UNESCO World Heritage Site: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರುವುದೇ ಬೇಳೂರು, ಹಳೆಬೀಡು ಮತ್ತು ಸೋಮನಾಥಪುರ ಚೆನ್ನಕೇಶವ ದೇಗುಲ
ಕನ್ನಡ ಸುದ್ದಿ  /  ಕರ್ನಾಟಕ  /  Unesco World Heritage Site: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರುವುದೇ ಬೇಳೂರು, ಹಳೆಬೀಡು ಮತ್ತು ಸೋಮನಾಥಪುರ ಚೆನ್ನಕೇಶವ ದೇಗುಲ

UNESCO World Heritage Site: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರುವುದೇ ಬೇಳೂರು, ಹಳೆಬೀಡು ಮತ್ತು ಸೋಮನಾಥಪುರ ಚೆನ್ನಕೇಶವ ದೇಗುಲ

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ಚೆನ್ನಕೇಶವ ದೇಗುಲಕ್ಕೆ ಯುನೆಸ್ಕೊ ತಜ್ಞರ ಭೇಟಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ತಮ್ಮ ವರದಿಗಳನ್ನು ಯುನೆಸ್ಕೊಗೆ ಸಲ್ಲಿಸಲಿದ್ದಾರೆ. 2022-23ನೇ ಸಾಲಿಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಈ ಮೂರು ತಾಣಗಳು ಸೇರುವ ನಿರೀಕ್ಷೆಯಿದೆ.

<p>UNESCO World Heritage Site: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರುವುದೇ ಬೇಳೂರು, ಹಳೆಬೀಡು ಮತ್ತು ಸೋಮನಾಥಪುರ ಚೆನ್ನಕೇಶವ ದೇಗುಲ?</p>
UNESCO World Heritage Site: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರುವುದೇ ಬೇಳೂರು, ಹಳೆಬೀಡು ಮತ್ತು ಸೋಮನಾಥಪುರ ಚೆನ್ನಕೇಶವ ದೇಗುಲ? (photo: wikipedia)

ಬೆಂಗಳೂರು: ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ಚೆನ್ನಕೇಶವ ದೇಗುಲಕ್ಕೆ ಯುನೆಸ್ಕೊ ತಜ್ಞರ ಭೇಟಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ತಮ್ಮ ವರದಿಗಳನ್ನು ಯುನೆಸ್ಕೊಗೆ ಸಲ್ಲಿಸಲಿದ್ದಾರೆ. 2022-23ನೇ ಸಾಲಿಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಈ ಮೂರು ತಾಣಗಳು ಸೇರುವ ನಿರೀಕ್ಷೆಯಿದೆ.

ಟಿಯಾಂಗ್‌ ಕಿಯಾನ್‌ ಬೂನ್‌ ನೇತೃತ್ವದ ಇಂಟರ್‌ನ್ಯಾಷನಲ್‌ ಕಮಿಷನ್‌ ಆನ್‌ ಮಾನ್ಯುಮೆಂಟ್ಸ್‌ ಆಂಡ್‌ ಸೈಟ್ಸ್‌ (ಐಸಿಒಎಂಒಎಸ್‌) ತಂಡವು ಸೆಪ್ಟೆಂಬರ್‌ 12ರಿಂದ 17ರವರೆಗೆ ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ಚೆನ್ನಕೇಶವ ದೇಗುಲಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಮಲೇಷ್ಯಾ ಮೂಲದ ಈ ತಜ್ಞರು ಶೀಘ್ರದಲ್ಲಿ ಯುನೆಸ್ಕೊಗೆ ತನ್ನ ವರದಿ ಸಲ್ಲಿಸಲಿದ್ದಾರೆ. ಇವರು ನೀಡಿರುವ ಅಧ್ಯಯನ ವರದಿಯ ಆಧಾರದಲ್ಲಿ ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯನ್ನು ಘೋಷಿಸಲಿದೆ.

ಮುಂದಿನ ವರ್ಷ ವಿಶ್ವ ಪಾರಂಪರಿಕ ತಾಣದ ಟ್ಯಾಗ್‌ ಅನ್ನು ಘೋಷಿಸಲಾಗುತ್ತದೆ. ಮೈಸೂರಿನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಹದಿಮೂರನೇ ಶರತಮಾನದ ಸೋಮನಾಥಪುರ ದೇವಾಲಯವೂ ಸೇರುವುದೇ ಎಂಬ ಕುತೂಹಲ ಮೂಡಿದೆ. ಇದರೊಂದಿಗೆ ಶಿಲ್ಪಕಲೆಗಳ ವೈಭವ ಹೊಂದಿರುವ ಬೇಳೂರು ಹಳೇಬೀಡಿಗೂ ವರ್ಲ್ಡ್‌ ಹೆರಿಟೇಜ್‌ ಮುಕುಟ ದೊರಕುವ ನಿರೀಕ್ಷೆಯಿದೆ.

ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು 2022-23 ಸಾಲಿಗೆ ಭಾರತವು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ನಾಮನಿರ್ದೇಶನ ಮಾಡಿದೆ. ರಾಜ್ಯದಲ್ಲಿ ಹಂಪಿ ಮತ್ತು ಪಟ್ಟದಕಲ್ಲುಗಳು ಮಾತ್ರ ಮಾತ್ರ ಯುನೆಸ್ಕೊ ಪಟ್ಟಿಯಲ್ಲಿವೆ. ಹೊಯ್ಸಳವು 2014ರಿಂದಲೇ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.

ಸೋಮನಾಥಪುರದ ದೇಗುಲದ ಕುರಿತು ತಿಯಾಂಗ್‌ ಕಿಯಾನ್‌ ಬೂನ್‌ ತಂಡಕ್ಕೆ ಇನ್ಫೋಸಿಸ್‌ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಅವರು ವಿವರಿಸಿದ್ದಾರೆ. ಅವರು ರಾಜ್ಯ ಪ್ರವಾಸೋದ್ಯಮ ವಿಷನ್‌ ಗ್ರೂಪ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕದಂಬ, ಚಾಲುಕ್ಯರಂತೆ 10 ರಿಂದ 14ನೇ ಶತಮಾನದವರೆಗೆ ಆಳ್ವಿಕೆ ನಡೆಸಿದ ಹೊಯ್ಸಳರು ರಾಜ್ಯದಲ್ಲಿ ಒಟ್ಟು 92 ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಹಾಸನ ಜಿಲ್ಲೆಯಲ್ಲಿಯೇ 40 ದೇವಾಲಯಗಳಿವೆ.

ಬೇಲೂರು, ಹಳೇ ಬೀಡು ಹಾಗೂ ಸೋಮನಾಥ ಪುರ ದೇವಾಲಯಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಕಳೆದ ವರ್ಷ ನಿರ್ವಹಣಾ ವರದಿಯೊಂದನ್ನು ಸಿದ್ಧಪಡಿಸಿ ಭಾರತೀಯ ಪುರಾತತ್ವ ಸಂಸ್ಥೆಗೆ (ಎಎಸ್‌ಐ) ಕಳುಹಿಸಿತ್ತು. ಅದನ್ನು ಆಧರಿಸಿ ಜುಲೈನಲ್ಲಿ ಆಗಮಿಸಿದ್ದ ಎಎಸ್‌ಐ ಮಹಾ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ಯುನೆಸ್ಕೋಗೆ ಸಲ್ಲಿಸಿದ್ದಾರೆ.

ಬೇಲೂರು, ಹಳೇಬೀಡು ಸೇರಿದಂತೆ ರಾಜ್ಯದ 844 ಸಂರಕ್ಷಿತ ಸ್ಮಾರಕಗಳ 3ಡಿ ಮ್ಯಾಪಿಂಗ್‌ ಹಾಗೂ ಸ್ಕ್ಯಾ‌ನಿಂಗ್‌ ಕಾರ್ಯ ನಡೆದಿದ್ದು, ಈಗಾಗಲೇ 482 ಸ್ಮಾರಕಗಳ 3ಡಿ ಮ್ಯಾಪಿಂಗ್‌ ಪೂರ್ಣಗೊಂಡಿದೆ.

ಯುನೆಸ್ಕೊ ತಂಡವು ಭೇಟಿ ನೀಡಿದ ಸಂದರ್ಭದಲ್ಲಿ ಈ ಮೂರು ದೇಗುಲಗಳ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಜತೆಗೆ, ಗ್ರಾಮಸ್ಥರು ಮತ್ತು ಸ್ಥಳೀಯ ವ್ಯಾಪಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯಗಳನ್ನೂ ಸಂಗ್ರಹಿಸಿದ್ದಾರೆ.

ಕರ್ನಾಟಕದ ಹಂಪಿ ಮತ್ತು ಪಟ್ಟದಕಲ್ಲುಗಳ ಸಾಲಿಗೆ ಬೇಳೂರು, ಹಳೆಬೀಡು ಮತ್ತು ಸೋಮನಾಥಪುರ ಚೆನ್ನಕೇಶವ ದೇಗುಲ ಮುಂದಿನ ವರ್ಷ ಸೇರ್ಪಡೆಯಾಗುವ ನಿರೀಕ್ಷೆಯಿದೆ.

Whats_app_banner