ಮಳೆ ನಿಂತರೂ ತಗ್ಗದ ಪ್ರವಾಹ ಪರಿಸ್ಥಿತಿ; ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ, ಜನ ಹೈರಾಣ
ಮಿಚಾಂಗ್ ಸೈಕ್ಲೋನ್‌ಗೆ ತತ್ತರಿಸಿರುವ ಚೆನ್ನೈಗೆ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಆದರೆ ಪ್ರವಾಹ ಪರಿಸ್ಥಿತಿಯಿಂದ ಜನ ಹೈರಾಣವಾಗಿದ್ದಾರೆ. ಸದ್ಯದ ಸ್ಥಿತಿ ಹೇಗಿದೆ ನೋಡಿ.
(1 / 8)
ಮಿಚಾಂಗ್ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದಾಗಿ ತಮಿಳುನಾಡು ರಾಜಧಾನಿ ಚೆನ್ನೈನ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.(Hindustan Times)
(2 / 8)
ಭಾರಿ ಮಳೆಯಿಂದಾಗಿ ಚೆನ್ನೈನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದವು.(PTI)
(3 / 8)
ಚೆನ್ನೈನ ಪ್ರವಾಹ ಪರಿಸ್ಥಿತಿಯ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಂಬ್ಯುಲೆನ್ಸ್ ಬರಲು ಸಾಧ್ಯವಾಗದ ಕಾರಣ ವೃದ್ಧೆಯೊಬ್ಬರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸ್ಥಳೀಯರು ನೆರವಾದರು. ವಿವಿಧ ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.(PTI)
(4 / 8)
ಮಿಚಾಂಗ್ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದ ಸಂಪೂರ್ಣ ಜಲಾವೃತವಾಗಿದ್ದ ರಸ್ತೆಯಲ್ಲೇ ಜನರು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.(PTI)
(5 / 8)
ಚೆನ್ನೈನಲ್ಲಿ ಮಳೆ ಕಡಿಮೆಯಾಗಿದ್ದರೂ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿಲ್ಲ. ವೆಲಚೇರಿ ಮತ್ತು ಪಲ್ಲಿಕರಣಾ ಪ್ರದೇಶಗಳಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ.(PTI)
(6 / 8)
ಭಾರಿ ಮಳೆಯ ಪರಿಣಾಮವಾಗಿ ಪಲ್ಲಿಕರನೈ ಪ್ರದೇಶದ ನಾರಾಯಣಪುರಂ ಕೆರೆ ಒಡೆದ ಪರಿಣಾಮ ವೆಲಚೇರಿ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವ್ಯಕ್ತಿಯೊಬ್ಬರು ತನ್ನ ಸೈಕಲ್ ಮೂಲಕ ಮೊಣಕಾಲು ಉದ್ದದ ನೀರಿನಲ್ಲಿ ಹೋಗುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. ದಿನನಿತ್ಯ ಕೆಲಸಕ್ಕೆ ಹೋಗಿ ಜೀವನ ನಡೆಸುವ ಕಾರ್ಮಿಕರಿಗೆ ಸೈಕ್ಲೋನ್‌ನಿಂದ ಭಾರಿ ಸಮಸ್ಯೆಯಾಗಿದೆ.(PTI)
(7 / 8)
ಮಿಚಾಂಗ್ ಚಂಡಮಾರುತ ಕೇವಲ ಜನ ಸಾಮಾನ್ಯರಿಗಷ್ಟೇ ಅಲ್ಲದೆ, ಪ್ರಾಣಿ ಪಕ್ಷಿಗಳಿಗೂ ಹೊಡೆತ ನೀಡಿದೆ. ಬೀದಿ ನಾಯಿಗಳು ಆಹಾರಕ್ಕಾಗಿ ಪರದಾಡುವಂತಾಗಿದೆ. ಚೆನ್ನೈನ ಪ್ರದೇಶವೊಂದರಲ್ಲಿ ಯುವತಿ ಬೀದಿ ನಾಯಿಗೆ ಆಹಾರ ನೀಡುತ್ತಿರುವುದನ್ನ ಫೋಟೊದಲ್ಲಿ ಕಾಣಬಹುದು. (PTI)
ಇತರ ಗ್ಯಾಲರಿಗಳು