Rahul Gandhi: ರಾಜಕಾರಣಿಗಳಲ್ಲಿ ತುಂಬಾ ಚೆನ್ನಾಗಿ ಅಡುಗೆ ಮಾಡೋರು ಯಾರೆಂದು ಹೇಳಿದ್ರು ರಾಹುಲ್ ಗಾಂಧಿ; ಯಾರಿರಬಹುದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ರಾಜಕಾರಣಿಗಳಲ್ಲಿ ತುಂಬಾ ಚೆನ್ನಾಗಿ ಅಡುಗೆ ಮಾಡೋರು ಯಾರೆಂದು ಹೇಳಿದ್ರು ರಾಹುಲ್ ಗಾಂಧಿ; ಯಾರಿರಬಹುದು

Rahul Gandhi: ರಾಜಕಾರಣಿಗಳಲ್ಲಿ ತುಂಬಾ ಚೆನ್ನಾಗಿ ಅಡುಗೆ ಮಾಡೋರು ಯಾರೆಂದು ಹೇಳಿದ್ರು ರಾಹುಲ್ ಗಾಂಧಿ; ಯಾರಿರಬಹುದು

ರಾಜಕಾರಣಿಗಳ ಪೈಕಿ ತಮ್ಮ ಇಷ್ಟದ ಒಳ್ಳೆ ಅಡುಗೆ ಮಾಡುವ ವ್ಯಕ್ತಿ ಯಾರೆಂಬುದನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.

 ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕಾರಣಿಯಲ್ಲಿ ತುಂಬಾ ಚೆನ್ನಾಗಿ ಅಡುಗೆ ಮಾಡೋರು ಯಾರು ಎಂಬುದನ್ನು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕಾರಣಿಯಲ್ಲಿ ತುಂಬಾ ಚೆನ್ನಾಗಿ ಅಡುಗೆ ಮಾಡೋರು ಯಾರು ಎಂಬುದನ್ನು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನವದೆಹಲಿ: ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಸಂದರ್ಶನವೊಂದರಲ್ಲಿ ತಮ್ಮ ಲೈಫ್ ಬಗ್ಗೆ ಒಂದಿಷ್ಟು ಅಂಶಗಳನ್ನು ಹಂಚಿಕೊಂಡಿದ್ದು, ಆಹಾರದ ಬಗ್ಗೆ ತಮಗಿರುವ ಉತ್ಸಾಹವನ್ನು ವಿವರಿಸಿದ್ದಾರೆ. ಇಷ್ಟದ ಅಡುಗೆ ಮಾಡುವ ವ್ಯಕ್ತಿ (Favourite Cook) ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ಗಣ್ಯರು ತಮ್ಮ ಇಷ್ಟದ ಕುಕ್ ಯಾರೆಂದು ಕೇಳಿದರೆ ತಾಯಿ, ಅಕ್ಕ ತಂಗಿ, ಪತ್ನಿ ಇಲ್ವವೇ ಮಾಸ್ಟರ್ ಶೆಫ್ ಗಳ ಹೆಸರುಗಳನ್ನು ಹೇಳ್ತಾರೆ. ಆದರೆ ರಾಹುಲ್ ಗಾಂಧಿ ಹೇಳಿರುವ ಹೆಸರು ಅಚ್ಚರಿ ಮೂಡಿಸುವಂತೆ ಇದೆ.

'ಖಾನೆ ಮೇ ಕ್ಯಾ ಹೈ' (ಆಹಾರದಲ್ಲಿ ಏನಿದೆ) ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ, ರಾಜಕಾರಣಿಗಳ ಪೈಕಿ ಉತ್ತಮವಾಗಿ ಅಡುಗೆ ಮಾಡುವಂತಹ ತಮ್ಮಷ್ಟಿದ ವ್ಯಕ್ತಿಯಾರೆಂದು ಹೇಳಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಉತ್ತಮ ಆಹಾರವನ್ನು ತಯಾರಿಸುತ್ತಾರೆ ಅಂತ ಬಹಿರಂಗ ಪಡಿಸಿದ್ದಾರೆ.

