Food Storage Tips: ಈ ಆಹಾರ ಪದಾರ್ಥಗಳನ್ನ ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ, ಆರೋಗ್ಯಕ್ಕೆ ವಿಷವಾದೀತು ಜೋಕೆ-food storing tips do not put these 4 natural foods in fridge that turn toxic when refrigerated arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Food Storage Tips: ಈ ಆಹಾರ ಪದಾರ್ಥಗಳನ್ನ ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ, ಆರೋಗ್ಯಕ್ಕೆ ವಿಷವಾದೀತು ಜೋಕೆ

Food Storage Tips: ಈ ಆಹಾರ ಪದಾರ್ಥಗಳನ್ನ ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ, ಆರೋಗ್ಯಕ್ಕೆ ವಿಷವಾದೀತು ಜೋಕೆ

ಅಡುಗೆ ಮಿಕ್ಕಿದ್ರೆ ಅಥವಾ ಅಡುಗೆಗೆ ಬಳಸಿದ ತರಕಾರಿ, ಇತರ ವಸ್ತುಗಳು ಹೆಚ್ಚಾದ್ರೆ ಅದನ್ನು ಫ್ರಿಜ್‌ನಲ್ಲಿ ಇಡುವುದು ಸಹಜ. ಆದ್ರೆ ಎಲ್ಲವನ್ನೂ ಫ್ರಿಜ್‌ನಲ್ಲಿಡುವುದು ಒಳ್ಳೆಯದಲ್ಲ, ಏಕೆಂದರೆ ಹಾಗೆ ಇಟ್ಟ ಕೆಲವು ವಸ್ತುಗಳು ವಿಷಕಾರಿಯಾಗಿ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಹಾಗಾಗಿ ನೀವು ಈ ನಾಲ್ಕು ಪದಾರ್ಥಗಳನ್ನು ಎಂದಿಗೂ ಫ್ರಿಜ್‌ನಲ್ಲಿಡಬೇಡಿ.

ಈ ಕೆಲವು ಆಹಾರ ಪದಾರ್ಥಗಳನ್ನ ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ
ಈ ಕೆಲವು ಆಹಾರ ಪದಾರ್ಥಗಳನ್ನ ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅನ್ನುವುದು ನಮ್ಮ ಜೀವನವನ್ನು ಸರಳಗೊಳಿಸಿದೆ. ಅದರಲ್ಲೂ ಅಡುಗೆಮನೆಯ ಕೆಲಸಗಳಿಗಾಗಿ ಆವಿಷ್ಕಾರಗೊಂಡ ಹೊಸ ಹೊಸ ಉಪಕರಣಗಳು ಅಡುಗೆ ಕೆಲಸದಲ್ಲಿ ಕಳೆದು ಹೋಗುತ್ತಿದ್ದ ಸಮಯವನ್ನು ಉಳಿಸಿದೆ. ಮಿಕ್ಸರ್‌, ಮೈಕ್ರೋವೇವ್‌, ಫ್ರಿಡ್ಜ್ ಮುಂತಾದವುಗಳು ಅಡುಗೆ ಕೆಲಸಗಳಿಗೆ ಬಹಳಷ್ಟು ನೆರವಾಗುತ್ತಿದೆ. ಆದರೆ ಅನುಕೂಲಕ್ಕೆಂದಿರುವ ವಸ್ತುಗಳಿಂದಲೂ ಅನೇಕ ಕಾಯಿಲೆಗಳು ಬರುತ್ತವೆಂಬುದು ನಿಮಗೆ ಗೊತ್ತಾ? ಅಡುಗೆ ಮಿಕ್ಕಿತೆಂದೊ ಅಥವಾ ಅಡುಗೆಗೆ ಬಳಸಿದ ತರಕಾರಿ ಜಾಸ್ತಿಯಾಯಿತೆಂದೋ ಅದನ್ನು ಶೇಖರಿಸಿಡುತ್ತೇವೆ. ಅವುಗಳೇ ವಿಷಕಾರಿಯಾಗಿ ಮಾನವನ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ನಾವೆಲ್ಲರೂ ಉಳಿದ ಆಹಾರಗಳನ್ನು ಶೇಖರಿಸಿಡುವುದೆಲ್ಲಿ? ಖಂಡಿತ ಫ್ರಿಜ್‌ನಲ್ಲಿ. ಹೌದು, ಈಗ ಯಾರ ಮನೆಯಲ್ಲಿ ಫ್ರಿಜ್‌ (ರೆಫ್ರಿಜರೇಟರ್‌) ಇಲ್ಲ ಹೇಳಿ. ಏನೇ ಆಹಾರ ಉಳಿದರೂ ಅದರಲ್ಲಿ ತುಂಬಿಡುತ್ತೇವೆ. ಆಹಾರಗಳನ್ನು ಫ್ರಿಡ್ಜ್‌ನಲ್ಲಿಡುವುದರಿಂದ ಏನಾಗುತ್ತದೆ? ಅದು ಆಹಾರದ ಶಾಖವನ್ನು ಕಡಿಮೆ ಮಾಡಿ, ಶೈತ್ಯೀಕರಿಸುತ್ತದೆ. ತಾಪಮಾನವನ್ನು ಕಡಿಮೆ ಮಾಡಿ, ದೀರ್ಘಕಾಲದವರೆಗೆ ಅದನ್ನು ಸಂರಕ್ಷಿಸಿಡಬಹುದಾಗಿದೆ. ಆದರೆ ಕೆಲವು ಪದಾರ್ಥಗಳನ್ನು ಫ್ರಿಜ್‌ನಲ್ಲಿ ಶೇಖರಿಸಿಡುವುದರಿಂದ ಅದು ವಿಷಕಾರಿಯಾಗುತ್ತದೆ. ಕಾಲಕ್ರಮೇಣ ಅದು ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾದರೆ, ಫ್ರಿಜ್‌ನಲ್ಲಿ ಯಾವ ಪದಾರ್ಥಗಳನ್ನು ಇಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಈ ಕೆಳಗಿನ ಆಹಾರ ಪದಾರ್ಥಗಳನ್ನು ಫ್ರಿಜ್‌ನಲ್ಲಿಡುವುದರಿಂದ ಅವು ವಿಷಕಾರಿಯಾಗುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಬೆಳ್ಳುಳ್ಳಿ

