FASTag Rules: ಫಾಸ್ಟ್ಯಾಗ್ 3 ವರ್ಷ ಅಥವಾ 5 ವರ್ಷಕ್ಕಿಂತ ಹಳೆಯದೇ, ಹಾಗಾದರೆ ಈ ಹೊಸ ಫಾಸ್ಟ್ಯಾಗ್ ನಿಯಮ ಗಮನಿಸಿ - 5 ಮುಖ್ಯ ಅಂಶಗಳು-business news fastag rules change from august 1 2024 is your tag 3 years or older check details 5 points uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fastag Rules: ಫಾಸ್ಟ್ಯಾಗ್ 3 ವರ್ಷ ಅಥವಾ 5 ವರ್ಷಕ್ಕಿಂತ ಹಳೆಯದೇ, ಹಾಗಾದರೆ ಈ ಹೊಸ ಫಾಸ್ಟ್ಯಾಗ್ ನಿಯಮ ಗಮನಿಸಿ - 5 ಮುಖ್ಯ ಅಂಶಗಳು

FASTag Rules: ಫಾಸ್ಟ್ಯಾಗ್ 3 ವರ್ಷ ಅಥವಾ 5 ವರ್ಷಕ್ಕಿಂತ ಹಳೆಯದೇ, ಹಾಗಾದರೆ ಈ ಹೊಸ ಫಾಸ್ಟ್ಯಾಗ್ ನಿಯಮ ಗಮನಿಸಿ - 5 ಮುಖ್ಯ ಅಂಶಗಳು

New FASTag rules effective from August1: ನೀವು ನಿಮ್ಮ ವಾಹನದಲ್ಲಿ ಬಳಸುತ್ತಿರುವ ಫಾಸ್ಟ್ಯಾಗ್ 3 ವರ್ಷ ಅಥವಾ 5 ವರ್ಷಕ್ಕಿಂತ ಹಳೆಯದೇ?, ಹಾಗಾದರೆ ಈ ಹೊಸ ಫಾಸ್ಟ್ಯಾಗ್ ನಿಯಮ ಗಮನಿಸಿ.

ಫಾಸ್ಟ್ಯಾಗ್ 3 ವರ್ಷ ಅಥವಾ 5 ವರ್ಷಕ್ಕಿಂತ ಹಳೆಯದೇ, ಹಾಗಾದರೆ ಈ ಹೊಸ ಫಾಸ್ಟ್ಯಾಗ್ ನಿಯಮ ಗಮನಿಸಬೇಕು. (ಸಾಂಕೇತಿಕ ಚಿತ್ರ)
ಫಾಸ್ಟ್ಯಾಗ್ 3 ವರ್ಷ ಅಥವಾ 5 ವರ್ಷಕ್ಕಿಂತ ಹಳೆಯದೇ, ಹಾಗಾದರೆ ಈ ಹೊಸ ಫಾಸ್ಟ್ಯಾಗ್ ನಿಯಮ ಗಮನಿಸಬೇಕು. (ಸಾಂಕೇತಿಕ ಚಿತ್ರ)

ನವದೆಹಲಿ: ಹೊಸ ಫಾಸ್ಟ್ಯಾಗ್‌ ನಿಯಮಗಳು ಆಗಸ್ಟ್ 1 (New FASTag rules effective from August1) ರಿಂದ ಅಂದರೆ ನಾಳೆಯಿಂದ ಜಾರಿಗೆ ಬರುತ್ತವೆ. ಟೋಲ್ ಪಾವತಿಯನ್ನು ಸರಾಗಗೊಳಿಸುವ ಮತ್ತು ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಜಾರಿಗೊಂಡಿರುವ ಈ ವ್ಯವಸ್ಥೆಯ ಕೂಲಂಕಷ ಪರೀಕ್ಷೆ ನಡೆಯುತ್ತಿದ್ದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಹೊಸ ಮಾರ್ಗಸೂಚಿಗಳನ್ನು ಹೊರತಂದಿದೆ. ಇದು ಮುಖ್ಯವಾಗಿ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ಅಗತ್ಯವನ್ನು ಕೇಂದ್ರೀಕರಿಸಿದೆ.

ಇದೇ ಬದಲಾವಣೆ ನಾಳೆಯಿಂದ ಜಾರಿಗೆ ಬರುತ್ತಿರುವಂಥದ್ದು.ಇದು ಫಾಸ್ಟ್ಯಾಗ್ ಸೇವೆ ಒದಗಿಸುವ ಕಂಪನಿಗಳಿಗೆ ಮತ್ತು ಗ್ರಾಹಕರಿಗೆ ಬಹಳ ಮಹತ್ವದ ಆದೇಶಗಳಾಗಿವೆ. ಫಾಸ್ಟ್ಯಾಗ್‌ ಗ್ರಾಹಕರ ಕೆವೈಸಿ ಪೂರ್ಣಗೊಳಿಸುವುದಕ್ಕೆ

ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಕೈವೈಸಿ ಪೂರ್ಣಗೊಳಿಸಲು ಆಯಾ ಕಂಪನಿಗಳಿಗೆ ಅಕ್ಟೋಬರ್ 31 ರವರೆಗೆ ಸಮಯವಿದೆ. ಇದರರ್ಥ ಗ್ರಾಹಕರಾಗಿ, ಯಾವುದೇ ಸೇವಾ ಅಡೆತಡೆಗಳನ್ನು ತಪ್ಪಿಸಲು ಈ ಅವಧಿಯಲ್ಲಿ ನಿಮ್ಮ ಕೆವೈಸಿ ಅಪ್ಡೇಟ್ ಆಗಿರುವುದನ್ನು ನೀವೇ ಖಚಿತಪಡಿಸಿಕೊಳ್ಳಬೇಕು.