ಆದರೆ ನಮ್ಮೆಲ್ಲರ ನಡುವೆ ನನ್ನ ತಾಯಿ ಸೋನಿಯಾ ಗಾಂಧಿ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅಡುಗೆಯಲ್ಲಿ ಅವರೇ ನಂಬರ್ ಆಗಿದ್ದಾರೆ ಎಂದು ಹೇಳಿದ್ದಾರೆ. ನನ್ನ ಸಹೋದರಿಗೆ ಅಡುಗೆ ಮಾಡೋದು ಇಷ್ಟ ಆಗೋದಿಲ್ಲ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಅಡುಗೆ ವಿಷಯದಲ್ಲಿ ರಾಹುಲ್ ಗಾಂಧಿ ಎರಡನೇ ಸ್ಥಾನ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಬೆಳಿಗ್ಗೆ ಕಾಫಿ ಕುಡಿಯುತ್ತಾರೆ. ಆದರೆ ರಾತ್ರಿ ವೇಳೆ ಟೀ ಗೆ ಆದ್ಯತೆ ನೀಡೋದಾಗಿ ಹೇಳಿಕೊಂಡಿದ್ದಾರೆ.

ಫ್ರೆಂಚ್ ಆಹಾರ ಪದಾರ್ಥಗಳಿಗಿಂತ ಭಾರತೀಯ ಊಟ ಇಷ್ಟ ಎಂದಿರುವ ರಾಗಾ, ಸಿಹಿ ಮತ್ತು ಮಸಾಲೆಯುಕ್ತ ಆಹಾರದಲ್ಲಿ ಯಾವುದೇಕ್ಕೆ ಆದ್ಯತೆ ನೀಡುತ್ತೀರಿ ಅಂತ ಕೇಳಿದರೆ ಮೊದಲಿನದ್ದು ಎಂದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹಳೆಯ ದೆಹಲಿಯ ಮಟಿಯಾ ಮಹಲ್ ಮಾರುಕಟ್ಟೆ ಹಾಗೂ ಬಂಗಾಳಿ ಮಾರುಕಟ್ಟೆಗೆ ಭೇಟಿ ನೀಡಿದ್ದ ರಾಹಲ್, ಜನಪ್ರಿಯ ಭಕ್ಷ್ಯಗಳನ್ನು ಟೇಸ್ಟ್ ಮಾಡಿದ್ದರು. ಮಟಿಯಾ ಮಹಲ್ ಪ್ರದೇಶದಲ್ಲಿ ಪ್ರಸಿದ್ಧ "ಶರಬತ್" ಮಾರಾಟಗಾರರನ್ನು ಭೇಟಿಯಾಗಿದ್ದರು. ಬಂಗಾಳಿ ಮಾರುಕಟ್ಟೆಯಲ್ಲಿ ಹಣ್ಣುಗಳು ಹಾಗೂ ಗೋಲ್ಗೊಪ್ಪ ಸವಿದು ಖುಷಿ ಪಟ್ಟಿದ್ದರು.

ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ

ಮೋದಿ ಉಪನಾಮ ಹೇಳಿಕೆ ಪ್ರಕರಣದಲ್ಲಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿನ್ನೆಯಷ್ಟೇ (ಏ.22, ಶನಿವಾರ) ನವದೆಹಲಿಯ ಅಧಿಕೃತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.

2005 ರಿಂದ ತುಘಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ 52 ವರ್ಷದ ಗಾಂಧಿ, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ನ ನ್ಯಾಯಾಲಯದಿಂದ ದೋಷಿ ಎಂದು ತೀರ್ಪು ನೀಡಿದ ನಂತರ ಸಂಸತ್‌ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

ಸತ್ಯವನ್ನು ಮಾತನಾಡಲು ನಾನು ಯಾವುದೇ ಬೆಲೆ ತೆರಲು ನಾನು ಸಿದ್ಧ. ಈಗ ಅವರು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ನಾಳೆ ಜೈಲಿಗೂ ಕಳುಹಿಸಬಹುದು. ಆದರೆ ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಸತ್ಯ ಮಾತನಾಡುವುದನ್ನು ಮತ್ತು ಜನರ ಧ್ವನಿಯಾಗುವ ನನ್ನ ಕರ್ತವ್ಯವನ್ನು ನಾನು ನಿಭಾಯಯಿಸುತ್ತೇನೆ ಎಂದು ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದರು. ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.