ಮಾರುತಿ ಸುಜುಕಿ ಸ್ವಿಫ್ಟ್ 2024; ಜಾಣರ ಜಗತ್ತಿಗೊಂದು 3 ಸಿಲಿಂಡರ್ ಎಂಜಿನ್, ಸ್ಪೋರ್ಟ್ಸ್ ಡಿಸೈನ್ ಕಾರು, ಚಿತ್ರನೋಟ ಹೀಗಿದೆ ನೋಡಿ
ಭಾರತೀಯ ಮಾರುಕಟ್ಟೆಗೆ ಮಾರುತಿ ಸುಜುಕಿ 2024ರ ಸ್ವಿಫ್ಟ್ ಕಾರನ್ನು ಪರಿಚಯಿಸಿದೆ. ಇದು ತನ್ನ ವಿನ್ಯಾಸ ಸೇರಿ ಹಲವು ಹೊಸ ಫೀಚರ್‌ಗಳೊಂದಿಗೆ ಗ್ರಾಹಕರ ಬಳಕೆಗೆ ಬಂದಿದೆ. ಹೌದು, ಸಂದೇಹವೇ ಬೇಡ ಇದು ಮಾರುತಿ ಸುಜುಕಿ ಸ್ವಿಫ್ಟ್ 2024. ಜಾಣರ ಜಗತ್ತಿಗೊಂದು 3 ಸಿಲಿಂಡರ್ ಎಂಜಿನ್, ಸ್ಪೋರ್ಟ್ಸ್ ಡಿಸೈನ್ ಕಾರು ಕೂಡ ಹೌದು. ಅದರ ಚಿತ್ರನೋಟ ಹೀಗಿದೆ ನೋಡಿ.
(1 / 11)
ಭಾರತ ಮತ್ತು ಪ್ರಪಂಚದಾದ್ಯಂತ 2005 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಕಾಲಾನುಕ್ರಮದಲ್ಲಿ ಅಗತ್ಯಕ್ಕೆ ತಕ್ಕಂತೆ ಬಹುತೇಕ ಹಲವು ಸುಧಾರಣೆಗಳನ್ನು ಒಗ್ಗೂಡಿಸುತ್ತ ಬಂದಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ, ಅದು ತನ್ನ ಅತಿದೊಡ್ಡ ಸವಾಲನ್ನು ಎದುರಿಸುತ್ತಿರುವುದು, ಎಂಟ್ರಿ ಲೆವೆಲ್ ಎಸ್‌ಯುವಿಗಳಿಂದ. ಭಾರತೀಯ ಕಾರು ಮಾರುಕಟ್ಟೆಯ ಸಾಕಷ್ಟು ಭಾಗವನ್ನು ಈ ಎಸ್‌ಯುವಿಗಳು ಆಕ್ರಮಿಸಿಕೊಂಡಿದ್ದು, ಈ ಹಾಟ್ ಹ್ಯಾಚ್ ಬ್ಯಾಕ್ ಕಾರು ತನ್ನ ಅಪ್ರತಿಮ ಇಮೇಜ್ ಅನ್ನು ಉಳಿಸಿಕೊಳ್ಳಬಹುದೇ ಎಂಬುದೀಗ ಪ್ರಶ್ನೆ.
(2 / 11)
ನಾಲ್ಕನೇ ತಲೆಮಾರಿನ ಸ್ವಿಫ್ಟ್ ಇದಾಗಿದ್ದು, ಮೂಲ ಮಾದರಿಗೆ 6.49 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಡ್ಯುಯಲ್-ಟೋನ್ ಕಲರ್ ಥೀಮ್ ಮತ್ತು ಎಎಂಟಿ ಹೊಂದಿರುವ ಟಾಪ್ ಝಡ್ಎಕ್ಸ್ಐ ಪ್ಲಸ್ ಕಾರಿಗೆ 9.46 ಲಕ್ಷ ರೂ.(ತೆರಿಗೆ ಹೊರತಾಗಿ) ಬೆಲೆ ನಿಗದಿಯಾಗಿದೆ. ಇದರಲ್ಲಿ ಒಟ್ಟು ಐದು ರೂಪಾಂತರಗಳಿವೆ, ಎರಡು ಟ್ರಾನ್ಸ್ ಮಿಷನ್ ಆಯ್ಕೆಗಳು ಮತ್ತು ಒಂಬತ್ತು ಬಣ್ಣ ಆಯ್ಕೆಗಳಿವೆ.
