Space tourism: ಭಾರತದಿಂದಲೂ ಬಾಹ್ಯಾಕಾಶ ಪ್ರವಾಸ ಶೀಘ್ರ, ಅಂತರಿಕ್ಷಕ್ಕೆ ಹಾರಬಯಸುವ ಕನಸಿಗರಿಗೆ ಸ್ವಾಗತ!
ಮಾನವಸಹಿತ ಬಾಹ್ಯಾಕಾಶ ಪ್ರವಾಸಕ್ಕಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದು, ಕೆಳಸ್ಥಾಯಿ ಕಕ್ಷೆಗೆ (ಎಲ್‌ಇಒ) ಮನುಷ್ಯರನ್ನು ಕರೆದುಕೊಂಡು ಹೋಗಿ ವಾಪಸ್ ಬರುವ ಯೋಜನೆ ರೂಪಿಸುತ್ತಿದೆ.
ಬೆಂಗಳೂರು: ದೂರದ ನೀಲಾಕಾಶವನ್ನು ಬೆರಗುಗಣ್ಣಿನಿಂದ ನೋಡುವ ಅಂತರಿಕ್ಷ ಪ್ರೇಮಿಗಳಿಗೆ ಸಿಹಿಸುದ್ದಿ. ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಹೊಸ ಸಾಹಸಕ್ಕೆ ಮುನ್ನುಡಿ ಬರೆಯುತ್ತಿದ್ದು, ಸದ್ದಿಲ್ಲದೆ ಮಾನವಸಹಿತ ಅಂತರಿಕ್ಷ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಇಂತಹ ಸಾಹಸಕ್ಕೆ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಮುಂದಾಗಿದ್ದು, ಈ ಕ್ಷೇತ್ರದಲ್ಲಿ ಭಾರತವೂ ದಾಪುಗಾಲಿಡುವ ಪ್ರಯತ್ನದಲ್ಲಿದೆ. ಮುಂಬರುವ ವರ್ಷಗಳಲ್ಲಿ ಇಸ್ರೊಗೆ ಇದು ಬಹುಕೋಟಿ ಡಾಲರ್ ಆದಾಯ ಗಳಿಸುವಂತಹ ಯೋಜನೆಯೂ ಆಗಿರಲಿದೆ.
"ಮಾನವಸಹಿತ ಬಾಹ್ಯಾಕಾಶ ಪ್ರವಾಸಕ್ಕಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದು, ಕೆಳಸ್ಥಾಯಿ ಕಕ್ಷೆಗೆ (ಎಲ್‌ಇಒ) ಮನುಷ್ಯರನ್ನು ಕರೆದುಕೊಂಡು ಹೋಗಿ ವಾಪಸ್ ಬರುವ ಯೋಜನೆ ರೂಪಿಸುತ್ತಿದೆ. ಇಂತಹ ಮಹತ್ತರ ಯೋಜನೆ ಸಾಧಿಸಲು ಭಾರತವು 61 ದೇಶಗಳ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಕಾರ್ಯನಿರ್ವಹಿಸುತ್ತಿದೆʼʼ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಜಾಗತಿಕವಾಗಿ ನೋಡುವುದಾದರೆ ವಿವಿಧ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸ್ಪೇಸ್ ಟೂರಿಸಂಗಾಗಿ ಪ್ರಯತ್ನಿಸುತ್ತಿವೆ. ಎಲೊನ್ ಮಸ್ಕ್ ಹೂಡಿಕೆ ಮಾಡಿರುವ ಸ್ಪೇಸ್ ಎಕ್ಸ್ ಈಗಾಗಲೇ ಬಾಹ್ಯಾಕಾಶ ಪ್ರವಾಸ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಸ್ಪೇಸ್ ಎಕ್ಸ್‌ನ ಡ್ರಾಗನ್ ಗಗನನೌಕೆಯು ಜನರನ್ನು ಶೂನ್ಯ ಗುರುತ್ವ ಇರುವ ಅಂತರಿಕ್ಷಕ್ಕೆ ಕರೆದುಕೊಂಡು ಹೋಗಿ ಬರುವ ಗುರಿಯನ್ನು ಹೊಂದಿದೆ.
