ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಕುಳಿತುಕೊಳ್ಳಲು ಕುರ್ಚಿ ಕೊಟ್ಟಿಲ್ಲ ಅಂತ ಕಾರ್ಯಕರ್ತನ ಮೇಲೆ ಕಲ್ಲೆಸೆದ ಸಚಿವ!

Viral Video: ಕುಳಿತುಕೊಳ್ಳಲು ಕುರ್ಚಿ ಕೊಟ್ಟಿಲ್ಲ ಅಂತ ಕಾರ್ಯಕರ್ತನ ಮೇಲೆ ಕಲ್ಲೆಸೆದ ಸಚಿವ!

Viral Video: ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನಗೆ ಕುರ್ಚಿ ತರಲು ವಿಳಂಬ ಮಾಡಿದ ಕಾರಣ ತಮಿಳುನಾಡಿನ ಸಚಿವರೊಬ್ಬರು ತಾಳ್ಮೆ ಕಳೆದುಕೊಂಡು ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಮಂಗಳವಾರ ನಡೆದಿದೆ.

ತಿರುವಳ್ಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ ತಮಿಳುನಾಡು ಸಚಿವ ಎಸ್ ಎಂ ನಾಸರ್!
ತಿರುವಳ್ಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ ತಮಿಳುನಾಡು ಸಚಿವ ಎಸ್ ಎಂ ನಾಸರ್! (Twitter)

ಚೆನ್ನೈ: ಕುಳಿತುಕೊಳ್ಳುವುದಕ್ಕೆ ಕುರ್ಚಿ ಕೊಟ್ಟಿಲ್ಲ ಎಂದು ಸಿಟ್ಟಿಗೆದ್ದ ತಮಿಳುನಾಡು ಸಚಿವ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲೆಸೆಯುತ್ತಿರುವ ದೃಶ್ಯ ಇರುವಂಥ ವಿಡಿಯೋ ಈಗ ವೈರಲ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನಗೆ ಕುರ್ಚಿ ತರಲು ವಿಳಂಬ ಮಾಡಿದ ಕಾರಣ ತಮಿಳುನಾಡಿನ ಸಚಿವರೊಬ್ಬರು ತಾಳ್ಮೆ ಕಳೆದುಕೊಂಡು ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಮಂಗಳವಾರ ನಡೆದಿದೆ.

ಎಎನ್‌ಐ ಈ ವಿಡಿಯೋ ಟ್ವೀಟ್‌ ಮಾಡಿದೆ. ತಮಿಳುನಾಡಿನ ಹಾಲು ಮತ್ತು ಡೇರಿ ಅಭಿವೃದ್ಧಿ ಸಚಿವ ಎಸ್‌ ಎಂ ನಾಸರ್‌ ಕಲ್ಲು ತೂರುವ ದೃಶ್ಯ ವಿಡಿಯೋದಲ್ಲಿದೆ. ನಾಳೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪಾಲ್ಗೊಳ್ಳುವ ಕಾರ್ಯಕ್ರಮ ಸ್ಥಳದ ತಯಾರಿ ಪರಿಶೀಲಿಸಲು ನಾಸರ್‌ ಆಗಮಿಸಿದ್ದರು.

ಆ ವಿಡಿಯೋ ಇಲ್ಲಿದೆ ಗಮನಿಸಿ

ಕಳೆದ ವರ್ಷವೂ ಈ ಸಚಿವರು ಸುದ್ದಿಯಲ್ಲಿದ್ದರು. ಹಾಲಿನ ದರ ಏರಿಸುವುದಕ್ಕೆ ನರೇಂದ್ರ ಮೋದಿ ಸರ್ಕಾರ ಹಾಲಿನ ಮೇಲಿನ ಜಿಎಸ್‌ಟಿ ಏರಿಸಿದೆ ಎಂದು ಸುಳ್ಳು ಸುದ್ದಿಹಬ್ಬಿಸಿದ್ದರು.

