ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Meghalaya February 27 Polls: ನಾಳೆ ಮೇಘಾಲಯದಲ್ಲಿ ಚುನಾವಣೆ, ನದಿಕೊಳ್ಳ ದಾಟಿ, ಬೆಟ್ಟಗುಡ್ಡ ಚಾರಣಗೈದು ಮತಗಟ್ಟೆ ತಲುಪುವುದೇ ಸಾಹಸ

Meghalaya February 27 polls: ನಾಳೆ ಮೇಘಾಲಯದಲ್ಲಿ ಚುನಾವಣೆ, ನದಿಕೊಳ್ಳ ದಾಟಿ, ಬೆಟ್ಟಗುಡ್ಡ ಚಾರಣಗೈದು ಮತಗಟ್ಟೆ ತಲುಪುವುದೇ ಸಾಹಸ

Meghalaya: ಜಾರಿದರೆ ಪ್ರಪಾತಕ್ಕೆ ಬೀಳಬಹುದು ಎಂದು ಭಯಹುಟ್ಟಿಸುವಂತಹ ಗುಡ್ಡಬೆಟ್ಟಗಳ ಕಡಿದಾದ ದಾರಿಯಲ್ಲಿ ಗಂಟೆಗಟ್ಟಲೆ ನಡೆಯುತ್ತ, ನದಿಕೊಳ್ಳಗಳನ್ನು ದಾಟುತ್ತ ಇವರು ಮತಗಟ್ಟೆ ತಲುಪಬೇಕಿದೆ.

Meghalaya February 27 polls: ಮೇಘಾಲಯ ಚುನಾವಣೆ, ನದಿಕೊಳ್ಳಗಳ ದಾಟಿ, ಗಂಟೆಗಟ್ಟೆಲೆ ಗುಡ್ಡಬೆಟ್ಟ ಚಾರಣಗೈದು ಮತಗಟ್ಟೆ ತಲುಪುವುದೇ ಚುನಾವಣಾ ಅಧಿಕಾರಿಗಳಿಗೆ ಸಾಹಸ
Meghalaya February 27 polls: ಮೇಘಾಲಯ ಚುನಾವಣೆ, ನದಿಕೊಳ್ಳಗಳ ದಾಟಿ, ಗಂಟೆಗಟ್ಟೆಲೆ ಗುಡ್ಡಬೆಟ್ಟ ಚಾರಣಗೈದು ಮತಗಟ್ಟೆ ತಲುಪುವುದೇ ಚುನಾವಣಾ ಅಧಿಕಾರಿಗಳಿಗೆ ಸಾಹಸ

ಶಿಲಾಂಗ್‌: ಮೇಘಾಲಯ ಚುನಾವಣೆಯೆಂದರೆ ಅಧಿಕಾರಿಗಳು ಪತರಗುಟ್ಟುತ್ತಾರೆ. ಏಕೆಂದರೆ, ಮೇಘಾಲಯದ ಕೆಲವು ಮತಗಟ್ಟೆಗಳನ್ನು ತಲುಪುವುದು ನಿಜಕ್ಕೂ ಸವಾಲು. ಜಾರಿದರೆ ಪ್ರಪಾತಕ್ಕೆ ಬೀಳಬಹುದು ಎಂದು ಭಯಹುಟ್ಟಿಸುವಂತಹ ಗುಡ್ಡಬೆಟ್ಟಗಳ ಕಡಿದಾದ ದಾರಿಯಲ್ಲಿ ಗಂಟೆಗಟ್ಟಲೆ ನಡೆಯುತ್ತ, ನದಿಕೊಳ್ಳಗಳನ್ನು ದಾಟುತ್ತ ಇವರು ಮತಗಟ್ಟೆ ತಲುಪಬೇಕಿದೆ. ನಾಳೆ ನಡೆಯಲಿರುವ ಮೇಘಾಲಯ ಚುನಾವಣೆಗಾಗಿ ಈಗಲೇ ಹಲವು ಚುನಾವಣಾ ಅಧಿಕಾರಿಗಳು ಪ್ರಯಾಣ ಆರಂಭಿಸಿದ್ದು, ಏದುಸಿರುಬಿಡುತ್ತ ಗಮ್ಯ ತಲುಪಲು ಪ್ರಯತ್ನಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೇಘಾಲಯ ಚುನಾವಣಾ ಪ್ರಯಾಣ