ಇದೇ ಸಮಯದಲ್ಲಿ ಜೆಫ್ ಬಿಜೋಸ್ ನೇತೃತ್ವದ ಬ್ಲೂ ಒರಿಜಿನ್ ಕೂಡ ನೂತನ ಶಿಪಾರ್ಡ್ ಗಗನನೌಕೆ ಮೂಲಕ ಅಂತರಿಕ್ಷಕ್ಕೆ ಜನರನ್ನು ಜಾಲಿರೈಡ್ ಕರೆದುಕೊಂಡು ಹೋಗಲು ಉದ್ದೇಶಿಸಿದೆ. ಸುಮಾರು ಹತ್ತು ನಿಮಿಷ ಅಂತರಿಕ್ಷದಲ್ಲಿ ನಿಂತು ಭೂಮಿಯನ್ನು ಬಹುದೂರದಿಂದ ನೋಡುವ ಅವಕಾಶವನ್ನು ಬ್ಲೂ ಒರಿಜಿನ್ ಶಿಪಾರ್ಡ್ ಸ್ಪೇಸ್‌ಕ್ರಾಫ್ಟ್ ನೀಡಲಿದೆ. ಈ ಯೋಜನೆ ಮುಂದಿನ ವರ್ಷ ಲಾಂಚ್ ಆಗುವ ನಿರೀಕ್ಷೆಯಿದೆ.
ಭಾರತದ ಮಾನವಸಹಿತ ಗಗನಯಾನಕ್ಕೆ ಈಗಾಗಲೇ ಭಾರತೀಯ ವಾಯುಪಡೆಯ ನಾಲ್ವರು ಯೋಧರು ತಯಾರಿ ನಡೆಸಿದ್ದಾರೆ. ಎಚ್‌ಎಎಲ್‌ನ ಸ್ವದೇಶಿ ಗಗನನೌಕೆ ಮೂಲಕ ಗಗನಯಾತ್ರಿಗಳು ಅಂತರಿಕ್ಷಕ್ಕೆ ಪ್ರವಾಸ ಬೆಳೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಅಂತರಿಕ್ಷ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲಿದ್ದು, ಗಗನಯಾನ ಕೈಗೊಳ್ಳಲು ಬಯಸುವವರು ಈಗಲೇ ಹಣ ಹೊಂದಿಸಲು ಆರಂಭಿಸಬಹುದು!
ಸ್ಪೇಸ್ ಎಕ್ಸ್ ಸಂಸ್ಥೆಯು ಈಗಾಗಲೇ ಹಲವು ಜನರು ವ್ಯೋಮ ಪ್ರವಾಸ ಮಾಡಿದ್ದಾರೆ. ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಕಳೆದ ವರ್ಷ ನಾಲ್ವರು ಪ್ರವಾಸಿಗರು ಅಂತರಿಕ್ಷ ಪ್ರಯಾಣ ಕೈಗೊಂಡಿದ್ದರು. ನಾಸಾದ ಕೆನಡಿ ಅಂತರಿಕ್ಷ ಕೇಂದ್ರದಿಂದ ಸ್ಪೇಸ್‌ಎಕ್ಸ್ ರಾಕೆಟ್ ಮೂಲಕ ಗಗನಕ್ಕೆ ನೆಗೆದು ಬಳಿಕ ವಾಪಸ್ ಬಂದಿದ್ದರು. ಇವರ ಅಂತರಿಕ್ಷ ಪ್ರವಾಸದ ವೆಚ್ಚವನ್ನು ಎಲೊನ್ ಮಸ್ಕ್ ವಹಿಸಿಕೊಂಡಿದ್ದರು.
ವಿದೇಶದ ಇಂತಹ ಕಂಪನಿಗಳ ಬಾಹ್ಯಾಕಾಶ ಪ್ರವಾಸಕ್ಕೆ ಟಿಕೆಟ್ ದರ ಬಲುದುಬಾರಿ. ಹೀಗಿದ್ದರೂ, ತಮ್ಮ ಜೀವಮಾನದಲ್ಲಿ ಇಂತಹ ಕನಸು ಈಡೇರಿಸಿಕೊಳ್ಳಲು ಶ್ರೀಮಂತರು ಸಿದ್ಧರಿದ್ದಾರೆ. ವರ್ಜಿನ್ ಸಂಸ್ಥೆಯ ಅಂತರಿಕ್ಷ ಪ್ರಯಾಣಕ್ಕೆ ನೂರಾರು ಜನರು ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ತುಸು ತಡವಾದರೂ ಭಾರತೀಯರು ಇಂತಹ ಅನನ್ಯ ಅಂತರಿಕ್ಷ ಪ್ರವಾಸವನ್ನು ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಸಾಧ್ಯತೆ ನಿಚ್ಚಳವಾಗಿದೆ.