ಕನ್ನಡ ಸುದ್ದಿ  /  ಕರ್ನಾಟಕ  /  Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಮೇ ತಿಂಗಳಿನಲ್ಲಿ ಬೆಂಗಳೂರು ಹಾಗೂ ಕರ್ನಾಟಕದಿಂದ ಹೊರಡುವ, ಬರುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರಿನ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರಿನ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ಬೇಸಿಗೆಯ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಬಿಲಾಸ್‌ಪುರ ನಡುವೆ ವಿಶೇಷ ರೈಲು ಸಂಚಾರ ವ್ಯವಸ್ಥೆಯನ್ನು ನೈರುತ್ಯ ರೈಲ್ವೆ ವಲಯವು ಮಾಡಿದೆ. ಇದಲ್ಲದೇ ಮುಂದಿನ ಹತ್ತು ದಿನಗಳ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವೂ ಆಗಲಿದೆ. ಕೆಲವು ರೈಲುಗಳು ನಿಧಾನವಾಗಿ ಹೊರಡಲಿದ್ದು,ಮತ್ತೆ ಕೆಲ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲುಗಳ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಬಿಲಾಸ್‌ಪುರ ರೈಲು

ಹೆಚ್ಚುವರಿ ರಶ್‌ ಇರುವ ಕಾರಣದಿಂದ 08291/08292 ಬಿಲಾಸ್‌ಪುರ-ಯಶವಂತಪುರ-ಬಿಲಾಸ್‌ಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಒಟ್ಟು 20 ಟ್ರಿಪ್‌ ಸಂಚರಿಸಲಿದೆ.

08291-ಬಿಲಾಸ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ ಶನಿವಾರ ಹಾಗೂ ಮಂಗಳವಾರ ಏ.30 ಮೇ 04,07,11,14,18,21,25,28 ರಂದು ಹಾಗೂ 08292-ಯಶವಂತಪುರ - ಬಿಲಾಸ್‌ಪುರ ಎಕ್ಸ್‌ಪ್ರೆಸ್ ಸೋಮವಾರ, ಗುರುವಾರಗಳಂದು ಮೇ 02,06,09,13,16,20,23,27,30ರಂದು ಸಂಚರಿಸಲಿದೆ. ಬಿಲಾಸ್‌ಪುರದಿಂದ ರಾತ್ರಿ 8 ಗಂಟೆಗೆ ಹೊರಟು ಮೂರನೇ ದಿನ ರಾತ್ರಿ 12.30 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 08292 ಯಶವಂತಪುರದಿಂದ ಬೆಳಿಗ್ಗೆ 04:30 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 09 ಗಂಟೆಗೆ ಬಿಲಾಸ್ಪುರವನ್ನು ತಲುಪುತ್ತದೆ.

ರೈಲು ಬಿಲಾಸ್‌ಪುರ್, ಭಟಪರಾ, ರಾಯ್‌ಪುರ, ದುರ್ಗ್, ರಾಜ್-ನಂದಗಾಂವ್, ಡೊಂಗರ್‌ಗಢ, ಗೊಂಡಿಯಾ, ಬಲ್ಹರ್ಷಾ, ಸಿರ್ಪುರ್ ಕಾಘಜ್‌ನಗರ, ಮಂಚಿರ್ಯಾಲ್, ಪೆದ್ದಪಲ್ಲಿ, ಕಾಜಿಪೇಟ್, ಸಿಕಂದರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್, ರಾಯಚೂರು, ಅದೋನಿ, ಗುಂಟಕಲ್, ಯೆಸ್ವರಕರಾಮುಂತಕಲ್ ಮೂಲಕ ಸಂಚರಿಸಲಿದೆ.

ವಿಶೇಷ ರೈಲುಗಳು 1 ಎಸಿ-2 ಟೈರ್, 2 ಎಸಿ-3 ಟೈರ್, 10 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಸೇರಿದಂತೆ ಒಟ್ಟು 21 ಕೋಚ್‌ಗಳನ್ನು ಒಳಗೊಂಡಿರಲಿವೆ.

