ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Train Accident: ಕೋರಮಂಡಲ ಬೋಗಿಗಳಿಗೆ ಯಶವಂತಪುರ ಹೌರಾ ಎಕ್ಸ್‌ಪ್ರೆಸ್‌ ಡಿಕ್ಕಿ; ಸಂತ್ರಸ್ತರ ನೆರವಿಗೆ ಸಹಾಯವಾಣಿ ಸಂಖ್ಯೆ ಪ್ರಕಟ

Train Accident: ಕೋರಮಂಡಲ ಬೋಗಿಗಳಿಗೆ ಯಶವಂತಪುರ ಹೌರಾ ಎಕ್ಸ್‌ಪ್ರೆಸ್‌ ಡಿಕ್ಕಿ; ಸಂತ್ರಸ್ತರ ನೆರವಿಗೆ ಸಹಾಯವಾಣಿ ಸಂಖ್ಯೆ ಪ್ರಕಟ

Train Accident: ಒಡಿಶಾದ ಭೀಕರ ರೈಲು ದುರಂತದ ಕಾರಣ ರೈಲು ಪ್ರಯಾಣಿಕರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಸಂತ್ರಸ್ತರು ಕೂಡ ತೊಂದರೆ ಒಳಗಾಗಿದ್ದಾರೆ. ಅವರ ನೆರವಿಗಾಗಿ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಹೆಲ್ಪ್‌ಲೈನ್‌ ನಂಬರ್‌ ಶುರುಮಾಡಲಾಗಿದೆ. ಈ ಸಹಾಯವಾಣಿ ಸಂಖ್ಯೆಗಳ ವಿವರ ಹೀಗಿದೆ.

ರೈಲ್ವೆ ಸಹಾಯವಾಣಿ ನಂಬರ್‌ಗಳು
ರೈಲ್ವೆ ಸಹಾಯವಾಣಿ ನಂಬರ್‌ಗಳು

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಗೂಡ್ಸ್‌ ರೈಲು ಮತ್ತು ಎರಡು ಎಕ್ಸ್‌ಪ್ರೆಸ್‌ ರೈಲುಗಳ ಬೋಗಿಗಳು ಹಳಿ ತಪ್ಪಿವೆ. ಈ ಭೀಕರ ದುರಂತದಲ್ಲಿ ಹಲವರು ಮೃತಪಟ್ಟಿರುವ ಆತಂಕ ವ್ಯಕ್ತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಅಪಘಾತದಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ (12841)ನ 10-12 ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿವೆ. ಸ್ವಲ್ಪ ಸಮಯದ ನಂತರ, ಯಶವಂತಪುರದಿಂದ ಹೌರಾಕ್ಕೆ ಹೋಗುತ್ತಿದ್ದ ಯಶವಂತಪುರ ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (12864) ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ 3-4 ಬೋಗಿಗಳು ಹಳಿತಪ್ಪಿದವು ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದರು.

ಈ ದುರಂತದ ಕಾರಣ ರೈಲು ಪ್ರಯಾಣಿಕರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಅವರ ನೆರವಿಗಾಗಿ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಹೆಲ್ಪ್‌ಲೈನ್‌ ನಂಬರ್‌ ಶುರುಮಾಡಲಾಗಿದೆ. ಈ ಸಹಾಯವಾಣಿ ಸಂಖ್ಯೆಗಳ ವಿವರ ಹೀಗಿದೆ.

ಸೌತ್‌ ವೆಸ್ಟರ್ನ್‌ ರೈಲ್ವೆ ಸ್ಥಾಪಿಸಿರುವ ರೈಲ್ವೆ ಹೆಲ್ಪ್‌ಲೈನ್‌ ನಂಬರ್‌ (Helpline numbers)ಗಳಿವು

ಬೆಂಗಳೂರು (Bangalore) 080-22356409

ಬಂಗಾರ್‌ಪೇಟ್‌ (Bangarpet): 08153 255253

ಕುಪ್ಪಂ (Kuppam) : 8431403419

ಎಸ್‌ಎಂವಿಬಿ (SMVB): 09606005129

ಕೆಜೆಎಂ (KJM) :+91 88612 03980

ಸೌತ್‌ ಈಸ್ಟರ್ನ್ಸ್‌ ರೈಲ್ವೆ ಸ್ಥಾಪಿಸಿರುವ ರೈಲ್ವೆ ಹೆಲ್ಪ್‌ ಲೈನ್‌ ನಂಬರ್‌ಗಳಿವು

ಹೌರಾ (Howrah) 033-26382217

ಖರಗಪುರ (Kharagpur): 8972073925 ಮತ್ತು 9332392339

ಬಾಲಸೋರ್‌ (Balasore): 8249591559 ಮತ್ತು 7978418322

ಶಾಲಿಮಾರ್‌ (Shalimar): 9903370746

ಸಂತ್ರಗಚಿ (Santragachi): 8109289460 ಮತ್ತು 8340649469

ಭದ್ರಕ (Bhadrak): 7894099579 ಮತ್ತು 9337116373

ಜಾಜ್‌ಪುರ ಕೆನ್ಜೋಹರ್‌ ರಸ್ತೆ (Jajpur Keonjhar Road): 9676974398

ಕಟಕ್‌ (Cuttack): 8455889917

ಭುವನೇಶ್ವರ (Bhubaneswar): 06742534027

ಖುರ್ದಾ ರಸ್ತೆ (Khurda Road): 6370108046 ಮತ್ತು 06742492245

ಕೋರಮಂಡಲ ಬೋಗಿಗಳಿಗೆ ಯಶವಂತಪುರ ಹೌರಾ ಎಕ್ಸ್‌ಪ್ರೆಸ್‌ ಡಿಕ್ಕಿ; 300ರ ಗಡಿ ದಾಟಿದ ಸಾವಿನ ಸಂಖ್ಯೆ ಶಂಕೆ

ಒಡಿಶಾದಲ್ಲಿ ಗೂಡ್ಸ್​ ರೈಲಿಗೆ ಯುಪಿ ಶಾಲಿಮಾರ್- ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿದ್ದು, ಹಲವು ಬೋಗಿಗಳು ಹಳಿ ತಪ್ಪಿದ್ದವು. ಈ ಬೋಗಿಗಳಿಗೆ ಯಶವಂತಪುರ ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದು, ಇನ್ನಷ್ಟು ಬೋಗಿಗಳು ಹಳಿ ತಪ್ಪಿವೆ. ಈ ಭೀಕರ ದುರಂತದಲ್ಲಿ ಸಾವಿನ ಸಂಖ್ಯೆ 300ರ ಗಡಿ ದಾಟುವ ಆತಂಕ ವ್ಯಕ್ತವಾಗಿದೆ.

ಇಂದು (ಜೂ.2) ಸಂಜೆ 7 ಗಂಟೆಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ನ 10-12 ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿವೆ. ಸ್ವಲ್ಪ ಸಮಯದ ನಂತರ, ಯಶವಂತಪುರದಿಂದ ಹೌರಾಕ್ಕೆ ಹೋಗುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ 3-4 ಬೋಗಿಗಳು ಹಳಿತಪ್ಪಿದವು ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದರು.

IPL_Entry_Point