ಕನ್ನಡ ಸುದ್ದಿ  /  ಜೀವನಶೈಲಿ  /  Sleeping Position: ದಿನವಿಡೀ ಆಕ್ಟಿವ್‌ ಆಗಿರಬೇಕಾ, ಹೀಗಿರಲಿ ನೀವು ಮಲಗುವ ಭಂಗಿ; ನಿದ್ದೆ ಮಾಡುವ ಮುನ್ನ ಈ ಅಂಶ ಗಮನಿಸಿ

Sleeping Position: ದಿನವಿಡೀ ಆಕ್ಟಿವ್‌ ಆಗಿರಬೇಕಾ, ಹೀಗಿರಲಿ ನೀವು ಮಲಗುವ ಭಂಗಿ; ನಿದ್ದೆ ಮಾಡುವ ಮುನ್ನ ಈ ಅಂಶ ಗಮನಿಸಿ

ಇತ್ತೀಚಿನ ದಿನಗಳಲ್ಲಿ ನಿದ್ದೆಯ ಕೊರತೆಯ ಕಾರಣದಿಂದ ಹಲವರು ಇಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿದ್ದೆ ಕಡಿಮೆಯಾದರೆ ಹಗಲಿನಲ್ಲಿ ಕ್ರಿಯಾಶೀಲರಾಗಿರಲು ಸಾಧ್ಯವಿಲ್ಲ. ಮಕ್ಕಳಿಂದ ದೊಡ್ಡವರವರೆಗೆ ದಿನವಿಡೀ ಆಕ್ಟಿವ್‌ ಆಗಿರಬೇಕು ಅಂದ್ರೆ ನೀವು ಮಲಗುವ ಶೈಲಿಯನ್ನು ಇಂದೇ ಬದಲಿಸಿಕೊಳ್ಳಿ.

ದಿನವಿಡೀ ಆಕ್ಟಿವ್‌ ಆಗಿರಬೇಕಾ, ಹಾಗಾದ್ರೆ ಹೀಗಿರಲಿ ನೀವು ಮಲಗುವ ಭಂಗಿ
ದಿನವಿಡೀ ಆಕ್ಟಿವ್‌ ಆಗಿರಬೇಕಾ, ಹಾಗಾದ್ರೆ ಹೀಗಿರಲಿ ನೀವು ಮಲಗುವ ಭಂಗಿ

ಇತ್ತೀಚಿನ ವರ್ಷಗಳಲ್ಲಿ ಮನುಷ್ಯರಲ್ಲಿ ಉತ್ಪಾದಕತೆಯ ಪ್ರಮಾಣ ಕಡಿಮೆಯಾಗಿದೆ. ಸಮತೋಲಿತ ಜೀವನಶೈಲಿಯನ್ನು ಅನುಸರಿಸುವುದು ಸವಾಲಾಗಿದೆ. ಅದರಲ್ಲೂ ಈ ವರ್ಕ್‌ ಫ್ರಂ ಹೋಮ್‌ ಪದ್ಧತಿ ನಮ್ಮನ್ನು ಇನ್ನಷ್ಟು ಜಡಜೀವನಶೈಲಿಗೆ ಅಂಟಿಕೊಳ್ಳುವಂತೆ ಮಾಡುತ್ತಿದೆ. ಇದರೊಂದಿಗೆ ಮನುಷ್ಯರಲ್ಲಿ ನಿದ್ದೆಯ ಕೊರತೆ ಕೂಡ ಹೆಚ್ಚು ಕಾಡುತ್ತಿದೆ. ನಿದ್ದೆ ಕಡಿಮೆಯಾದರೆ ಹಗಲಿನ ವೇಳೆ ಏಕಾಗ್ರತೆಯ ಕೊರತೆ, ಅರಿವಿನ ಕಾರ್ಯದ ಅಸಮತೋಲನದ ಜೊತೆಗೆ ಒಟ್ಟಾರೆ ಆರೋಗ್ಯವೂ ಏರುಪೇರಾಗುತ್ತದೆ. ಆದರೆ ನಿದ್ದೆಯ ಕೊರತೆಯ ನೀಗಿಸಲು ನಾವು ಮಲಗುವ ಭಂಗಿಗಳನ್ನು ಬದಲಿಸಿಕೊಳ್ಳಬಹುದು. ಆ ಮೂಲಕ ಚೈತನ್ಯ ಹೆಚ್ಚಿಸಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಚೆನ್ನಾಗಿ ನಿದ್ದೆ ಮಾಡುವುದರಿಂದಾಗುವ ಪ್ರಯೋಜನಗಳೇನು?

ಚೆನ್ನಾಗಿ ಅಂದರೆ ಯಾವುದೇ ಅಡೆತಡೆಗಳಿಲ್ಲದೇ ನಿದ್ದೆ ಮಾಡುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಉತ್ತಮ ನಿದ್ದೆಯು ಮನುಷ್ಯನಲ್ಲಿ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ಇದು ಏಕಾಗ್ರತೆ ಹೆಚ್ಚಲು ಸಹಾಯ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಒಟ್ಟಾರೆ ಆರೋಗ್ಯಕ್ಕೆ ನಿದ್ದೆ ಅತ್ಯವಶ್ಯ.