ಭಾಗಶಃ ರದ್ದತಿ

ಬೆಂಗಳೂರು ವಿಭಾಗದ ವರದಾಪುರ ನಿಲ್ದಾಣದಲ್ಲಿ ಹೆಚ್ಚುವರಿ ಲೂಪ್ ಲೈನ್ ಅನ್ನು ಒದಗಿಸುವ ಸಲುವಾಗಿ ಇಂಟರ್‌ಲಾಕ್ ಮಾಡದ ಕೆಲಸದಿಂದಾಗಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

⦁ ಗಾಡಿ ಸಂಖ್ಯೆ 16520 - ಕೆಎಸ್‌ ಆರ್‌ಬೆಂಗಳೂರು- ಜೋಲಾರ್‌ಪೇಟ್ಟೈ ಮೆಮು ರೈಲು ಮೇ 09ರಂದು ಬಂಗಾರಪೇಟೆ - ಜೋಲಾರ್‌ಪೇಟೆ ನಡುವೆ ಮಾತ್ರ ಸಂಚರಿಸಲಿದೆ.

ರೈಲುಗಳ ತಿರುವು

ಗಾಡಿ ಸಂಖ್ಯೆ 22677 ಯಶವಂತಪುರ-ಕೊಚುವೇಲಿ ರೈಲು ಮೇ 09ರಂದು ಯಶವಂತಪುರ, ಬಾಣಸವಾಡಿ, ಹೊಸೂರು, ಧರ್ಮಪುರಿ, ಓಮಲೂರು ಮತ್ತು ಸೇಲಂ. ಕೃಷ್ಣರಾಜಪುರಂ

ಗಾಡಿ ಸಂಖ್ಯೆ 16315 ಮೈಸೂರು-ಕೊಚುವೇಲಿ ಬೆಂಗಳೂರು ಕ್ಯಾಂಟ್, ಬೈಯ್ಯಪ್ಪನಹಳ್ಳಿ ಹೊಸೂರು, ಧರ್ಮಪುರಿ, ಓಮಲೂರ್, & ಸೇಲಂ ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಮತ್ತು ತಿರುಪತ್ತೂರ್‌ ನಲ್ಲಿ ತಿರುವು ಇರಲಿದೆ.

ರೈಲುಗಳ ಸಮಯ ಮರುನಿಗದಿಗೊಳಿಸುವಿಕೆ

ರೈಲು ಸಂಖ್ಯೆಗಳು ಪ್ರಾರಂಭವಾಗುವ ಪ್ರಯಾಣವನ್ನು ಈ ದಿನಾಂಕದಿಂದ ಮರು ನಿಗದಿಪಡಿಸಲಾಗುವುದು

⦁ 03252 ಬೆಂಗಳೂರು-ದಾನಪುರ ಮೇ 01ರಂದು 100 ನಿಮಿಷಗಳು

⦁ 12509 ಬೆಂಗಳೂರು-ಗುವಹಾಟಿ ಮೇ 01, 02. ಮತ್ತು 03ರಂದು 70 ನಿಮಿಷಗಳು

⦁ 12658 ಬೆಂಗಳೂರು- ಚೆನ್ನೈ ಸೆಂಟ್ರಲ್ ಮೇ 01 ಮತ್ತು 06ರಂದು 180 ನಿಮಿಷಗಳು

⦁ 15227 ಬೆಂಗಳೂರು-ಮುಜಾಫರ್‌ಪುರ ಮೇ 02ರಂದು 60 ನಿಮಿಷಗಳು

⦁ 03260 ಬೆಂಗಳೂರು - ಡಣಾಪುರ ಮೇ 02ರಂದು 90 ನಿಮಿಷಗಳು

⦁ 12658 ಬೆಂಗಳೂರು- ಚೆನ್ನೈ ಸೆಂಟ್ರಲ್ ಮೇ 02 ಮತ್ತು 03ರಂದು 120 ನಿಮಿಷಗಳು

⦁ 03246 ಬೆಂಗಳೂರು - ಡಣಾಪುರ ಮೇ 03ರಂದು 90 ನಿಮಿಷಗಳು

⦁ 12291 ಯಶವಂತಪುರ-ಡಾ.ಎಂಜಿಆರ್ ಚೆನ್ನೈ ಕೇಂದ್ರ ಮೇ 03ರಂದು 90 ನಿಮಿಷಗಳು

⦁ 16565 ಯಶವಂತಪುರ-ಮಂಗಳೂರು ಸೆಂಟ್ರಲ್ ಮೇ 05ರಂದು 100 ನಿಮಿಷಗಳು

⦁ 18638 ಬೆಂಗಳೂರು-ಹಾಟಿಯಾ ಮೇ 07ರಂದು 75 ನಿಮಿಷಗಳು

⦁ 12658 ಕೆಎಸ್ಆರ್ ಬೆಂಗಳೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಮೇ 07ರಂದು 60 ನಿಮಿಷಗಳು

