ಕನ್ನಡ ಸುದ್ದಿ  /  Photo Gallery  /  Amazing Benefits Of Tomato For Skin

Tomato For Skin: ಟೊಮ್ಯಾಟೋ ಒಂದಿದ್ರೆ ಚರ್ಮಕ್ಕೆ ಸ್ಕ್ರಬ್‌, ಮಸಾಜ್‌ ಕ್ರೀಮ್‌, ಸೀರಮ್‌ ಎಲ್ಲಾ ಇದ್ದಂತೆ... ಹೇಗೆ ತಯಾರಿಸುವುದು ನೋಡಿ!

  • ಬಹಳಷ್ಟು ಜನರು ದುಬಾರಿ ಸ್ಕಿನ್‌ ಪ್ರಾಡಕ್ಟ್‌ಗಳನ್ನು ಬಿಟ್ಟು ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ಸೌಂದರ್ಯ ಹೆಚ್ಚಿಕೊಳ್ಳುತ್ತಿದ್ದಾರೆ. ಹೀಗೆ ಪ್ರಕೃತಿ ನಮಗೆ ನೀಡಿರುವ ನೈಸರ್ಗಿಕ ವಸ್ತುಗಳಲ್ಲಿ ಟೊಮ್ಯಾಟೋ ಕೂಡಾ ಒಂದು. ಇದು ಚರ್ಮದ ಅಂದ ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ.

ಟೊಮ್ಯಾಟೋಗಳು ಲೈಕೋಪೀನ್‌ನಲ್ಲಿ ಸಮೃದ್ಧವಾಗಿವೆ, ಇದು ಉತ್ಕರ್ಷಣ ನಿರೋಧಕವಾಗಿದ್ದು ಅದು ಪರಿಸರ ಹಾನಿ ಮತ್ತು ಅಕಾಲಿಕ ವಯಸ್ಸಾಗುವಿಕೆಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಅಂದ ಹೆಚ್ಚಿಸಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ ಟೊಮ್ಯಾಟೋ ಅತ್ಯುತ್ತಮ ಆಯ್ಕೆ ಆಗಿದೆ. ಇದನ್ನು ನೀವು ಆರು ಹಂತಗಳಲ್ಲಿ ಬಳಸಬಹುದು. 
icon

(1 / 7)

ಟೊಮ್ಯಾಟೋಗಳು ಲೈಕೋಪೀನ್‌ನಲ್ಲಿ ಸಮೃದ್ಧವಾಗಿವೆ, ಇದು ಉತ್ಕರ್ಷಣ ನಿರೋಧಕವಾಗಿದ್ದು ಅದು ಪರಿಸರ ಹಾನಿ ಮತ್ತು ಅಕಾಲಿಕ ವಯಸ್ಸಾಗುವಿಕೆಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಅಂದ ಹೆಚ್ಚಿಸಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ ಟೊಮ್ಯಾಟೋ ಅತ್ಯುತ್ತಮ ಆಯ್ಕೆ ಆಗಿದೆ. ಇದನ್ನು ನೀವು ಆರು ಹಂತಗಳಲ್ಲಿ ಬಳಸಬಹುದು. (PC: Freepik)

ಬ್ರೈಟ್ನಿಂಗ್ ಟೊಮ್ಯಾಟೋ ಸ್ಕ್ರಬ್: ಮಾಗಿದ ಟೊಮೆಟೊದ ರಸ ಮತ್ತು ತಿರುಳನ್ನು ಸಕ್ಕರೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ. ಇದನ್ನು ಚರ್ಮದ ಮೇಲೆ ಹಚ್ಚಿ 5 ನಿಮಿಷಗಳ ಕಾಲ ನಿಮ್ಮ ಬೆರಳುಗಳ ತುದಿಯಿಂದ ಮಸಾಜ್‌ ಮಾಡಿ. ಕತ್ತಿನ ಸುತ್ತ ಕೂಡಾ ಹಚ್ಚಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ ಮತ್ತು ಎಕ್ಸ್ಫೋಲಿಯೇಟ್‌ ಮಾಡುತ್ತದೆ.
icon

(2 / 7)

ಬ್ರೈಟ್ನಿಂಗ್ ಟೊಮ್ಯಾಟೋ ಸ್ಕ್ರಬ್: ಮಾಗಿದ ಟೊಮೆಟೊದ ರಸ ಮತ್ತು ತಿರುಳನ್ನು ಸಕ್ಕರೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ. ಇದನ್ನು ಚರ್ಮದ ಮೇಲೆ ಹಚ್ಚಿ 5 ನಿಮಿಷಗಳ ಕಾಲ ನಿಮ್ಮ ಬೆರಳುಗಳ ತುದಿಯಿಂದ ಮಸಾಜ್‌ ಮಾಡಿ. ಕತ್ತಿನ ಸುತ್ತ ಕೂಡಾ ಹಚ್ಚಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ ಮತ್ತು ಎಕ್ಸ್ಫೋಲಿಯೇಟ್‌ ಮಾಡುತ್ತದೆ.(Pexels)

