ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aishwarya Rai’s Photo On Admit Card: ಧನ್‌ಬಾದ್‌ನ ಬಿಬಿಎಂಕೆಯು ಎಡವಟ್ಟು; ಕಂಗಾಲಾದ ಕಾಜಲ್‌!

Aishwarya Rai’s photo on admit card: ಧನ್‌ಬಾದ್‌ನ ಬಿಬಿಎಂಕೆಯು ಎಡವಟ್ಟು; ಕಂಗಾಲಾದ ಕಾಜಲ್‌!

Aishwarya Rai’s photo on admit card: ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಬಿಬಿಎಂಕೆಯುನಲ್ಲಿ ಆಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ. ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಆಕೆ ಅಡ್ಮಿಟ್‌ ಕಾರ್ಡ್‌ ಪಡೆದುಕೊಂಡು, ಅದರಲ್ಲಿರುವ ಫೋಟೋ ಮತ್ತು ಸಹಿ ನೋಡಿ ಬೇಸ್ತುಬಿದ್ದಳು. ಆದರೆ ಆಕೆ ಐಶ್ವರ್ಯ ರೈ ಅಲ್ಲ!

ಧನ್‌ಬಾದ್‌ನ ಬಿಬಿಎಂಕೆಯು ಎಡವಟ್ಟು; ಬೇಸ್ತು ಬಿದ್ದ ವಿದ್ಯಾರ್ಥಿನಿ
ಧನ್‌ಬಾದ್‌ನ ಬಿಬಿಎಂಕೆಯು ಎಡವಟ್ಟು; ಬೇಸ್ತು ಬಿದ್ದ ವಿದ್ಯಾರ್ಥಿನಿ (Social media)

ಆಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ. ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಆಕೆ ಅಡ್ಮಿಟ್‌ ಕಾರ್ಡ್‌ ಪಡೆದುಕೊಂಡು, ಅದರಲ್ಲಿರುವ ಫೋಟೋ ಮತ್ತು ಸಹಿ ನೋಡಿ ಬೇಸ್ತುಬಿದ್ದಳು. ಆದರೆ ಆಕೆ ಐಶ್ವರ್ಯ ರೈ ಅಲ್ಲ!

ಟ್ರೆಂಡಿಂಗ್​ ಸುದ್ದಿ

ಇದು ಜಾರ್ಖಂಡ್‌ನ ಧನ್‌ಬಾದ್‌ನ ಬಿಬಿಎಂಕೆಯುನ ಎಡವಟ್ಟು. ಬಿಬಿಎಂಕೆಯು ಅಂದರೆ ಬಿನೋದ್‌ ಬಿಹಾರಿ ಮಹತೋ ಕೊಯಿಲಾಂಚಲ್‌ ಯೂನಿವರ್ಸಿಟಿ. ಬೇಸ್ತು ಬಿದ್ದ ವಿದ್ಯಾರ್ಥಿನಿ ಹೆಸರು ಕಾಜಲ್‌ ಕುಮಾರಿ. ಈಕೆ ಎಕನಾಮಿಕ್ಸ್‌ ಸೆಮಿಸ್ಟರ್‌ 2ರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಧನ್‌ಬಾದ್‌ನ ಬಿಬಿಎಂಕೆಯುನ ಸ್ನಾತಕೋತ್ತರ ವಿಭಾಗಗಳ ಪರೀಕ್ಷೆಗಳು ಇಂದು ಶುರುವಾಗುತ್ತಿದ್ದು, ಭಾನುವಾರ ಸಂಜೆ ಡೌನ್‌ಲೋಡ್‌ ಮಾಡಿದಾಗ ಬಂದ ಈ ಅಡ್ಮಿಟ್‌ ಕಾರ್ಡ್‌ ನೋಡಿ ಕಾಜಲ್‌ ಕುಮಾರಿ ಕಂಗಾಲಾಗಿ ಹೋಗಿದ್ದಾರೆ. ಎರಡೆರಡು ಬಾರಿ ಅಡ್ಮಿಟ್‌ ಕಾರ್ಡ್‌ನಲ್ಲಿರುವ ವಿವರ ಗಮನಿಸಿದ್ದಾರೆ. ಫೋಟೋ ಮತ್ತು ಸಹಿ ಬಿಟ್ಟು ಉಳಿದೆಲ್ಲ ವಿವರಗಳೂ ಸರಿಯಾಗೇ ಇದ್ದವು.