  • ಕೆಲವು ಪ್ರದೇಶಗಳು ಕಡಿದಾಗಿದ್ದು ಪ್ರಯಾಣ ದುಸ್ತರ
  • 974 ಚುನಾವಣಾ ತಂಡವು ಶನಿವಾರವೇ ಪ್ರಯಾಣ ಆರಂಭಿಸಿವೆ
  • 35 ಮತದಾರರು ಇರುವ ಪುಟ್ಟ ಕಾಮ್ಸಿಂಗ್‌ ಮತಗಟ್ಟೆ ತಲುಪಲು ದೋಣಿ ಬಳಕೆ
  • ರೋಪ್‌ವೇಯಲ್ಲಿ ನೇತಾಡುತ್ತ ಮತಗಟ್ಟೆ ತಲುಪುವ ಕಷ್ಟ
  • ಇವಿಎಂಎಸ್‌, ಚುನಾವಣಾ ಸಾಮಾಗ್ರಿಗಳನ್ನು ಬುಟ್ಟಿಯಲ್ಲಿ ಹೊತ್ತು ಸಾಗಬೇಕಾದ ಕಷ್ಟ

59 ಅಸೆಂಬ್ಲಿ ಸೀಟುಗಳಿಗಾಗಿ ನಡೆಯಲಿರುವ ಚುನಾವಣೆಗಾಗಿ ಈಗಾಗಲೇ ಒಟ್ಟು 3,419 ಚುನಾವಣಾ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಎಫ್‌ಆರ್‌ ಖಾರ್ಕೊಂಗೋರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

"ಓಟ್ಟು 974 ತಂಡಗಳು ಶನಿವಾರವೇ ಮತಗಟ್ಟೆಯತ್ತ ಪ್ರಯಾಣ ಆರಂಭಿಸಿದ್ದಾರೆ. ಭಯ ಹುಟ್ಟಿಸುವಂತಹ ಅಸುರಕ್ಷಿತ ಗುಡ್ಡಗಾಡುಗಳ ದಾರಿಯಲ್ಲಿ, ನದಿಕೊಳ್ಳಗಳ ದಾರಿಯಲ್ಲಿ ಇವರು ಪ್ರಯಾಣ ಬೆಳೆಸುತ್ತಿದ್ದಾರೆ. ಈಗಾಗಲೇ 893 ತಂಡಗಳು ತಮ್ಮ ಮತಗಟ್ಟೆ ತಲುಪಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಚುನಾವಣಾ ಅಧಿಕಾರಿಗಳ ತಂಡವು ಕಡಿದಾದ ಪರ್ವತ ಮಾರ್ಗಗಗಳಲ್ಲಿ ಚಾರಣ ಮಾಡುತ್ತಿವೆ. ನದಿಗಳನ್ನು ದಾಟುತ್ತ, ಕಷ್ಟಕರವಾದ ಭೂಪ್ರದೇಶಗಳಲ್ಲಿ ಪ್ರಯಾಣಿಸುತ್ತ ಇವರು ಸಾಗುತ್ತಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ರೋಪ್‌ ವೇ ಮೂಲಕ ಇವರು ಪ್ರಯಾಣ ಮಾಡಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇವಲ 35 ಮತದಾರರನ್ನು ಹೊಂದಿರುವ ಅಮ್ಲಾರೆಮ್‌ ಕ್ಷೇತ್ರದ ಕಾಮ್ಸಿಂಗ್‌ ಮತದಾನ ಕೇಂದ್ರವನ್ನು ತಲುಪಲು ಚುನಾವಣಾ ಅಧಿಕಾರಿಗಳು ದೋಣಿ ಬಳಸಿದ್ದಾರೆ ಎಂದು ಖಾರ್ಕೊಂಗೋರ್ ಹೇಳಿದ್ದಾರೆ.

