರು-ಧಾರವಾಡ | 20661/20662 |
3 | ಯಶವಂತಪುರ-ಕಾಚಿಗುಡ | 20703/20704 |
4 | ಮಂಗಳೂರು ಸೆಂಟ್ರಲ್-ತಿರುವಂತಪುರ | 20631/20632 |
5 | ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು | 20642/20641 |
6 | ಮಂಗಳೂರು ಸೆಂಟ್ರಲ್-ಮಡಂಗಾವ್ | 20646/20645 |
7 | ಕಲಬುರಗಿ (ಗುಲ್ಬರ್ಗ)-ಎಸ್‌ಎಂವಿಟಿ | 22231/22232 |
8 | ಎಸ್‌ಎಂವಿಟಿ ಬೆಂಗಳೂರು-ಎರ್ನಾಕುಲಂ | 060021/06002 |
9 | ಮಧುರೈ-ಬೆಂಗಳೂರು | 20671/20672 |
10 | ಪುಣೆ ಬೆಳಗಾವಿ ಹುಬ್ಬಳ್ಳಿ | 20669/20670 |
ಕರ್ನಾಟಕದಲ್ಲಿ ಸದ್ಯ ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್, ಕೆಎಸ್‌ಆರ್ ಬೆಂಗಳೂರು-ಧಾರವಾಡ, ಯಶವಂತಪುರ-ಕಾಚಿಗುಡ , ಮಂಗಳೂರು ಸೆಂಟ್ರಲ್-ತಿರುವಂತಪುರ ,ಮಂಗಳೂರು ಸೆಂಟ್ರಲ್-ಮಡಂಗಾವ್, ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು, ಕಲಬುರಗಿ (ಗುಲ್ಬರ್ಗ)-ಎಸ್‌ಎಂವಿಟಿ, ಎಸ್‌ಎಂವಿಟಿ ಬೆಂಗಳೂರು-ಎರ್ನಾಕುಲಂ, ಮಧುರೈ-ಬೆಂಗಳೂರು, ಪುಣೆ ಬೆಳಗಾವಿ ಹುಬ್ಬಳ್ಳಿ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ.