ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟ್ರಾಫಿಕ್‌ ನೋಟ; ಸಿಗ್ನಲ್‌ನಲ್ಲಿ ಕಾಣಸಿಕ್ಕಿತು ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್‌ ದೃಶ್ಯ, ವಿಡಿಯೋ ವೈರಲ್‌

ಬೆಂಗಳೂರು ಟ್ರಾಫಿಕ್‌ ನೋಟ; ಸಿಗ್ನಲ್‌ನಲ್ಲಿ ಕಾಣಸಿಕ್ಕಿತು ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್‌ ದೃಶ್ಯ, ವಿಡಿಯೋ ವೈರಲ್‌

ಬೆಂಗಳೂರು ಟ್ರಾಫಿಕ್‌ ನೋಟ; ಬೆಂಗಳೂರು ನಗರದ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್‌ ದೃಶ್ಯ ಅಟೆಂಡ್ ಮಾಡ್ತಾ ಇರುವ ನೋಟ ಕಾಣಸಿಕ್ಕಿತು. ಇದರ ವಿಡಿಯೋ ವೈರಲ್‌ ಆಗಿದೆ.

ಬೆಂಗಳೂರು ಟ್ರಾಫಿಕ್‌ ನೋಟ ಇದಾಗಿದ್ದು, ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್‌ ದೃಶ್ಯ ಸಿಗ್ನಲ್‌ನಲ್ಲಿ ಕಾಣಸಿಕ್ಕಿತು. (ವಿಡಿಯೋದಿಂದ ಹಿಡಿದಿಟ್ಟ ಚಿತ್ರ)
ಬೆಂಗಳೂರು ಟ್ರಾಫಿಕ್‌ ನೋಟ ಇದಾಗಿದ್ದು, ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್‌ ದೃಶ್ಯ ಸಿಗ್ನಲ್‌ನಲ್ಲಿ ಕಾಣಸಿಕ್ಕಿತು. (ವಿಡಿಯೋದಿಂದ ಹಿಡಿದಿಟ್ಟ ಚಿತ್ರ) (X/@Sun46982817Shan)

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಟ್ರಾಫಿಕ್ ಬಹಳ ಕುಖ್ಯಾತವಾದುದು. ಸಂಚಾರ ದಟ್ಟಣೆ ನಡುವೆ ಗಂಟೆಗಟ್ಟಲೆ ಕಾಯುವುದು ಬಹಳ ತ್ರಾಸದಾಯಕ ವಿಚಾರ. ನಿತ್ಯ ಉದ್ಯೋಗ, ಶಿಕ್ಷಣಕ್ಕೆ ಹೋಗುವಾಗ ಸಂಚಾರದಟ್ಟಣೆಗೆ ಸಿಲುಕುವವರ ಪಾಡು ಹೇಳತೀರದು. ಇವುಗಳ ನಡುವೆ, ಗಮನಸೆಳೆಯುವ ವಿಚಾರಗಳು ಅನೇಕ.

ಟ್ರೆಂಡಿಂಗ್​ ಸುದ್ದಿ

ವಿರಳ ದೃಶ್ಯಗಳು ನಿತ್ಯವೂ ಎಂಬಂತೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಬೆಂಗಳೂರು ಟ್ರಾಫಿಕ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತದೆ. ಹೆಚ್ಚು ಚರ್ಚೆಗೆ ಒಳಗಾಗುತ್ತದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ನಿಂತು ಫೋನ್ ಮಾಡುವುದು, ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುವುದು ಇವೆಲ್ಲವೂ ಪದೇಪದೆ ಕಾಣುತ್ತಿರುತ್ತದೆ. ಅದೇ ರೀತಿ ಈಗ ಹೊಸದಾಗಿ ಗಮನಸೆಳೆದಿರುವ ವಿಡಿಯೋ ಇದು. ಮಹಿಳೆಯೊಬ್ಬರು ತಮ್ಮ ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾದ ದೃಶ್ಯವಿದು.

ಸ್ಕೂಟರ್‌ನಲ್ಲಿ ಕುಳಿತೇ ಝೂಮ್ ಮೀಟಿಂಗ್‌ ಅಟೆಂಡ್ ಆದ ಮಹಿಳೆ

ಬೆಂಗಳೂರು ಟ್ರಾಫಿಕ್‌ನಲ್ಲಿ ನಿಂತುಕೊಂಡಿರುವಾಗ ಸ್ಕೂಟರ್‌ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಝೂಮ್‌ ಮೀಟಿಂಗ್ ಅಟೆಂಡ್ ಮಾಡ್ತಾ ಇರುವ ದೃಶ್ಯ ಹಿಂಬದಿಯಲ್ಲಿದ್ದ ಸವಾರರ ಗಮನಸೆಳೆದಿದೆ. ಅವರು ಅದನ್ನು ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಪೀಕ್ ಬೆಂಗಳೂರು ಮೂಮೆಂಟ್ ಎಂದು ಬೆಂಗಳೂರು ಟ್ರಾಫಿಕ್ ಕುರಿತ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ.