ನೀವು ಮಾರುಕಟ್ಟೆಯಿಂದ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಖರೀದಿಸಿ ತಂದು ಫ್ರಿಜ್‌ನಲ್ಲಿ ಶೇಖರಿಸಿಟ್ಟುಕೊಳ್ಳುತ್ತೀರಾ? ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ. ಏಕೆಂದರೆ ಸುಲಿದ ಬೆಳ್ಳುಳ್ಳಿಯಲ್ಲಿ ಬಹು ಬೇಗನೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಅದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಬೆಳ್ಳುಳ್ಳಿಯನ್ನು ಬಹಳ ಕಾಲದವರೆಗೆ ಶೈತ್ಯೀಕರಿಸುವುದರಿಂದ ಅದರಲ್ಲಿರುವ ಎಸೆನ್ಶಿಯಲ್‌ ಆಯಿಲ್‌ಗಳು ನಾಶವಾಗುತ್ತವೆ. ಇದರಿಂದ ಬೆಳ್ಳುಳ್ಳಿ ಅದರ ರುಚಿಯನ್ನು ಕಳೆದುಕೊಳ್ಳುತ್ತದೆ ಜೊತೆಗೆ ತಾಜಾತನವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಸಿಪ್ಪೆ ಸುಲಿದ ಮತ್ತು ಫ್ರೋಜನ್‌ ಬೆಳ್ಳುಳ್ಳಿಯನ್ನು ಎಂದಿಗೂ ಖರೀದಿಸಿ ತರಬೇಡಿ. ಒಣಗಿರುವ ಗಟ್ಟಿ ಬೆಳ್ಳುಳ್ಳಿ ಗಡ್ಡೆಯನ್ನು ತನ್ನಿ. ಅಡುಗೆ ಮಾಡುವ ಮೊದಲು ಸಿಪ್ಪೆ ತೆಗೆಯಿರಿ. ಗಾಳಿಯಾಡುವ ಜಾಗದಲ್ಲಿ ಇಡಿ. ಫ್ರಿಜ್‌ನಲ್ಲಿ ಎಂದಿಗೂ ಇಡಬೇಡಿ.

