Tamil Nadu Tomato Price: ಮಳೆ ತಂದಿಟ್ಟ ಪಜೀತಿ; ತಮಿಳುನಾಡಿನಲ್ಲಿ ಡಬಲ್​ ಆದ ಟೊಮೆಟೊ ಬೆಲೆ, ಇತರ ತರಕಾರಿಗಳ ದರ ಹೀಗಿದೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tamil Nadu Tomato Price: ಮಳೆ ತಂದಿಟ್ಟ ಪಜೀತಿ; ತಮಿಳುನಾಡಿನಲ್ಲಿ ಡಬಲ್​ ಆದ ಟೊಮೆಟೊ ಬೆಲೆ, ಇತರ ತರಕಾರಿಗಳ ದರ ಹೀಗಿದೆ ನೋಡಿ

Tamil Nadu Tomato Price: ಮಳೆ ತಂದಿಟ್ಟ ಪಜೀತಿ; ತಮಿಳುನಾಡಿನಲ್ಲಿ ಡಬಲ್​ ಆದ ಟೊಮೆಟೊ ಬೆಲೆ, ಇತರ ತರಕಾರಿಗಳ ದರ ಹೀಗಿದೆ ನೋಡಿ

Tamil Nadu vegetable prices: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 100 ರೂಪಾಯಿ ತಲುಪುತ್ತಿದೆ. ಕಳೆದ ವಾರ ಒಂದು ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊಗೆ ಈಗ 80-90 ರೂಪಾಯಿ ಕೊಟ್ಟು ಖರೀದಿಸಬೇಕಿದೆ.

ಗಗನಕ್ಕೇರಿದ ಟೊಮೆಟೊ ದರ
ಗಗನಕ್ಕೇರಿದ ಟೊಮೆಟೊ ದರ

ಚೆನ್ನೈ: ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಅದರಲ್ಲೂ ವಿಶೇಷವಾಗಿ ಟೊಮೆಟೊ ಬೆಲೆ ಕೇಳಿ ಜನರು ಶಾಕ್ ಆಗಿದ್ದಾರೆ.

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 100 ರೂಪಾಯಿ ತಲುಪುತ್ತಿದೆ. ಕಳೆದ ವಾರ ಒಂದು ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊಗೆ ಈಗ 80-90 ರೂಪಾಯಿ ಕೊಟ್ಟು ಖರೀದಿಸಬೇಕಿದೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಬೆಳೆದ ಟೊಮೆಟೊ ನಾಶವಾಗಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಮಳೆಯಾಗದೆ ಬೆಳೆ ಸರಿಯಾಗಿ ಆಗಿಲ್ಲ. ಇದರಿಂದ ತರಕಾರಿಗಳ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಇದು ಟೊಮೆಟೊ ಬೆಲೆ ಹಠಾತ್ ಏರಿಕೆಯಾಗಲು ಪ್ರಮುಖ ಕಾರಣ.

ಚೆನ್ನೈ ಜನತೆಗೆ ಅಗತ್ಯಗಳನ್ನು ಪೂರೈಸುವ ಮಾರುಕಟ್ಟೆಯಲ್ಲಿ ಟೊಮೆಟೊ ಮಾತ್ರವಲ್ಲದೆ ಇತರ ಹಲವು ತರಕಾರಿಗಳ ಬೆಲೆಯು ಸುಮಾರು 30 ಪ್ರತಿಶತದಷ್ಟು ಏರಿಕೆಯಾಗಿದೆ. ಪ್ರತಿ ಕಿಲೋಗ್ರಾಂಗೆ ವಿವಿಧ ತರಕಾರಿಗಳ ಪ್ರಸ್ತುತ ಬೆಲೆಗಳು ಹೀಗಿವೆ: ನಾರ್ಮಲ್​ ಬೀನ್ಸ್ - 80 ರೂ , ಅಗಲ ಬೀನ್ಸ್ - 80-90 ರೂ , ಬದನೆ - 50 ರೂ, ನುಗ್ಗೆಕಾಯಿ 60 ರೂ, ಕ್ಯಾರೆಟ್​ -40-60 ರೂ.

ತಮಿಳುನಾಡಿನಲ್ಲಿ, ತಿರುವಳ್ಳೂರು, ಕೃಷ್ಣಗಿರಿ ಮತ್ತು ಸೇಲಂನಂತಹ ಜಿಲ್ಲೆಗಳು ಹೇರಳವಾಗಿ ಟೊಮೆಟೊ ಬೆಳೆ ಬೆಳೆಯಲು ಹೆಸರುವಾಸಿಯಾಗಿದೆ. ರೈತರು ಕೆಲವು ವಾರಗಳ ಹಿಂದೆ ನ್ಯಾಯಯುತ ಬೆಲೆ ಸಿಗದ ಕಾರಣ ಸಾವಿರಾರು ಟನ್ ಟೊಮೆಟೊಗಳನ್ನು ಹೊಲಗಳಲ್ಲಿ ಮತ್ತು ರಸ್ತೆಗಳಲ್ಲಿ ಎಸೆದಿದ್ದರು. ಆಗ ಅವರಿಗೆ ಒಂದು ರೂಪಾಯಿ ಸಹ ಲಾಭ ಇರಲಿಲ್ಲ. ಆದರೆ ಈಗ ಪ್ರತಿ ಕೆಜಿಗೆ 100 ರೂಪಾಯಿ ತಲುಪಿದೆ

ತಮಿಳುನಾಡಿನಲ್ಲಿ ಅಗತ್ಯ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆಕಾಳುಗಳ ಬೆಲೆ ಕೂಡ ನಿರಂತರವಾಗಿ ಏರಿಕೆಯಾಗುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಬೇಕು ಮತ್ತು ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಯಕ ಅನ್ಬುಮಣಿ ರಾಮದಾಸ್ ಮಂಗಳವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ 100 ರೂಪಾಯಿ ಗಡಿ ದಾಟಿದ ಕೆಜಿ ಟೊಮೆಟೊ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಹೊಸ ದಾಖಲೆ ಬರೆದಿದ್ದು, ಸತತವಾಗಿ ಬೆಲೆ ಏರಿಕೆಯಾಗುತ್ತಲೇ ಇರುವ ಪರಿಣಾಮ ಕೆಜಿ ಟೊಮೆಟೊ ಬೆಲೆ 100 ರೂಪಾಯಿಯ ಗಡಿ ದಾಟಿದೆ. ಇವತ್ತಿನ ಸಗಟು ಮಾರುಕಟ್ಟೆ ಬೆಲೆಗಳನ್ನು ನೋಡುವುದಾದರೆ ಚಿಕ್ಕಬಳ್ಳಾಪುರದಲ್ಲಿ ಕೆಜಿಗೆ 105 ರೂಪಾಯಿ ಮಾರಾಟವಾಗಿದೆ. ಬೆಂಗಳೂರಿನ ಕೆಲವೆಡೆ 100 ರೂಪಾಯಿ ಇದ್ದರೆ, ಕೆಲ ಮಾರುಕಟ್ಟೆಗಳಲ್ಲಿ 90 ರೂಪಾಯಿಗೆ ಮಾಡಲಾಗುತ್ತಿದೆ. ರಾಮನಗರದಲ್ಲಿ 75, ಬಂಗಾರಪೇಟೆಯಲ್ಲಿ 64, ಕನಕಪುರ 75, ಶಿವಮೊಗ್ಗ 60, ಶ್ರೀನಿವಾಸಪುರ 70 ಹಾಗೂ ಕೋಲಾರದಲ್ಲಿ 66 ರೂಪಾಯಿ ಇದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.