ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜಕಾರಣಿ, ಕ್ರಿಕೆಟಿಗರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ; ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಮಂತ್ರಿತರಿವರು

ರಾಜಕಾರಣಿ, ಕ್ರಿಕೆಟಿಗರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ; ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಮಂತ್ರಿತರಿವರು

ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ರಾಜಕೀಯ ನಾಯಕರು, ಕೈಗಾರಿಕೋದ್ಯಮಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವಾರು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ.

ರಾಮಮಂದಿರದ ಪ್ರತಿಷ್ಠಾಪನೆಗೆ ಮುಂಚಿತವಾಗಿ ಅಯೋಧ್ಯೆಯಲ್ಲಿ ಮೇಲ್ಸೇತುವೆಯ ಗೋಡೆಗಳಲ್ಲಿ ರಾಮ ಮತ್ತು ಸೀತಾ ದೇವಿಯನ್ನು ಚಿತ್ರ ಬಿಡಿಸುತ್ತಿರುವ ಕಲಾವಿದರು
ರಾಮಮಂದಿರದ ಪ್ರತಿಷ್ಠಾಪನೆಗೆ ಮುಂಚಿತವಾಗಿ ಅಯೋಧ್ಯೆಯಲ್ಲಿ ಮೇಲ್ಸೇತುವೆಯ ಗೋಡೆಗಳಲ್ಲಿ ರಾಮ ಮತ್ತು ಸೀತಾ ದೇವಿಯನ್ನು ಚಿತ್ರ ಬಿಡಿಸುತ್ತಿರುವ ಕಲಾವಿದರು (PTI)

ರಾಮ ಜನ್ಮಭೂಮಿ (Ram Mandir) ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುತ್ತಿರುವ ಬಾಲರಾಮನ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ (consecration ceremony of Ram Temple) ಹಲವಾರು ಗಣ್ಯರನ್ನು ಆಹ್ವಾನಿಸಲಾಗಿದೆ. ರಾಜಕೀಯ ನಾಯಕರಿಂದ ಹಿಡಿದು, ಕೈಗಾರಿಕೋದ್ಯಮಿಗಳು, ಕ್ರೀಡಾಪಟುಗಳು ಹಾಗೂ ಸಿನಿರಂಗದ ಸೆಲೆಬ್ರಿಟಿಗಳಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದದ ಅಯೋಧ್ಯೆ ಸಜ್ಜಾಗುತ್ತಿದ್ದು, ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಸಾವಿರಾರು ಗಣ್ಯರು ಭಾಗವಹಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಬರುವ ನಿರೀಕ್ಷೆಯಿದೆ. ಈ ನಡುವೆ ಆಹ್ವಾನಿತರ ಪಟ್ಟಿಯಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 7,000 ಅತಿಥಿಗಳು ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮುಖ್ಯ ಅತಿಥಿಗಳಾಗಿ ಇರಲಿದ್ದಾರೆ.

ಇದನ್ನೂ ಓದಿ | Ayodhya Ram Mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ; 7000ಕ್ಕೂ ಅಧಿಕ ಗಣ್ಯರ ಪ್ರವೇಶ ಪತ್ರ ಹೀಗಿದೆ ನೋಡಿ

ಬಾಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ 6,000 ಆಮಂತ್ರಣ ಕಾರ್ಡ್‌ಗಳನ್ನು ರಾಷ್ಟ್ರದಾದ್ಯಂತದ ಆಹ್ವಾನಿತರಿಗೆ ಕಳುಹಿಸಲಾಗಿದೆ. ಈವೆರೆಗೆ ಆಮಂತ್ರಣ ಪತ್ರಿಕೆ ಪಡೆದಿರುವ ಗಣ್ಯರ ಪಟ್ಟಿ ಇಲ್ಲಿದೆ.

ರಾಜಕಾರಣಿಗಳು

- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ

- ಬಿಹಾರ ಸಿಎಂ ನಿತೀಶ್ ಕುಮಾರ್

- ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

- ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮನಮೋಹನ್ ಸಿಂಗ್

- ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ

- ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

- ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ

- ಬಿಜೆಪಿಯ ಮುರಳಿ ಮನೋಹರ ಜೋಶಿ

- ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್

-ಅಖಿಲೇಶ್‌ ಯಾದವ್

ಕ್ರೀಡಾಪಟುಗಳು

- ವಿರಾಟ್ ಕೊಹ್ಲಿ

- ಸಚಿನ್ ತೆಂಡೂಲ್ಕರ್

- ಎಂಎಸ್‌ ಧೋನಿ

- ರವಿಚಂದ್ರನ್‌ ಅಶ್ವಿನ್‌

- ವೆಂಕಟೇಶ್‌ ಪ್ರಸಾದ್‌

- ದೀಪಿಕಾ ಕುಮಾರಿ

ಸಿನಿರಂಗದ ಸೆಲೆಬ್ರಿಟಿಗಳು

- ಅಮಿತಾಬ್ ಬಚ್ಚನ್

- ಮಾಧುರಿ ದೀಕ್ಷಿತ್

- ರಜನಿಕಾಂತ್

- ಅಕ್ಷಯ್ ಕುಮಾರ್

- ಅನುಪಮ್ ಖೇರ್

- ಚಿರಂಜೀವಿ

- ಸಂಜಯ್ ಲೀಲಾ ಬನ್ಸಾಲಿ

- ಧನುಷ್

- ಮೋಹನ್ ಲಾಲ್

- ರಣಬೀರ್ ಕಪೂರ್

- ಆಲಿಯಾ ಭಟ್

- ರಿಷಬ್ ಶೆಟ್ಟಿ

- ಕಂಗನಾ ರಣಾವತ್

- ಮಧುರ್ ಭಂಡಾರ್ಕರ್

- ಟೈಗರ್ ಶ್ರಾಫ್

- ಅಜಯ್ ದೇವಗನ್

- ಪ್ರಭಾಸ್

- ಯಶ್

- ಸನ್ನಿ ಡಿಯೋಲ್

- ಆಯುಷ್ಮಾನ್ ಖುರಾನಾ

- ಅರುಣ್ ಗೋವಿಲ್

- ದೀಪಿಕಾ ಚಿಖಾಲಿಯಾ ಟೋಪಿವಾಲಾ

- ಮಧುರ್ ಭಂಡಾರ್ಕರ್

- ಮಹಾವೀರ್ ಜೈನ್

- ಜಾಕಿ ಶ್ರಾಫ್

- ಅನಿಲ್ ಅಗರ್ವಾಲ್

- ರತನ್ ಟಾಟಾ

- ಗೌತಮ್ ಅದಾನಿ

- ಟಿಎಸ್ ಕಲ್ಯಾಣರಾಮನ್, ಕಲ್ಯಾಣ್ ಜ್ಯುವೆಲ್ಲರ್ಸ್ ಎಂಡಿ

- ಕುಮಾರ್ ಮಂಗಳಂ ಬಿರ್ಲಾ

- ಎನ್ ಚಂದ್ರಶೇಖರನ್

- ಎನ್ ಆರ್ ನಾರಾಯಣ ಮೂರ್ತಿ

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.

ಇಮೇಲ್: ht.kannada@htdigital.in

IPL_Entry_Point