ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bharat Gaurav Train Fare: ಭಾರತ್‌ ಗೌರವ್‌ ರೈಲು ಪ್ರಯಾಣ ದರ ಶೀಘ್ರವೇ ಇಳಿಕೆ; ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

Bharat Gaurav train fare: ಭಾರತ್‌ ಗೌರವ್‌ ರೈಲು ಪ್ರಯಾಣ ದರ ಶೀಘ್ರವೇ ಇಳಿಕೆ; ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

Bharat Gaurav train fare: ಭಾರತ್‌ ಗೌರವ್‌ ರೈಲು ಪ್ರಯಾಣ ದರ ಶೀಘ್ರವೇ ಇಳಿಸುವ ಚಿಂತನೆ ಕುರಿತಾದ ಸುದ್ದಿ ಗಮನಸೆಳೆದಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಪ್ರಯಾಣ ದರವನ್ನು ಕಡಿಮೆ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಭಾರತ್‌ ಗೌರವ್‌ ರೈಲು (ಸಾಂದರ್ಭಿಕ ಚಿತ್ರ)
ಭಾರತ್‌ ಗೌರವ್‌ ರೈಲು (ಸಾಂದರ್ಭಿಕ ಚಿತ್ರ) (ANI/PIB)

ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ, ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪರಿಚಯಿಸಲಾದ ಭಾರತ್ ಗೌರವ್ ರೈಲುಗಳ ಪ್ರಯಾಣ ದರವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಪ್ರಯಾಣ ದರವನ್ನು ಕಡಿಮೆ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಸ್ತುತ, ಪ್ರತಿ ಪ್ರಯಾಣಿಕರಿಗೆ ಎಸಿ 3 ಹಂತದ ಸೀಟಿನಲ್ಲಿ 18 ದಿನಗಳ ಪ್ರವಾಸಕ್ಕೆ 62,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಕಳಪೆ ಕೋಚ್‌ಗಳು ಮತ್ತು ಕೆಳ ಮಧ್ಯಮ ವರ್ಗದ ಯಾತ್ರಾರ್ಥಿಗಳ ಪಾಲಿಗೆ ಪ್ರಯಾಣದರ ದುಬಾರಿ ಎನಿಸಿದ ಕಾರಣ ಕೋಚ್‌ಗಳ ಸೀಟು ಭರ್ತಿ ಆಗುತ್ತಿಲ್ಲ. ಹೀಗಾಗಿ ಭಾರತ್ ಗೌರವ್ ರೈಲುಗಳ ಪ್ರಯಾಣ ದರವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷದವರೆಗೆ, ಭಾರತ್ ಗೌರವ್ ರೈಲುಗಳಿಗಿಂತ ಅಗ್ಗವಾದ ಭಾರತ್ ದರ್ಶನ್ ರೈಲುಗಳಲ್ಲಿ ಯಾತ್ರಿಕರು ಪ್ರಯಾಣಿಸುತ್ತಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ಸ್ಥಗಿತಗೊಂಡ ಭಾರತ ದರ್ಶನ ರೈಲಿನಲ್ಲಿ 18 ದಿನಗಳ ಪ್ರಯಾಣದ ವೆಚ್ಚ ಸುಮಾರು 27000 ರೂಪಾಯಿ ಇತ್ತು. ಆದ್ದರಿಂದ, ಭಾರತ್ ಗೌರವ್ ರೈಲುಗಳ ದರವನ್ನು ಕನಿಷ್ಠ 20% ರಷ್ಟು ಕಡಿಮೆ ಮಾಡುವ ಗುರಿ ಭಾರತೀಯ ರೈಲ್ವೆಯ ಎದುರಿದೆ ಎಂದು ಅವರು ಹೇಳಿದರು.

ಭಾರತ್ ಗೌರವ್ ವಿಶೇಷ ಶ್ರೀ ಜಗನ್ನಾಥ ಯಾತ್ರಾ ರೈಲು ಪ್ರವಾಸ ಮತ್ತು ರಾಮಾಯಣ ಸರ್ಕ್ಯೂಟ್ ಭಾರತ್ ಗೌರವ್ ರೈಲು ಆಕ್ಯುಪೆನ್ಸಿ ಕೊರತೆ ಇತ್ತೀಚೆಗೆ ಕಾಡಿತ್ತು. ಹೀಗಾಗಿ ರೈಲ್ವೆಯು ಈ ಎರಡು ಯೋಜಿತ ಸೇವೆಗಳನ್ನು ರದ್ದುಗೊಳಿಸಬೇಕಾಗಿತ್ತು. ಈಗಿನಂತೆ, ಕಳಪೆ ಆಕ್ಯುಪೆನ್ಸೀ ಕಾರಣ ರೈಲ್ವೇಯು ರಾಮಾಯಣ ಮಾರ್ಗದಲ್ಲಿ ಕೇವಲ ಒಂದು ರೈಲನ್ನು ಓಡಿಸುವಂತಾಯಿತು. ಇದು ಆದಾಯದ ನಷ್ಟಕ್ಕೆ ಕಾರಣವಾಗುತ್ತದೆ. ಐಆರ್‌ಸಿಟಿಸಿಯು ಈ ಸಮಸ್ಯೆಯನ್ನು ಸಚಿವಾಲಯ ಎದುರು ಪ್ರಸ್ತಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಆಕ್ಯುಪೆನ್ಸಿಯಿಂದಾಗಿ ಆದಾಯದ ನಷ್ಟವನ್ನು ಅವರು ಎತ್ತಿ ತೋರಿಸಿದ್ದಾರೆ. ಟಿಕೆಟ್ ದರಗಳು ತುಂಬಾ ಹೆಚ್ಚಿರುವ ಕಾರಣ ಪ್ರಯಾಣಿಕರನ್ನು ಓಲೈಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸಚಿವಾಲಯಕ್ಕೆ ಐಆರ್‌ಸಿಟಿ ಅಧಿಕಾರಿಗಳು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ಪ್ರಯಾಣಿಕರಿಗೆ ಆರಾಮದಾಯಕ ಬರ್ತ್‌ಗಳು, ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಲಿಂಕ್ ಹಾಫ್‌ಮನ್ ಬುಶ್ (ಎಲ್‌ಹೆಚ್‌ಬಿ) ಕೋಚ್‌ಗಳನ್ನು ಮಾತ್ರ ಬಳಸಲು ರೈಲ್ವೆ ಮಂಡಳಿ ಕಳೆದ ವಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತಮ-ಗುಣಮಟ್ಟದ ಕೋಚ್‌ಗಳು ಮತ್ತು ಕಾರ್ಯಸಾಧ್ಯವಾದ ಪ್ರವಾಸ ಪ್ಯಾಕೇಜ್‌ಗಳನ್ನು ಒದಗಿಸುವ ಮೂಲಕ ರೈಲು ಆಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳಿಗೆ ಏಕೀಕೃತ ಗಮನ ನೀಡಲು, ಭಾರತ್ ಗೌರವ್ ರೈಲುಗಳ ಯೋಜನೆಯನ್ನು ಪರಿಶೀಲಿಸಲಾಗಿದೆ. ಇನ್ನು ಮುಂದೆ, ಭಾರತ್ ಗೌರವ್ ರೈಲುಗಳಲ್ಲಿ LHB ಕೋಚ್‌ಗಳಷ್ಟೆ ಇರಲಿದೆ ಎಂದು ಈ ತಿಂಗಳ ಆರಂಭದಲ್ಲಿ ಸಚಿವಾಲಯ ಹೇಳಿತ್ತು.

IPL_Entry_Point