(3 / 11)
ಸ್ವಿಫ್ಟ್ ಹಲವಾರು ವಿನ್ಯಾಸ ನವೀಕರಣಗಳಿಗೆ ಒಳಗಾಗಿದ್ದು, ಇದರಲ್ಲಿ ಮರುನಿರ್ಮಾಣಗೊಂಡ ಗ್ರಿಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ ಮತ್ತು ಡಿಆರ್‌ಎಲ್f ಘಟಕಗಳು, ಹೊಸ ಮಿಶ್ರಲೋಹಗಳು ಮತ್ತು ನವೀಕರಿಸಿದ ಸಿ-ಆಕಾರದ ಎಲ್ಇಡಿ ಟೈಲ್ ಲೈಟುಗಳು ಸೇರಿವೆ.
(4 / 11)
ಮಾರುತಿ ಸ್ವಿಫ್ಟ್ ಹೊಸ 1.2-ಲೀಟರ್ ಮೂರು ಸಿಲಿಂಡರ್ ಝಡ್-ಸೀರಿಸ್ ಪೆಟ್ರೋಲ್ ಮೋಟರ್ ಆಯ್ಕೆ ಕೂಡ ಲಭ್ವ ಇದೆ. ಇದು ಕೆ 12 ಎಂಜಿನ್ ಹೊಂದಿದ್ದು, ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಸ್ವಲ್ಪ ಕಡಿಮೆ ಇದೆ. ಆದರೆ ಇಂಧನ ದಕ್ಷತೆಯು 25 ಕಿ.ಮೀ. ಸಿಗುತ್ತದೆ ಎಂಬುದು ಕಂಪನಿಯ ಪ್ರತಿಪಾದನೆ.
(5 / 11)
ಸ್ವಿಫ್ಟ್ ಆರು ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದ್ದು, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಇಬಿಡಿಯೊಂದಿಗೆ ಎಬಿಎಸ್ ನಂತಹ ಹಲವಾರು ನಿರ್ಣಾಯಕ ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ.
(6 / 11)
ಬಾಹ್ಯ ಅನುಪಾತಕ್ಕೆ ಸಂಬಂಧಿಸಿ ಹೇಳುವುದಾದರೆ, ಹೊಸ ಸ್ವಿಫ್ಟ್ ಕಿರಿದಾಗಿದ್ದು, ಎತ್ತರ ಮತ್ತು ಸ್ವಲ್ಪ ಅಗಲವಾಗಿದ್ದು, ಹಿಂದಿನ ಮಾದರಿಯಂತೆಯೇ ಅದೇ ವ್ಹೀಲ್ ಬೇಸ್ ಅನ್ನು ಹೊಂದಿದೆ.
(7 / 11)
ಒಳಭಾಗದಲ್ಲಿ, ಒಂಬತ್ತು ಇಂಚಿನ ಇನ್ಫೋಟೈನ್ಮೆಂಟ್ ಪರದೆಯು ಲೇಯರ್ಡ್ ಡ್ಯಾಶ್‌ಬೋರ್ಡ್‌ಗಿಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಾಹನದ ಒಳಗೆ ಸಂಪೂರ್ಣ ಕಪ್ಪು ಬಣ್ಣದ ಥೀಮ್ ಮತ್ತು 4.2-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಯುನಿಟ್ ಅನ್ನು ಹೊಂದಿದೆ. ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ನಲ್ಲಿ ಕ್ರೂಸ್ ಕಂಟ್ರೋಲ್‌ಗಾಗಿ ಬಟನ್ ಸೇರಿದಂತೆ ಕಂಟ್ರೋಲ್‌ಗಳನ್ನು ಅಳವಡಿಸಲಾಗಿದೆ.