ಈರುಳ್ಳಿ

ಈರುಳ್ಳಿ ಕಡಿಮೆ ತಾಪಮಾನದಲ್ಲಿ ಇರುವುದಿಲ್ಲ. ಈರುಳ್ಳಿಯನ್ನು ನೀವು ಫ್ರಿಜ್‌ನಲ್ಲಿಟ್ಟಾಗ ಅದರಲ್ಲಿರುವ ಪಿಷ್ಟ (ಸ್ಟಾರ್ಚ್‌) ವು ಸಕ್ಕರೆಯಾಗಿ ಪರಿವರ್ತನೆಗೊಳ್ಳಲು ಪ್ರಾರಂಭವಾಗುತ್ತದೆ. ಆಗ ಅದು ಬಹಳ ಬೇಗ ಹಾಳಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪೆನೆಂದರೆ ಅಡುಗೆಗೆ ಬಳಸಿ ಉಳಿದ ಅರ್ಧ ಈರುಳ್ಳಿಯನ್ನು ಫ್ರಿಜ್‌ನಲ್ಲಿಡುವುದು. ಈ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿಬಿಟ್ಟಿದ್ದಾರೆ. ಆದರೆ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಏಕೆಂದರೆ ಈರುಳ್ಳಿಯನ್ನು ಹೀಗೆ ಶೇಖರಿಸಿಡುವುದರಿಂದ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಟ್ಟಂತಾಗುತ್ತದೆ. ಅಂದರೆ ಕತ್ತರಿಸಿಟ್ಟ ಈರುಳ್ಳಿಯಲ್ಲಿ ಅನಾರೋಗ್ಯವನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ಬಹಳ ಬೇಗನೆ ಸೇರಿಕೊಳ್ಳುತ್ತವೆ.

ಶುಂಠಿ

ನೀವು ಶುಂಠಿಯನ್ನು ಫ್ರಿಜ್‌ನಲ್ಲಿಟ್ಟರೆ ಅದು ಬಹಳ ಬೇಗನೆ ಕೆಡುತ್ತದೆ. ಅದು ಕಿಡ್ನಿ ಮತ್ತು ಲಿವರ್‌ನ ವೈಫಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಶುಂಠಿಯನ್ನು ಫ್ರಿಜ್‌ನಲ್ಲಿ ಇಡಬೇಡಿ. ಶುಂಠಿ ಒಂದು ಗಿಡಮೂಲಿಕೆಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಶುಂಠಿಯನ್ನು ತಿನ್ನವುದರಿಂದ ಹೊಟ್ಟೆಯುಬ್ಬರ, ಅಜೀರ್ಣ, ಗ್ಯಾಸ್‌ ಮುಂತಾದ ಕರುಳಿನ ತೊಂದರೆಗಳಿಂದ ಉಪಶಮನ ದೊರೆಯುತ್ತದೆ. ಇದು ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಶುಂಠಿಯನ್ನು ಎಂದಿಗೂ ಫ್ರಿಜ್‌ನಲ್ಲಿಡಬೇಡಿ. ಅಂಗಡಿಯಿಂದ ಖರೀದಿಸಿ ತಂದ ಶುಂಠಿಯನ್ನು ತೊಳೆದು ಗಾಳಿಯಾಡುವ ಜಾಗದಲ್ಲಿಡಿ.

ಅನ್ನ

ನಮ್ಮಲ್ಲಿ ಬಹಳಷ್ಟು ಜನರು ಅನ್ನವನ್ನು ಫ್ರಿಜ್‌ನಲ್ಲಿಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಫ್ರಿಜ್‌ನಲ್ಲಿರಿಸಿದ ಅನ್ನವು ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಬೇಯಿಸಿದ ಅಕ್ಕಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಬಹಳ ಬೇಗನೆಯಾಗುತ್ತದೆ. 24 ಗಂಟೆಗಿಂತ ಅಧಿಕ ಸಮಯದವರೆಗೆ ಫ್ರಿಜ್‌ನಲ್ಲಿರಿಸಿ ನಂತರ ಮತ್ತೆ ಬಿಸಿ ಮಾಡಿದ ಅನ್ನವು ವಿಷಕಾರಿಯಾಗುತ್ತದೆ ಯುನೈಟೆಡ್‌ ಕಿಂಗ್‌ಡಮ್‌ನ ನ್ಯಾಷನಲ್‌ ಹೆಲ್ತ್ ಸರ್ವೀಸ್‌ ಹೇಳಿದೆ. 24 ಗಂಟೆಗಳ ನಂತರ ಬಿಸಿ ಮಾಡಿ ಸೇವಿಸಿದ ಅನ್ನವು ಫುಡ್‌ ಪಾಯ್ಸನ್‌ಗೆ ಕಾರಣವಾಗುತ್ತದೆ. ಅಧ್ಯಯನದಲ್ಲಿ ಒಂದು ದಿನಕ್ಕಿಂತ ಅಧಿಕ ಸಮಯದವರೆಗೆ ಫ್ರಿಜ್‌ನಲ್ಲಿಟ್ಟ ಅನ್ನವನ್ನು ತಿನ್ನಲೇಬಾರದು ಎಂದು ಹೇಳಲಾಗಿದೆ. ಅದಲ್ಲದೇ ಒಂದಕ್ಕಿಂತ ಅಧಿಕ ಬಾರಿ ಅನ್ನವನ್ನು ಬಿಸಿ ಮಾಡಬಾರದು ಎಂದು ಹೇಳಿದ್ದಾರೆ.

