2023 Ford Mustang Dark Horse: ಫೋರ್ಡ್‌ನ ಕರಿಕುದುರೆ ಬಲುಚೆಲುವೆ, ಕಾರುಪ್ರಿಯರಿಗೆ ಬಾರದು ನಿದಿರೆ, ಇಲ್ಲಿದೆ ಚಿತ್ರಮಾಹಿತಿ
- ಫೋರ್ಡ್‌ನ ಮುಸ್ಟಾಂಗ್ ಜಿಟಿ ಸರಣಿಯಲ್ಲಿ ಹೊಸ ಮುಸ್ಟಾಂಗ್ ಡಾರ್ಕ್ ಹಾರ್ಸ್ ಕಾರು ಆಗಮಿಸಿದೆ. ಇದು ಬ್ಲೂ ಎಂಬೆರ್ ಮೆಟಾಲಿಕ್ ಪೇಂಟ್‌ನಲ್ಲಿ ಲಭ್ಯವಿದೆ. ಡಾರ್ಕ್ ಹಾರ್ಸ್ ಹೆಸರಿನ ಈ ಕರಿಕುದುರೆ ಕಣ್ಮನ ಸೆಳೆಯುವ ಚೆಲುವೆ. ಅಂದಹಾಗೆ ಇದು ಹೆಸರಿಗಷ್ಟೇ ಕರಿಕುದುರೆ, ಇದರ ಬಣ್ಣ ನೀಲಿ. ಕಾರುಪ್ರಿಯರ ಮನಸ್ಸು ತಣಿಸುವಂತೆ ಸುಂದರ ವಿನ್ಯಾಸದಲ್ಲಿ ಆಗಮಿಸಿರುವ ಈ ಕಾರಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

(1 / 5)
ಹಳೆಯ ಮಸ್ಟಂಗ್‌ಗೆ ಹೋಲಿಸಿದರೆ ಈ ಕರಿಕುದುರೆಯಲ್ಲಿ ಸಾಕಷ್ಟು ಹೊಸತನಗಳು ಇವೆ. ಹೊಸ ಕೂಲಿಂಗ್ ಬ್ರೇಕ್, ಎಂಜಿನ್ ಆಯಿಲ್ ಕೂಲರ್, ರಿಯಲ್ ಆಕ್ಸೆಲ್ ಕೂಲರ್ ಇತ್ಯಾದಿ ಹಲವು ಕೂಲ್ ಫೀಚರ್‌ಗಳಿವೆ. ಕೂಲಿಂಗ್ ಫ್ಯಾನ್‌ಗಳು ಹೆಚ್ಚು ಪವರ್‌ಫುಲ್ ಆಗಿದ್ದು, ಹಗುರ ರೇಡಿಯೇಟರ್ ಅನ್ನು ಹೊಂದಿದೆ.
(2 / 5)
ಆಯಿಲ್ ಕೂಲರ್ ಹೊಂದಿರುವ ಆರು ಸ್ಪೀಡ್‌ನ TREMEC ಮ್ಯಾನುಯಲ್ ಗಿಯರ್ ಬಾಕ್ಸ್ ಅನ್ನು ಮಸ್ಟಂಗ್ ಡಾರ್ಕ್ ಹಾರ್ಸ್ ಹೊಂದಿದೆ. ಇದು ಹತ್ತು ಸ್ಪೀಡ್‌ನ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಹೀಗಾಗಿ ಮ್ಯಾನುಯಲ್ ಗಿಯರ್ ಬಯಸುವವರು ಮ್ಯಾನುಯಲ್, ಆಟೋಮ್ಯಾಟಿಕ್ ಗಿಯರ್ ಬಯಸುವವರು ಆಟೋ ಗಿಯರ್ ಕಾರನ್ನು ಖರೀದಿಸಬಹುದಾಗಿದೆ.
(3 / 5)
ಈ ಕಾರಿನ ಎಂಜಿನ್ ಹೇಗಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇದು 5.0 ಲೀಟರ್‌ನ ಕೊಯೊಟೆ ವಿ8 ಎಂಜಿನ್ ಹೊಂದಿದೆ. ಈ ಎಂಜಿನ್‌ನಲ್ಲಿ ವಿಶೇಷವಾಗಿ ಮಾಡಿಫೈಡ್ ಮಾಡಿರುವ ಫಿಸ್ಟನ್ ಕನೆಕ್ಟಿಂಗ್ ರಾಡ್‌ಗಳಿವೆ. ಇದನ್ನು ಮೊದಲ ಬಾರಿಗೆ Mustang Shelby GT500ಗೆ ಪರಿಚಯಿಸಲಾಗಿತ್ತು.
(4 / 5)
ಫೋರ್ಡ್ ಮುಸ್ಟಾಂಗ್ ಅಥವಾ ಮಸ್ಟಂಗ್ ಡಾರ್ಕ್ ಹಾರ್ಸ್‌ನಲ್ಲಿ 5.0 ಲೀಟರ್‌ನ ವಿ8 ಎಂಜಿನ್ ಇದ್ದರೂ, ಇದರ ಇಂಟರ್‌ವೆಲ್ ಪರಿಷ್ಕರಿಸಲಾಗಿದ್ದು, ಪವರ್ ಔಟ್‌ಪುಟ್ ಸುಮಾರು 500 ಎಚ್‌ಪಿ ಇರಲಿದೆ.
ಇತರ ಗ್ಯಾಲರಿಗಳು