ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bomb Blast: ಸನ್ನಿ ಲಿಯೋನ್‌ ಫ್ಯಾಶನ್‌ ಶೋ ಕಾರ್ಯಕ್ರಮ ಸ್ಥಳದ ಸಮೀಪವೇ ಪ್ರಬಲ ಸ್ಪೋಟ

Bomb blast: ಸನ್ನಿ ಲಿಯೋನ್‌ ಫ್ಯಾಶನ್‌ ಶೋ ಕಾರ್ಯಕ್ರಮ ಸ್ಥಳದ ಸಮೀಪವೇ ಪ್ರಬಲ ಸ್ಪೋಟ

Bomb blast: ನಟಿ ಸನ್ನಿ ಲಿಯೋನ್ ಭಾನುವಾರ ಪಾಲ್ಗೊಳ್ಳಲಿರುವ ಫ್ಯಾಶನ್ ಶೋ ಕಾರ್ಯಕ್ರಮದ ಸ್ಥಳದ ಸಮೀಪವೇ ಶನಿವಾರ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸನ್ನಿ ಲಿಯೋನ್‌ ಫ್ಯಾಶನ್‌ ಶೋ ಕಾರ್ಯಕ್ರಮ ಸ್ಥಳದ ಸಮೀಪವೇ ಪ್ರಬಲ ಸ್ಪೋಟ (ಸಾಂಕೇತಿಕ ಚಿತ್ರ)
ಸನ್ನಿ ಲಿಯೋನ್‌ ಫ್ಯಾಶನ್‌ ಶೋ ಕಾರ್ಯಕ್ರಮ ಸ್ಥಳದ ಸಮೀಪವೇ ಪ್ರಬಲ ಸ್ಪೋಟ (ಸಾಂಕೇತಿಕ ಚಿತ್ರ) (HT / Unsplash)

ಇಂಫಾಲ: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ನಟಿ ಸನ್ನಿ ಲಿಯೋನ್ ಭಾನುವಾರ ಪಾಲ್ಗೊಳ್ಳಲಿರುವ ಫ್ಯಾಶನ್ ಶೋ ಕಾರ್ಯಕ್ರಮದ ಸ್ಥಳದ ಸಮೀಪವೇ ಶನಿವಾರ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದಾಗ್ಯೂ, ಮಣಿಪುರದ ರಾಜಧಾನಿಯ ಹಟ್ಟಾ ಕಾಂಗ್ಜೆಬುಂಗ್ ಪ್ರದೇಶದಲ್ಲಿ ನಡೆದ ಈ ಸ್ಫೋಟದಲ್ಲಿ ಯಾರಿಗೂ ಗಾಯಗಳಾದ ವರದಿ ಇಲ್ಲ. ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ಕಾರ್ಯಕ್ರಮ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿದೆ.

ಸುಧಾರಿತ ಸ್ಫೋಟಕ ಸಾಧನ ಅಥವಾ ಗ್ರೆನೇಡ್‌ನಿಂದ ಸ್ಫೋಟ ಸಂಭವಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.

ಈ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಸ್ಫೋಟದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ಶುರುಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೂ ಮುನ್ನ, ಗಣರಾಜ್ಯೋತ್ಸವದ ಒಂದು ದಿನ ಮೊದಲು ಜನವರಿ 25 ರಂದು ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಮೂವರು ಪಾದಚಾರಿಗಳು ಗಾಯಗೊಂಡಿದ್ದರು. ಉಖ್ರುಲ್ ಪಟ್ಟಣದ ಸಮುದಾಯ ವೃತ್ತದಲ್ಲಿ (ಗಾಂಧಿ ಚೌಕ್) ಸಂಜೆ 5 ಗಂಟೆಗೆ ಈ ಘಟನೆ ನಡೆದಿತ್ತು. ಸ್ಫೋಟದ ನಂತರ, ಶಂಕಿತ ಹ್ಯಾಂಡ್ ಗ್ರೆನೇಡ್ ಸ್ಫೋಟಗೊಂಡಿದ್ದರಿಂದ ರಸ್ತೆ ದಾಟುತ್ತಿದ್ದ ಒಬ್ಬ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದರು.

ಗಮನಿಸಬಹುದಾದ ಇತರೆ ಸುದ್ದಿಗಳು

World Cancer Day: ಇಂದು ವಿಶ್ವ ಕ್ಯಾನ್ಸರ್‌ ದಿನ; ಕ್ಯಾನ್ಸರ್‌ ಕಾರಕಗಳ ವಿವರ, ಆರೋಗ್ಯಕರ ಜೀವನಕ್ಕೆ ಸೂತ್ರಗಳೇನು? ʼ

ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ 2022ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD) ವಾರ್ಷಿಕವಾಗಿ 41 ದಶಲಕ್ಷ ಸಾವುಗಳಿಗೆ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ಶೇಕಡ 74 ಸಾವುಗಳಿಗೆ ಸಮನಾಗಿದೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು? ಲೇಖನದ ಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್‌ ಮಾಡಿ

Swachh mandir abhiyan: ಮುಜರಾಯಿ ದೇಗುಲಗಳ ತ್ಯಾಜ್ಯ ನಿರ್ವಹಣೆಗೆ ʻಸ್ವಚ್ಛ ಮಂದಿರ ಅಭಿಯಾನʼ; ಫೆ.10ಕ್ಕೆ 12 ದೇಗುಲಗಳಲ್ಲಿ ಉದ್ಘಾಟನೆ

ಹಿಂದು ದೇವಾಲಯಗಳ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಮಹತ್ವಾಕಾಂಕ್ಷೆಯ "ಸ್ವಚ್ಛ ಮಂದಿರ ಅಭಿಯಾನ"ವನ್ನು ರೂಪಿಸಿದೆ. ಇದರ ಮೊದಲ ಹಂತಕ್ಕೆ ಫೆ.10ರಂದು ರಾಜ್ಯದ 12 ದೇಗುಲಗಳಲ್ಲಿ ಚಾಲನೆ ಸಿಗಲಿದೆ. ಪೂರ್ಣ ವರದಿ ಓದುವುದಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Karnataka assembly election: ವಿಧಾನಸಭಾ ಚುನಾವಣೆ 2023; ಧರ್ಮೇಂದ್ರ ಪ್ರಧಾನ್‌ ಬಿಜೆಪಿ ಉಸ್ತುವಾರಿ; ಕೆ.ಅಣ್ಣಾಮಲೈ ಬಿಜೆಪಿ ಸಹ-ಉಸ್ತುವಾರಿ

Karnataka assembly election: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಚುನಾವಣಾ ಸಹ-ಉಸ್ತುವಾರಿಯಾಗಿ ಕೆ.ಅಣ್ಣಾಮಲೈ ನೇಮಕ. ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

PM to visit Bengaluru: ಫೆ.6ರಂದು ಪ್ರಧಾನಿ ಮೋದಿ ಬೆಂಗಳೂರಿಗೆ; ಇಂಡಿಯಾ ಎನರ್ಜಿ ವೀಕ್‌ 2023 ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ

PM to visit Bengaluru: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.6ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್‌ 2023(India Energy Week 2023)ಕ್ಕೆ ಚಾಲನೆ ನೀಡಲಿದ್ದಾರೆ. ಅದಾಗಿ, E20 ಇಂಧನ ಲೋಕಾರ್ಪಣೆ, ಗ್ರೀನ್‌ ಮೊಬಿಲಿಟಿ ರಾಲಿಗೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point