ಗಮನಿಸಬಹುದಾದ ಸುದ್ದಿ

Money Rain in Bengaluru: ಕೆ.ಆರ್.ಮಾರ್ಕೆಟ್‌ ಫ್ಲೈಓವರ್‌ ಮೇಲಿಂದ ಹಣದ ಸುರಿಮಳೆ; ವಿಲಕ್ಷಣ ವರ್ತನೆ ತೋರಿದ ವ್ಯಕ್ತಿ

ವಿಲಕ್ಷಣ ವಿದ್ಯಮಾನ ಒಂದರಲ್ಲಿ ವ್ಯಕ್ತಿಯೊಬ್ಬರು ಕೆ.ಆರ್.ಮಾರ್ಕೆಟ್‌ನ ಫ್ಲೈ ಓವರ್‌ ಮೇಲಿಂದ ಹಣದ ಸುರಿಮಳೆ ಗೈದ ನಾಡಿನ ಗಮನಸೆಳೆದಿದ್ದಾರೆ. ದ್ವಿಚಕ್ರವಾಹನದಲ್ಲಿ ಬಂದ ಈ ವ್ಯಕ್ತಿ ಬ್ಯಾಗ್‌ನಿಂದ 10 ರೂಪಾಯಿ ನೋಟಿನ ಕಟ್ಟು ತೆಗೆದು ಫ್ಲೈಓವರ್‌ ಮೇಲೆ ನಿಂತು ಕೆಳಗೆ ಮಾರುಕಟ್ಟೆ ಭಾಗಕ್ಕೆ ಎಸೆದ ವಿಡಿಯೋ ವೈರಲ್‌ ಆಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

What is BharOS: ಏನಿದು BharOS - ಸ್ವದೇಶಿ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌; ಏನು ವಿಶೇಷತೆ ಇಲ್ಲಿದೆ ವಿವರ

What is BharOS: BharOS ಎನ್ನುವಂಥದ್ದು ಆಂಡ್ರಾಯ್ಡ್‌ನ ಓಪನ್‌ ಸೋರ್ಸ್‌ ಪ್ರಾಜೆಕ್ಟ್‌ ಆಧಾರಿತ ಆಪರೇಟಿಂಗ್‌ ಸಿಸ್ಟಂ. ಇದನ್ನು JandK Operations Private Limited ಅಭಿವೃದ್ಧಿ ಪಡಿಸಿದೆ. JandKops ಎಂಬುದು ಲಾಭ ರಹಿತ ಸಂಘಟನೆಯಾಗಿದ್ದು, ಐಐಟಿ ಮದ್ರಾಸ್‌ ಅದನ್ನು ಇನ್‌ಕ್ಯುಬೇಟ್‌ ಮಾಡ್ತಾ ಇದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಉಳಿತಾಯ ಖಾತೆಯ ಬಡ್ಡಿ ಮೇಲೆ ತೆರಿಗೆ ಹೇಗೆ ಲೆಕ್ಕ ಹಾಕುತ್ತಾರೆ?

ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿಯೇ ಹೊಂದಿರುತ್ತಾರೆ. ಹೆಚ್ಚು ಹಣ ಉಳಿತಾಯವಾದರೆ ಅಂತಹ ಖಾತೆಗೆ ಅಥವಾ ಉಳಿಸಿದ ವ್ಯಕ್ತಿಗೆ ಹೆಚ್ಚಿನ ಬಡ್ಡಿ ಆದಾಯವೂ ಸಿಗುತ್ತದೆ. ಅನೇಕ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಹಲವು ಉಳಿತಾಯ ಖಾತೆಗಳನ್ನು ಹೊಂದಿರುವುದು ಸರ್ವೇ ಸಾಮಾನ್ಯ. ಇಂತಹ ಸನ್ನಿವೇಶದಲ್ಲೂ ಉಳಿತಾಯದ ಮೇಲಿನ ಬಡ್ಡಿ ಹೆಚ್ಚಾಗಬಹುದು. ಇದಕ್ಕೆ ತೆರಿಗೆ ಹೇಗೆ ಲೆಕ್ಕ ಹಾಕ್ತಾರೆ - ಇಲ್ಲಿದೆ ವಿವರ ಕ್ಲಿಕ್‌ ಮಾಡಿ

IPL_Entry_Point