ಟೊಮ್ಯಾಟೋ ಟೋನರ್:  ಈ ಟೊಮ್ಯಾಟೊ ಟೋನರ್‌, ಮೊಡವೆಗಳ ವಿರುದ್ಧ ಹೋರಾಡುತ್ತದೆ.  ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಟೊಮ್ಯಾಟೊ ರಸವನ್ನು ಸ್ವಲ್ಪ ಹೇಜಲ್‌ನೊಂದಿಗೆ ಮಿಶ್ರಣ ಮಾಡಿ. ಚರ್ಮಕ್ಕೆ ಹಚ್ಚಿ.  ಉರಿಯೂತ ಮತ್ತು ಬಿರುಕುಗಳನ್ನು ಕಡಿಮೆ ಮಾಡಲು ಈ ಮಿಶ್ರಣವನ್ನು ಟೋನರ್ ಆಗಿ ಬಳಸಿ.
icon

(3 / 7)

ಟೊಮ್ಯಾಟೋ ಟೋನರ್:  ಈ ಟೊಮ್ಯಾಟೊ ಟೋನರ್‌, ಮೊಡವೆಗಳ ವಿರುದ್ಧ ಹೋರಾಡುತ್ತದೆ.  ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಟೊಮ್ಯಾಟೊ ರಸವನ್ನು ಸ್ವಲ್ಪ ಹೇಜಲ್‌ನೊಂದಿಗೆ ಮಿಶ್ರಣ ಮಾಡಿ. ಚರ್ಮಕ್ಕೆ ಹಚ್ಚಿ.  ಉರಿಯೂತ ಮತ್ತು ಬಿರುಕುಗಳನ್ನು ಕಡಿಮೆ ಮಾಡಲು ಈ ಮಿಶ್ರಣವನ್ನು ಟೋನರ್ ಆಗಿ ಬಳಸಿ.(Pexels)

ಟೊಮ್ಯಾಟೋ ಫೇಸ್ ಮಾಸ್ಕ್ : ಟೊಮ್ಯಾಟೋದಲ್ಲಿ ಹೆಚ್ಚಿನ ನೀರಿನ ಅಂಶ ಇದ್ದು ಇದು ಚರ್ಮಕ್ಕೆ ಸದಾ ತೇವಾಂಶ ನೀಡುತ್ತದೆ.  ಟೊಮೆಟೊ ರಸವನ್ನು ಜೇನುತುಪ್ಪ ಮತ್ತು ಅಲೋವೆರಾ ಜೆಲ್‌ನೊಂದಿಗೆ ಮಿಶ್ರಣ ಮಾಡಿ. ಪ್ಲೇನ್‌ ಮಾಸ್ಕ್‌ ಶೀಟ್‌ ಅಥವಾ ಟಿಶ್ಯೂ ಪೇಪರನ್ನು ಈ ಮಿಶ್ರಣಕ್ಕೆ ಅದ್ದಿ ಅದನ್ನು ನಿಮ್ಮ ಮುಖದ ಮೇಲೆ ಮಾಸ್ಕ್‌ ಆಗಿ 20 ನಿಮಿಷ ಬಿಟ್ಟು ನಂತರ ಮುಖ ತೊಳೆಯಿರಿ. 
icon

(4 / 7)

ಟೊಮ್ಯಾಟೋ ಫೇಸ್ ಮಾಸ್ಕ್ : ಟೊಮ್ಯಾಟೋದಲ್ಲಿ ಹೆಚ್ಚಿನ ನೀರಿನ ಅಂಶ ಇದ್ದು ಇದು ಚರ್ಮಕ್ಕೆ ಸದಾ ತೇವಾಂಶ ನೀಡುತ್ತದೆ.  ಟೊಮೆಟೊ ರಸವನ್ನು ಜೇನುತುಪ್ಪ ಮತ್ತು ಅಲೋವೆರಾ ಜೆಲ್‌ನೊಂದಿಗೆ ಮಿಶ್ರಣ ಮಾಡಿ. ಪ್ಲೇನ್‌ ಮಾಸ್ಕ್‌ ಶೀಟ್‌ ಅಥವಾ ಟಿಶ್ಯೂ ಪೇಪರನ್ನು ಈ ಮಿಶ್ರಣಕ್ಕೆ ಅದ್ದಿ ಅದನ್ನು ನಿಮ್ಮ ಮುಖದ ಮೇಲೆ ಮಾಸ್ಕ್‌ ಆಗಿ 20 ನಿಮಿಷ ಬಿಟ್ಟು ನಂತರ ಮುಖ ತೊಳೆಯಿರಿ. (Pexels)

