ಕನ್ನಡ ಸುದ್ದಿ  /  Lifestyle  /  Food Rice Papad Recipe How To Make Rice Papad At Home Health Benefits Of Rice Tasty Rice Papad Rst

Rice Papad: ಅಕ್ಕಿ ಹಪ್ಪಳ ಮಾಡೋದು ಹೀಗೆ; ಊಟದ ಜೊತೆಗೆ ಹಪ್ಪಳ ಇದ್ರೆ ರುಚಿ ಇನ್ನಷ್ಟು ಹೆಚ್ಚುತ್ತೆ, 2 ತುತ್ತು ಹೆಚ್ಚು ಸೇರುತ್ತೆ

ಊಟದ ಜೊತೆ ಹಪ್ಪಳ ಇದ್ರೆ ಬೇಡ ಅಂದ್ರು ಎರಡು ತುತ್ತು ಊಟ ಹೆಚ್ಚು ಸೇರುತ್ತೆ, ಅದ್ರಲ್ಲೂ ಅಕ್ಕಿ ಹಪ್ಪಳ ರುಚಿ ಇನ್ನೂ ಭಿನ್ನ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ತಯಾರಿಸುವ ಅಕ್ಕಿವನ್ನು ತಯಾರಿಸುವುದು ಬಲು ಸುಲಭ. ಇದನ್ನು ಒಮ್ಮೆ ಮಾಡಿದರೆ ವರ್ಷಗಟ್ಟಲೆ ಡಬ್ಬಿಯಲ್ಲಿ ಸಂಗ್ರಹಿಸಿಟ್ಟು ತಿನ್ನಬಹುದು.

ಅಕ್ಕಿ ಹಪ್ಪಳ
ಅಕ್ಕಿ ಹಪ್ಪಳ

ದಕ್ಷಿಣ ಭಾರತದ ಊಟದಲ್ಲಿ ಹಪ್ಪಳ, ಸಂಡಿಗೆ ಸಾಮಾನ್ಯ. ಇವು ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಕೆಲವೊಮ್ಮೆ ಸಾರು, ಸಂಬಾರು ರುಚಿಸಿಲ್ಲ ಎಂದರೆ ಹಪ್ಪಳವನ್ನು ನೆಂಜಿಕೊಂಡು ಊಟ ಮಾಡಬಹುದು. ಅದ್ರಲ್ಲೂ ಅಕ್ಕಿ ಹಪ್ಪಳ ರುಚಿಯ ನಿಜಕ್ಕೂ ಭಿನ್ನ. ಇದನ್ನು ಸಂಜೆ ಸ್ಯ್ನಾಕ್ಸ್‌ಗೂ ತಿನ್ನಬಹುದು. ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದ ಹಪ್ಪಳವನ್ನು ತಿನ್ನುತ್ತಿದ್ದರೆ ಆಹಾ ಎನ್ನಿಸದೇ ಇರದು, ಅಲ್ಲದೇ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುತ್ತದೆ. ಅಕ್ಕಿ ಹಪ್ಪಳವು ಬಾಯಿಗೆ ರುಚಿ ಮಾತ್ರವಲ್ಲ, ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನವೂ ಇದೆ. ಅಕ್ಕಿ ಹಪ್ಪಳವು ಗ್ಲುಟನ್‌ ರಹಿತವಾಗಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಇದರಲ್ಲಿರುವ ಪ್ರೊಟೀನ್‌ ಹಾಗೂ ಕ್ಯಾಲ್ಸಿಯಂ ಅಂಶಗಳು ಸ್ನಾಯುಗಳನ್ನು ಬಲಪಡಿಸುತ್ತವೆ. ಅಕ್ಕಿಹಿಟ್ಟು, ಜೀರಿಗೆ, ಉಪ್ಪು, ನೀರು ಹೀಗೆ ಕಡಿಮೆ ಸಾಮಗ್ರಿ ಬಳಸಿ ತಯಾರಿಸುವ ಅಕ್ಕಿ ಹಪ್ಪಳವನ್ನು ಈ ಬೇಸಿಗೆಯಲ್ಲಿ ಮಾಡಿಟ್ಟುಕೊಂಡರೆ ಮುಂದಿನ ಬೇಸಿಗೆವರೆಗೆ ಆರಾಮವಾಗಿ ಇರಿಸಿಕೊಂಡು ತಿನ್ನಬಹುದು.