ಎನ್‌ಪಿಸಿಐಯ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಾರ, 5 ವರ್ಷಗಳಿಗಿಂತ ಹಳೆಯದಾದ ಯಾವುದೇ ಫಾಸ್ಟ್ಯಾಗ್ ಅನ್ನು ಬದಲಿಸಬೇಕು. ವಾಹನ ಮಾಲೀಕರು ತಮ್ಮ ಟ್ಯಾಗ್‌ಗಳ ವಿತರಣೆಯ ದಿನಾಂಕಗಳನ್ನು ಪರಿಶೀಲಿಸಲು ಮತ್ತು ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ.

ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್‌ ಮಾಡಲು ಅಕ್ಟೋಬರ್ 31ರ ತನಕ ಅವಕಾಶ; 5 ಮುಖ್ಯ ಅಂಶಗಳು

ಹಳೆಯ ವಾಹನಗಳನ್ನು ಚಾಲನೆ ಮಾಡುವವರಿಗೆ, ಈ ನವೀಕರಣಗಳು ವಿಶೇಷವಾಗಿ ನಿರ್ಣಾಯಕ. ಆಗಸ್ಟ್ 1 ಮತ್ತು ಅಕ್ಟೋಬರ್ 31 ರ ನಡುವೆ, ಕಂಪನಿಗಳು ಎನ್‌ಪಿಸಿಐ ವಿಧಿಸಿದ ಹಲವಾರು ಷರತ್ತುಗಳನ್ನು ಪೂರೈಸುವ ಬಾಧ್ಯತೆಯನ್ನು ಹೊಂದಿವೆ.

1) ಮೂರರಿಂದ ಐದು ವರ್ಷಗಳಿಗಿಂತ ಹಳೆಯದಾದ ಫಾಸ್ಟ್‌ಟ್ಯಾಗ್‌ಗಳಿಗಾಗಿ ಅನ್ನು ಅಪ್‌ಡೇಟ್ ಮಾಡಬೇಕು.

2) ಐದು ವರ್ಷಕ್ಕಿಂತ ಹಳೆಯ ಫಾಸ್ಟ್ಯಾಗ್ ಅನ್ನು ಬದಲಾಯಿಸಬೇಕು. ಈ ಗಡುವಿನೊಳಗೆ ಬದಲಾಯಿಸದೇ ಇದ್ದರೆ ಬಳಕೆ ಕಷ್ಟವಾಗಬಹುದು.

3) ಆಗಸ್ಟ್ 1 ರಂದು ಎಲ್ಲ ಫಾಸ್ಟ್‌ಟ್ಯಾಗ್‌ಗಳನ್ನು ವಾಹನದ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಗೆ ಲಿಂಕ್ ಮಾಡಬೇಕು.

4) ಹೊಸ ವಾಹನ ಮಾಲೀಕರಾದರೆ, ಹೆಚ್ಚುವರಿಯಾಗಿ ಗಮನಿಸಬೇಕಾದ ಅಂಶ ಒಂದಿದೆ. ವಾಹನವನ್ನು ಖರೀದಿಸಿದ 90 ದಿನಗಳಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಅಪ್ಡೇಟ್ ಮಾಡಬೇಕು.

5) ಫಾಸ್ಟ್‌ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾಬೇಸ್‌ಗಳನ್ನು ನಿಖರವಾಗಿ ಪರಿಶೀಲಿಸುವ ಮತ್ತು ನವೀಕರಿಸುವ ಅಗತ್ಯವಿದ್ದು, ಇದು ದತ್ತಾಂಶ ವಿವರವು ನಿಖರವಾಗಿದೆ ಮತ್ತು ಅಪ್ಡೇಟ್ ಆಗಿದೆ ಎಂದು ಖಚಿತಪಡಿಸುತ್ತದೆ.

ಇದಲ್ಲದೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತರಿಗೊಳಿಸುವ ಕ್ರಮವೂ ಇದಾಗಿದೆ. ಪೂರೈಕೆದಾರರು ವಾಹನದ ಮುಂಭಾಗ ಮತ್ತು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು. ಇದು ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾದ ಕಾರನ್ನು ಗುರುತಿಸಲು ಸುಲಭವಾಗುತ್ತದೆ. ಹೆಚ್ಚುವರಿಯಾಗಿ, ಪ್ರತಿ ಫಾಸ್ಟ್‌ಟ್ಯಾಗ್ ಅನ್ನು ಮೊಬೈಲ್ ಸಂಖ್ಯೆಗೆ ಜೋಡಿಸಬೇಕು. ಸಂವಹನ ಮತ್ತು ಅಪ್ಡೇಟ್‌ಗಳು ಅಡ್ಡಿ ಇಲ್ಲದಂತೆ ನಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.