ರಜೆಯ ಕಾರಣದಿಂದ ಪರೀಕ್ಷೆಯ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಸೂಚಿಸಲಾಗಿತ್ತು. ಇದೇ ಕಾರಣಕ್ಕೆ ವಿಶ್ವವಿದ್ಯಾಲಯವು ಆನ್‌ಲೈನ್‌ನಲ್ಲಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಲು ಸೂಚಿಸಿತ್ತು. ಅಡ್ಮಿಟ್ ಕಾರ್ಡ್‌ನಲ್ಲಿನ ತಪ್ಪು ಫೋಟೋ ತನ್ನನ್ನು ಪರೀಕ್ಷೆ ಬರೆಯಲು ಅವಕಾಶ ಸಿಗದು ಎಂಬ ಆತಂಕ ವಿದ್ಯಾರ್ಥಿನಿಗೆ ಕಾಡಿದೆ. ಆದರೆ, ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಲಗಾತಾರ್‌24 ವರದಿ ಮಾಡಿದೆ.

ಪ್ರವೇಶ ಕಾರ್ಡ್‌ನಲ್ಲಿ ಫೋಟೋಗಳು ಮತ್ತು ಸಹಿಗಳನ್ನು ಅಪ್‌ಲೋಡ್ ಮಾಡುವುದು ವಿಶ್ವವಿದ್ಯಾಲಯದಿಂದ ಮಾಡುತ್ತಿಲ್ಲ. ಇದು ವಿಶ್ವವಿದ್ಯಾನಿಲಯದ ಗೌರವಕ್ಕೆ ಧಕ್ಕೆ ತರುವ ಸಂಚು ಎಂದು ಬಿಬಿಎಂಕೆಯು ಪರೀಕ್ಷಾ ನಿಯಂತ್ರಕ ಎಸ್‌ಕೆ ಬರನ್‌ವಾಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ದಿನದ ಗಮನಾರ್ಹ ಸುದ್ದಿಗಳು

1) PFI Bhagya poster: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಇದೇ ವೇಳೆ, ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ ಗಮನಸೆಳೆದಿದೆ. PFI Bhagya poster: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿತ್ರದುರ್ಗದಲ್ಲಿ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ

2) What does a crocodile eat: ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ದೇಗುಲದ ದೇವರ ಮೊಸಳೆ ಬಬಿಯಾ ವೆಜಿಟೇರಿಯನ್‌ ಕ್ರೊಕೊಡೈಲ್‌ ಎಂದೆನಿಸಿಕೊಂಡದ್ದು ಹೇಗೆ? ಮೊಸಳೆಗಳ ಆಹಾರ ಕ್ರಮ ಏನು? ಇಲ್ಲಿದೆ ವಿವರ. What does a crocodile eat: ದೇವರ ಮೊಸಳೆ ಸಸ್ಯಾಹಾರಿ ಎನಿಸಿಕೊಂಡದ್ದು ಹೇಗೆ? ಆಹಾರ ಏನು?

3) Heart-shaped traffic light: ಹೃದಯಾಕಾರದ ಟ್ರಾಫಿಕ್ ಲೈಟ್‌ ಫೋಟೋ ಇಂಟರ್‌ನಟ್‌ ಜಗತ್ತನ್ನು ಬೆರಗುಗೊಳಿಸಿವೆ. ಅನೇಕರು ಈ ಹೊಸ ಸಿಗ್ನಲ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಏನಿದು? ಯಾಕೆ ಈ ರೀತಿ - ಇಲ್ಲಿದೆ ವಿವರ. Heart-shaped traffic light: ಬೆಂಗಳೂರಲ್ಲಿ ಹೃದಯದಾಕಾರದ ಟ್ರಾಫಿಕ್‌ ಲೈಟ್‌ ಗಮನಿಸಿದ್ದೀರಾ? ಏನದು!

4) Bommai, BSY tour from today: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮಧ್ಯ ಕರ್ನಾಟಕ ಪ್ರದೇಶದಲ್ಲಿ ಸಂಚರಿಸುತ್ತಿದೆ. ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಬಿಜೆಪಿ ಕೂಡ ಸಜ್ಜಾಗಿದೆ. ಬಿಜೆಪಿ ನಾಯಕರು ಇಂದು ಕಲ್ಯಾಣ-ಕರ್ನಾಟಕದಿಂದ ಸಂಘಟನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸದ ಹಿನ್ನೆಲೆ ವಿವರ ಇಲ್ಲಿದೆ. Bommai, BSY tour from today: ಬೊಮ್ಮಾಯಿ, ಬಿಎಸ್‌ವೈ ಜನಸಂಕಲ್ಪ ಯಾತ್ರೆ ಇಂದು ಶುರು; ಏಳು ಬೃಹತ್‌ ಸಮಾವೇಶ ಎಲ್ಲಿ ಏನು? ವಿವರ ಇಲ್ಲಿದೆ

IPL_Entry_Point