ಕೇವಲ 35 ಮತದಾರರನ್ನು ಹೊಂದಿರುವ ಅಮ್ಲಾರೆಮ್ ಕ್ಷೇತ್ರದ ಕಾಮ್ಸಿಂಗ್ ಮತದಾನ ಕೇಂದ್ರವನ್ನು ತಲುಪಲು ಚುನಾವಣಾ ಅಧಿಕಾರಿಗಳು ದೋಣಿ ಸಾಲಿನಲ್ಲಿರಬೇಕಾಯಿತು ಎಂದು ಖಾರ್ಕೊಂಗೋರ್ ಹೇಳಿದ್ದಾರೆ.

ಕೆಲವು ತಂಡಗಳು ಸಾಂಪ್ರದಾಯಿಕ ಖಾಸಿ ಬುಟ್ಟಿ 'ಖೋಹ್' ದೊಳಗೆ ಇವಿಎಂಎಸ್ ಮತ್ತು ಇತರ ಮತದಾನ ಸಾಮಗ್ರಿಗಳನ್ನು ಹೊತ್ತುಕೊಂಡು ಸಾಗಿದ್ದಾರೆ. ಒಟ್ಟಾರೆ ಎಲ್ಲಾ ಮತದಾರರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಗಾರೊ ಹಿಲ್ಸ್‌ನ ರೊಂಗರಾ ಸಿಜು ಕ್ಷೇತ್ರದ ರೊಂಗ್‌ಚೆಂಗ್ ಮತದಾನ ಕೇಂದ್ರಕ್ಕೆ ತಲುಪಿರುವುದೇ ಪ್ರಮುಖ ಸಾಹಸ. ಇಲ್ಲಿಗೆ. ತಲುಪಲು ಎಂಟು ಗಂಟೆಗಳ ಕಾಲ ಚಾರಣ ಮಾಡಿದ್ದಾರೆ. ಇತರ ಕೆಲವು ತಂಡಗಳು ತಮ್ಮ ಗಮ್ಯಸ್ಥಾನವನ್ನು ತಲುಪಲು ಸುಮಾರು ನಾಲ್ಕು ಗಂಟೆಗಳ ಕಾಲ ಚಾರಣ ಮಾಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚು ಸವಾಲು ಇಲ್ಲದ ಪ್ರದೇಶಗಳಲ್ಲಿರುವ ಮತಗಟ್ಟೆಗಳಿಗೆ ಇನ್ನುಳಿದ 2,445 ಚುನಾವಣಾ ಅಧಿಕಾರಿಗಳ ತಂಡವು ಇಂದು ಪ್ರಯಾಣ ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ.

ಮೇಘಾಲಯ ಅಸೆಂಬ್ಲಿಯಲ್ಲಿ 60 ಸ್ಥಾನಗಳಿವೆ. ಆದರೆ ಯುಡಿಪಿ ಅಭ್ಯರ್ಥಿ ಎಚ್‌ಡಿಆರ್ ಲಿಂಗ್‌ಡೋ ಅವರು ಮೃತಪಟ್ಟಿರುವುದರಿಂದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೋಹಿಯಾಂಗ್ ಕ್ಷೇತ್ರಕ್ಕೆ ಮತದಾನವನ್ನು ಮುಂದೂಡಲಾಗಿದೆ.

ಒಟ್ಟು 3,419 ಮತಗಟ್ಟೆಗಳಲ್ಲಿ 640 ಮತಗಟ್ಟೆಗಳನ್ನು ದುರ್ಬಲ ಎಂದು, 323 ಬೂತ್‌ಗಳನ್ನು ನಿರ್ಣಾಯಕವೆಂದು ಗುರುತಿಸಲಾಗಿದೆ. ಇವುಗಳಲ್ಲಿ 84 ಬೂತ್‌ಗಳು ನಿರ್ಣಾಯಕ ಮತ್ತು ದುರ್ಬಲವಾಗಿವೆ.

ಒಟ್ಟು 369 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.

IPL_Entry_Point