ಅಕ್ಕಿ ಹಪ್ಪಳವನ್ನು ತಯಾರಿಸುವುದು ಹೇಗೆ, ಅಕ್ಕಿ ಹಪ್ಪಳ ಸೇವನೆಯ ಪ್ರಯೋಜನವೇನು ತಿಳಿಯಲು ಮುಂದೆ ಓದಿ

ಅಕ್ಕಿಹಿಟ್ಟಿನ (ಹಪ್ಪಳ) ಪ್ರಯೋಜನಗಳು

ನಾರಿನಾಂಶ ಸಮೃದ್ಧವಾಗಿದೆ: ಅಕ್ಕಿಹಿಟ್ಟಿನಲ್ಲಿ ನಾರಿನಾಂಶ ಹೇರಳವಾಗಿದೆ. ಇದು ಕರುಳಿನ ಆರೋಗ್ಯವನ್ನು ಬಲಪಡಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ನಿರ್ವಿಷಗೊಳ್ಳುತ್ತವೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವೂ ನಿಯಂತ್ರಣದಲ್ಲಿರುತ್ತದೆ.

ಯಕೃತ್ತಿನ ಆರೋಗ್ಯ: ಜರ್ನಲ್ ಆಫ್ ಹೆಲ್ತ್ ಪ್ರಕಾರ, ಅಕ್ಕಿಹಿಟ್ಟಿನಲ್ಲಿರುವ ಕೋಲಿನ್ ಪ್ರಮಾಣವು ಯಕೃತ್ತನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಕಂಡುಬರುವ ಕೋಲೀನ್ ಪ್ರಮಾಣವು ದೇಹದಲ್ಲಿ ಲಿಪಿಡ್‌ಗಳ ಸಂಶ್ಲೇಷಣೆ ಮತ್ತು ಸಾಗಣೆಗೆ ಸಹಾಯ ಮಾಡುತ್ತದೆ. ಅಕ್ಕಿ ಹಿಟ್ಟಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಅಂಶವಿರುತ್ತದೆ.

ಗ್ಲುಟನ್ ಮುಕ್ತ: ಅಕ್ಕಿಹಿಟ್ಟು ಗ್ಲುಟನ್‌ ಫ್ರಿಯಾಗಿದ್ದು, ಇದು ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ. ಉದರದ ಸಮಸ್ಯೆ ಇರುವವರಿಗೆ ಅಕ್ಕಿಹಿಟ್ಟು ಉತ್ತಮ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.

ಮೂಳೆಗಳನ್ನು ಬಲಗೊಳಿಸುತ್ತದೆ: ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಮೆಗ್ನೀಸಿಯಮ್ ಪ್ರಮಾಣ ಅಕ್ಕಿಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದಲ್ಲದೆ, ದೇಹವು ಆಸ್ಟಿಯೊಪೊರೋಸಿಸ್ ಅಪಾಯದಿಂದ ಮುಕ್ತವಾಗಿರುತ್ತದೆ.