ಕಪ್ಪು ವರ್ತುಲ ಕಡಿಮೆಗೊಳಿಸುವ ಟೊಮ್ಯಾಟೋ: ಬಹಳ ಜನರಿಗೆ ಡಾರ್ಕ್‌ ಸರ್ಕಲ್‌ ದೊಡ್ಡ ಸಮಸ್ಯೆಯಾಗಿದೆ.  ಟೊಮ್ಯಾಟೋದಲ್ಲಿರುವ ವಿಟಮಿನ್ ಸಿ, ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೊಮ್ಯಾಟೊ ರಸವನ್ನು ಕಣ್ಣುಗಳ ಕೆಳಗೆ ಹಚ್ಚಿ ಬೆರಳಿನ ತುದಿಯಿಂದ ಮಸಾಜ್‌ ಮಾಡಿ ಸುಮಾರು  10 ನಿಮಿಷಗಳ ಕಾಲ ಬಿಟ್ಟು ನಂತರ ಮುಖ ತೊಳೆಯಿರಿ. 2 ದಿನಗಳಿಗೊಮ್ಮೆ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸ ಗಮನಿಸಲಿದ್ದೀರಿ. 
icon

(5 / 7)

ಕಪ್ಪು ವರ್ತುಲ ಕಡಿಮೆಗೊಳಿಸುವ ಟೊಮ್ಯಾಟೋ: ಬಹಳ ಜನರಿಗೆ ಡಾರ್ಕ್‌ ಸರ್ಕಲ್‌ ದೊಡ್ಡ ಸಮಸ್ಯೆಯಾಗಿದೆ.  ಟೊಮ್ಯಾಟೋದಲ್ಲಿರುವ ವಿಟಮಿನ್ ಸಿ, ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೊಮ್ಯಾಟೊ ರಸವನ್ನು ಕಣ್ಣುಗಳ ಕೆಳಗೆ ಹಚ್ಚಿ ಬೆರಳಿನ ತುದಿಯಿಂದ ಮಸಾಜ್‌ ಮಾಡಿ ಸುಮಾರು  10 ನಿಮಿಷಗಳ ಕಾಲ ಬಿಟ್ಟು ನಂತರ ಮುಖ ತೊಳೆಯಿರಿ. 2 ದಿನಗಳಿಗೊಮ್ಮೆ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸ ಗಮನಿಸಲಿದ್ದೀರಿ. (Pexels)

ಸ್ಕಿನ್ ಬ್ಯಾಲೆನ್ಸಿಂಗ್ ಟೊಮ್ಯಾಟೋ ಸೀರಮ್: ಟೊಮ್ಯಾಟೋಗಳು ಆಲ್ಫಾ-ಹೈಡ್ರಾಕ್ಸಿ ಆಸಿಡ್‌ಗಳಲ್ಲಿ ಸಮೃದ್ಧವಾಗಿದೆ, ಇದು ಚರ್ಮದ pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪ್ರಬಲವಾದ ಚರ್ಮ-ಸಮತೋಲನದ ಸೀರಮ್‌ಗಾಗಿ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಟೊಮೆಟೊ ರಸವನ್ನು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ.
icon

(6 / 7)

ಸ್ಕಿನ್ ಬ್ಯಾಲೆನ್ಸಿಂಗ್ ಟೊಮ್ಯಾಟೋ ಸೀರಮ್: ಟೊಮ್ಯಾಟೋಗಳು ಆಲ್ಫಾ-ಹೈಡ್ರಾಕ್ಸಿ ಆಸಿಡ್‌ಗಳಲ್ಲಿ ಸಮೃದ್ಧವಾಗಿದೆ, ಇದು ಚರ್ಮದ pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪ್ರಬಲವಾದ ಚರ್ಮ-ಸಮತೋಲನದ ಸೀರಮ್‌ಗಾಗಿ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಟೊಮೆಟೊ ರಸವನ್ನು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ.(Pexels)

ಆಂಟಿ ಏಜಿಂಗ್ ಟೊಮ್ಯಾಟೋ ಫೇಸ್ ಆಯಿಲ್: ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಟೊಮೆಟೊಗಳು ಅಕಾಲಿಕ ವಯಸ್ಸಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೊ ರಸವನ್ನು ವಿಟಮಿನ್ ಇ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಚರ್ಮಕ್ಕೆ ಹಚ್ಚಿ ಮಸಾಜ್‌ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಮುಖದ ಮೇಲಿನ ನೆರಿಗೆ ಕಡಿಮೆಯಾಗುತ್ತದೆ. 
icon

(7 / 7)

ಆಂಟಿ ಏಜಿಂಗ್ ಟೊಮ್ಯಾಟೋ ಫೇಸ್ ಆಯಿಲ್: ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಟೊಮೆಟೊಗಳು ಅಕಾಲಿಕ ವಯಸ್ಸಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೊ ರಸವನ್ನು ವಿಟಮಿನ್ ಇ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಚರ್ಮಕ್ಕೆ ಹಚ್ಚಿ ಮಸಾಜ್‌ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಮುಖದ ಮೇಲಿನ ನೆರಿಗೆ ಕಡಿಮೆಯಾಗುತ್ತದೆ. (Pexel)


IPL_Entry_Point

ಇತರ ಗ್ಯಾಲರಿಗಳು