ಎಕ್ಸ್‌ ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರಂನಲ್ಲಿ ಈ ವಿಡಿಯೋವನ್ನು ಶಾನ್ ಸುಂದರ್ ಎಂಬುವವರು ಶೇರ್ ಮಾಡಿದ್ದು, ತಮಿಳುಭಾಷೆಯಲ್ಲಿ ಸ್ಟೇಟಸ್ ಬರೆದುಕೊಂಡಿದ್ದಾರೆ. “ರಸ್ತೆ ಮೇಲೂ ಕೆಲಸ. ಇನ್ನೇನು ಮಾಡುವುದು?, ಸಿಗ್ನಲ್ ಯಾವಾಗ ಬೀಳುತ್ತೆ ಅಂತ ನೋಡೋದು ಬಿಟ್ಟು ನನ್ನನ್ನು ನೋಡ್ತಿದ್ದಾರೆ ಅವರು” ಎಂಬ ಕ್ಯಾಪ್ಶನ್ ಇದೆ ಅಲ್ಲಿ.

ಇಲ್ಲಿದೆ ಬೆಂಗಳೂರು ಟ್ರಾಫಿಕ್‌ನ ಆ ವಿಡಿಯೋ

ವೀಡಿಯೊದಲ್ಲಿರುವ ದೃಶ್ಯ ಗಮನಿಸಿದರೆ, ಆ ಮಹಿಳೆ ಬೆಂಗಳೂರಿನಲ್ಲಿ ಟ್ರಾಫಿಕ್ ಕ್ಲಿಯರ್ ಆಗಲು ಕಾಯುತ್ತಿರುವಾಗ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಜೂಮ್ ಕರೆಯಲ್ಲಿ ತೊಡಗಿರುವುದು ಕಂಡುಬಂದಿದೆ. ವಿಡಿಯೋ ಮೇಲಿರುವ ಪದಗಳಲ್ಲಿ ಟ್ರಾಫಿಕ್‌ನಲ್ಲೂ ಕೆಲಸ ಮಾಡಿ. ಇದು ಬೆಂಗಳೂರಿನ ಇನ್ನೊಂದು ಸಾಮಾನ್ಯ ದಿನ" ಎಂಬ ಅರ್ಥದ ಸಾಲುಗಳಿವೆ.

ಬೆಂಗಳೂರು ಟ್ರಾಫಿಕ್‌ನಲ್ಲಿ ಜನ ಕೆಲಸ ಮಾಡುವುದು ಗಮನಸೆಳೆಯುತ್ತಿರುವುದು ಇದೇ ಮೊದಲ ಸಲವಲ್ಲ. ಇತ್ತೀಚೆಗೆ ವ್ಯಕ್ತಿಯೊಬ್ಬರು ತನ್ನ ಮಡಿಲಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಸ್ಕೂಟರ್ ಸವಾರಿ ಮಾಡಿದ ದೃಶ್ಯ ಗಮನಸೆಳೆದಿತ್ತು. ಮೈಕ್ರೋಸಾಫ್ಟ್ ಟೀಮ್ಸ್‌ ಕರೆಯಲ್ಲಿ ಭಾಗವಹಿಸುತ್ತಿದ್ದಂತೆ ಕಂಡುಬಂದಿತ್ತು. ಆ ವಿಡಿಯೋದಲ್ಲಿ, ಬೆಂಗಳೂರು ಹೊಸ ಕೆಲಸಗಾರರಿಗೆ ಇರುವಂಥದ್ದಲ್ಲ ಎಂಬ ಶೀರ್ಷಿಕೆ ಇತ್ತು. ಇದಕ್ಕೆ ವ್ಯಾಪಕ ಸ್ಪಂದನೆ ಇತ್ತು. ಅನೇಕರು ಪ್ರತಿಕ್ರಿಯೆ ನೀಡಿದ್ದರು.

ಓದಬಹುದಾದ ಇನ್ನಷ್ಟು ಸ್ಟೋರಿಗಳು

1) ಲೋಕಸಭಾ ಚುನಾವಣೆ; ಕರ್ನಾಟಕದ 1ನೇ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳು, ಆಂಬುಲೆನ್ಸ್‌ ಸ್ಟ್ರೆಚರ್‌ನಲ್ಲಿದ್ದುಕೊಂಡೇ ಮತದಾನ- ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

2) ಮನೆ ಇಎಂಐ ಕಟ್ಟಲು ಹೆಣಗಾಡುತ್ತಿರುವ ಭಾಗ್ಯಾಗೆ ಮತ್ತೊಂದು ಹೊರೆ, ಸಾಲದ ಹಣ ವಾಪಸ್‌ ಕೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

3) ಅಂಗೈನಲ್ಲೇ ಎದೆಯ ಮುಚ್ಚಿ ಪಡ್ಡೆಗಳ ಬೆಚ್ಚಿ ಬೀಳಿಸಿದ ನಟಿ; ಉರ್ಫಿ ಜಾವೇದ್‌ ಹೈಟೆನ್ಷನ್‌ ಫ್ಯಾಷನ್‌ ವಿಡಿಯೋ ವೈರಲ್‌

4) ರಾಹು-ಕೇತು ಸಂಯೋಜನೆಯಿಂದ ಅಂಗಾರಕ ಯೋಗ ಸೃಷ್ಟಿ; ಮುಂದಿನ 40 ದಿನಗಳ ಕಾಲ ಈ ಮೂರು ರಾಶಿಯವರಿಗೆ ಕಷ್ಟದ ಸಮಯ- ಇಲ್ಲಿದೆ ಈ ಕುರಿತ ಪೂರ್ಣ ವಿವರ

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

IPL_Entry_Point