25ನೇ ಕಾರ್ಗಿಲ್ ವಿಜಯ ದಿನ; ಪಾಕಿಸ್ತಾನ ಇತಿಹಾಸದಿಂದ ಪಾಠ ಕಲಿತಿಲ್ಲ, ಛಾಯಾ ಸಮರಕ್ಕಿಳಿದರೆ ಎಚ್ಚರ, ನೆರೆಯ ದೇಶಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ
25ನೇ ಕಾರ್ಗಿಲ್ ವಿಜಯ ದಿನ; ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಇಂದು 25ನೇ ಕಾರ್ಗಿಲ್ ವಿಜಯ ದಿನಾಚರಣೆ ನಡೆಯಿತು. ಇದರಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಇತಿಹಾಸದಿಂದ ಪಾಠ ಕಲಿತಿಲ್ಲ, ಛಾಯಾ ಸಮರಕ್ಕಿಳಿದರೆ ಎಚ್ಚರ ಎಂಬ ಸಂದೇಶ ರವಾನಿಸಿದರು. ಕಾರ್ಯಕ್ರಮದ ಚಿತ್ರನೋಟ ಇಲ್ಲಿದೆ.
(1 / 9)
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜುಲೈ 26) ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಏರ್ಪಡಿಸಲಾಗಿದ್ದ 25ನೇ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. "ನಮ್ಮ ಸೈನಿಕರು ಭಯೋತ್ಪಾದನೆಯನ್ನು ಪೂರ್ಣ ಬಲದೊಂದಿಗೆ ಹೊಡೆದುರುಳಿಸಲಿದ್ದು, ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ. ಅದರ ದುಷ್ಕೃತ್ಯದ ಯೋಜನೆಗಳು ಸಾಕಾರಗೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಎಚ್ಚರಿಸಿದರು.(PTI)
(2 / 9)
ಇಂದು, ಲಡಾಖ್‌ನ ಭವ್ಯವಾದ ಭೂಮಿ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ. ಕಾರ್ಗಿಲ್‌ನ ವಿಜಯೋತ್ಸವದ ನಂತರ 25 ವರ್ಷ ಆಗಿದೆ. ಕಾರ್ಗಿಲ್ ವಿಜಯ್ ದಿನ ನಮ್ಮ ಯೋಧರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ಶಾಶ್ವತ ಮತ್ತು ಎಂದೆಂದಿಗೂ ಸ್ಮರಣೀಯವೆಂಬುದನ್ನು ನಮಗೆ ನೆನಪಿಸುತ್ತದೆ. ಸಮಯ ಕಳೆದಂತೆ, ದಿನಗಳು ತಿಂಗಳಾಗುತ್ತವೆ, ತಿಂಗಳುಗಳು ವರ್ಷಗಳು ಮತ್ತು ವರ್ಷಗಳು ಶತಮಾನಗಳಾಗಿ ಬದಲಾಗುತ್ತವೆ. ರಾಷ್ಟ್ರೀಯ ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರ ಹೆಸರುಗಳು ನಮ್ಮ ಸಾಮೂಹಿಕ ಸ್ಮರಣೆಯಲ್ಲಿ ಶಾಶ್ವತವಾಗಿ ಚಿರಸ್ಥಾಯಿಯಾಗಿ ಉಳಿಯುತ್ತವೆ! ಎಂದು ಇದೇ ವೇಳೆ ಪ್ರಧಾನಿ ಮೋದಿ ಹೇಳಿದರು.(PTI)
(3 / 9)
ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ನಡುವೆ ಎಲ್ಲ ಹವಾಮಾನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಶಿಂಕುನ್ ಲಾ ಸುರಂಗದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. (PTI)
(4 / 9)
ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.(PTI)
(5 / 9)
ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು.(PTI)
ಇತರ ಗ್ಯಾಲರಿಗಳು