⦁ 12684 ಬೆಂಗಳೂರು-ಎರ್ನಾಕುಲಂ ಮೇ 09ರಂದು 30 ನಿಮಿಷಗಳು

⦁ 22834 ಬೆಂಗಳೂರು - ಭುವನೇಶ್ವರ ಮೇ 09ರಂದು 170 ನಿಮಿಷಗಳು

ಈ ನಿಲ್ದಾಣದಿಂದ ಕೆಲ ರೈಲುಗಳು ತಡವಾಗಿ ಹೊರಡಲಿವೆ.

⦁ 12835 ಹಟಿಯಾ–ಎಸ್‌ಎಂವಿಟಿ ಬೆಂಗಳೂರು ಏ. 30ರಂದು 30 ನಿಮಿಷಗಳು

⦁ 12648 ಹಜರತ್ ನಿಜಾಮುದ್ದೀನ್-ಕೊಯಮತ್ತೂರು ಮೇ 01ರಂದು 90 ನಿಮಿಷಗಳು

⦁ 22681 ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್ ಮೇ 01ರಂದು 90 ನಿಮಿಷಗಳು

⦁ 16022 ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಮೇ 01ರಂದು 80 ನಿಮಿಷಗಳು

⦁ 16022 ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಮೇ 02 ಮತ್ತು 03ರಂದು 60 ನಿಮಿಷಗಳು

⦁ 12778 ಕೊಚುವೇಲಿ – ಹುಬ್ಬಳ್ಳಿ ಮೇ 02ರಂದು 30 ನಿಮಿಷಗಳು

⦁ 16021 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಮೇ 02, 03 ರಂದು 60 ನಿಮಿಷಗಳು

⦁ 16220 ತಿರುಪತಿ-ಚಾಮರಾಜನಗರ ಮೇ 02, 03 ಮತ್ತು 05 60 ನಿಮಿಷಗಳು

⦁ 22678 ಕೊಚುವೇಲಿ – ಯಶವಂತಪುರ ಮೇ 03ರಂದು 60 ನಿಮಿಷಗಳು

⦁ 18637 ಹಟಿಯಾ- ಬೆಂಗಳೂರು ಮೇ 04ರಂದು 100 ನಿಮಿಷಗಳು

⦁ 12683 ಎರ್ನಾಕುಲಂ- ಬೆಂಗಳೂರು ಮೇ 05ರಂದು 60 ನಿಮಿಷಗಳು

⦁ 16021 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಮೇ 05 ರಂದು 90 ನಿಮಿಷಗಳು

⦁ 12657 ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ಮೇ 05ರಂದು 30 ನಿಮಿಷಗಳು

⦁ 11005 ದಾದರ್-ಪುದುಚೇರಿ ಮೇ 05 ರಂದು 120 ನಿಮಿಷಗಳು

⦁ 17315 ವಾಸ್ಕೋ ಡ ಗಾಮಾ - ವೆಲಂಕಣಿ ಮೇ 06. ರಂದು 120 ನಿಮಿಷಗಳು

⦁ 16022 ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಮೇ 06 ರಂದು 120 ನಿಮಿಷಗಳು

⦁ 11005 ದಾದರ್-ಪುದುಚೇರಿ ಮೇ 06ರಂದು 60 ನಿಮಿಷಗಳು

⦁ 16021 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಮೇ 07ರಂದು 45 ನಿಮಿಷಗಳು

⦁ 12504 ಅಗರ್ತಲಾ - ಬೆಂಗಳೂರು ಮೇ 07ರಂದು 100 ನಿಮಿಷಗಳು

⦁ 16220 ತಿರುಪತಿ-ಚಾಮರಾಜನಗರ ಮೇ 07ರಂದು 30 ನಿಮಿಷಗಳು

⦁ 12607 ಎಂಜಿಆರ್ ಚೆನ್ನೈ ಸೆಂಟ್ರಲ್ - ಬೆಂಗಳೂರು ಮೇ 09ರಂದು 40 ನಿಮಿಷಗಳು

⦁ 12609 ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಮೇ 09ರಂದು 150 ನಿಮಿಷಗಳು.

IPL_Entry_Point