ಉತ್ಪಾದಕರಾಗಿರಲು ಮಲಗುವ ಭಂಗಿಗಳು

ನೀವು ದಿನದಲ್ಲಿ ಉತ್ಪಾದಕರಾಗಿರಬೇಕು ಅಂದ್ರೆ ನಿದ್ದೆಯ ಭಂಗಿಯನ್ನು ಗಮನಿಸಬೇಕು ಹಾಗೂ ಅದನ್ನು ಉತ್ತಮಗೊಳಿಸಬೇಕು. ವಯಸ್ಸಾದವರು ಭ್ರೂಣದ ಭಂಗಿಯಲ್ಲಿ ಮಲಗುವುದು ಅಭ್ಯಾಸ ಮಾಡಬೇಕು. ಇದು ಉತ್ತಮ ನಿದ್ದೆಯ ಜೊತೆಗೆ ಬೆನ್ನಿನ ಕೆಳಭಾಗದ ನೋವು, ತೊಂದರೆಯನ್ನು ನಿವಾರಿಸುತ್ತದೆ. ಈ ಭಂಗಿಯು ಗರ್ಭಿಣಿಯರು ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವ ಸಮಸ್ಯೆ ಇರುವವರಿಗೆ ಇದು ಸಹಕಾರಿ.

ಮಲಗುವ ಸ್ಥಾನ ಹೇಗಿರಬೇಕು

ಉತ್ತಮ ನಿದ್ದೆಗಿರುವ ಇನ್ನೊಂದು ಬೆಸ್ಟ್‌ ಮಾರ್ಗ ಎಂದರೆ ಬೆನ್ನಿನ ಮೇಲೆ ಅಂದರೆ ಅಂಗಾತ ಮಲಗುವುದು. ಇದು ಇಡೀ ದೇಹವನ್ನು ಬೆನ್ನುಮೂಳೆ, ಕುತ್ತಿಗೆ ಹಾಗೂ ಬೆನ್ನಿನ ಕೆಳಭಾಗಗಳಿಗೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಗುಣಮಟ್ಟದ ಹಾಸಿಗೆಯ ಮೇಲೆ ಬೆನ್ನು ಆನಿಸಿ ಮಲಗುವುದು ಉತ್ಪಾದಕತೆಗ ಹೆಚ್ಚಲು ಬೆಸ್ಟ್‌ ವಿಧಾನ ಎನ್ನುತ್ತಾರೆ ತಜ್ಞರು. ಇದರಿಂದ ಗೊರಕೆ ಹೆಚ್ಚಬಹುದಾದರೂ ಇದು ಒಟ್ಟಾರೆ ದೇಹಕ್ಕೆ ಉತ್ತಮ. ಕಾಲುಗಳನ್ನು ಮಡಚದೇ ಭ್ರೂಣಗಳಂತೆ ಮಲಗುವುದು ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಗೊರಕೆಯನ್ನು ಕಡಿಮೆ ಮಾಡುತ್ತದೆ.

ಮಲಗುವ ಸಮಯವನ್ನು ಒತ್ತಡ-ಮುಕ್ತವಾಗಿಸಲು ಪರಿಕರಗಳು

ಮಲಗುವ ಸಮಯದಲ್ಲಿ ಯಾವುದೇ ಆಂತರಿಕ ಹಾಗೂ ಬಾಹ್ಯ ಒತ್ತಡಗಳಿಲ್ಲದೇ ನಿದ್ದೆ ಮಾಡಬೇಕು. ಮಲಗುವಾಗ ಶಾಂತ ವಾತಾವರಣ ಬಹಳ ಮುಖ್ಯ. ಆರೊಮಾಥೆರಪಿಯಿಂದ ಉತ್ತಮ ನಿದ್ದೆ ಬರುತ್ತದೆ. ಮಲಗುವಾಗ ಪ್ರಕರ ಬೆಳಕು ಕೂಡ ಇರಬಾರದು. ನಿಶಬ್ದ ವಾತಾವರಣದಲ್ಲಿ ಮಲಗುವುದು ಉತ್ತಮ. ಹಾಸಿಗೆ ಹಾಗೂ ದಿಂಬು ಕೂಡ ಗುಣಮಟ್ಟದ್ದಾಗಿರಬೇಕು.

ಮನುಷ್ಯನಿಗೆ ಗುಣಮಟ್ಟದ ನಿದ್ದೆ ಬಹಳ ಮುಖ್ಯ. ನಿದ್ದೆ ಹಾಗೂ ಉತ್ಪಾದಕತೆಯ ನಡುವಿನ ಸಂಬಂಧವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಾಕಷ್ಟು ಮತ್ತು ನಿದ್ರೆಯ ಗುಣಮಟ್ಟವನ್ನು ಒಳಗೊಂಡಿರುವ ದಿನಚರಿಯು ಅರಿವಿನ ಸಾಮರ್ಥ್ಯಗಳೊಂದಿಗೆ ಮಾತ್ರ ಸಂಪರ್ಕ ಹೊಂದಿಲ್ಲ, ಆದರೆ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಅರೋಮಾಥೆರಪಿ, ಹಿತವಾದ ಬೆಳಕು, ದಿಂಬುಗಳು ಮತ್ತು ಹಾಸಿಗೆಗಳಂತಹ ಒತ್ತಡ-ನಿವಾರಕ ಅಂಶಗಳು ಉತ್ತಮ ನಿದ್ದೆಯ ಪಾಲುದಾರರಾಗುತ್ತವೆ.