(8 / 11)
ಸ್ವಿಫ್ಟ್ ವೈರ್ ಲೆಸ್ ಫೋನ್ ಚಾರ್ಜಿಂಗ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್-ಬಟನ್ ಸ್ಟಾರ್ಟ್, ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿದೆ. ಒಳಗೆ ಎಲ್ಲಿಯೂ ಸನ್ ರೂಫ್, ಎಚ್ ಯುಡಿ ಮತ್ತು ಆರ್ಮ್‌ರೆಸ್ಟ್ ಇಲ್ಲದಿದ್ದರೂ, ಆಸನಗಳು ತುಲನಾತ್ಮಕವಾಗಿ ಉತ್ತಮವಾಗಿ ಮೆತ್ತಗಿವೆ. ಆದಾಗ್ಯೂ, ಮುಂಭಾಗದ ಆಸನಗಳು ಸ್ವಲ್ಪ ಕಿರಿದಾಗಿದೆ,
(9 / 11)
ಸ್ವಿಫ್ಟ್ ಕಾರಿನ ಹಿಂಭಾಗದ ಆಸನವಿರುವ ಸ್ಥಳದಲ್ಲಿ ಯೋಗ್ಯ ಪ್ರಮಾಣದ ಮೊಣಕಾಲು ಮತ್ತು ಹೆಡ್ ರೂಮ್ ಹೊಂದಿರುವ ಇಬ್ಬರು ವಯಸ್ಕರು ಆರಾಮವಾಗಿ ಕುಳಿತುಕೊಳ್ಳುವುದಕ್ಕೆ ಅನುಕೂಲಕರವಾಗಿದೆ. ಆದಾಗ್ಯೂ, ಆದರೆ ಇಲ್ಲಿ ಮೂರನೇಯವರು ಕುಳಿತರೆ ಪ್ರಯಾಣ ಕಷ್ಟಕರವಾಗಲಿದೆ. ಏಕೆಂದರೆ ಸೆಂಟರ್ ಕನ್ಸೋಲ್ ಮಧ್ಯದಲ್ಲಿ ಪಾದ ಇರಿಸುವ ಜಾಗ ಕಡಿಮೆ ಇದೆ.
(10 / 11)
ಮಾರುತಿ ಸುಜುಕಿ ಸ್ವಿಫ್ಟ್ ಈ ಸೆಗ್ ಮೆಂಟಿನ ವಾಹನಕ್ಕೆ ಹೋಲಿಸಿದರೆ ಯೋಗ್ಯವಾದ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ. ವಾರಾಂತ್ಯದ ರಜಾದಿನಗಳಿಗಾಗಿ ಚೀಲಗಳನ್ನು ಪ್ಯಾಕ್ ಮಾಡಿ ಈ ಕಾರಿನೊಳಗೆ ಇರಿಸಲು ಸಮಸ್ಯೆಯಾಗದು. ಇಲ್ಲಿ, ಎರಡು ಕ್ಯಾಬಿನ್ ಗಾತ್ರದ ಸೂಟ್ಕೇಸ್ಗಳು, ಎರಡು ಡಫ್ಲ್ ಬ್ಯಾಗ್‌ಗಳು ಮತ್ತು ಒಂದು ಲ್ಯಾಪ್‌ಟಾಪ್ ಬ್ಯಾಗ್ ಅನ್ನು ಇರಿಸಬಹುದು.
ಇತರ ಗ್ಯಾಲರಿಗಳು