ಇದಲ್ಲದೇ, ಆಲೂಗಡ್ಡೆಯನ್ನು ಎಂದಿಗೂ ಫ್ರಿಡ್ಜ್‌ನಲ್ಲಿಡಬೇಡಿ. ಆಲೂಗಡ್ಡೆಯನ್ನು ಒಂದು ಪೇಪರ್‌ನಲ್ಲಿ ಸುತ್ತಿ ಅದನ್ನು ಗಾಳಿಯಾಡುವ ಜಾಗದಲ್ಲಿಡುವುದು ಒಳ್ಳೆಯದು. ರೂಂ ಟೆಂಪ್ರೇಚರ್‌ನಲ್ಲಿ ಆಲೂಗಡ್ಡೆಯನ್ನು ಇಡುವುದರಿಂದ ಅದರ ರುಚಿ ಮತ್ತು ಪರಿಮಳವನ್ನು ಕಾಪಾಡಿಕೊಳ್ಳಬಹುದಾಗಿದೆ. ಇದರಿಂತೆಯೇ ಬೆಲ್‌ ಪೆಪ್ಪರ ಅಥವಾ ಕ್ಯಾಪ್ಸಿಕಂ ಅನ್ನು ಸಹ ಫ್ರಿಡ್ಜ್‌ನಲ್ಲಿಡುವುದರಿಂದ ನೀರಿನಂಶ ತಗುಲಿ ಅದು ಅದರ ಬಣ್ಣ ಮತ್ತು ತಾಜಾತವನ್ನು ಕಳೆದುಕೊಳ್ಳುತ್ತದೆ.

ಆಹಾರಗಳನ್ನು ಫ್ರಿಜ್‌ನಲ್ಲಿಡಲು ಅನುಸರಿಸಬೇಕಾದ ನಿಯಮಗಳು

* ತಜ್ಞರ ಪ್ರಕಾರ ಆಹಾರಗಳನ್ನು ಬಹಳ ಕಾಲದವರೆಗೆ ಫ್ರಿಜ್‌ನಲ್ಲಿಡುವುದರಿಂದ ಪೋಷಕಾಂಶಗಳ ನಾಶವಾಗುತ್ತದೆ.

* ಆಹಾರವು ಅದರ ಬಣ್ಣ ಮತ್ತು ಪರಿಮಳವನ್ನು ಕಳೆದುಕೊಳ್ಳುತ್ತದೆ.

* ಸರಿಯಾದ ತಾಪಮಾನದಲ್ಲಿ ಆಹಾರವನ್ನು ಶೇಖರಿಸಿಡದಿದ್ದರೆ ಅವು ಬಹಳ ಬೇಗನೆ ಕೆಡುತ್ತವೆ. ಉದಾಹರಣೆಗೆ ಮಾಂಸವನ್ನು 4–5 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಿಡಬೇಕು.

* ಜೇನುತುಪ್ಪ, ಆಲೀವ್‌ ಎಣ್ಣೆ, ತೆಂಗಿನ ಎಣ್ಣೆ ಮುಂತಾದ ಅಡುಗೆ ಎಣ್ಣೆಗಳನ್ನು ಫ್ರಿಡ್ಜ್‌ನಲ್ಲಿಡುವುದರಿಂದ ಅವು ತ್ವರಿತವಾಗಿ ಗಟ್ಟಿಯಾಗುತ್ತದೆ. ಹಾಗಾಗಿ ಅವುಗಳನ್ನು ಫ್ರಿಜ್‌ನಲ್ಲಿಡಬೇಡಿ.

* ಆಹಾರಗಳನ್ನು ಫ್ರಿಜ್‌ನಲ್ಲಿಡುವ ಮೊದಲು ಅವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾನೆ ಮುಖ್ಯವಾಗಿದೆ.

mysore-dasara_Entry_Point