ಅಕ್ಕಿ ಹಪ್ಪಳ ರೆಸಿಪಿ

ಬೇಕಾಗುವ ಸಾಮಗ್ರಿಗಳು

ಅಕ್ಕಿ - 2 ಕಪ್‌

ಎಣ್ಣೆ - 2 ಚಮಚ

ಜೀರಿಗೆ - 1/2 ಟೀ ಚಮಚ

ಖಾರದಪುಡಿ - 1/4 ಚಮಚ

ನೀರು - 2 ಕಪ್

ಉಪ್ಪು - ರುಚಿಗೆ

ತಯಾರಿಸುವ ವಿಧಾನ: ಅಕ್ಕಿಯನ್ನು ಐದಾರು ಗಂಟೆಗಳ ಕಾಲ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು ತೆಳುವಾಗಿರಲಿ. ಅಕ್ಕಿ ರುಬ್ಬುವುದು ಕಷ್ಟ ಎಂದರೆ ಅಕ್ಕಿಹಿಟ್ಟಿಗೆ ನೀರು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಯಾವುದೇ ಕಾರಣಕ್ಕೂ ಗಂಟಾಗಿರಬಾರದು. ಇದಕ್ಕೆ ಜೀರಿಗೆ ಹಾಗೂ ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಪಾತ್ರೆಯೊಂದರಲ್ಲಿ ಬಿಸಿ ನೀರು ಕುದಿಯಲು ಇಡಿ. ಇದಕ್ಕೆ ಸ್ಟೀಲ್‌ ಅಥವಾ ಸ್ವಿಲರ್‌ ಪಾತ್ರೆ ಮುಚ್ಚಿ. ನಂತರ ಪ್ಲೇಟ್‌ಗೆ ಸ್ವಲ್ಪ ಎಣ್ಣೆ ಹಚ್ಚಿ, ಅಕ್ಕಿಹಿಟ್ಟನ್ನು ಅದರ ಮೇಲೆ ತೆಳುವಾಗಿ ಹರಡಿ. ಅದನ್ನು ಪಾತ್ರೆಯ ಮೇಲಿಟ್ಟು ಹಬೆಯಲ್ಲಿ ಬೇಯಿಸಿ. ಹಬೆಯಲ್ಲಿ ಬೇಯಿಸಿದ ನಂತರ ಅಕ್ಕಿ ಹಪ್ಪಳದ ಬಣ್ಣ ಬದಲಾಗುತ್ತದೆ. ಅದನ್ನು ಚಾಪೆ ಅಥವಾ ಅಗಲವಾದ ಬಟ್ಟೆಯ ಮೇಲೆ ಹರಡಿ ಬಿಸಿಲಿನಲ್ಲಿ ಒಣಗಿಸಿ. ಕನಿಷ್ಠ 3 ದಿನಗಳ ಕಾಲ ಹಪ್ಪಳವನ್ನು ಬಿಸಿಲಿನಲ್ಲಿ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಇಡಿ. ಇದನ್ನು ಬೇಕು ಎನ್ನಿಸಿದಾಗ ಎಣ್ಣೆಯಲ್ಲಿ ಕರಿದು ತಿನ್ನಿ. ಅದೇ ರೀತಿ ಹಿಟ್ಟನ್ನು ಒಂದೊಂದಾಗಿ ಹಬೆಯಲ್ಲಿ ಬೇಯಿಸಿ. ಹಬೆಯಲ್ಲಿ ತಯಾರಿಸಿದ ಪಾಪಡ್‌ನ ಬಣ್ಣವು ಬದಲಾಗಲು ಪ್ರಾರಂಭಿಸುತ್ತದೆ.

ಪಾಪಡ್ ಅನ್ನು ಬಿಸಿಲಿನಲ್ಲಿ ಅಥವಾ ಫ್ಯಾನ್ ಅಡಿಯಲ್ಲಿ ಒಣಗಲು ಇರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ತಯಾರಿಸಿದ ಪಾಪಡ್ ಅನ್ನು ಬೇಯಿಸಲು ಬಿಡಿ.

ಈಗ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಕುರುಕುಲಾದ ಪಾಪಡ್ ಅನ್ನು ಚಹಾ ಅಥವಾ ಆಹಾರದೊಂದಿಗೆ ನೀಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